For Quick Alerts
ALLOW NOTIFICATIONS  
For Daily Alerts

ಉನ್ಮಾದತೆ (ಹಿಸ್ಟೀರಿಯಾ): ಈ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು

|

ನಮ್ಮ ದೇಹದ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಅಗತ್ಯವಾಗಿದೆ. ಸಾಮಾನ್ಯವಾಗಿ ಮಾನಸಿಕ ತೊಂದರೆಗಳು ಕಣ್ಣಿಗೆ ಕಾಣಿಸದ ಕಾರಣ ಈ ತೊಂದರೆಯ ಗಂಭೀರತೆಯನ್ನು ಹೆಚ್ಚಿನವರು ಪರಿಗಣಿಸುವುದೇ ಇಲ್ಲ. ಹಿಸ್ಟೀರಿಯಾ ಅಥವಾ ಉನ್ಮಾದ ಒಂದು ನರವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು ತಾರುಣ್ಯದಲ್ಲಿ ಎದುರಾಗುವ ಮಾನಸಿಕ ತೊಂದರೆಗಳಿಗೆ ಕಾರಣವಾಗಿದೆ. ಅಚ್ಚರಿ ಎಂದರೆ ಈ ಕಾಯಿಲೆ ಹೆಚ್ಚಾಗಿ ಮಹಿಳೆಯರಲ್ಲಿಯೇ ಸ್ಪಷ್ಟ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಆದರೆ ಪುರುಷರಿಗೂ ಈ ಕಾಯಿಲೆ ಆವರಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಉನ್ಮಾದವನ್ನು ಸ್ಥೂಲವಾಗಿ ಎರಡು ಹಂತಗಳಾಗಿ ವಿಂಗಡಿಸಬಹುದು:

ಮೊದಲನೆಯ ಹಂತ: ಈ ಕಾಯಿಲೆ ಇರುವ ಲಕ್ಷಣಗಳು ಸ್ಪಷ್ಟವಾಗಿಲ್ಲದ ಕಾರಣ ಕಾಯಿಲೆಯ ಇರುವಿಕೆಯೇ ಅರಿವಾಗುವುದಿಲ್ಲ

ಎರಡನೆಯ ಹಂತ: ರೋಗಿಯ ದೇಹ ತನ್ನಿಂತಾನೇ ಕೆಲವು ಅನಾರೋಗ್ಯಗಳನ್ನು ಪ್ರಕಟಿಸಲು ತೊಡಗುತ್ತದೆ. ಏಕಾಏಕಿ ರೋಗಿಯ ದೃಷ್ಟಿ ಇಲ್ಲವಾಗುವುದು, ಧ್ವನಿಯಲ್ಲಿ ಬದಲಾವಣೆ ಅಥವಾ ದೇಹದ ಒಂದು ಭಾಗ ಅಥವಾ ಕೈಗಾಲುಗಳಿಗೆ ಎರಗುವ ಪಾರ್ಶ್ವವಾಯು, ರೋಗಿ ತನ್ನ ಕೈಕಾಲುಗಳು ಅಲ್ಲಾಡುತ್ತಿಲ್ಲವೆಂದು ತಿಳಿಸುವ ಸೂಚನೆ ಈ ಹಂತವನ್ನು ಪ್ರಕಟಿಸುತ್ತವೆ.

ಈ ಕಾಯಿಲೆಯ ಬಗ್ಗೆ ವೈದ್ಯಕೀಯ ಜಗತ್ತಿಗೆ ಇದುವರೆಗೆ ತಿಳಿದಿರುವುದು ಅತಿ ಕಡಿಮೆ ಎನ್ನುವುದು ಒಂದು ಅಚ್ಚರಿಯಾಗಿದೆ. ಮೊದಲ ಕೆಲವು ಪರೀಕ್ಷೆಗಳಲ್ಲಿ ರೋಗಿಗೆ ಉನ್ಮಾದತೆಯ ತೊಂದರೆ ಇರುವುದನ್ನು ವೈದ್ಯರ ಗಮನಕ್ಕೆ ಬಾರದೇ ಹೋಗಬಹುದು. ಆದರೆ ಕೆಲವು ಸೂಚನೆಗಳು ಸಂಧರ್ಭಾನುಸಾರ ಉಲ್ಬಣಗೊಂಡು ಈ ತೊಂದರೆಯ ಇರುವಿಕೆಯನ್ನು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ ಇಡಿಯ ವರ್ಷ ಆರೋಗ್ಯಕರವಾಗಿದ್ದು ಪರೀಕ್ಷೆಯ ದಿನ ಹತ್ತಿರಾಗುತ್ತಿದ್ದಂತೆಯೇ ಭಯ ಆವರಿಸಿ ಥಟ್ಟನೇ ರೋಗಿಯ ದೇಹ ಜಡಸ್ಥಿತಿ ಪಡೆಯಬಹುದು. ವೈದ್ಯಕೀಯ ಭಾಷೆಯಲ್ಲಿ ಈ ಸ್ಥಿತಿಯನ್ನು as histrionic paralysisಎಂದು ಕರೆಯಲಾಗುತ್ತದೆ ಹಾಗೂ ಮಾನಸಿಕ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.

Hysteria

ಉನ್ಮಾದತೆಯನ್ನು ಅರ್ಥೈಸಿಕೊಳ್ಳುವುದು

ಈ ಕಾಯಿಲೆಯ ಸ್ಪಷ್ಟ ಲಕ್ಷಣವೆಂದರೆ ರೋಗಿ ಥಟ್ಟನೇ ತನ್ನ ಪ್ರಜ್ಞೆಯನ್ನು ಕಳೆದುಕೊಳ್ಳುವುದಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸೂಚನೆಯನ್ನು ಎಪಿಲೆಪ್ಸಿಯ ಸೂಚನೆ ಎಂದು ತಪ್ಪಾಗಿ ಪರಿಗಣಿಸಲಾಗುತ್ತದೆ. ಆದರೆ ರೋಗಿಯ ಅನುಭವ ಎರಡೂ ಕಾಯಿಲೆಗಳಲ್ಲಿ ಭಿನ್ನವೇ ಆಗಿರುತ್ತದೆ. ಎಪಿಲೆಪ್ಸಿಗಿಂತಲೂ ಉನ್ಮಾದತೆಯ ಕಾಯಿಲೆಯನ್ನು ಸುಲಭವಾಗಿ ಗುಣಪಡಿಸಬಹುದು. ಆದರೆ ಅಪಸ್ಮಾರ ಅಥವಾ ಎಪಿಲೆಪ್ಸಿಯಲ್ಲಿ ನರವ್ಯವಸ್ಥೆಯ ಜೀವಕೋಶಗಳೇ ಭಾರೀ ವೇಗದಲ್ಲಿ ನಷ್ಟಗೊಳ್ಳುತ್ತಾ ಹೋಗುತ್ತವೆ ಹಾಗೂ ಹೆಚ್ಚಾಗಿ ಸಾವಿನಲ್ಲಿ ಪರ್ಯವಸಾನಗೊಳ್ಳುತ್ತವೆ.

ಉನ್ಮಾದತೆಯ ಸ್ಥಿತಿಯಲ್ಲಿ ರೋಗಿಯ ನರವ್ಯವಸ್ಥೆಯೇನೂ ನಷ್ಟಗೊಂಡಿರುವುದಿಲ್ಲ. ಬದಲಿಗೆ ಅತಿಯಾದ ಮಾನಸಿಕ ಒತ್ತಡ, ಅತಿ ಒತ್ತಡ ಹೇರುವ ಪರಿಸರ, ದ್ವಂದ್ವ ಎದುರಾಗುವ ಸಂದರ್ಭ ಅಥವಾ ದೈಹಿಕ ಅಪಘಾತ / ಮಾನಸಿಕ ಆಘಾತ ಥಟ್ಟನೇ ಎದುರಾದಾಗ ಉನ್ಮಾದತೆ ಎದುರಾಗುತ್ತದೆ. ಕೆಲವೊಮ್ಮೆ ಅತಿಯಾದ ನಿರೀಕ್ಷೆಗಳನ್ನಿರಿಸಿಕೊಂಡಿದ್ದು ಇವುಗಳು ಹುಸಿಯಾದಾಗಲೂ ಉನ್ಮಾದತೆ ಆವರಿಸಬಹುದು. ಒಂದು ಅಧ್ಯಯನದ ಪ್ರಕಾರ, ಅದುಮಿಟ್ಟ ಲೈಂಗಿಕ ಆಕಾಂಕ್ಷೆಗಳೂ ಕೆಲವರಲ್ಲಿ ಉನ್ಮಾದತೆಗೆ ಕಾರಣವಾಗಬಹುದು. ಭಯ ಅಥವಾ ತಪ್ಪಿತಸ್ಥ ಭಾವನೆಯೂ ಉನ್ಮಾದತೆಯನ್ನುಂಟುಮಾಡಬಹುದು.

ಉನ್ಮಾದತೆಯ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

ಉನ್ಮಾದತೆ ಯಾವ ಮಟ್ಟಕ್ಕೇರಿದೆ ಎಂಬ ಅಂಶವನ್ನು ಪರಿಗಣಿಸಿ ಇದರ ಇರುವಿಕೆಯನ್ನು ಪತ್ತೆ ಹಚ್ಚುವ ಪರೀಕ್ಷೆಗಳು (psycho-diagnostic testing), ಇಇಜಿ ಮತ್ತು ಇತರ ನರವ್ಯವಸ್ಥೆಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಂದು ವೇಳೆ ಮೆದುಳಿನಲ್ಲಿ ಯಾವುದೇ ಅಸಹಜತೆಯನ್ನು ಅನುಮಾನಿಸಿದಾಗಲೂ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ ಈ ಪರೀಕ್ಷೆಗಳು ಜಟಿಲವಾಗಿರುತ್ತವೆ ಹಾಗೂ ಚಿಕಿತ್ಸೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಈ ಕಾಯಿಲೆ ಯಾವ ಹಂತದಲ್ಲಿದೆ ಹಾಗೂ ಎಷ್ಟು ಉಲ್ಬಣಗೊಂಡಿದೆ ಎಂಬ ವಿವರಗಳು ಪರೀಕ್ಷೆಗಳ ಮೂಲಕ ಖಚಿತಪಟ್ಟ ಬಳಿಕವೇ ಚಿಕಿತ್ಸೆ ಹೇಗಿರಬೇಕು ಎಂದು ವೈದ್ಯರೇ ನಿರ್ಧರಿಸುತ್ತಾರೆ. ನಿಖರವಾದ ಪರೀಕ್ಷೆಗಾಗಿ ಸೈಕೋಥೆರಪಿ, ಹಿಪ್ನೋಥೆರಪಿ ಮತ್ತು ಔಷಧಿ ನೆರವಿನ ಪರೀಕ್ಷೆ ( supportive drug therapy) ಮೊದಲಾದವುಗಳನ್ನೂ ನಡೆಸಬಹುದು. ಅಗತ್ಯ ಬಿದ್ದರೆ ಕುಟುಂಬದ ಎಲ್ಲಾ ಸದಸ್ಯರನ್ನೂ ಕರೆತಂದು ಒಟ್ಟಾಗಿ ನೀಡುವ Family therapy ಎಂಬ ವಿಧಾನವನ್ನೂ ಅನುಸರಿಸಬಹುದು.

ರೋಗಿಯಲ್ಲಿ ಉನ್ಮಾದತೆಯ ಇರುವಿಕೆ ಖಚಿತವಾದ ಬಳಿಕ ರೋಗಿಯ ಕುಟುಂಬದ ಎಲ್ಲಾ ಸದಸ್ಯರಿಗೂ ಚಿಕಿತ್ಸೆಯನ್ನು ನೀಡುವುದು ಅಗತ್ಯವಾಗುತ್ತದೆ ಹಾಗೂ ಎಲ್ಲರೂ ಸಮಾಲೋಚನೆಯ ಮೂಲಕ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಉನ್ಮಾದತೆ ಇದೆ ಎಂದರೆ ಇದು ಎಲ್ಲಿಂದ ಪ್ರಾರಂಭವಾಯಿತು, ಯಾವ ಸ್ಥಿತಿಗಳಲ್ಲಿ ಉನ್ಮಾದತೆ ಎದುರಾಗುತ್ತದೆ ಎಂಬ ತನಿಖೆಗಳ ಮೂಲಕ ಮೂಲವನ್ನು ಅರಿಯಲಾಗುತ್ತದೆ.

ಒಂದು ವೇಳೆ ಕುಟುಂಬವರ್ಗದಲ್ಲಿ ಅಂತರಿಕ ಕಲಹವಿದ್ದರೆ ರೋಗಿಯ ಉನ್ಮಾದತೆ ಕಡಿಮೆಯಾಗಲು ಈ ಕಲಹ ನಿವಾರಣೆಯಾಗುವತ್ತ ತಜ್ಞರು ಕಾರ್ಯನಿರ್ವಹಿಸುತ್ತಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪ್ರಾರಂಭವಾದರೆ ರೋಗಿಯ ಆರೋಗ್ಯದ ಜೊತೆಗೇ ರೋಗಿಯ ಮನೆಯವರ ನಡುವಣ ಬಾಂಧವ್ಯವೂ ಉತ್ತಮಗೊಳ್ಳುತ್ತದೆ. ಹಾಗಾಗಿ, ಯಾವುದೇ ವ್ಯಕ್ತಿಯಲ್ಲಿ ಮನೋವಿಕಾರದ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣವೇ ಮನೋವೈದ್ಯರನ್ನು ಕಂಡು ಈ ಉನ್ಮಾದತೆಗೆ ಮೂಲ ಕಾರಣವನ್ನು ಅರಿಯಲು ಯತ್ನಿಸಬೇಕು

ಉನ್ಮಾದತೆಗೆ ಒಳಗಾದ ರೋಗಿಯ ಮನೆಯವರು ಕೈಗೊಳ್ಳಬೇಕಾದ ಜವಾಬ್ದಾರಿಗಳು ಇಂತಿವೆ:

*ಒಂದು ವೇಳೆ ಕುಟುಂಬದ ಸದಸ್ಯರಲ್ಲಿ ಯಾರಿಗೂ ಆಗಲಿ ಸತತವಾಗಿ ಪ್ರಜ್ಞೆ ತಪ್ಪುವ ಲಕ್ಷಣಗಳಿದ್ದರೆ ಇವರಿಗೆ ಚಿಕಿತ್ಸೆಯನ್ನು ಆದಷ್ಟೂ ಬೇಗನೇ ಪ್ರಾರಂಭಿಸಬೇಕು.

*ಎಂದಿಗೂ ರೋಗಿಯನ್ನು ಒಂಟಿಯಾಗಿರಿಸಬಾರದು ಹಾಗೂ ಆತ/ಆಕೆ ಹೇಳುವ ವಿಷಯಗಳನ್ನು ಗಮನವಿಟ್ಟು ಸೂಕ್ಷ್ಮವಾಗಿ ಆಲಿಸಬೇಕು.

*ರೋಗಿ ಹೇಳುವ ಯಾವುದೇ ಮಾತುಗಳನ್ನು ವೈಯಕ್ತಿಕವಾಗಿ ಪರಿಗಣಿಸಬಾರದು. ಉನ್ಮಾದತೆಗೆ ಒಳಗಾದ ವ್ಯಕ್ತಿ ಸಾಮಾನ್ಯವಾಗಿ ಎದುರಿನ ವ್ಯಕ್ತಿಗಳ ಬಗ್ಗೆ ಋಣಾತ್ಮಕವಾಗಿಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

*ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಿ ಹಾಗೂ ರೋಗಿಯನ್ನು ಈ ಸ್ಥಿತಿಯಿಂದ ಹೊರಬರಲು ಸಹಕರಿಸಿ. ಆದಷ್ಟೂ ರೋಗಿಯನ್ನು ಆತನ/ಆಕೆಯ ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ.

English summary

Here’s Everything You Need To Know About Hysteria

Hysteria is a neurotic disease, which is a psychological problem related to the youth. Most of the cases of hysteria are seen in women with the most prominent symptoms. However, sometimes, men are also vulnerable to it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X