Just In
Don't Miss
- Sports
ಭಾರತಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವುದು ನನ್ನ ಸುದೀರ್ಘ ಕಾಲದ ಕನಸು: ಸೂರ್ಯಕುಮಾರ್ ಯಾದವ್
- Movies
'ಜೀವನದಲ್ಲಿ ಉತ್ತಮ ಪ್ರಯಾಣಿಕ' ಯಾರೆಂದು ಹೇಳಿದ ನಟ ಜಗ್ಗೇಶ್
- News
ತೆರಿಗೆ ಕಡಿತ; ಮಾರ್ಚ್ ಮಧ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ?
- Finance
ಮಾರ್ಚ್ 02ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್ಯುವಿ ಕಾರು
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
ವಯಸ್ಸು 35 ದಾಟಿದ ಬಳಿಕ ಹೇರ್ ಡೈ ಬಳಕೆ ಮಾಡದವರು ತುಂಬಾ ಕಡಿಮೆ, ವಯಸ್ಸು ಮೂವತ್ತು ದಾಟುತ್ತಿದ್ದಂತೆ ನೆರೆ ಕೂದಲು ಕಾಣಲಾರಂಭಿಸುತ್ತದೆ, ಇನ್ನು ಕೆಲವರಿಗೆ ತುಂಬಾ ಚಿಕ್ಕ ಪ್ರಾಯದಲ್ಲಿಯೇ ನೆರೆ ಕೂದಲು ಕಾಣಿಸಲಾರಭಿಸುತ್ತದೆ. ನೆರೆ ಕೂದಲು ಎನ್ನುವುದು ವಯಸ್ಸನ್ನು ಸೂಚಿಸುವ ಸಂಕೇತ ಹಾಗೂ ನೆರೆ ಕೂದಲು ಸೌಂದರ್ಯದ ಕಳೆಯನ್ನು ಕಡಿಮೆ ಮಾಡುವುದರಿಂದ ನೆರೆ ಕೂದಲು ಕಾಣಸಿದ ತಕ್ಷಣ ಅದನ್ನು ಮರೆ ಮಾಚಲು ಪ್ರಯತ್ನಿಸುತ್ತಾರೆ.
ಮರೆ ಕೂದಲು ಮರೆ ಮಾಚಲು ಕೆಲವರು ಮೆಹಂದಿ ಹಚ್ಚಿದರೆ ಇನ್ನು ಕೆಲವರು ಹೇರ್ ಡೈ ಹಚ್ಚುತ್ತಾರೆ. ಹೇರ್ ಡೈ ಹಚ್ಚುವುದು ಸುಲಭವಾಗಿರುವುದರಿಂದ ಇದನ್ನು ಹೆಚ್ಚಾಗಿಯೇ ಬಳಸುತ್ತಾರೆ. ಅದಲ್ಲದೆ ಕೈಗೆ ಅಂಟದೆ ಶ್ಯಾಂಪೂ ರೀತಿ ಹಚ್ಚುವ ಹೇರ್ ಡೈ ಮಾರುಕಟ್ಟೆಯಲ್ಲಿ ದೊರೆಯುವುದರಿಂದ ಕೂದಲಿನ ಅಂದ ಹೆಚ್ಚಿಸಲು ಹೇರ್ ಡೈ ಬಳಸುತ್ತಿದ್ದಾರೆ.ಶೇ.35ರಷ್ಟು ಪುರುಷರು, ಶೇ. 25ರಷ್ಟು ಮಹಿಳೆಯರು ಹೇರ್ ಡೈ ಮಾಡುತ್ತಿದ್ದಾರೆ.
ಹೇರ್ ಡೈಯಲ್ಲಿ ಕೆಲವೊಂದು ಹೇರ್ ಡೈಗಳು ತಾತ್ಕಾಲಿಕವಾಗಿದ್ದರೆ, ಇನ್ನು ಕೆಲವು ದೀರ್ಘ ಕಾಲದವರೆಗೆ ಕೂದಲಿನಲ್ಲಿ ಉಳಿಯುತ್ತದೆ. ಕೂದಲಿಗೆ ಅಂದ ನೀಡುವ ಈ ಹೇರ್ ಡೈ ಮಾಡಲು ರಾಸಾಯನಿಕಗಳನ್ನು ಬಳಸುತ್ತಾರೆ ಎಂದು ಎಲ್ಲರಿಗೆ ಗೊತ್ತು, ಆದರೆ ಈ ರಾಸಾಯನಿಕಗಳು ಆರೋಗ್ಯದ ಮೇಲೆ ಎಷ್ಟೊಂದು ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದು ಗೊತ್ತಿದೆಯೇ? ಹೇರ್ ಡೈ ಹಚ್ಚುವುದರಿಂದ ಯಾವೆಲ್ಲಾ ಅಪಾಯಕಾರಿ ಕಾಯಿಲೆಗಳು ಬರುತ್ತವೆ ಎಂದು ಇಲ್ಲಿ ಹೇಳಿದ್ದೇವೆ ನೋಡಿ:

1. ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆ
ಹೇರ್ ಡೈನಲ್ಲಿರುವ ಪಿ-ಪೀನೈಲ್ಎಂಡಾಮೈನ್ ರಾಸಾಯನಿಕ ಬ್ಲೇಡರ್ ಕ್ಯಾನ್ಸರ್, ಶ್ವಾಸಕೋಶ ಹಾಗೂಕಿಡ್ನಿ ಸಮಸ್ಯೆ ತರುವ ಸಾಧ್ಯತೆ ಇದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯು ತಿಂಗಳಿಗೊಮ್ಮೆ ಹೇರ್ ಡೈ ಬಳಸುವವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಹೇಳಿದೆ. ಅದರಲ್ಲೂ ಕಂದು ಹಾಗೂ ಕಪ್ಪು ಬಣ್ಣದ ಹೇರ್‌ಡೈನಲ್ಲಿ ಈ ರಾಸಾಯನಿಕಗಳು ಅಧಿಕವಾಗಿರುವುದರಿಂದ ಈ ಹೇರ್ ಡೈಗಳನ್ನು ಬಳಸುವುದು ಅಪಾಯಕಾರಿಯಾಗಿದೆ ಎಂದು ಹೇಳಿದೆ.

2. ಉಸಿರಾಟದ ತೊಂದರೆ
ಅಮೋನಿಯಾ ಹೇರ್ ಡೈ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಮೋನಿಯಾ ಹಾಗೂ ಹೈಡ್ರೋಜನ್ ಪರಾಕ್ಸೈಡ್ ಬಳಸಿ ಬ್ಲೀಚಿಂಗ್ ಪುಡಿ ತಯಾರಿಸಲಾಗುವುದು, ಹಾಗಾದರೆ ಈ ಅಮೋನಿಯಾ ಆರೋಗ್ಯಕ್ಕೆ ಎಷ್ಟೊಂದು ಹಾನಿಕಾರಕ ಎಂದು ಊಹಿಸಿ. ಈ ರಾಸಾಯನಿಕಗಳನ್ನು ಬಳಸುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಅಸ್ತಮಾ, ಉಸಿರಾಟದ ತೊಂದರೆ ಇರುವವರು ಹೇರ್ ಡೈ ಬಳಸುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

3. ಹಾರ್ಮೋನ್‌ಗಳ ಅಸಮತೋಲನ ಉಂಟಾಗುತ್ತದೆ
ಹೇರ್‌ಡೈನಲ್ಲಿ ಬಳಸುವ ಮತ್ತೊಂದು ರಾಸಾಯನಿಕವೆಂದರೆ ರೆಸಾರ್ಸಿನಾಲ್. ಪಬ್ಲಿಕ್ ಹೆಲ್ತ್ ಎಂಬ ಯೂರೋಪಿಯನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಹೇರ್ ಡೈಯನ್ನು ತುಂಬಾ ಕಾಲದಿಂದ ಬಳಸುತ್ತಿರುವ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಪ್ರಮಾಣ, ಹೇರ್ ಡೈ ಬಳಸದೇ ಇರುವ ಮಹಿಳೆಯರಿಗಿಂತ ಶೇ14ರಷ್ಟು ಅಧಿಕವಾಗುವುದು ಎಂದು ಹೇಳಿದೆ.

4. ಅಲರ್ಜಿ ಸಮಸ್ಯೆ ಹೆಚ್ಚಾಗುವುದು
ಹೇರ್ ಡೈನಲ್ಲಿ ರಾಸಾಯನಿಕ ಪಿ-ಪೀನೈಲ್ಎಂಡಾಮೈನ್ ತ್ವಚೆಗೆ ತಾಗಿದರೆ ಅಲರ್ಜಿ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಹೇರ್ ಡೈ ಬಳಸಿದ ತಕ್ಷಣ ಮುಖ ಊದಿಕೊಳ್ಳುವುದು, ತಲೆಯಲ್ಲಿ ತುರಿಕೆ, ತ್ವಚೆಯಲ್ಲಿ ಉರಿ ಮುಂತಾದ ಸಮಸ್ಯೆ ಕಂಡು ಬರುವುದು. ಈ ಸಮಸ್ಯೆಗಳಿಗೆ ಹೇರ್ ಡೈನಲ್ಲಿ ಬಳಸಿರುವ ಹಾನಿಕಾರಕ ರಾಸಾಯನಿಕಗಳು ಪ್ರಮುಖ ಕಾರಣವಾಗಿದೆ.

5. ಭ್ರೂಣದ ಆರೋಗ್ಯಕ್ಕೆ ಒಳ್ಳೆಯದಲ್ಲ
ಗರ್ಭಾವಸ್ಥೆಯಲ್ಲಿ ಹೇರ್ ಡೈ ಬಳಸುವುದು ಭ್ರೂಣದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಈ ಸಮಯದಲ್ಲಿ ಹೇರ್ ಡೈ, ಹೇರ್ ಕಲರ್ ಮುಂತಾದ ರಾಸಾಯನಿಕ ಬಳಸದಂತೆ ವೈದ್ಯರೇ ಸೂಚಿಸುತ್ತಾರೆ. ಗರ್ಭಿಣಿಯರು ಮಾತ್ರವಲ್ಲ ಎದೆಹಾಲುಣಿಸುವ ತಾಯಿಂದಿರು ಕೂಡ ಹೇರ್ ಡಯ ಬಳಸುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುವುದನ್ನು ಶೇ.96ರಷ್ಟು ತಾಯಿಂದಿರು ಒಪ್ಪುತ್ತಾರೆ.

6. ಕ್ಯಾನ್ಸರ್
ಫಾರ್ಮಲಾಡಿಹೈಡ್ ಹಾಗೂ ಕೋಲ್‌ಥಾರ್ ಎಂಬ ರಾಸಾಯನಿಕಗಳು ಬ್ಲೇಡರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರ್ ಮುಂತಾದ ಕ್ಯಾನ್ಸರ್‌ಗಳ್ನು ತರುತ್ತದೆ.

ಹೇರ್ ಡೈ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು
* ಪರ್ಮನೆಂಟ್ ಅಥವಾ ಶಾಶ್ವತ ಹೇರ್ ಡೈ ಬಳಸು ಹೋಗಬೇಡಿ, ಅದರ ಬದಲಿಗೆ ಸೆಮಿ ಪರ್ಮನೆಂಟ್ ಹೇರ್ ಡೈ ಬಳಸಿ, ಇವುಗಳಲ್ಲಿ ರಾಸಾಯನಿಕ ಸ್ವಲ್ಪ ಕಡಿಮೆ ಇರುತ್ತದೆ.
* ಹೇರ್ ಡೈ ಮಾಡುವುದಕ್ಕೆ ಮುನ್ನ ಪ್ಯಾಚ್ ಟೆಸ್ಟ್ ಅಂದರೆ ಕೈಗೆ ಸ್ವಲ್ಪ ಹಚ್ಚಿ ನೋಡಿ, ತುರಿಕೆ, ಉರಿ ಕಂಡು ಬಂದರೆ ಹಚ್ಚಬೇಡಿ.
* ಹೇರ್ ಡೈ ಬಳಸುವ ಮುನ್ನ ಚರ್ಮರೋಗ ತಜ್ಞರ ಸಲಹೆ ಪಡೆಯಿರಿ