For Quick Alerts
ALLOW NOTIFICATIONS  
For Daily Alerts

ಮೂಲವ್ಯಾಧಿಗೆ ಯಾವ ಆಹಾರ ಒಳ್ಳೆಯದು, ಯಾವುದು ಒಳ್ಳೆಯದಲ್ಲ

|

ಮೂಲವ್ಯಾಧಿ ತೊಂದರೆ ಉಂಟಾದಾಗ ಅದು ನೀಡುವ ನೋವು ಅಸಾಧ್ಯವಾಗಿರುತ್ತದೆ. ಕೂರಲು ಸಾಧ್ಯವಾಗದೆ ಒದ್ದಾಡಬೇಕಾಗುತ್ತದೆ. ಗುದಧ್ವಾರದ ಸಮೀಪ ನರಗಳ ಊತ ಉಂಟಾಗಿ, ಚಿಕ್ಕ ಮಾಂಸದ ಮುದ್ದೆ ಹೊರಗಡೆ ಕಾಣುವುದು. ಮೂಲವ್ಯಾಧಿ ಉಂಟಾದಾಗ ಮಲವಿಸರ್ಜನೆ ಹೋಗುವಾಗ ತುಂಬಾ ನೋವು ಉಂಟಾಗುವುದು, ಕೆಲವರಿಗೆ ರಕ್ತಸ್ರಾವ ಕೂಡ ಉಂಟಾಗುತ್ತದೆ. ಈ ಸಮಸ್ಯೆ ಕಾಣಿಸಿದಾಗ ಅದಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಬೇಗನೆ ಗುಣಮುಖವಾಗುವುದಿಲ್ಲ. ಮೂಲವ್ಯಾಧಿ ಬಂದರೆ ಕೆಲವರು ತಿಂಗಳುಗಟ್ಟಲೆ ನೋವು ಅನುಭವಿಸುತ್ತಾರೆ.

 Piles

ಮೂಲವ್ಯಾಧಿ ಕಾಣಿಸಿದಾಗ ಬೇಗನೆ ಗುಣಮುಖವಾಗಲು ಚಿಕಿತ್ಸೆ ಜತೆಗೆ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಕೆಲವೊಂದು ಆಹಾರಗಳು ಮೂಲವ್ಯಾಧಿ ಸಮಸ್ಯೆ ಗುಣಪಡಿಸುವಲ್ಲಿ ಸಹಕಾರಿ, ಮತ್ತೆ ಕೆಲವು ಆಹಾರಗಳು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ, ಇಲ್ಲಿ ಯಾವ ಆಹಾರಗಳನ್ನು ತಿಂದರೆ ಒಳ್ಳೆಯದು, ಯಾವ ಆಹಾರ ತಿನ್ನಬಾರದು ಎಂದು ಹೇಳಿದ್ದೇವೆ ನೋಡಿ:
 ಧಾನ್ಯಗಳು

ಧಾನ್ಯಗಳು

ಮೂಲವ್ಯಾಧಿ ಸಮಸ್ಯೆ ಗುಣಪಡಿಸಲು ಮೊದಲು ನೀವು ಮಾಡಬೇಕಾಗಿರುವುದು ಸಾಕಷ್ಟು ನಾರಿನಂಶವಿರುವ ಆಹಾರವನ್ನು ಆಹಾರಕ್ರಮದಲ್ಲಿ ಸೇರಿಸುವುದು. ನಾರಿನಂಶವಿರುವ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲವಿಸರ್ಜನೆ ಸರಾಗವಾಗಿ ನಡೆಯುವುದು. ಧಾನ್ಯಗಳಲ್ಲಿ ಪೋಷಕಾಂಶ ಹಾಗೂ ನಾರಿನಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಒಬ್ಬ ಮನುಷ್ಯನಿಗೆ ದಿನಕ್ಕೆ 21-38ಗ್ರಾಂ ನಾರಿನಂಶ ಅಗ್ಯತವಿರುತ್ತದೆ. ಒಂದು ಕಪ್ ಧಾನ್ಯದಲ್ಲಿ 16ಗ್ರಾಂ ನಾರಿನಂಶ ದೊರೆಯುತ್ತದೆ. ನಾರಿನಂಶದ ಅಗ್ಯತತೆ ವಯಸ್ಸು ಹಾಗೂ ಲಿಂಗದ ಅನ್ವಯ ಬೇರೆ-ಬೇರೆಯಾಗಿರುತ್ತದೆ. ಬಾರ್ಲಿ, ಜೋಳ, ನವಣೆ, ಕೆಂಪಕ್ಕಿ ಅನ್ನ, ಓಟ್ಸ್ ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು.

ಮೂಲಂಗಿ, ಬ್ರೊಕೋಲಿ ಮುಂತಾದ ತರಕಾರಿಗಳು

ಮೂಲಂಗಿ, ಬ್ರೊಕೋಲಿ ಮುಂತಾದ ತರಕಾರಿಗಳು

ಮೂಲವ್ಯಾಧಿಗೆ ಮೂಲಂಗಿ ಮನೆಮದ್ದಾಗಿದೆ. ಮೂಲಂಗಿಯನ್ನು ಆಹಾರಕ್ರಮದಲ್ಲಿ ಸೇರಿಸದರೆ ಮೂಲವ್ಯಾಧಿ ಸಮಸ್ಯೆ ಬರುವುದೇ ಇಲ್ಲ. ಬ್ರೊಕೋಲಿ, ಕಲೆ, ಎಲೆಕೋಸು, ನೂಕೋಲು ಇವುಗಳನ್ನು ತಿನ್ನಿ. ಇವುಗಳಲ್ಲಿರುವ ಇನ್ಯುಲಿನ್ ಎಂಬ ನಾರಿನಂಶ ಗುದಧ್ವಾರದಲ್ಲಿ ಆರೋಗ್ಯಕರ ಬ್ಯಾಕ್ಟಿರಿಯಾವನ್ನು ವೃದ್ಧಿಸುತ್ತದೆ. ಇದರಿಂದ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುವುದು.

ಸಿಹಿ ಗೆಣಸು, ಬೀಟ್‌ರೂಟ್, ಕ್ಯಾರೆಟ್, ಆಲೂಗಡ್ಡೆ ಇವುಗಳು ಬೇಯಿಸಿ ತಿನ್ನುವುದು ಒಳ್ಳೆಯದು. ಇದರಲ್ಲಿರುವ ನಾರಿನಂಶ ಹಾಗೂ ಪೋಷಕಾಂಶ ಮೂಲವ್ಯಾಧಿ ಸಮಸ್ಯೆ ಗುಣಪಡಿಸುವಲ್ಲಿ ಸಹಕಾರಿಯಾಗಿದೆ.

ಬೂದು ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಸೋರೆಕಾಯಿ ಇವುಗಳು ಕೂಡ ಮೂಲವ್ಯಾಧಿ ಸಮಸ್ಯೆ ಗುಣಪಡಿಸುವಲ್ಲಿ ಸಹಕಾರಿಯಾಗಿದೆ. ಗುಂಡು ಮೆಣಸಿನಕಾಯಿಯನ್ನು ಆಹಾರಕ್ರಮದಲ್ಲಿ ಸೇರಿಸಿ. 2ಗ್ರಾಂ ನಾರಿನಂಶವಿದ್ದು, ಶೇ.93ರಷ್ಟು ನೀರಿನಂಶವಿರುವುದರಿಂದ ಮೂಲವ್ಯಾಧಿ ಬೇಗನೆ ಗುಣಪಡಿಸುವಲ್ಲಿ ತುಂಬಾ ಸಹಕಾರಿ.

ಸೌತೆಕಾಯಿ ಮತ್ತು ಕಲ್ಲಂಗಡಿ, ಕರ್ಬೂಜ ಹಣ್ಣು

ಸೌತೆಕಾಯಿ ಮತ್ತು ಕಲ್ಲಂಗಡಿ, ಕರ್ಬೂಜ ಹಣ್ಣು

ಇವುಗಳು ಬಾಯಿಗೆ ರುಚಿ ಮಾತ್ರವಲ್ಲ ದೇಹಕ್ಕೆ ತಂಪು. ಉಷ್ಣಾಂಶ ಹೆಚ್ಚಾದಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಮಲಬದ್ಧತೆ ಉಂಟಾಗುತ್ತದೆ. ಆಗಾಗ ಮಲಬದ್ಧತೆ ಉಂಟಾಗುತ್ತಿದ್ದರೆ ಮೂಲವ್ಯಾಧಿ ಉಂಟಾಗುವುದು. ಸೌತೆಕಾಯಿ, ಕರ್ಬೂಜ, ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಅಧಿಕವಿದ್ದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಸೇಬು, ಪಿಯರ್ಸ್, ಬೆರ್ರಿ ಹಣ್ಣುಗಳು

ಸೇಬು, ಪಿಯರ್ಸ್, ಬೆರ್ರಿ ಹಣ್ಣುಗಳು

ಇವುಗಳಲ್ಲಿ ನುಂಗಲು ಸಾಧ್ಯವಾಗುವ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಮೂಲವ್ಯಾಧಿ ಸಮಸ್ಯೆ ತಡೆಗಟ್ಟಲು ಒಂದು ಬೌಲ್‌ ಈ ಹಣ್ಣುಗಳನ್ನು ತಿಂದರೆ ಒಳ್ಳೆಯದು. ಪಿಯರ್ಸ್‌ನಲ್ಲಿ ಶೇ. 22ರಷ್ಟು ನಾರಿನಂಶ ಇರುವುದರಿಂದ ಮಕ್ಕಳಲ್ಲಿ ಮಲಬದ್ಧತೆ ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಒಂದು ಸಾಧಾರಣ ಗಾತ್ರದ ಸೇಬು ತಿಂದರೆ ಅದರಲ್ಲಿ 5ಗ್ರಾಂ ನಾರಿನಂಶವಿರುತ್ತದೆ, ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಒಂದು ಕಪ್ ಬೆರ್ರಿ ಹಣ್ಣು ತಿಂದರೆ ನಿಮಗೆ 123 ಗ್ರಾಂ ನಾರಿನಂಶ ದೊರೆಯುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ ಹಾಗೂ ಮೂಲವ್ಯಾಧಿ ಸಮಸ್ಯೆ ಬೇಗನೆ ಗುಣಮುಖವಾಗುತ್ತದೆ. ಒಣ ಪ್ಲಮ್‌ ಹಣ್ಣುಗಳ ಜ್ಯೂಸ್‌ ಕೂಡ ಜೀರ್ಣಕ್ರಿಯೆಗೆ ಸಹಕಾರಿ.

ನೀರು ಕುಡಿಯಿರಿ

ನೀರು ಕುಡಿಯಿರಿ

ದಿನದಲ್ಲಿ 8 ಲೋಟ ನೀರು ಕುಡಿಯುವುದು ಒಳ್ಳೆಯದು. ಆದರೆ ಕೆಲವರು ಅದಕ್ಕಿಂತ ಹೆಚ್ಚು ನೀರು ಬೇಕಾಗುವುದು, ಇನ್ನು ಕೆಲವರಿಗೆ ಅದಕ್ಕಿಂತ ಸ್ವಲ್ಪ ಕಡಿಮೆ ಕುಡಿದರೂ ನಡೆಯುತ್ತದೆ. ನೀರು ಎಷ್ಟು ಕುಡಿಯಬೇಕು ಎನ್ನುವುದು ಅವರ ಮೈ ತೂಕದ ಆಧಾರದ ಮೇಲೆ ಹೇಳಲಾಗುವುದು. ಮೂತ್ರದ ಬಣ್ಣ ನೋಡಿ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದೀರಾ, ಇಲ್ವಾ? ಎಂದು ತಿಳಿಯಬಹುದು. ಮೂತ್ರ ಹಳದಿ ಬಣ್ಣದಲ್ಲಿದ್ದರೆ ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂದರ್ಥ.

ಮೂಲವ್ಯಾಧಿಗೆ ಯಾವ ಆಹಾರ ಒಳ್ಳೆಯದಲ್ಲ

ಮೂಲವ್ಯಾಧಿಗೆ ಯಾವ ಆಹಾರ ಒಳ್ಳೆಯದಲ್ಲ

ಕಡಿಮೆ ನಾರಿನಂಶವಿರುವ ಆಹಾಶರವನ್ನು ಮೂಲವ್ಯಾಧಿ ಸಮಸ್ಯೆ ಗುಣಮುಖವಾಗುವವರೆಗೆ ಸೇವಿಸಬೇಡಿ. ಮೂಲವ್ಯಾಧಿಯಿಂದ ಬೇಗನೆ ಗುಣಮುಖರಾಗಲು ಈ ಆಹಾರ ಸೇವನೆ ಮಾಡದಿದ್ದರೆ ಒಳ್ಳೆಯದು:

* ಹಾಲಿನ ಉತ್ಪನ್ನಗಳು: ಹಾಲು, ಚೀಸ್ ಹಾಗೂ ಇತರ ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ.

* ಮೈದಾ: ಮೈದಾದಿಂದ ಮಾಡಿದ ತಿಂಡಿಗಳು, ಆಹಾರಗಳು ಮಲಬದ್ಧತೆ ಸಮಸ್ಯೆ ಮತ್ತಷ್ಟು ಹೆಚ್ಚಿಸುವುದರಿಂದ ಇವುಗಳನ್ನು ತಿನ್ನಬೇಡಿ.

* ಕೆಂಪು ಮಾಂಸ: ಕೆಂಪು ಮಾಂಸ ಸುಲಭವಾಗಿ ಜೀರ್ಣವಾಗುವುದಿಲ್ಲ, ಆದ್ದರಿಂದ ಮೂಲವ್ಯಾಧಿ ಇರುವಾಗ ಇವುಗಳನ್ನು ತಿನ್ನಬೇಡಿ.

* ಸಂಸ್ಕರಿಸಿದ ಆಹಾರಗಳಿಂದ ದೂರವಿರಿ: ಶೀತಲೀಕರಿಸಿದ ಹಾಗೂ ಸಂಸ್ಕರಿಸಿದ ಆಹಾರಗಳಲ್ಲಿ ಅಧಿಕ ಸೋಡಿಯಂ ಹಾಗೂ ಕಡಿಮೆ ನಾರಿನಂಶವಿರುತ್ತದೆ.

* ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ.

*ಅಧಿಕ ಉಪ್ಪು ಇರುವ ಆಹಾರವನ್ನು ಸೇವಿಸಬೇಡಿ.

 ಇವುಗಳನ್ನು ಮುಟ್ಟಲೇಬೇಡಿ

ಇವುಗಳನ್ನು ಮುಟ್ಟಲೇಬೇಡಿ

ಅಧಿಕ ಖಾರ ಪದಾರ್ಥಗಳು: ಅಧಿಕ ಖಾರ ಪದಾರ್ಥಗಳನ್ನು ತಿನ್ನುವುದರಿಂದ ನೋವು ಇನ್ನೂ ಹೆಚ್ಚಾಗುವುದು.

* ಕೆಫೀನ್‌ ಪದಾರ್ಥಗಳಿಂದ ದೂರವಿರಿ: ಕಾಫಿ ಮಲಬದ್ಧತೆ ಸಮಸ್ಯೆ ಮತ್ತಷ್ಟು ಅಧಿಕ ಮಾಡುತ್ತದೆ, ಕಾಪಿ, ಟೀ ಇವುಗಳನ್ನು ಕುಡಿಯುವುದರಿಂದ ಮಲವಿಸರ್ಜನೆಗೆ ಮತ್ತಷ್ಟು ತೊಂದರೆಯಾಗುವುದು.

* ಮದ್ಯ: ಮೂಲವ್ಯಾಧಿ ಇರುವವರು ಮದ್ಯ ಸೇವಿಸಿದರೆ ಸಮಸ್ಯೆ ಮತ್ತಷ್ಟು ಅಧಿಕವಾಗುತ್ತದೆ.

ಇಲ್ಲಿ ಹೇಳಿರುವಂತೆ ಆಹಾರಕ್ರಮ ಪಾಲಿಸಿದ್ದೇ ಆದರೆ ಮೂಲವ್ಯಾಧಿ ಸಮಸ್ಯೆ ಬೇಗನೆ ಇಲ್ಲವಾಗುವುದು. ಈ ಆಹಾರಕ್ರಮಗಳ ಜತೆಗೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.

English summary

Foods To Eat And Avoid For Piles

The pain, tenderness, bleeding, and intense itching that accompany hemorrhoids are so difficulty to tolerate. Diet can help to cure piles. Here are what foods to have and what not have when you have piles. Take a look.
X
Desktop Bottom Promotion