For Quick Alerts
ALLOW NOTIFICATIONS  
For Daily Alerts

ಆರೋಗ್ಯವಂತ ಮಗುವಿನ ಜನನಕ್ಕೆ ಫಾಲಿಕ್ ಆಮ್ಲಕ್ಕಿಂತ ಪರ್ಯಾಯ ಬೇರಿಲ್ಲ

|

ನಮ್ಮ ದೇಹಕ್ಕೆ ಬೇಕಾಗಿರುವಂತಹ ಪ್ರತಿಯೊಂದು ವಿಟಮಿನ್ ಗಳು ಹಾಗೂ ಖನಿಜಾಂಶಗಳು ಆಹಾರದಿಂದಲೇ ಲಭ್ಯವಾಗುವುದು. ಇದರ ಕೊರತೆ ಕಾಣಿಸಿಕೊಂಡ ವೇಳೆ ಏನಾದರೂ ಸಮಸ್ಯೆಯಾಗಿ ವೈದ್ಯರು ಇದನ್ನು ಸಪ್ಲಿಮೆಂಟ್ ರೂಪದಲ್ಲಿ ಸೇವಿಸಲು ಸೂಚಿಸುವರು. ನಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳಲ್ಲಿ ಫಾಲಿಕ್ ಆಮ್ಲವು ಒಂದಾಗಿದೆ. ಇದು ಫೋಲೇಟ್ ನ ಮಾನವ ನಿರ್ಮಿತ ರೂಪ. ಫೋಲೇಟ್ ಎನ್ನುವುದು ವಿಟಮಿನ್ ಬಿ9 ಆಗಿದ್ದು, ಇದು ನೈಸರ್ಗಿಕವಾಗಿ ಸಿಗುವಂತಹ ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳಲ್ಲಿ ಕಂಡುಬರುವುದು. ಫಾಲಿಕ್ ಆಮ್ಲವು ಸಪ್ಲಿಮೆಂಟ್ ಹಾಗೂ ಬಲವರ್ಧಿತ ಆಹಾರಗಳಲ್ಲಿ ಕಂಡುಬರುವುದು.

ಆಹಾರದ ಫೋಲೇಟ್ ಗಿಂತ ಫಾಲಿಕ್ ಆಮ್ಲವು ಜೈವಿಕವಾಗಿ ಹೆಚ್ಚು ಲಭ್ಯವಾಗುತ್ತದೆ ಎಂದು ಪರಿಗಣಿಸಲಾಗಿದೆ. ಫಾಲಿಕ್ ಆಮ್ಲವನ್ನು ಸಪ್ಲಿಮೆಂಟ್ ರೂಪದಲ್ಲಿ ನೀಡಿದಾಗ ಅದರ ಜೈವಿಕ ಲಭ್ಯತೆಯು ಶೇ.100ರಷ್ಟು ಇರುವುದು ಮತ್ತು ಶೇ.85ರಷ್ಟು ಬಲವರ್ಧಿತ ಆಹಾರದಲ್ಲಿ ಇರುವುದು.

ಫಾಲಿಕ್ ಆಮ್ಲದ ಅತೀ ಮಹತ್ವದ ಕಾರ್ಯವೆಂದರೆ ಇದು ನವಜಾತ ಶಿಶುಗಳಲ್ಲಿ ನರನಾಳದ ದೋಷಗಳನ್ನು ತಡೆಯುವುದು. ಇದು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕೂಡ ವೃದ್ಧಿಸುವುದು. ಈ ಲೇಖನದಲ್ಲಿ ನಾವು ನಿಮಗೆ ಫಾಲಿಕ್ ಆಮ್ಲದ ಲಾಭಗಳು ಮತ್ತು ಅದರ ಕೊರತೆ ನೀಗಿಸಲು ಏನು ಮಾಡಬೇಕು ಎನ್ನುವ ಬಗ್ಗೆ ತಿಳಿಸಲಿದ್ದೇವೆ.

ಆಹಾರದಲ್ಲಿ ಫೋಲೇಟ್ ಮತ್ತು ಸಪ್ಲಿಮೆಂಟ್ ರೂಪದಲ್ಲಿ ತೆಗೆದುಕೊಳ್ಳುವ ಫಾಲಿಕ್ ಆಮ್ಲವು ದೇಹದಲ್ಲಿ ಹಲವಾರು ತುರ್ತು ಜೀವರಾಸಾಯನಿಕ ಪ್ರಕ್ರಿಯೆಯನ್ನು ಉಂಟು ಮಾಡುವುದು. ಈ ವಿಟಮಿನ್ ಕೆಂಪು ರಕ್ತಕಣದ ಸಂಶ್ಲೇಷಣೆಗೆ ಕಾರಣವಾಗಿದೆ. ಇದು ರಕ್ತಹೀನತೆ, ಹೃದಯದ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆ ತಡೆಯುವುದು. ಫಾಲಿಕ್ ಆಮ್ಲವು ಎಷ್ಟು ಲಾಭಕಾರಿ ಎಂದು ತಿಳಿಯಿರಿ.

1. ನವಜಾತ ಶಿಶುಗಳಲ್ಲಿ ನರನಾಳದ ದೋಷದ ಅಪಾಯ ತಗ್ಗಿಸುವುದು

1. ನವಜಾತ ಶಿಶುಗಳಲ್ಲಿ ನರನಾಳದ ದೋಷದ ಅಪಾಯ ತಗ್ಗಿಸುವುದು

ನರನಾಳದ ದೋಷ (ಎನ್ ಟಿಡಿ) ನವಜಾತ ಶಿಶುಗಳಲ್ಲಿ ಕಂಡುಬರುವಂತಹ ಕೇಂದ್ರ ನರಮಂಡಲ (ಸಿಎನ್ ಎಸ್)ದ ಸಾಮಾನ್ಯ ಸಂಕೀರ್ಣ ನ್ಯೂನ್ಯತೆಯಾಗಿರುವುದು. ಭ್ರೂಣ (ಭ್ರೂಣ ಸೃಷ್ಟಿ) ರಚನೆ ವೇಳೆ ನರನಾಳದ ಮುಚ್ಚುವಿಕೆಯ ವೈಫಲ್ಯದಿಂದಾಗಿ ಇದು ಸಂಭವಿಸುವುದು.

ತೆರೆದ ಎನ್ ಟಿಡಿಯಿಂದ ಜನಿಸಿದ ಶೇ.1ರಷ್ಟು ಮಕ್ಕಳು ಮಾತ್ರ ಈ ಕಾಯಿಲೆಯಿಂದ ಮುಕ್ತರಾಗಿ ಇರುವರು. ಈ ಮಕ್ಕಳಲ್ಲಿ ಚರ್ಮದ ಅರವಳಿಕೆ, ಸೊಂಟ, ಗಂಟು ಮತ್ತು ಪಾದಗಳಲ್ಲಿ ಅಸಾಮಾನ್ಯತೆಯು ಕಂಡುಬರುವುದು. ಇವರಲ್ಲಿ ನಡೆಯುವ ಸಾಮರ್ಥ್ಯ ಕಡಿಮೆ ಆಗಿರುವುದು, ಕರುಳು ಅಥವಾ ಮೂತ್ರಕೋಶದ ಮೇಲೆ ನಿಯಂತ್ರಣವು ಇಲ್ಲದೆ ಇರುವುದು ಅಥವಾ ಕಡಿಮೆ ಇರುವುದು. ಇದಕ್ಕಾಗಿ ಪದೇ ಪದೇ ಶಸ್ತ್ರಚಿಕಿತ್ಸೆಯು ಬೇಕಾಗುವುದು.

ಗರ್ಭಿಣಿಯರಿಗೆ ಹೆಚ್ಚಾಗಿ ಫಾಲಿಕ್ ಆಮ್ಲದ ಸಪ್ಲಿಮೆಂಟ್ ಗಳನ್ನು ಇದೇ ಕಾರಣದಿಂದ ನೀಡಲಾಗುತ್ತದೆ. ಈ ವಿಟಮಿನ್ ಮೆತಿಲೀಕರಣದ ಮಾರ್ಗದಲ್ಲಿ ಒಳಗೊಂಡಿರುವುದು. ಕೆಲವು ಕಿಣ್ವಗಳು ಮತ್ತು ಪ್ರೋಟೀನ್ ಗಳ ಮೆತಿಲೀಕರಣವು ನರನಾಳದ ಜೋಡಣೆಗೆ ತುಂಬಾ ಅಗತ್ಯವಾಗಿರುವುದು.

2. ಹೃದಯ ರಕ್ತನಾಳದ ಕಾಯಿಲೆಗಳನ್ನು ತಡೆಯುವುದು (ಸಿವಿಡಿ)

2. ಹೃದಯ ರಕ್ತನಾಳದ ಕಾಯಿಲೆಗಳನ್ನು ತಡೆಯುವುದು (ಸಿವಿಡಿ)

ಹೃದಯ ರಕ್ತನಾಳದ ಕಾಯಿಲೆಯಲ್ಲಿ ಸಂಶೋಧನೆಗಳು ಹೋಮೋಸಿಸ್ಟೈನ್ ಪಾತ್ರವನ್ನು ಎತ್ತಿ ಹಿಡಿದೆ. ರಕ್ತದಲ್ಲಿ ಮಧ್ಯಮ ಪ್ರಮಾಣದ ಹೋಮೋಸಿಸ್ಟೈನ್ ಇದ್ದರೂ ಅದು ಸಿವಿಡಿ ಅಪಾಯವನ್ನು ಹೆಚ್ಚಿಸುವುದು. ಇದರ ಬಗ್ಗೆ ಒಂದು ಸ್ಪಷ್ಟ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. ಆದರೆ ಫಾಲಿಕ್ ಆಮ್ಲವು ಇದರ ಚಿಕಿತ್ಸೆಯಲ್ಲಿ ನೆರವಾಗುವುದು ಎಂದು ಕಂಡುಕೊಳ್ಳಲಾಗಿದೆ.

ಇವೆರಡರ ನಡುವಿನ ಸಂಬಂಧದ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿದೆ. ಹೋಮೋಸಿಸ್ಟೈನ್ ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳದ ಹಿಗ್ಗಿಸುವಿಕೆ ಮತ್ತು ಅಪಧಮನಿಗಳ ಗೋಡೆಗಳು ದಪ್ಪವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

3. ಕ್ಯಾನ್ಸರ್ ಅಪಾಯ ತಗ್ಗಿಸುವುದು

3. ಕ್ಯಾನ್ಸರ್ ಅಪಾಯ ತಗ್ಗಿಸುವುದು

ಫೋಲೇಟ್ ಡಿಎನ್ ಎ ಮತ್ತು ಆರ್ ಎನ್ ಎ ಸಂಶ್ಲೇಷಣೆ, ಮೆತಲೀಕರಣ ಮತ್ತು ಅಂಗಾಂಶಗಳ ಭಿನ್ನತೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದೆಲ್ಲವೂ ನಮ್ಮ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಮುಖ ಪಾತ್ರ ವಹಿಸುವುದು. ಈ ಆಣ್ವಿಕ ವಿಪಥಗಳ ಸಾಮಾನ್ಯ ಅಭಿವ್ಯಕ್ತಿಯೇ ಕ್ಯಾನ್ಸರ್.

ಕ್ಯಾನ್ಸರ್ ಡಿಎನ್‌ಎ ಹಾನಿ ಮತ್ತು ದೋಷಯುಕ್ತ / ಅನಿಯಂತ್ರಿತ ಜೀನ್ ಅಭಿವ್ಯಕ್ತಿಯಿಂದ ಉಂಟಾಗುತ್ತದೆ ಎಂದು ತಿಳಿಯಲಾಗಿದೆ. ಡಿಎನ್ ಎ ಮತ್ತು ಆರ್ ಎನ್ ಎ ಸಂಶ್ಲೇಷಣೆ ಮತ್ತು ಮೆತಲೀಕರಣದಲ್ಲಿ ಫೋಲೇಟ್ ಪ್ರಮುಖ ಪಾತ್ರ ವಹಿಸುವ ಕಾರಣದಿಂದಾಗಿ, ಇದರ ಕೊರತೆಯು ಕ್ಯಾನ್ಸರ್ ಗೆ ಕಾರಣವಾಗಬಹುದು. ನ್ಯೂಕ್ಲಿಯೋಟೈಡ್‌ಗಳ ಕೊರತೆ ಮತ್ತು ಡಿಎನ್‌ಎ ಹಾನಿಯನ್ನು ನಿಯಂತ್ರಿಸುವಲ್ಲಿ ವಿಫಲವಾದರೆ ಗಡ್ಡೆಗಳ ಬೆಳವಣಿಗೆಗೂ ಕಾರಣವಾಗಬಹುದು. ಇತ್ತೀಚೆಗೆ ಫಾಲಿಕ್ ಆಮ್ಲದ ಪ್ರಯೋಗಗಳು ಯಾವುದೇ ನಿರ್ದಿಷ್ಟ ಅಥವಾ ಸಂಪೂರ್ಣ ಕೆಲವು ಕ್ಯಾನ್ಸರ್ ಸಂಭವದ ಲಾಭಗಳು ಅಥವಾ ಹಾನಿಯನ್ನು ತೋರಿಸಲಿಲ್ಲ.

ಫೋಲೇಟ್ ಸೇವನೆ (ಪೂರಕ ಮತ್ತು ಆಹಾರ) ಮತ್ತು ಕೊಲೊರೆಕ್ಟಲ್ ಮತ್ತು ಸ್ತನ ಕ್ಯಾನ್ಸರ್ ನಡುವೆ ಮಧ್ಯಮ ವಿಲೋಮ ಸಂಬಂಧ ಕಂಡುಬಂದಿದೆ.

ಇದರಿಂದಾಗಿ ಫೋಲೇಟ್ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವು ಅಸ್ಪಷ್ಟವಾಗಿದೆ.

4. ಮಹಿಳೆಯರು ಹಾಗೂ ಮಕ್ಕಳಲ್ಲಿ ರಕ್ತಹೀನತೆ ನಿವಾರಿಸುವುದು

4. ಮಹಿಳೆಯರು ಹಾಗೂ ಮಕ್ಕಳಲ್ಲಿ ರಕ್ತಹೀನತೆ ನಿವಾರಿಸುವುದು

ಫಾಲಿಕ್ ಆಮ್ಲವು ಹೊಸ ಕೆಂಪು ರಕ್ತದ ಕಣಗಳು(ಆರ್ ಬಿಸಿ) ನಿರ್ಮಿಸಲು ನೆರವಾಗುವುದು. ಕೆಂಪುರಕ್ತದ ಕಣಗಳು ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡುವುದು. ದೇಹವು ಸರಿಯಾದ ಪ್ರಮಾಣದಲ್ಲಿ ಕೆಂಪುರಕ್ತದ ಕಣಗಳನ್ನು ಉತ್ಪತ್ತಿ ಮಾಡದೆ ಇದ್ದರೆ ಆಗ ರಕ್ತಹೀನತೆ ಕಂಡುಬರುವುದು.

ಫಾಲಿಕ್ ಆಮ್ಲದ ಕೊರತೆ ಇರುವ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆಯು ಬೇರೆ ಮಹಿಳೆಯರಿಗಿಂತ ಶೇ.40ರಷ್ಟು ಹೆಚ್ಚಾಗಿರುವುದು. ಇದರಿಂದ ಫೋಲೇಟ್ ಆರ್ ಬಿಸಿ ಸಂಶ್ಲೇಷಣೆಯಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ತೋರಿಸುತ್ತದೆ. ಡಿಎನ್‌ಎ ನ್ಯೂಕ್ಲಿಯೊಟೈಡ್ ಸಂಶ್ಲೇಷಣೆಗೆ ಫೋಲೇಟ್, 5,10-ಮೀಥಿಲೀನ್-ಟಿಎಚ್ಎಫ್ (ಟೆಟ್ರಾಹೈಡ್ರೊಫೊಲೇಟ್) ರೂಪದಲ್ಲಿ ಅವಶ್ಯಕವಾಗಿದೆ.

5. ಗರ್ಭಿಣಿಯರು ಮತ್ತು ಮಗುವಿನ ಜನನಕ್ಕೆ ಅಗತ್ಯ

5. ಗರ್ಭಿಣಿಯರು ಮತ್ತು ಮಗುವಿನ ಜನನಕ್ಕೆ ಅಗತ್ಯ

ಡಿಎನ್ ಎ ಮತ್ತು ಪ್ರೋಟೀನ್ ಸಂಶ್ಲೇಷಣೆಗೆ ಅನಿವಾರ್ಯವಾಗಿರುವಂತಹ ಫೋಲೇಟ್ ಭ್ರೂಣದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದಾಗಿ ಗರ್ಭಿಣಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಫೋಲೇಟ್ ಅಗತ್ಯವಿರುವುದು. ಫಾಲಿಕ್ ಆಮ್ಲವು ಸಾಕಷ್ಟು ಪ್ರಮಾಣದಲ್ಲಿ ಇದ್ದರೆ ಆಗ ಭ್ರೂಣದ ಕೋಶಗಳು ಅಂಗಾಂಶಗಳು ಹಾಗೂ ಅಂಗಾಂಗಗಳಾಗಿ ವಿಭಜನೆ ಆಗುವುದು.

ನರನಾಳವು ಮೊದಲಿಗೆ ರಚನೆ ಆಗುವಂತಹದ್ದಾಗಿದೆ. ಇದು ಆರಂಭದಲ್ಲಿ ಚಪ್ಪಟೆಯಾಗಿ ಇರುವುದು. ಆದರೆ ಗರ್ಭಧಾರಣೆಯ ಒಂದು ತಿಂಗಳ ಬಳಿಕ ಇದು ನಾಳವಾದಂತೆ ಆಗುವುದು. ನರನಾಳವು ಬೆನ್ನುಹುರಿ ಮತ್ತು ಮೆದುಳು ಬೆಳವಣಿಗೆಗೆ ಸಹಕಾರಿ ಆಗುವುದು.

ಸರಿಯಾಗಿ ಫಾಲಿಕ್ ಆಮ್ಲವು ಸಿಗದೆ ಇದ್ದರೆ ಆಗ ಈ ರಚನೆಯು ಸರಿಯಾಗಿ ಬೆಳವಣಿಗೆ ಆಗಲು ಸಾಧ್ಯವಾಗದು. ಬೆನ್ನು ಹಾಗೂ ಮೆದುಳಿಗೆ ಈ ನರನಾಳದ ಬೆಳವಣಿಗೆಯು ಅಪೂರ್ಣವಾಗಿ ಇರುವುದು. ಇದರಿಂದಾಗಿ ಮಕ್ಕಳಲ್ಲಿ ನರನಾಳದ ವೈಫಲ್ಯತೆ ಕಂಡುಬರುವುದು.

6. ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್(ಪಿಸಿಒಎಸ್)ನ್ನು ನಿರ್ವಹಿಸಲು ನೆರವಾಗುವುದು

6. ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್(ಪಿಸಿಒಎಸ್)ನ್ನು ನಿರ್ವಹಿಸಲು ನೆರವಾಗುವುದು

ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಹೆರಿಗೆಯ ವಯಸ್ಸಿನ ಕನಿಷ್ಠ 10-15% ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಇದು ಅಂಡಾಣುಗಳ ಗುಣಮಟ್ಟವನ್ನು ಕಡಿಮೆ ಮಾಡುವುದು. ಐವಿಎಫ್ ವಿಫಲವಾಗಲು ಪಿಸಿಒಎಸ್ ಪ್ರಮುಖ ಕಾರಣವಾಗಿದೆ.

ಹಾರ್ಮೋನ್ ಥೆರಪಿ, ಜೀವನಶೈಲಿ ಬದಲಾವಣೆ ಮತ್ತು ಆಹಾರದಲ್ಲಿನ ಬದಲಾವಣೆಯು ನೆರವಾಗಬಹುದು. ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಫಾಲಿಕ್ ಆಮ್ಲ, ವಿಟಮಿನ್ ಡಿ,ಸಿ ಮತ್ತು ಬಿ12, ಆಹಾರದ ನಾರಿನಾಂಶ, ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಸತುವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.

ಇವರು ಕೊಬ್ಬು, ಪರ್ಯಾಪ್ತ ಕೊಬ್ಬಿನ ಆಮ್ಲಗಳು ಮತ್ತು ಕೊಲೆಸ್ಟ್ರಾಲ್ ಸೇವನೆಯನ್ನು ಕಡಿಮೆ ಮಾಡಬೇಕು. ಯಾಕೆಂದರೆ ಈ ಆಹಾರಗಳು ಸಿವಿಡಿ ಮತ್ತು ಮಧುಮೇಹ ಉಂಟು ಮಾಡಬಹುದು. ಇದರಿಂದಾಗಿ ಅಂಡಾಶಯದ ಅಸಾಮನ್ಯತೆಯು ಇನ್ನಷ್ಟು ಹೆಚ್ಚಾಗಬಹುದು. ಐವಿಎಫ್ ಚಿಕಿತ್ಸೆಗೆ ಒಳಗಾಗುವಂತವರಲ್ಲಿ ಉತ್ತಮ ಮಟ್ಟದ ಫಲವತ್ತತೆ ಪ್ರಮಾಣ ಮತ್ತು ಅಂಡಾಣುವಿನ ಗುಣಮಟ್ಟವು ಇರಬೇಕು. ಫಾಲಿಕ್ ಆಮ್ಲವು ಕೆಲವು ಮಹಿಳೆಯರಲ್ಲಿ ಅಂಡೋತ್ಪತ್ತಿಯನ್ನು ಮರಳಿ ಸ್ಥಾಪಿಸುವುದು.

7. ಕೂದಲು ಉದುರುವಿಕೆ ನಿಯಂತ್ರಿಸುವುದು

7. ಕೂದಲು ಉದುರುವಿಕೆ ನಿಯಂತ್ರಿಸುವುದು

ಫೋಲೇಟ್ ಕೆಂಪು ರಕ್ತಕಣಗಳ ಉತ್ಪತ್ತಿಗೆ ನೆರವಾಗುವುದು ಮತ್ತು ದೇಹದಲ್ಲಿ ಆಮ್ಲಜನಕವು ಸರಬರಾಜು ಆಗಲು ನೆರವಾಗುವುದು. ಕೂದಲನ್ನು ನಿರ್ಮಾಣ ಮಾಡುವಂತಹ ಅಂಗಾಂಶಗಳಿಗೆ ಕೂಡ ಇದು ಸಹಕಾರಿ. ಫೋಲೇಟ್ ಕೂದಲಿನ ಕೋಶಗಳ ಪ್ರಸರಣವನ್ನು ಹೆಚ್ಚಿಸುವುದು. ಇದರಿಂದ ಕೂದಲು ಬಿಳಿಯಾಗುವುದನ್ನು ತಡೆಯುವುದು ಮತ್ತು ತಲೆಬುರುಡೆಯಲ್ಲಿ ಮೇದೋಗ್ರಂಥಿಗಳ ಸ್ರಾವವನ್ನು ಇದು ನಿಯಂತ್ರಿಸುವುದು.

ಬೀಟ್ ರೋಟ್, ಕೇಲ್, ಹಸಿ ಬಟಾಣಿ ಕಾಳು, ಬ್ರಸಲ್ಸ್ ಮೊಗ್ಗುಗಳು, ಶತಾವರಿ, ಮೊಟ್ಟೆ ಇತ್ಯಾದಿಗಳು ಮಹಿಳೆಯರಲ್ಲಿ ಫೋಲೇಟ್ ಮಟ್ಟವನ್ನು ಹೆಚ್ಚಿಸುವುದು. 400-1000 ಮಿ.ಗ್ರಾಂ. ಫಾಲಿಕ್ ಆಮ್ಲದ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಕೂದಲು ಉದುರುವಿಕೆ ತಡೆಯಲು ಮತ್ತೊಂದು ವಿಧಾನವಾಗಿದೆ.

8. ಖಿನ್ನತೆ ಮತ್ತು ಆತಂಕ ನಿವಾರಣೆಗೆ ನೆರವಾಗುವುದು

8. ಖಿನ್ನತೆ ಮತ್ತು ಆತಂಕ ನಿವಾರಣೆಗೆ ನೆರವಾಗುವುದು

ಫೋಲೇಟ್ ನ ಪ್ರಮುಖ ಕಾರ್ಯವೆಂದರೆ ಇದು ಮೆತಲೀಕರಣ ಪ್ರಕ್ರಿಯೆ ಉಂಟು ಮಾಡುವುದು. ಜೈವಿಕವಾಗಿ ಸಕ್ರಿಯವಾಗಲು ಹೆಚ್ಚಿನ ಜೈವಿಕ ಅಣುಗಳನ್ನು ಮೆತಿಲೀಕರಣ ಮಾಡಬೇಕಾಗುತ್ತದೆ. ಫೋಲೇಟ್ ಮತ್ತು ಫಾಲಿಕ್ ಆಮ್ಲದ ಸಕ್ರಿಯ ರೂಪ, 5-ಮೀಥೈಲ್ ಟಿಹೆಚ್ಎಫ್, ಮೀಥೈಲ್ ಉಳಿಕೆಗಳನ್ನು ಸೇರಿಸುತ್ತದೆ ಮತ್ತು ಪ್ರತಿಕ್ರಿಯೆಗಳನ್ನು ಇದು ತಕ್ಷಣವೇ ಆರಂಭಿಸುತ್ತದೆ.

ದೇಹದ ಕೇಂದ್ರ ನರಮಂಡಲದ (ಸಿಎನ್‌ಎಸ್) ನರಪ್ರೇಕ್ಷಕಗಳನ್ನು ಅವುಗಳ ಸಂಶ್ಲೇಷಣೆಯ ನಂತರ ಮೆತಿಲೀಕರಣಗೊಳಿಸಬೇಕಾದ ಅಗತ್ಯವಿದೆ ಮತ್ತು ಈ ಹಂತದಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಫೋಲೇಟ್ ಬೇಕಿರುತ್ತದೆ. ದೇಹದಲ್ಲಿ ಫೋಲೇಟ್ ಮಟ್ಟವು ಕಡಿಮೆ ಇದ್ದರೆ ಆಗ ದೀರ್ಘ ಮತ್ತು ತೀವ್ರ ರೀತಿಯ ಖಿನ್ನತೆ ಹಾಗೂ ಆತಂಕಕ್ಕೆ ಕಾರಣವಾಗುವುದು.

ಫೋಲೇಟ್ ನೆರವಾಗುವ ಮತ್ತೊಂದು ವಿಧಾನವೆಂದರೆ ಅದು ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವುದು. ಫಾಲಿಕ್ ಆಮ್ಲದ ಸಪ್ಲಿಮೆಂಟ್ ನಿಂದ ಹೋಮೋಸಿಸ್ಟೈನ್ ಮತ್ತು ಆಕ್ಸಿಡೇಟಿವ್ ಒತ್ತಡದ ಮಟ್ಟವು ಕಡಿಮೆ ಆಗುವುದು. ಫೋಲೇಟ್ ಮಟ್ಟವು ಉತ್ತಮವಾಗಿ ಇದ್ದರೆ ಆಗ ಖಿನ್ನತೆ ತಡೆಯಲು ಔಷಧಿಗೆ ಸರಿಯಾದ ಪ್ರತಿಕ್ರಿಯೆ ನೀಡುವುದು.

9. ಕಿಡ್ನಿ ಕಾಯಿಲೆಗೆ ಪರಿಹಾರ ಮತ್ತು ಕಿಡ್ನಿ ಕಾರ್ಯ ಸುಧಾರಿಸುವುದು

9. ಕಿಡ್ನಿ ಕಾಯಿಲೆಗೆ ಪರಿಹಾರ ಮತ್ತು ಕಿಡ್ನಿ ಕಾರ್ಯ ಸುಧಾರಿಸುವುದು

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವ 85% ರೋಗಿಗಳಲ್ಲಿ ಹೈಪರ್ಹೋಮೋಸಿಸ್ಟಿನೆಮಿಯಾ (ಹೋಮೋಸಿಸ್ಟೈನ್ ಸಂಗ್ರಹ) ಕಂಡುಬರುತ್ತದೆ. ದುರ್ಬಲಗೊಂಡ ಮೂತ್ರಪಿಂಡದ ಕಾರ್ಯದಿಂದಾಗಿ ಇದು ಸಂಭವಿಸುತ್ತದೆ. ಹೈಪರ್ಹೋಮೋಸಿಸ್ಟಿನೆಮಿಯಾವು ಹೃದಯರಕ್ತನಾಳದ ಮತ್ತು ಮೂತ್ರಪಿಂಡದ ಆರೋಗ್ಯದ ಸೂಚಕವಾಗಿದೆ.

ಹೈಪರ್‌ ಹೋಮೋಸಿಸ್ಟಿನೆಮಿಯಾ ನಿಯಂತ್ರಿಸಲು ಮತ್ತೊಂದು ವಿಧಾನವೆಂದರೆ ಅದು ಫಾಲಿಕ್ ಆಮ್ಲದ ಸಪ್ಲಿಮೆಂಟ್ ನ್ನು ತೆಗೆದುಕೊಳ್ಳುವುದು. ಫಾಲಿಕ್ ಆಮ್ಲ ಅಥವಾ ಫೋಲೇಟ್ ಹೋಮೋಸಿಸ್ಟೈನ್ ಅನ್ನು ಮೆಥಿಯೋನಿನ್ ಆಗಿ ಪರಿವರ್ತನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಫೋಲೇಟ್ ಕೊರತೆ ಇದ್ದರೆ ಆಗ ಪರಿವರ್ತನೆಯು ಕಡಿಮೆ ಆಗುವುದು ಮತ್ತು ಹೋಮೋಸಿಸ್ಟೈನ್ ಮಟ್ಟದಲ್ಲಿ ಏರಿಕೆ ಆಗುವುದು ಮತ್ತು ಇದು ಕಿಡ್ನಿಗಳ ಮೇಲೆ ಪರಿಣಾಮ ಬೀರುವುದು.

ಫಾಲಿಕ್ ಆಮ್ಲದ ಸಪ್ಲಿಮೆಂಟ್ ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡುವುದು. ಆದರೆ ಇದು ಸಾಮಾನ್ಯಗೊಳಿಸುವುದಿಲ್ಲ. ಈ ವಿಚಾರದ ಬಗ್ಗೆ ಈಗಲೂ ಎರಡು ರೀತಿಯ ವಾದಗಳು ಹಾಗೆ ಉಳಿದುಕೊಂಡಿದೆ.

10. ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವುದು

10. ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವುದು

ಅಸಾಮಾನ್ಯ ಫೋಲೇಟ್ ಚಯಾಪಚಯ ಮತ್ತು ಅದರ ಕೊರತೆಯು ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುವುದು. ಡಿಎನ್ ಎ ಸಂಶ್ಲೇಷಣೆಗೆ ಮತ್ತು ಮೆತಿಲೀಕರಣಕ್ಕೆ ಫೋಲೇಟ್ ಅತೀ ಅಗತ್ಯವಾಗಿರುವುದು. ಈ ಎರಡು ಹಂತವು ವೀರ್ಯಾಣು ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದು.

ಅಧ್ಯಯನದ ವೇಳೆ ಬಂಜೆತನ ಹೊಂದಿರುವ ಪುರುಷರಿಗೆ ಸತು ಸಲ್ಫೇಟ್(66 ಮಿ.ಗ್ರಾಂ.) ಮತ್ತು ಫಾಲಿಕ್ ಆಮ್ಲ(5 ಮಿ.ಗ್ರಾಂ.) 26 ವಾರಗಳ ಕಾಲ ದಿನನಿತ್ಯವೂ ನೀಡಲಾಯಿತು. ಸಾಮಾನ್ಯ ವೀರ್ಯ ಗಣತಿಯಲ್ಲಿ ಶೇ.74ರಷ್ಟು ಹೆಚ್ಚಳವಾಗಿದೆ. ಆಹಾರದ ಫೋಲೇಟ್ ನ ಹೀರುವಿಕೆ ಮತ್ತು ಚಯಾಪಚಯದಲ್ಲಿ ಸತುವಿನ ಮಟ್ಟವು ನೇರ ಪರಿಣಾಮ ಬೀರುವುದು ಎಂದು ಅಧ್ಯಯನದಿಂದ ಸಾಬೀತಾಗಿದೆ.

ಫೋಲೇಟ್ ಕೊರತೆ ಇದೆ ಎಂದು ತಿಳಿಯುವುದು ಹೇಗೆ?

ಫೋಲೇಟ್ ಕೊರತೆ ಇದೆ ಎಂದು ತಿಳಿಯುವುದು ಹೇಗೆ?

ದೇಹದಲ್ಲಿ ಒಟ್ಟು 15-20 ಮಿ.ಗ್ರಾಂನಷ್ಟು ಫೋಲೇಟ್ ಅಂಶವು ಇರುವುದು. ಇದರಲ್ಲಿನ ಅರ್ಧ ಭಾಗವು ಯಕೃತ್ ಮತ್ತು ಉಳಿದ ಭಾಗವು ರಕ್ತ ಮತ್ತು ರಕ್ತನಾಳಗಳಲ್ಲಿ ಇರುವುದು. ಸೀರಮ್ ಫೋಲೇಟ್ ಸಾಂದ್ರತೆಗಳು 3 ಎನ್ ಜಿ / ಮಿ.ಗ್ರಾಂ. ಗಿಂತ ಹೆಚ್ಚಿರುವಾಗ, ಅದು ಸಮರ್ಪಕತೆಯನ್ನು ಸೂಚಿಸುತ್ತದೆ. ಫೋಲೇಟ್ ಪ್ರಮಾಣ ಕಡಿಮೆ ಇದ್ದರೆ ಅಥವಾ ಇದರ ಅಸಮರ್ಪಕತೆಯು ಕಾಯಿಲೆ ಮತ್ತು ಅಸಾಮಾನ್ಯತೆ ಉಂಟು ಮಾಡಬಹುದು. ಹೃದಯದಿಂದ ಕಿಡ್ನಿ, ರಕ್ತದಿಂದ ಮೆದುಳು, ಬಂಜೆತನದಿಂದ ಶಿಶುವಿನ ತನಕ ಫೋಲೇಟ್ ಕೊರತೆಯು ದೇಹದಲ್ಲಿ ಸಮಸ್ಯೆ ಉಂಟು ಮಾಡುವುದು. ಫೋಲೇಟ್ ಕೊರತೆಯ ಕೆಲವೊಂದು ಲಕ್ಷಣಗಳು ಮತ್ತು ಕಾಯಿಲೆಗಳನ್ನು ಇಲ್ಲಿ ನೀಡಲಾಗಿದೆ.

* ಹೃದಯರಕ್ತನಾಳದ ಕಾಯಿಲೆಗಳು

* ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆ

* ದೀರ್ಘಕಾಲಿನ ರಕ್ತಹೀನತೆ

* ಮಗುವಿನ ಜನನ ಸಮಸ್ಯೆಗಳಾಗಿರುವಂತ ಅಕಾಲಿಕ ಹೆರಿಗೆ, ಗರ್ಭಪಾತ ಮತ್ತು ನಿರ್ಜೀವ ಮಗುವಿನ ಜನನ

* ಖಿನ್ನತೆ ಮತ್ತು ಆತಂಕ

* ಬಂಜೆತನ

* ಚರ್ಮದ ವರ್ಣದ್ರವ್ಯ

* ಬಾಯಿ ಮತ್ತು ಕರುಳಿನಲ್ಲಿ ಹುಣ್ಣು

* ಆಲಸ್ಯ

* ನಿಶ್ಯಕ್ತಿ

* ಬಳಲಿಕೆ

* ಉಸಿರಾಟದ ತೊಂದರೆ

ಈ ಎಲ್ಲಾ ಪರಿಸ್ಥಿತಿಯಿಂದ ಫಾಲಿಕ್ ಆಮ್ಲವು ನಮ್ಮನ್ನು ರಕ್ಷಿಸುತ್ತದೆ. ಆದರೆ ಸಪ್ಲಿಮೆಂಟ್ ತೆಗೆದುಕೊಳ್ಳುವ ಬದಲು ಕೆಲವೊಂದು ನೈಸರ್ಗಿಕದತ್ತ ಆಹಾರ ಸೇವನೆ ಮಾಡಿ ಫಾಲಿಕ್ ಆಮ್ಲವನ್ನು ದೇಹಕ್ಕೆ ಸೇರಿಸಿಕೊಳ್ಳಬೇಕು.

English summary

Folic Acid: Benefits, Deficiency And Side Effects

Here we are discussing about folic acid benefits, deficiency and side rffects. Folic acid is the man-made form of folate. Folate is vitamin B9. Folate is found naturally in certain fruits, vegetables, and nuts. Folic acid is found in supplements and fortified foods . Folic acid is considerably more bioavailable than dietary folate. The bioavailability of folic acid is assumed to be 100% when it is ingested as a supplement and 85% in fortified foods.
Story first published: Friday, January 17, 2020, 15:00 [IST]
X