For Quick Alerts
ALLOW NOTIFICATIONS  
For Daily Alerts

ಈ 9 ಬಗೆಯ ಹ್ಯಾಂಡ್‌ ಸ್ಯಾನಿಟೈಸರ್ ತುಂಬಾ ಅಪಾಯಕಾರಿ: FDA ಎಚ್ಚರಿಕೆ

|

ಕೊರೋನಾ ಎನ್ನುವಂತಹ ಮಹಾಮಾರಿ ಸೃಷ್ಟಿಸಿರುವಂತಹ ಅವಾಂತರದ ಮಧ್ಯೆ ಒಂದು ಒಳ್ಳೆಯ ಕೆಲಸ ಕೂಡ ಮಾಡಿದೆ ಎಂದರೆ ತಪ್ಪಾಗದು. ಯಾಕೆಂದರೆ ನಾವು ಹಿಂದೆ ಯಾವುದೇ ಹೋಟೆಲ್ ಗೆ ಊಟ ಮಾಡುವಾಗ ಅಥವಾ ಮನೆಯಲ್ಲಿ ಊಟ ಮಾಡುವ ವೇಳೆ ಕೇವಲ ನಳ್ಳಿ ನೀರಿನಿಂದ ಕೈ ತೊಳೆದುಕೊಂಡು ಊಟ ಆರಂಭಿಸುತ್ತಿದ್ದೇವೆ. ಆದರೆ ಇಂದು ಎಲ್ಲವೂ ಬದಲಾಗಿದೆ. ಮನೆಯಲ್ಲೇ ಇದ್ದರೂ ತಿಂಡಿ, ಊಟಕ್ಕೆ ಮೊದಲು ಹ್ಯಾಂಡ್ ವಾಶ್ ಬಳಸುತ್ತೇವೆ. ಮನೆಯಿಂದ ಹೊರಗೆ ಹೋಗಬೇಕಾದರೆ ಆಗ ನಾವು ಸ್ಯಾನಿಟೈಸರ್ ಬಳಕೆ ಮಾಡುತ್ತೇವೆ. ಪ್ರತಿಯೊಂದು ಕಡೆಯಲ್ಲೂ ನಮಗೆ ಕೈ ತೊಳೆಯಲು ವ್ಯವಸ್ಥೆ ಇಲ್ಲದೆ ಇರುವ ಕಾರಣಕ್ಕಾಗಿ ಸ್ಯಾನಿಟೈಸರ್ ಬಳಕೆ ಮಾಡುತ್ತೇವೆ.

FDA Says Stop Using These Hand Sanitizers That Contain Toxic Methanol

ಆದರೆ ಸ್ಯಾನಿಟೈಸರ್ ನ್ನು ನಾವು ಈಗ ದಿನನಿತ್ಯದ ಅಗತ್ಯವಾಗಿ ಪರಿಗಣಿಸಿಬಿಟ್ಟಿದ್ದೇವೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಸ್ಯಾನಿಟೈಸರ್ ನ್ನು ಅತಿಯಾಗಿ ಬಳಕೆ ಮಾಡಿದರೆ ಅದು ಶರೀರದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು ಎಂದು ಯುಎಸ್‌ ಫುಡ್ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್ ಹೇಳಿದೆ. ಯಾವ ಸ್ಯಾನಿಟೈಸರ್‌ನಲ್ಲಿ ಮೆಥೆನಾಲ್‌ ಅಂಶ ಅಧಿಕವಿದೆಯೋ ಅದು ತುಂಬಾ ಅಪಾಯಕಾರಿ ಎಂದು ಹೇಳಿದೆ.

FDA ಏನು ಹೇಳಿದೆ?

FDA ಏನು ಹೇಳಿದೆ?

ಎಫ್‌ಡಿಎ (FDA) ಕೂಡ ಒಂಭತ್ತು ಬಗೆಯ ಸ್ಯಾನಿಟೈಸರ್ ಬಳಸದಂತೆ ಎಚ್ಚರಿಕೆ ನೀಡಿದೆ, ಇದನ್ನು ತುಂಬಾ ಬಳಸಿದ್ದರೆ ಕೂಡಲೇ ಇದರ ಅಡ್ಡ ಪರಿಣಾಮ ತಡೆಗಟ್ಟಲು ಚಿಕಿತ್ಸೆ ಪಡೆಯಿರಿ ಎಂದು ಕೂಡ ಹೇಳಿದೆ. ಏಕೆಂದರೆ ಈ ಸ್ಯಾನಿಟೈಸರ್‌ ದೇಹವನ್ನು ಸೇರಿದರೆ ದೇಹದ ಅಂಗಾಂಗಳಿಗೆ ಹಾನಿಯುಂಟು ಮಾಡುವುದು, ಇದರಿಂದ ಕುರುಡುತನ ಕೂಡ ಉಂಟಾಗುವುದು.

ಸೇಫ್ಟಿ ಡಾಕ್ಯೂಮೆಂಟ್ ಪ್ರಕಾರ ಈ ಸ್ಯಾನಿಟೈಸರ್‌ನಿಂದ ತಲೆಸುತ್ತು, ವಾಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗುವುದು. ಅಲ್ಲದೆ ಖಿನ್ನತೆ, ತಲೆನೋವು, ಸುಸ್ತು ಮುಂತಾದ ಅನುಭವ ಉಂಟಾಗುವುದು. ಇದು ಸ್ವಲಪ್ ಹೊಟ್ಟೆಗೆ ಹೋದರೂ ಉಸಿರಾಟ ತೀ ವ್ರವಾಗುವುದು, ಹೃದಯ ಬಡಿತ ನಿಧಾನವಾಗುವುದು, ಕಿಡ್ನಿ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ, ಕೆಲವರು ಕೋಮಾಕ್ಕೆ ಹೋಗಿ, ಇದರಿಂದ ಸಾವು ಕೂಡ ಸಂಭವಿಸಬಹುದು.

FDA ಈ ಒಂಭತ್ತು ಬಗೆಯ ಸ್ಯಾನಿಟೈಸರ್ ಬಳಸಲೇಬೇಡಿ ಎಂದಿದೆ

FDA ಈ ಒಂಭತ್ತು ಬಗೆಯ ಸ್ಯಾನಿಟೈಸರ್ ಬಳಸಲೇಬೇಡಿ ಎಂದಿದೆ

ಸಂಪೂರ್ಣ ಸ್ವಚ್ಛ ಮಾಡುವ ಸ್ಯಾನಿಟೈಸರ್ (All-Clean Hand Sanitizer (NDC: 74589-002-01))

ESk ಬಯೋಕೆಮ್ ಹ್ಯಾಂಡ್‌ ಸ್ಯಾನಿಟೈಸರ್ (Esk Biochem Hand Sanitizer (NDC: 74589-007-01))

ಸೋಂಕಾಣು ಸಂಪೂರ್ಣ ನಾಶ ಮಾಡುವ ಹ್ಯಾಂಡ್ ಸ್ಯಾನಿಟೈಸರ್ (CleanCare NoGerm Advanced Hand Sanitizer 75% Alcohol (NDC: 74589-008-04))

ಲಾವರ್ 70 ಜೆಲ್ ಹ್ಯಾಂಡ್ ಸ್ಯಾನಿಟೈಸರ್ (Lavar 70 Gel Hand Sanitizer (NDC: 74589-006-01))

ಬ್ಯಾಕ್ಟಿರಿಯಾ ನಾಶ ಪಡಿಸುವ ಹ್ಯಾಂಡ್ ಸ್ಯಾನಿಟೈಸರ್ The Good Gel Antibacterial Gel Hand Sanitizer (NDC: 74589-010-10)

ಶೇ. 80ರಷ್ಟು ಆಲ್ಕೋಹಾಲ್ ಇರುವ ಸ್ಯಾನಿಟೈಸರ್CleanCare NoGerm Advanced Hand Sanitizer 80% Alcohol (NDC: 74589-005-03)

ಶೇ. 75ರಷ್ಟು ಆಲ್ಕೋಹಾಲ್ ಇರುವ ಸ್ಯಾನಿಟೈಸರ್CleanCare NoGerm Advanced Hand Sanitizer 75% Alcohol (NDC: 74589-009-01)

ಕ್ಲೀನ್‌ಕೇರ್ ನೋ ಜೆರ್ಮ್ ಸ್ಯಾನಿಟೈಸರ್ CleanCare NoGerm Advanced Hand Sanitizer 80% Alcohol (NDC: 74589-003-01)

ಸ್ಯಾನಿಡ್ರೆಮ್ ಅಡ್ವಾನ್ಸ್ಡ್ ಸ್ಯಾನಿಟೈಸರ್ (Saniderm Advanced Hand Sanitizer (NDC: 74589-001-01))

ದೇಹದ ಸೂಕ್ಷ್ಮಜೀವಿಗಳಿಗೆ ಹಾನಿ

ದೇಹದ ಸೂಕ್ಷ್ಮಜೀವಿಗಳಿಗೆ ಹಾನಿ

ನಮ್ಮ ದೇಹದಲ್ಲಿ ಕೂಡ ಕೆಲವು ಸೂಕ್ಷ್ಮ ಜೀವಿಗಳು ಇರುತ್ತವೆ. ಇದು ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವಂತದ್ದಾಗಿದೆ. ಆದರೆ ಸ್ಯಾನಿಟೈಸರ್ ಇದೆಲ್ಲವನ್ನು ನಾಶ ಮಾಡುವ ಪರಿಣಾಮವಾಗಿ ಅದರಿಂದ ನಮಗೆ ತೊಂದರೆ ಆಗಬಹುದು. ಹೀಗಾಗಿ ಸ್ಯಾನಿಟೈಸರ್ ನ್ನು ಅತಿಯಾಗಿ ಬಳಕೆ ಮಾಡಬಾರದು. ಜನರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಮತ್ತು ತಮಗೆ ಸೋಪ್ ಅಥವಾ ನೀರು ಸಿಗದೆ ಇರುವ ಸಂದರ್ಭದಲ್ಲಿ ಸ್ಯಾನಿಟೈಸರ್ ಬಳಕೆ ಮಾಡಬೇಕು.

ಅತಿಯಾದರೆ ಅಮೃತವೂ ವಿಷ!

ಅತಿಯಾದರೆ ಅಮೃತವೂ ವಿಷ!

ನಮ್ಮಲ್ಲಿ ಒಂದು ಗಾದೆಯೇ ಇದೆ. ಅತಿಯಾದರೆ ಅಮೃತ ಕೂಡ ವಿಷವಾಗುವುದು ಎಂದು. ಅದೇ ಸ್ಯಾನಿಟೈಸರ್ ಗೆ ಕೂಡ ಅನ್ವಯವಾಗುವುದು. ಸ್ಯಾನಿಟೈಸರ್ ಅತಿಯಾಗಿ ಬಳಸಿದರೆ ಬ್ಯಾಕ್ಟೀರಿಯಾಗಳು ಪ್ರತಿಜೀವಕ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಬಲಿಷ್ಠವಾಗಬಹುದು. ಅತಿಯಾಗಿ ಸ್ಯಾನಿಟೈಸರ್ ಬಳಕೆ ಮಾಡುವ ಬದಲು ನೀರು ಹಾಗೂ ಸೋಪಿನಿಂದ ಕೈಗಳನ್ನು ತೊಳೆಯಿರಿ. ಪ್ರತಿಜೀವಕ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಬ್ಯಾಕ್ಟೀರಿಯಾವು ಯಾವುದೇ ಔಷಧಿಯು ಪರಿಣಾಮ ಬೀರದೆ ಇರಬಹುದು.

ಕಲ್ಮಷ ಹಾಗೂ ಕೊಳೆ ತೆಗೆಯದು

ಕಲ್ಮಷ ಹಾಗೂ ಕೊಳೆ ತೆಗೆಯದು

ಕೈಯಲ್ಲಿ ಕೊಳೆ ಹಾಗೂ ಮಣ್ಣು ಇತ್ಯಾದಿ ಮೆತ್ತಿಕೊಂಡಿದ್ದರೆ, ಇದಕ್ಕೆ ನೀವು ಸ್ಯಾನಿಟೈಸರ್ ಬಳಕೆ ಮಾಡಿದರೆ ಆಗ ಖಂಡಿತವಾಗಿಯೂ ಅದು ಕೆಲಸ ಮಾಡದು. ಘನ ವಸ್ತುಗಳು ಇರುವ ವೇಳೆ ಸ್ಯಾನಿಟೈಸರ್ ಪರಿಣಾಮಕಾರಿ ಆಗಿರಲ್ಲ. ನೀವು ಮೊದಲು ಕೈಯಲ್ಲಿರುವ ಕೊಳೆ ಅಥವಾ ಧೂಳನ್ನು ತೆಗೆದು, ಬಳಿಕ ಸ್ಯಾನಿಟೈಸರ್ ಬಳಸಿಕೊಳ್ಳಿ.

ಕೈಗಳು ಒಣಗಬಹುದು

ಕೈಗಳು ಒಣಗಬಹುದು

ನಮ್ಮ ಚರ್ಮದಲ್ಲಿ ನೈಸರ್ಗಿಕ ಎಣ್ಣೆಯಂಶವು ಇರುವುದು. ಅದು ಕಳೆದುಹೋದರೆ ಆಗ ಚರ್ಮವು ಒಣಗುವುದು. ಸ್ಯಾನಿಟೈಸರ್ ನ್ನು ಅತಿಯಾಗಿ ಬಳಕೆ ಮಾಡಿದರೆ ಆಗ ಕೈಗಳಲ್ಲಿನ ಎಣ್ಣೆಯಂಶವು ಮಾಯವಾಗಿ ಕೈಗಳು ಒಣಗಬಹುದು. ಇಂತಹ ಸಮಯದಲ್ಲಿ ನೀವು ಮೊಶ್ಚಿರೈಸರ್ ಬಳಕೆ ಮಾಡಬೇಕಾಗುತ್ತದೆ. ಇದಕ್ಕಿಂತ ನೀವು ಸೋಪ್ ಮತ್ತು ನೀರು ಬಳಸಿ ಕೈಗಳನ್ನು ಶುಚಿಗೊಳಿಸಿ.

ಆಲ್ಕೋಹಾಲ್ ವಿಷದ ಅಪಾಯ

ಆಲ್ಕೋಹಾಲ್ ವಿಷದ ಅಪಾಯ

ಆಲ್ಕೋಹಾಲ್ ನಿಂದ ತಯಾರಿಸಿರುವಂತಹ ಸ್ಯಾನಿಟೈಸರ್ ನ್ನು ಬಳಕೆ ಮಾಡಿದ ವೇಳೆ ಅದರಿಂದ ಆಲ್ಕೋಹಾಲ್ ನ ಘಾಟು ಹೊರಗೆ ಬರುವುದು. ಇದನ್ನು ಪ್ರತಿನಿತ್ಯವೂ ಬಳಕೆ ಮಾಡಿದರೆ ಖಂಡಿತವಾಗಿಯೂ ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಕ್ಕಳು ಇದರ ಬಣ್ಣವನ್ನು ನೋಡಿ ಅದರಿಂದ ಆಕರ್ಷಿತರಾಗಬಹುದು. ಹೀಗಾಗಿ ಆಲ್ಕೋಹಾಲ್ ಘಾಟು ಅವರು ಮೂಗಿನೊಳಗೆ ಹೋಗಿ ಇದೇ ಚಟವಾಗಬಹುದು. ಇದರಿಂದ ಮಕ್ಕಳಿಂದ ಸ್ಯಾನಿಟೈಸರ್ ದೂರವಿಡಿ.

ಸ್ಯಾನಿಟೈಸರ್ ಅಪಾಯಕಾರಿಯಾಗಬಹುದು

ಸ್ಯಾನಿಟೈಸರ್ ಅಪಾಯಕಾರಿಯಾಗಬಹುದು

ರಾಸಾಯನಿಕದ ಕಂಪೆನಿಯಲ್ಲಿ ಕೆಲಸ ಮಾಡುತ್ತಲಿದ್ದರೆ, ಆಗ ನೀವು ಕೈಗಳನ್ನು ಸ್ವಚ್ಛ ಮಾಡಲು ಸ್ಯಾನಿಟೈಸರ್ ನ್ನು ಖಂಡಿತವಾಗಿಯೂ ಬಳಕೆ ಮಾಡಬಾರದು. ಯಾಕೆಂದರೆ ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ ಆಗಬಹುದು. ಹೀಗಾಗಿ ನೀವು ಸ್ಯಾನಿಟೈಸರ್ ಬದಲು ಮೊದಲು ಬಳಸುತ್ತಿದ್ದ ವಿಧಾನದ ಮೂಲಕವೇ ಕೈಗಳನ್ನು ಶುಚಿ ಮಾಡಿ. ರಾಸಾಯನಿಕಗಳೊಂದಿಗೆ ಕೆಲಸ ಮಾಡುವಂತಹ ಜನರು ಸ್ಯಾನಿಟೈಸರ್ ಬಳಕೆ ಮಾಡಿದರೆ ಅವರ ದೇಹದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿದೆ ಎಂದು ಅಧ್ಯಯನಗಳು ಕೂಡ ಹೇಳಿವೆ.

English summary

FDA Says Stop Using These Hand Sanitizers That Contain Toxic Methanol

The US Food and Drug Administration advised consumers to avoid nine types of hand sanitizers that may contain methanol.
Story first published: Saturday, September 5, 2020, 9:31 [IST]
X
Desktop Bottom Promotion