For Quick Alerts
ALLOW NOTIFICATIONS  
For Daily Alerts

ತಲೆನೋವು ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು

|

ನೀವು ತಲೆನೋವಿನಿಂದ ಬಳಲುತ್ತಿದ್ದೀರಾ? ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಹಂತದಲ್ಲಿ ತಲೆನೋವನ್ನು ಅನುಭವಿಸಿರುತ್ತಾರೆ. ಆದರೆ ಕೆಲವೊಬ್ಬರಿಗೆ ಸಾಮಾನ್ಯವಾಗಿ ಬರುವುದಕ್ಕಿಂತ ತುಸು ಹೆಚ್ಚಾಗೇ ಕಾಡಿರುತ್ತದೆ. ಅದು ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ.

ಒತ್ತಡ, ಹಾರ್ಮೋನುಗಳು, ಮೈಗ್ರೇನ್, ಅಧಿಕ ರಕ್ತದೊತ್ತಡ ಮತ್ತು ಇತರ ಹಲವು ಅಂಶಗಳು ತಲೆನೋವು ಉಂಟುಮಾಡಬಹುದು. ಆದರೆ ನಿಮ್ಮ ತಲೆಯಲ್ಲಿರುವ ನೋವಿನ ಸಂವೇದನೆಯನ್ನು ತೊಡೆದುಹಾಕಲು ಸಹಾಯ ಮಾಡುವ ಕೆಲವು ಸಾರಭೂತ ತೈಲಗಳು ಇಲ್ಲಿವೆ. ಆದರೂ ಯಾವುದೇ ತೊಂದರೆಗಳನ್ನು ತಪ್ಪಿಸಲು ಅಲರ್ಜಿಯನ್ನು ಪರೀಕ್ಷಿಸುವುದು ಉತ್ತಮ.

ತಲೆನೋವನ್ನು ಕಡಿಮೆ ಮಾಡುವ ತೈಲಗಳು ಇಲ್ಲಿವೆ.

ಪುದೀನಾ ಎಣ್ಣೆ:

ಪುದೀನಾ ಎಣ್ಣೆ:

ಶತಮಾನಗಳಿಂದ ಔಷಧೀಯ ಉದ್ದೇಶಗಳಿಗಾಗಿ ಬಳಸುವ ಪ್ರಾಚೀನ ಮನೆ ಮದ್ದು. ಈ ಬಹುಮುಖ ತೈಲವು ತಲೆನೋವು, ನೋಯುತ್ತಿರುವ ಸ್ನಾಯುಗಳು, ತುರಿಕೆ, ಮತ್ತು ಹಲ್ಲಿನ ಸಮಸ್ಯೆಗಳನ್ನು ಒಳಗೊಂಡಂತೆ ಅನೇಕ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಇದು ಮೆಂಥಾಲ್ ಅನ್ನು ಹೊಂದಿದ್ದು, ಇದು ಸ್ನಾಯುಗಳಿಗೆ ವಿಶ್ರಾಂತಿ ಮಾಡಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನಾ ಎಣ್ಣೆಯನ್ನು ಅನ್ವಯಿಸುವುದರಿಂದ ಒತ್ತಡದ ತಲೆನೋವು ಮತ್ತು ಮೈಗ್ರೇನ್ ದಾಳಿಯಿಂದ ನೋವು ನಿವಾರಣೆಯಾಗುತ್ತದೆ. ನೀವು ಮಾಡಬೇಕಾದುದೆಂದರೆ ಅದನ್ನು ತೆಂಗಿನ ಎಣ್ಣೆಯಂತಹ ವಾಹಕ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಹಣೆಯ ಮೇಲೆ ಅನ್ವಯಿಸಿ.

ಲ್ಯಾವೆಂಡರ್ ಆಯಿಲ್:

ಲ್ಯಾವೆಂಡರ್ ಆಯಿಲ್:

ಈ ಸಾರಭೂತ ತೈಲವು ನಿಮ್ಮ ಚರ್ಮಕ್ಕೆ ಒಳ್ಳೆಯದು ಮಾತ್ರವಲ್ಲ, ತಲೆನೋವಿನಂತಹ ಸಮಸ್ಯೆಗಳಿಗೆ ಬಂದಾಗ ಇದು ಅದ್ಭುತಗಳನ್ನು ಸೃಷ್ಟಿಸುತ್ತದೆ. ಲ್ಯಾವೆಂಡರ್ ಸಾರಭೂತ ತೈಲದ ಸುಗಂಧವನ್ನು ಉಸಿರಾಟದ ಮೂಲಕ ತೆಗೆದುಕೊಳ್ಳುವುದು ಮೈಗ್ರೇನ್ ದಾಳಿಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ, ದುರ್ಬಲಗೊಳಿಸಿದ ಲ್ಯಾವೆಂಡರ್ ಎಣ್ಣೆಯನ್ನು ಹಣೆಗೆ ಹಚ್ಚುವುದು. ಅಥವಾ ದುರ್ಬಲಗೊಳಿಸಿದ ಎಣ್ಣೆಯನ್ನು ಸ್ನಾನದ ಬೆಚ್ಚಗಿನ ನೀರಿಗೆ ಸೇರಿಸಿ ಅದರ ಪ್ರಯೋಜನಗಳನ್ನು ಪಡೆಯಬಹುದು.

ನೀಲಗಿರಿ:

ನೀಲಗಿರಿ:

ನೀವು ಆಗಾಗ್ಗೆ ತಲೆನೋವಿನಿಂದ ಬಳಲುತ್ತಿದ್ದರೆ ಈ ತೈಲವನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳುವುದು ಉತ್ತಮ. ನೀವು ಸೈನಸ್ ತಲೆನೋವಿನಿಂದ ಬಳಲುತ್ತಿದ್ದರೆ ಇದು ಉತ್ತಮ ಪರಿಹಾರವಾಗಿದೆ. ಇದು ಮೂಗಿನ ಹಾದಿಗಳನ್ನು ತೆರೆಯಲು ಮತ್ತು ಸೈನಸ್ ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಕ್ಯಾರಿಯರ್ ಎಣ್ಣೆಗೆ ನೀಲಗಿರಿ ಎಣ್ಣೆಯ ಒಂದು ಹನಿ ಸೇರಿಸಿ ಮತ್ತು ಅದನ್ನು ಎದೆಗೆ ಅನ್ವಯಿಸಿ - ಇದು ಸೈನಸ್ ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ನೀವು ಬಿಸಿನೀರಿಗೆ ಕೆಲವು ಹನಿ ಎಣ್ಣೆಯನ್ನು ಸೇರಿಸಿ ಮತ್ತು ಅದರ ಆವಿಯನ್ನು ತೆಗೆದುಕೊಳ್ಳಬಹುದು.

ರೋಸ್ಮರಿ ಎಣ್ಣೆ:

ರೋಸ್ಮರಿ ಎಣ್ಣೆ:

ನೂರಾರು ವರ್ಷಗಳಿಂದ ಬಳಸಲಾಗುವ ರೋಸ್ಮರಿ ಎಣ್ಣೆಯಲ್ಲಿ ಉರಿಯೂತದ ಮತ್ತು ನೋವು ನಿವಾರಕ ಗುಣಗಳಿವೆ. ಅದು ಒತ್ತಡ, ನೋವು ನಿವಾರಣೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ತಲೆನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಅಡಿಕ್ಷನ್ & ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇತರ ಔಷಧಿಗಳೊಂದಿಗೆ ಬಳಸುವ ರೋಸ್ಮರಿ ಎಣ್ಣೆಯು ತಲೆನೋವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯೊಂದಿಗೆ ರೋಸ್ಮರಿ ಎಣ್ಣೆಯ ಕೆಲವು ಹನಿಗಳನ್ನು ಮಿಶ್ರಣ ಮಾಡಿ. ಹಣೆಗೆ ಮಸಾಜ್ ಮಾಡಿ.

ಕ್ಯಾಮೊಮೈಲ್ ಆಯಿಲ್:

ಕ್ಯಾಮೊಮೈಲ್ ಆಯಿಲ್:

ಪುರಾತನ, ಗಿಡಮೂಲಿಕೆಗಳ ಪರಿಹಾರವು ಅನೇಕ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಈ ಸಾರಭೂತ ತೈಲವನ್ನು ಬಳಸುವುದರಿಂದ ದೇಹವನ್ನು ವಿಶ್ರಾಂತಿಗೊಳಿಸಬಹುದು, ಸ್ನಾಯು ನೋವು ಹಾಗೂ ತಲೆನೋವನ್ನು ಶಮನಗೊಳಿಸುತ್ತದೆ. ಆತಂಕ ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ತೆಂಗಿನ ಎಣ್ಣೆಯೊಂದಿಗೆ ದುರ್ಬಲಗೊಳಿಸಿದ ಕೆಲವು ಹನಿ ಕ್ಯಾಮೊಮೈಲ್ ಸಾರಭೂತ ತೈಲದ ಸ್ನಾನ ಅಥವಾ ಬಿಸಿ ನೀರಿಗೆ ಸೇರಿಸಿ, ಹಬೆಯನ್ನು ತೆಗೆದುಕೊಳ್ಳಿ.

English summary

Essential Oils To Get Rid Of Headaches In Kannada

Are you suffering from headache? If you want to get rid of the Headaches, here we told about Essential Oils to Get Rid of Headaches in Kannada, have a look
X
Desktop Bottom Promotion