For Quick Alerts
ALLOW NOTIFICATIONS  
For Daily Alerts

ಕೋವಿಡ್ 19: ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ

|

ಕೊರೊನಾದ ಎರಡನೇ ಅಲೆ ಭಾರತದಲ್ಲಿ ಭೀಕರವಾಗಿದೆ. ಈ ರೂಪಾಂತರ ಕೊರೊನಾವೈರಸ್‌ ವೇಗವಾಗಿ ಹರಡುತ್ತಿರುವುದು ಮಾತ್ರವಲ್ಲ ಹೆಚ್ಚಿನ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಕೊರೊನಾ ಸೋಂಕಿತರಲ್ಲಿ ಹೆಚ್ಚಿನವರಲ್ಲಿ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ.

ಕೊರೊನಾ ಸೋಂಕಿತರಲ್ಲಿ ಹಲವರು ಆರಂಭದಲ್ಲಿ ಕೆಲ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಸಮಸ್ಯೆ ತುಂಬಾ ಗಂಭೀರವಾಗಿ ಸಾವನ್ನಪ್ಪುತ್ತಿದ್ದಾರೆ. ಕೆಲವರಲ್ಲಿ ಶೀತ, ತಲೆನೋವು, ಮೈಕೈ ನೋವು, ಕೆಮ್ಮು ಇವೆಲ್ಲಾ ಕೊರೊನಾ ಲಕ್ಷಣಗಳಾಗಿವೆ. ಕೆಲವರಲ್ಲಿ ಕೋವಿಡ್ 19 ಸೋಂಕು ಇದ್ದರೂ ಯಾವುದೇ ಲಕ್ಷಣಗಳು ಇರಲ್ಲ, ಮತ್ತೆ ಕೆಲವರಿಗೆ ಉಸಿರಾಟಕ್ಕೆ ತೊಂದರೆ ಮುಂತಾದ ಗಂಭೀರ ಸಮಸ್ಯೆ ಇರುವುದು.

ಆದ್ದರಿಂದ ಕೊರೊನಾ ಲಕ್ಷಣಗಳಲ್ಲಿ ಯಾವುದನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ. ಚಿಕ್ಕ-ಪುಟ್ಟ ಲಕ್ಷಣಗಳಿದ್ದರೆ ಹೋಂ ಕ್ವಾರಂಟೈನ್‌ನಲ್ಲಿದ್ದು ವೈದ್ಯರು ಸೂಚಿಸಿದ ಔಷಧಿ ತೆಗೆದುಕೊಂಡು ಚೇತರಿಸಿಕೊಳ್ಳಬಹುದು, ಆದರೆ ಹೀಗೆ ಹೋಂ ಕ್ವಾರಂಟೈನ್‌ ಆಗಿರುವಾಗಲೇ ಇದ್ದಕ್ಕಿದ್ದಂತೆ ರೋಗ ಲಕ್ಷಣಗಳು ಕೆಲವರಲ್ಲಿ ಉಲ್ಭಣವಾಗುವುದು.

ಅದರಲ್ಲೂ ಈ ಲಕ್ಷಣಗಳು ಕಂಡು ಬಂದರಂತೂ ತಕ್ಷಣವೇ ಸೂಕ್ತ ಸೌಲಭ್ಯವಿರುವ ಆಸ್ಪತ್ರೆಗೆ ದಾಖಲಾಗಿ:

'ಉಸಿರಾಟಕ್ಕೆ ತೊಂದರೆ, ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದಿರುವುದು

'ಉಸಿರಾಟಕ್ಕೆ ತೊಂದರೆ, ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದಿರುವುದು

ನಿಮಗೆ ಮನೆಯಲ್ಲಿ ನಿಮ್ಮ ದಿನಚರಿ ಮಾಡಲು ಕಷ್ಟವಾಗುತ್ತಿದೆಯೇ, ನಡೆದಾಡುವಾಗ, ಅಡುಗೆ ಮಾಡುವಾಗ, ಬಟ್ಟೆ ತೊಳೆಯುವಾಗ ಹೀಗೆ ನಿಮ್ಮ ಕೆಲಸ ನೀವು ಮಾಡುವಾಗ ಉಸಿರಾಟಕ್ಕೆ ತೊಂದರೆ ಅನಿಸುತ್ತಿದೆಯೇ, ಹಾಗಾದರೆ ನೀವು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

ನಿಮಗೆ ಒಂದು ವಾಕ್ಯ ಹೇಳಲು ಕಷ್ಟವಾಗುತ್ತಿದ್ದರೆ ಅಥವಾ ನಿಮಗೆ ಮಾತನಾಡಲು ತುಂಬಾನೇ ಕಷ್ಟವಾಗುತ್ತಿದ್ದರೆ ಈ ಕೊರೊನಾ ಲಕ್ಷಣ ನಿರ್ಲಕ್ಷ್ಯ ಮಾಡಬೇಡಿ.

ತಲೆಸುತ್ತು ಅಥವಾ ಪ್ರಜ್ಞೆ ತಪ್ಪುವುದು

ತಲೆಸುತ್ತು ಅಥವಾ ಪ್ರಜ್ಞೆ ತಪ್ಪುವುದು

ಇದು ನಿಮ್ಮ ದೇಹಕ್ಕೆ ಸಾಕಷ್ಟು ಆಮ್ಲಜನಕ ದೊರೆಯುತ್ತಿಲ್ಲ ಎಂದು ಸೂಚಿಸುವ ಲಕ್ಷಣಗಳಾಗಿವೆ. ಶ್ವಾಸಕೋಶದಲ್ಲಿ ಉರಿಯೂತ ಉಂಟಾಗಿ ನಮ್ಮ ರಕ್ತನಾಳಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗದೇ ಹೋದಾಗ ಈ ರೀತಿ ಉಂಟಾಗುವುದು.

ಕೊರೊನಾ ಸೋಂಕು ತಗುಲಿದವರು ತಮ್ಮಲ್ಲಿ ಒಂದು ಆಕ್ಸಿ ಮೀಟರ್ ಇಟ್ಟು ತಮ್ಮ ಆಮ್ಲಜನಕ ಪ್ರಮಾಣ ಪರೀಕ್ಷೆ ಮಾಡಿ. ಆಮ್ಲಜನಕ 95ಕ್ಕಿಂತ ಕಡಿಮೆಯಿದ್ದರೆ ನಿಮಗೆ ಸೂಕ್ತ ಆಮ್ಲಜನಕ ವ್ಯವಸ್ಥೆ ಸಿಗುವವರೆಗೆ ಮಕರಾಸನ ಅಥವಾ Prone poseನಲ್ಲಿ ಮಲಗಿ ಉಸಿರಾಡಿ. ಹೀಗೆ ಮಾಡುವುದರಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗುವುದು.

ಗೊಂದಲ

ಗೊಂದಲ

ಸೋಂಕು ತೀವ್ರವಾದಾಗ ಮರೆವು ಒಂಥರಾ ಗೊಂದಲ ಎಲ್ಲಾ ಉಂಟಾಗುವುದು, ಇನ್ನು ಎದೆ ಭಾಗದಲ್ಲಿ ನೋವು ಕಂಡು ಬಂದರೂ ಐಸಿಯು ಲಭ್ಯವಿರುವ ಆಸ್ಪತ್ರೆಗೆ ದಾಖಲಾಗಿ.

ತುಟಿ, ಮುಖ ನೀಲಿ ಬಣ್ಣಕ್ಕೆ ತಿರುಗುವುದು

ತುಟಿ, ಮುಖ ನೀಲಿ ಬಣ್ಣಕ್ಕೆ ತಿರುಗುವುದು

ತುಟಿಯಲ್ಲಿ, ಮುಖದಲ್ಲಿ ಬಣ್ಣ ವ್ಯತ್ಯಾಸವಾದರೆ ಆಮ್ಲಜನಕ ಕಡಿಮೆಯಾಗಿದೆ ಎಂದರ್ಥ. ಆಗ ಕೂಡಲೇ ನೀವು ಆಸ್ಪತ್ರೆಗೆ ದಾಖಲಾಗಬೇಕು. ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಸಿಗುವವರೆಗೆ ಪ್ರೋನ್ ಪೊಸಿಸನ್‌ನಲ್ಲಿ ಮಲಗಿ ಉಸಿರಾಡಿ. ಹೇಗೆ ಅಂದ್ರೆ ದಿಂಬನ್ನು ಇಟ್ಟು ಅದರ ಮೇಲೆ ಮಗುಚಿ ಮಲಗಿ, ಬೆನ್ನು ಮೇಲ್ಭಾಗದಲ್ಲಿ ಇರಬೇಕು. ಬೇಕಾದರೆ ಕಾಲು ಬಳಿಯೂ ಒಂದು ದಿಂಬು ಇಡಬಹುದು.

ಇನ್ನು ಚಿಕ್ಕ ಜ್ವರವಿದ್ದು 5-6 ದಿನವಾದರೂ ಕಡಿಮೆಯಾಗಿಲ್ಲ ಅಂದ್ರೆ ನಿರ್ಲಕ್ಷ್ಯ ಬೇಡ್ವೇ ಬೇಡ. ಅದು ಕೊರೊನಾವೈರಸ್ ಸೋಂಕು ಆಗಿರುತ್ತದೆ. ಕೊರೊನಾವೈರಸ್ ಲಕ್ಷಣದ ಬಗ್ಗೆ ಆರಂಭದಲ್ಲಿಯೇ ಗಮನ ಹರಿಸಿದರೆ ಬೇಗನೆ ಚೇತರಿಸಿಕೊಳ್ಳಬಹುದು.

English summary

Dangerous Coronavirus Symptoms: COVID Symptoms That Can Have Dangerous Consequences

Dangerous Coronavirus Symptoms: COVID symptoms that can have dangerous consequences, read on...
X
Desktop Bottom Promotion