For Quick Alerts
ALLOW NOTIFICATIONS  
For Daily Alerts

ಕ್ರಾಸ್ ಲೆಗ್‌ನಲ್ಲಿ ಕುಳಿತುಕೊಳ್ಳುವುದು ಎಷ್ಟು ಡೇಂಜರ್ ಗೊತ್ತಾ?

|

ಆಫೀಸಿನಲ್ಲಿ ಅಥವಾ ರೆಸ್ಟೋರೆಂಟ್ ನಲ್ಲಿ ಸಾಮಾನ್ಯವಾಗಿ ನೀವು ಯಾವ ರೀತಿ ಕುಳಿತುಕೊಳ್ಳುತ್ತೀರಿ ಎಂಬ ಬಗ್ಗೆ ಎಂದಾದರೂ ಗಮನ ಹರಿಸಿದ್ದೀರಾ? ನಮ್ಮಲ್ಲಿ ಹೆಚ್ಚಿನವರು ಒಂದು ಕಾಲಿನ ಮೇಲೆ ಇನ್ನೊಂದು ಕಾಲನ್ನ ಹಾಕಿಕೊಂಡು ಕ್ರಾಸ್ ಆಗಿ ಕುಳಿತುಕೊಳ್ಳುವುದರಲ್ಲಿ ಹೆಚ್ಚು ಆರಾಮದಾಯಕ ಅನುಭವ ಹೊಂದಿರುತ್ತಾರೆ.

Avoid Sitting With Your Legs Crossed

ಮತ್ತು ನಿಮ್ಮ ಸುತ್ತಲಿನ ವ್ಯಕ್ತಿಗಳನ್ನು ಗಮನಿಸಿದಾಗ ಈ ರೀತಿ ಕುಳಿತುಕೊಳ್ಳುವ ಭಂಗಿ ಸಾಮಾನ್ಯವೆನಿಸುತ್ತದೆ. ಈ ಅಭ್ಯಾಸವು ನಮಗೇ ಗೊತ್ತಿಲ್ಲದೆ ನಾವು ಅನುಸರಿಸಿರುತ್ತದೆ. ಈ ರೀತಿಯ ಭಂಗಿಯಲ್ಲಿ ಕುಳಿತುಕೊಳ್ಳುವುದರ ದುಷ್ಟರಿಣಾಮಗಳ ಬಗ್ಗೆ ಹೆಚ್ಚಿನವರು ಆಲೋಚಿಸುವುದೇ ಇಲ್ಲ.

ಇದು ನಿಜಕ್ಕೂ ಕೆಟ್ಟದ್ದೇ?

ಇದು ನಿಜಕ್ಕೂ ಕೆಟ್ಟದ್ದೇ?

ವೈದ್ಯಕೀಯ ತುರ್ತು ಪರಿಸ್ಥಿತಿ ಯನ್ನು ಈ ರೀತಿಯ ಕುಳಿತುಕೊಳ್ಳುವ ಭಂಗಿ ತಂದೊಡ್ಡಲಾರದು. ಆದರೆ ರಕ್ತದೊತ್ತಡವನ್ನು ಇದು ಹೆಚ್ಚಿಸುವ ಸಾಧ್ಯತೆ ಇದೆ. ಮರಗಟ್ಟುವಿಕೆ ಮತ್ತು ಮಂಡಿಗೆ ಸಂಬಂಧಿಸಿದ‌ ಸಮಸ್ಯೆಗಳಿಗೆ ಕಾರಣವಾಗಬಹುದು. ಗರ್ಭಿಣಿ ಸ್ತ್ರೀಯರಿಗೂ ಕೂಡ ಈ ರೀತಿ ಕುಳಿತುಕೊಳ್ಳುವುದನ್ನು ಕಡಿಮೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಹುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು ಎನ್ನಲಾಗುತ್ತದೆ. ಇದರಲ್ಲಿ ಕೆಲವು ಅಂಶಗಳು ನಿಜ. ಹಾಗಾದ್ರೆ ಈ ಅಂಶಗಳ ಹಿಂದಿರುವ ಸತ್ಯಗಳ ಬಗ್ಗರ ತಿಳಿಯೋಣ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಜರ್ನಲ್ ಆಫ್ ಕ್ಲಿನಿಕಲ್ ನರ್ಸಿಂಗ್ ಮತ್ತು ಜರ್ನಲ್ ಆಫ್ ಹೈಪರ್ ಟೆನ್ಶನ್ ನ ಎರಡು ಅಧ್ಯಯನಗಳು ತಿಳಿಸಿರುವಂತೆ ಹೀಗೆ ಕ್ರಾಸ್ ಲೆಗ್ ನಲ್ಲಿ ಕುಳಿತುಕೊಳ್ಳುವುದರಿಂದಾಗಿ ಸಣ್ಣ ಪ್ರಮಾಣದಲ್ಲಿ ರಕ್ತದೊತ್ತಡ ಹೆಚ್ಚುತ್ತದೆ.

ಮೊದಲ ಜರ್ನಲ್ ನಲ್ಲಿ ಪ್ರಕಟವಾಗಿರುವಂತೆ ತೊಡೆಯ ಮೇಲೆ ತೊಡೆ ಹಾಕಿ ಕುಳಿತುಕೊಳ್ಳುವುದರಿಂದಾಗಿ ರಕ್ತದ ಒತ್ತಡ ನಿಧಾನವಾಗಿ ಹೆಚ್ಚಾಗುತ್ತದೆ. ಆದರೆ ಮೊಣಕಾಲಲ್ಲಿ ಕ್ರಾಸ್ ಮಾಡಿ ಕುಳಿತುಕೊಳ್ಳುವುದರಿಂದಾಗಿ ಯಾವುದೇ ಬದಲಾವಣೆಯನ್ನು ಗಮನಿಸಲಾಗಲಿಲ್ಲ. ಆದರೆ ರಕ್ತದೊತ್ತಡದಲ್ಲಿ ಆಗುವ ಈ ಬದಲಾವಣೆ ಕೇವನ ತಾತ್ಕಾಲಿಕವಾಗಿರುತ್ತದೆ.

ಉಬ್ಬುವ ರಕ್ತನಾಳಗಳು (ವೆರಿಕೋಸ್ ವೇನ್ಸ್)

ಉಬ್ಬುವ ರಕ್ತನಾಳಗಳು (ವೆರಿಕೋಸ್ ವೇನ್ಸ್)

ಬಹಳ ಸಮಯದವರೆಗೆ ಹೀಗೆ ಕ್ರಾಸ್ ಆಗಿ ಕಾಲುಗಳನ್ನು ಒಂದರ ಮೇಲೆ ಇನ್ನೊಂದು ಕಾಲನ್ನು ಹಾಕಿ ಕುಳಿತುಕೊಳ್ಳುವುದರಿಂದ ರಕ್ತನಾಳಗಳು ಉಬ್ಬುತ್ತವೆ ಎಂದು ನಂಬಲಾಗಿತ್ತು.ಆದರೆ ಇದು ನಿಜವಲ್ಲ.

ನಿಮ್ಮ ರಕ್ತನಾಳಗಳಲ್ಲಿ ಕವಾಟಗಳೊಳಗೆ ಕೆಲವು ತೊಡಕುಗಳು ಉಂಟಾದಾಗ ಉಬ್ಬಿರುವ ರಕ್ತನಾಳಗಳು ಉಂಟಾಗುತ್ತವೆ ಮತ್ತು ಹೃದಯದ ಕಡೆಗೆ ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಈ ಸ್ಥಿತಿಯಲ್ಲಿ, ರಕ್ತವು ಸಂಗ್ರಹವಾಗುತ್ತದೆ ಮತ್ತು ರಕ್ತನಾಳಗಳಲ್ಲಿ ಉಬ್ಬಿಕೊಳ್ಳುವಿಕೆ ಪ್ರಾರಂಭವಾಗುತ್ತದೆ. ಬಹಳ ಹೊತ್ತು ಕುಳಿತುಕೊಳ್ಳುವ ಅಥವಾ ನಿಂತಿರುವ ಜನರು ಉಬ್ಬಿರುವ ರಕ್ತನಾಳಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರುತ್ತಾರೆ. ನಿಮ್ಮ ಕುಳಿತುಕೊಳ್ಳುವ ಭಂಗಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ

ಗರ್ಭಾವಸ್ಥೆ

ಗರ್ಭಾವಸ್ಥೆ

ಈ ರೀತಿಯ ಕುಳಿತುಕೊಳ್ಳುವ ಭಂಗಿಯ ಗರ್ಭಿಣಿಯರಿಗೂ ಕೂಡ ದೊಡ್ಡ ಮಟ್ಟದ ಪರಿಣಾಮನ್ನೇನೂ ಮಾಡಲಾರದು. ಇದು ಖಂಡಿತ ಮಗುವಿಗೆ ತೊಂದರೆ ಮಾಡುವುದಿಲ್ಲ. ಆದರೆ ಹೀಗೆ ಕುಳಿತುಕೊಳ್ಳುವುದರಿಂದಾಗಿ ಸಣ್ಣದಾಗಿ ಬೆನ್ನುನೋವು, ಮಾಂಸಖಂಡಗಳ ಸೆಳೆತ ಅಥವಾ ಮಂಡಿ ನೋವು ಕಾಣಿಸಬಹುದು. ಇದು ಯಾಕೆಂದರೆ ಇನ್ನೊಂದು ಜೀವವನ್ನು ನೀವು ನಿಮ್ಮ ದೇಹದಲ್ಲಿ ಇಟ್ಟುಕೊಂಡಿರುವಾಗ ಅನೇಕ ರೀತಿಯ ಒಳಾಂಗಣ ಬದಲಾವಣೆಗಳು ದೇಹದಲ್ಲಿ ಆಗುತ್ತಿರುತ್ತದೆ.

ಮಂಡಿ ಮತ್ತು ಗಂಟು ನೋವು

ಮಂಡಿ ಮತ್ತು ಗಂಟು ನೋವು

ಹಲವಾರು ಕಾರಣಗಳಿಂದಾಗಿ ಮೊಣಕಾಲು ನೋವು ಉಂಟಾಗುತ್ತದೆ. ಅಪರೂಪದ ಸಂದರ್ಭದಲ್ಲಿ ಮಾತ್ರ ಅಡ್ಡ ಕಾಲು ಕುಳಿತುಕೊಳ್ಳುವ ಭಂಗಿ ಮೊಣಕಾಲುಗಳ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ನೀವು ಈಗಾಗಲೇ ಯಾವುದೇ ರೀತಿಯ ಮೊಣಕಾಲುಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿರ್ದಿಷ್ಟ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಕಷ್ಟವಾದರೂ ಈ ಅಭ್ಯಾಸ ಬಿಡುವುದೇ

ನಿಮ್ಮ ದೈಹಿಕ ಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕಾಗಿ ಮತ್ತು ಮುಂದೆ ಎದುರಾಗಬಹುದಾದ ಸಮಸ್ಯೆಯನ್ನು ತಪ್ಪಿಸುವುದಕ್ಕಾಗಿ ನೀವು ಅಡ್ಡಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ಬಿಡುವುದು ಒಳ್ಳೆಯದು. ಆದರೆ ಪ್ರಾರಂಭದಲ್ಲಿ ನಿಮಗೆ ಕಷ್ಟವಾಗಬಹುದು. ಆದರೆ ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ.

English summary

Crossed Legs While Sitting: Is it bad for you

Here we are discussing about Avoid Sitting With Your Legs Crossed. if you will observe people around you, you will find how common this pattern is. It has become a sort of habit and even in our subconscious mind, we tend to follow it. Anyone would have hardly thought the drawback of sitting in this posture. Read more.
X
Desktop Bottom Promotion