For Quick Alerts
ALLOW NOTIFICATIONS  
For Daily Alerts

Covishield vs Covaxin : ಕೊರೊನಾ ಲಸಿಕೆಗಳ ನಡುವಿನ ವ್ಯತ್ಯಾಸ, ಇದು ಸುರಕ್ಷಿತವೇ, ಎರಡನೇ ಡೋಸ್‌ ಯಾವಾಗ ಪಡೆಯಬೇಕು?

|

ಭಾರತದಲ್ಲಿ ಕೊರೊನಾ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿದ್ದು ಈಗ ಎರಡು ಬಗೆಯ ಲಸಿಕೆಯನ್ನು ನೀಡಲಾಗುತ್ತಿದೆ.

ಕೊವಾಕ್ಸಿನ್ ಹಾಗೂ ಕೋವಿಶೀಲ್ಡ್ ಎಂಬ ಹೆಸರಿನ ಈ ಲಸಿಕೆಗಳು ಕೊರೊನಾ ತಡೆಗಟ್ಟವಲ್ಲಿ ಸಮರ್ಥವೆಂಬುವುದು ಈಗಾಗಲೇ ವೈದ್ಯಕೀಯವಾಗಿ ದೃಢಪಟ್ಟಿದ್ದು ಜನರು ಈ ಲಸಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಕೋವಾಕ್ಸಿನ್‌ ಹಾಗೂ ಕೋವಿಶೀಲ್ಡ್ ಎರಡೂ ಕೊರೊನಾ ಲಸಿಕೆಗಳೇ ಆದರೂ ಎರಡೂ ಲಸಿಕೆಯನ್ನೂ ಒಬ್ಬ ವ್ಯಕ್ತಿ ಪಡೆದುಕೊಳ್ಳುವಂತಿಲ್ಲ. ಒಬ್ಬ ವ್ಯಕ್ತಿ ಒಂದು ಬಗೆಯ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ಪಡೆದುಕೊಳ್ಳಬೇಕು.

ನಾವಿಲ್ಲಿ ಈ ಎರಡು ಕೊರೊನಾ ಲಸಿಕೆ ನಡುವೆ ಇರುವ ವ್ಯತ್ಯಾಸ, ತಯಾರಕರು, ಬೆಲೆ, ಸುರಕ್ಷತೆ, ಅಡ್ಡಪರಿಣಾಮ, 2ನೇ ಡೋಸ್‌ ಯಾವಾಗ ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಲಸಿಕೆ ತಯಾರಕರು

ಲಸಿಕೆ ತಯಾರಕರು

ಕೋವಿಶೀಲ್ಡ್ ಲಸಿಕೆಯನ್ನು ದಿ ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.

ಕೊವಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟಿಕ್ ಇಂಡಿಯಾ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ಜೊತೆ ಸೇರಿ ತಯರಿಸುತ್ತಿದೆ.

ಈ ಲಸಿಕೆಗಳನ್ನು ಹೇಗೆ ತಯಾರಿಸಲಾಗುತ್ತಿದೆ?

ಈ ಲಸಿಕೆಗಳನ್ನು ಹೇಗೆ ತಯಾರಿಸಲಾಗುತ್ತಿದೆ?

ಕೋವಿಶೀಲ್ಡ್ ಲಸಿಕೆಯನ್ನು ಚಿಂಪಾಜಿಗಳ ಶೀತಕ್ಕೆ ಕಾರಣವಾಗುವ ಅಡೆನೋವೈರಸ್ ಬಳಸಿ ತಯಾರಿಸಲಾಗುತ್ತಿದೆ. ಇದು SARS-CoV-2 ಕೊರೊನಾವೈರಸ್‌ನ ಪ್ರೊಟೀನ್ ಹೆಚ್ಚಿಸುತ್ತದೆ.

ಇದರಲ್ಲಿರುವ ಅನುವಂಶೀಯ ಅಂಶ SARS-CoV-2 ಕೊರೊನಾವೈರಸ್‌ ಸ್ಪೈಕ್ ಪ್ರೊಟೀನ್‌ನಲ್ಲಿರುವ ಅಂಶ ಒಂದೇ ಆಗಿದ್ದು, ಇದು ಕೊರೊನಾವೈರಸ್‌ ದೇಹವನ್ನು ಪ್ರವೇಶಿಸದಂತೆ ಪ್ರತಿರೋಧ ಒಡ್ಡುವುದು. ಇದನ್ನು ದುರ್ಬಲ ಅಡೆನೋವೈರಸ್‌ ಬಳಸಿ ತಯಾರಿಸಲಾಗುವುದು

ಕೊವಾಕ್ಸಿನ್ ಲಸಿಕೆಯನ್ನು ಸತ್ತ ಕೊರೊನಾವೈರಸ್ ಬಳಸಿ ತಯಾರಿಸಲಾಗುವುದು.ಇದನ್ನು ಚುಚ್ಚಿದಾಗ ವ್ಯಕ್ತಿಗೆ ಯಾವುದೇ ಹಾನಿಯುಂಟು ಮಾಡುವುದಿಲ್ಲ, ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊರೊನಾವೈರಸ್ ದೇಹವನ್ನು ಪ್ರವೇಶಿಸದಂತೆ ದೇಹದ ರೋಗ ನಿರೋಧಕ ಕಣಗಳನ್ನು ಸಿದ್ಧ ಪಡಿಸುತ್ತದೆ.

ಲಸಿಕೆಯ ಬೆಲೆಯೆಷ್ಟು

ಲಸಿಕೆಯ ಬೆಲೆಯೆಷ್ಟು

ಕೊರೊನಾ ಲಸಿಕೆಯನ್ನು ನೀವು ಸರ್ಕಾರಿ ಕೇಂದ್ರಗಳಿಗೆ ಹೋಗಿ ಉಚಿತವಾಗಿ ಪಡೆಯಬಹುದು. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ತೆಗೆದುಕೊಳ್ಳುವುದಾದರೆ ರೂ. 250 ಪಾವತಿಸಬೇಕಾಗುತ್ತದೆ.

ಎಷ್ಟು ಡೋಸ್ ಪಡೆಯಬೇಕು

ಎಷ್ಟು ಡೋಸ್ ಪಡೆಯಬೇಕು

ಕೊರೊನಾ ಲಸಿಕೆಯನ್ನು ಎರಡು ಡೋಸ್‌ನಲ್ಲಿ ತೆಗೆದುಕೊಳ್ಳಬೇಕು.

ನೀವು ಕೊರೊನಾ ಲಸಿಕೆ ಮೊದಲ ಡೋಸ್ ತೆಗೆದುಕೊಂಡಿದ್ದರೆ 6 ವಾರಗಳ ಬಳಿಕ ಮತ್ತೊಂದು ಡೋಸ್‌ ತೆಗೆದುಕೊಳ್ಳಬೇಕು.

ಹೇಗೆ ಸ್ಟೋರ್ ಮಾಡಲಾಗುವುದು?

ಹೇಗೆ ಸ್ಟೋರ್ ಮಾಡಲಾಗುವುದು?

ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆಯನ್ನು2-8 ಡಿಗ್ರಿC ತಾಪಮಾನದಲ್ಲಿ ಸಂಗ್ರಹಿಸಿ ಇಡಲಾಗುವುದು.

ಈ ಲಸಿಕೆಗಳು ಸುರಕ್ಷತವೇ?

ಈ ಲಸಿಕೆಗಳು ಸುರಕ್ಷತವೇ?

ಈ ಎರಡೂ ಲಸಿಕೆಗಳು ಸುರಕ್ಷಿತವಾಗಿದೆ ಎಂದು DCGI Drugs Controller General of India)ಹೇಳಿದೆ.

ಕೆಲವರಿಗೆ ಚಿಕ್ಕದಾಗಿ ಜ್ವರ, ನೋವು , ಅಲರ್ಜಿ ಕಂಡು ಬರಬಹುದು, ಆದರೆ ಭಯ ಪಡಬೇಕಾಗಿಲ್ಲ ಒಂದೆರಡು ದಿನದಲ್ಲಿ ಸರಿ ಹೋಗುವುದು.

English summary

Covishield vs Covaxin Differences, Manufacturer, Efficacy Rate, Safety, Side Effects, 2nd Dose Gap Comparison In Kannada

Here are more information about covid 19 vaccines covishield vs covaxin differences, manufacturer, efficacy rate, safety, side effects, 2nd dose gap comparison, Read on...
X
Desktop Bottom Promotion