For Quick Alerts
ALLOW NOTIFICATIONS  
For Daily Alerts

ಮತ್ತೆ ಶುರುವಾಗಿದೆ ಕೊರೊನಾ ಆತಂಕ, ಹೊರಗಡೆ ಹೋಗುವಾಗ ಎಚ್ಚರ!

|

ಈ ಕೊರೊನಾ ಎಂಬ ಮಹಾಮಾರಿ ಸದ್ಯಕ್ಕೆ ದೂರಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ, ನಾವೆಲ್ಲ ದೀಪಾವಳಿ ಹಬ್ಬದ ಖುಷಿಯಲ್ಲಿದ್ದೇವೆ, ಆದರೆ ಈ ಸಮಯದಲ್ಲಿ ಮುನ್ನೆಚ್ಚರಿಕೆವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

ಹೌದು, ದೇಶಕ್ಕೆ ಮತ್ತೆ ಕೊರೊನ ಆತಂಕ ಎದುರಾಗಿದೆ. ಹೊಸ ಒಮಿಕ್ರಾನ್ ಉಪತಳಿಯಿಂದ ದೇಶದಲ್ಲಿ ಕೊರೊನಾ ಅಲೆಯ ಲಕ್ಷಣಗಳಿವೆ ಎಂದು ತಜ್ಞರು ಈಗಾಗಲೇ ಎಚ್ಚರಿಸುತ್ತಿದ್ದಾರೆ. ಒಮಿಕ್ರಾನ್‌ 300ಕ್ಕೂ ಅಧಿಕ ಉಪತಳಿಗಳು ಪತ್ತೆಯಾಗಿವೆ, ಆದರೆ ಅವುಗಳಲ್ಲಿ ಈ XBB ತುಂಬಾನೇ ಅಪಾಯಕಾರಿಯಾಗಿದೆ, ಇದು ಕೊರೊನಾ ವಿರುದ್ಧ ಲಸಿಕೆ ಪಡೆದವರಿಗೂ ಹರಡುವ ಸಾಮರ್ಥ್ಯ ಹೊಂದಿದೆ.

ಈ ಒಮಿಕ್ರಾನ್‌ ಉಪತಳಿಯಿಂದಾಗಿ ಕೆಲವು ರಾಷ್ಟ್ರಗಳಲ್ಲಿ ಮತ್ತೆ ಕೊರೊನಾ ಅಲೆ ಕಂಡ ಬರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

BA.5 and BA.1 ಕೂಡ ವೇಗವಾಗಿ ಹರಡುವ ರೂಪಾಂತರಗಳಾಗಿವೆ

BA.5 and BA.1 ಕೂಡ ವೇಗವಾಗಿ ಹರಡುವ ರೂಪಾಂತರಗಳಾಗಿವೆ

ಈಗಾಗಲೇ ಒಮಿಕ್ರಾನ್‌ನ BA.5 and BA.1 ರೂಪಾಂತರಗಳು ಪತ್ತೆಯಾಗಿದ್ದು ಅವುಗಳು ಕೂಡ ತುಂಬಾ ವೇಗವಾಗಿ ಹರಡುವ ಗುಣ ಹೊಂದಿದೆ, ಅಲ್ಲದೆ ಈ ವೈರಸ್‌ಗಳು ಸಂಪೂರ್ಣ ಕೊರೊನಾ ಲಸಿಕೆ ಪಡೆದವರಿಗೂ ಹರಡುವ ಸಾಮರ್ಥ್ಯ ಹೊಂದಿದೆ.

ಕೊರೊನಾ ಬಗ್ಗೆ ಮಾತನಾಡುತ್ತಾ ಪ್ರತೀವಾರ ಕೊರೊನಾದಿಂದಾಗಿ 8000ದಿಂದ 9000 ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಡಾ. ಸೌಮ್ಯ ಸ್ವಾಮಿನಾಥನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಂಕ್ರಮಿಕ ಮುಗಿದಿಲ್ಲ

ಸಾಂಕ್ರಮಿಕ ಮುಗಿದಿಲ್ಲ

ಕೊರೊನಾ ಸಾಂಕ್ರಮಿಕ ಮುಗಿಯಿತು ಎಂದು ಜನ ಭಾವಿಸಿದ್ದರು, ಆದರೆ ಈ ಸಾಂಕ್ರಮಿಕ ಇನ್ನೂ ಮುಗಿದಿಲ್ಲ, ಈಗಲೂ ಭೀಕರವಾಗಿ ಕಾಡುವ ಸಾಧ್ಯತೆ ಇದೆ.

3 ಡೋಸ್‌ ಲಸಿಕೆಯಿಂದ ಸುರಕ್ಷತೆ

ಕೊರೊನಾದಿಂದ ಸುರಕ್ಷತೆ ಪಡೆಯಲು ಎರಡು ಡೋಸ್ ಲಸಿಕೆ ಜೊತೆಗೆ ಒಂದು ಬೂಸ್ಟರ್‌ ಪಡೆದುಕೊಳ್ಳುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಿದ್ದಾರೆ,

60 ವರ್ಷ ಮೇಲ್ಪಟ್ಟವರಿಗೆ, ಫ್ರಂಟ್‌ಲೈನ್‌ ವರ್ಕರ್‌ಗೆ ಹಾಗೂ ಆರೋಗ್ಯ ಇಲಾಖೆಯವರಿಗೆ ಶೇ. 100ರಷ್ಟು ಬೂಸ್ಟರ್‌ ಡೋಸ್‌ ನೀಡಲು ಸರಕಾರ ಮುಂದಾಗಿದೆ. ಭಾರತ ಸೇರಿ ಹಲವು ದೇಶಗಳಲ್ಲಿ ಜನರು ಬೂಸ್ಟರ್ ತೆಗೆದುಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿಲ್ಲ, ಆದರೆ ಜನರು ಮೂರನೇ ಡೋಸ್‌ ತೆಗೆದುಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಅವಶ್ಯಕ ಎಂದು ಡಾ. ಸ್ವಾಮಿನಾಥನ್ ಹೇಳಿದ್ದಾರೆ.

ಕೊರೊನಾ ನಿಯಮಗಳನ್ನು ಪಾಲಿಸಿ

ಕೊರೊನಾ ನಿಯಮಗಳನ್ನು ಪಾಲಿಸಿ

* ಈ ಅವಧಿಯಲ್ಲಿ ಮತ್ತೆ ಕೊರೊನಾ ನಿಯಮಗಳನ್ನು ತಪ್ಪದೆ ಪಾಲಿಸಿ

* ಹೊರಗಡೆ ಹೋಗುವಾಗ ಮಾಸ್ಕ್‌ ಬಳಸಿ

* ಕೈಗಳನ್ನು ಸೋಪು ಹಚ್ಚಿ ಆಗಾಗ ತೊಳೆಯಿರಿ

* ಕೈಗಳಿಗೆ ಸ್ಯಾನಿಟೈಸರ್ ಬಳಸಿ

* ಜನಗಳ ಗುಂಪಿರುವ ಕಡೆ ಹೋಗಬೇಡಿ

* ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ.

English summary

Covid : Will Omicron New Variant cause another wave in India?

Avoid going Out:Chief scientist at the World Health Organization (WHO), Dr Soumya Swaminathan warned Omicron Variant May Cause Another Covid Wave....
X
Desktop Bottom Promotion