For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19 ಗುಣಪಡಿಸುವ ಮಾತ್ರೆ ಮೊಲ್ನುಪಿರವಿರ್ : ಇದನ್ನು ಯಾರು ಬಳಸಬಹುದು, ಬೆಲೆಯೆಷ್ಟು?

|

ಕೊರೊನಾ ಕೇಸ್‌ಗಳು ಊಹಿಸಿದ್ದಕ್ಕಿಂತಲೂ ಅಧಿಕವಾಗಿ ಕಂಡು ಬರುತ್ತಿದೆ, ಪರಿಸ್ಥಿತಿ ಹೀಗೆ ಹೋದರೆ 3ನೇ ಅಲೆ ಉಂಟಾಗುವ ಸಾಧ್ಯತೆ ಕಂಡು ಬರುತ್ತಿದೆ. ಕೋವಿಡ್‌ 19 ವೇಗವಾಗಿ ಹಬ್ಬುತ್ತಿರುವಾಗ ಅದನ್ನು ತಡೆಗಟ್ಟಲು ಸರ್ಕಾರ ಕೂಡ ಪ್ರಯತ್ನ ನಡೆಸುತ್ತಿದೆ. ಆದ್ದರಿಂದ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ 15-18 ವಯಸ್ಸಿನ ಮಕ್ಕಳಿಗೆ ಕೊವಾಕ್ಸಿನ್‌ ಲಸಿಕೆ ನೀಡಲಾಗುತ್ತಿದೆ. ಇದರ ಜೊತೆಗೆ ಸೋಮವಾರ ಮೊಲ್ನುಪಿರವಿರ್ ಔಷಧಿ ಬಳಸಲು ಅವಕಾಶ ಸಿಕ್ಕಿದೆ.

ಈ ಔಷಧಿ ಮಾರ್ಕೆಟ್‌ಗೆ ಈಗಾಗಲೇ ಬಂದಿದ್ದು ಹತ್ತಾರು ಔಷಧಿ ಕಂಪನಿಗಳು ಈ ಔಷಧಿಯನ್ನು ತಯಾರಿಲು ಮುಂದಾಗಿದೆ. ಕೋವಿಡ್‌ 19 ಕಾಯಿಲೆ ಕಡಿಮೆ ಬೆಲೆಯ ಚಿಕಿತ್ಸೆ ಇದಾಗಿದ್ದು ಇದನ್ನು ಕೆಲ ಸಂದರ್ಭದಲ್ಲಿ ಬಳಸಬಹುದಾಗಿದೆ. ಈ ಮಾತ್ರೆಯನ್ನು ಯಾರು ಬಳಸಬಹುದು, ಇದರ ಬೆಲೆಯೆಷ್ಟು? ಇದರ ಪರಿಣಾಮಗಳೇನು ಎಂದು ನೋಡೋಣ ಬನ್ನಿ:

ಕೋವಿಡ್ 19 ಮಾತ್ರೆ ಮೊಲ್ನುಪಿರವಿರ್ ಅನ್ನು ಯಾವೆಲ್ಲಾ ಕಂಪನಿಗಳು ತಯಾರಿಸುತ್ತಿವೆ?

ಕೋವಿಡ್ 19 ಮಾತ್ರೆ ಮೊಲ್ನುಪಿರವಿರ್ ಅನ್ನು ಯಾವೆಲ್ಲಾ ಕಂಪನಿಗಳು ತಯಾರಿಸುತ್ತಿವೆ?

ಈ ಔಷಧಿ ಮ್ಯಾನ್‌ಕೈಂಡ್‌ ಫಾರ್ಮದ ಮೊಲುಲೈಫ್‌ ಎಂಬ ಬ್ರ್ಯಾಂಡ್‌ನಲ್ಲಿ ಈಗಾಗಲೇ ಲಾಂಚ್ ಆಗಿದೆ. ಇದು ಇತರ ಔಷಧಿ ಕಂಪನಿಗಳ ಜೊತೆ ಟೈಪ್ ಮಾಡಿದೆ. 13 ಔಷಧ ಕಂಪನಿಗಳು ಈ ಮಾತ್ರೆಯನ್ನು ತಯಾರಿಸುತ್ತಿದೆ. ಇದು 200mg ಮಾತ್ರೆಯಾಗಿದ್ದು ಭಾರತದ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

 ಮೊಲ್ನುಪಿರವಿರ್ ಮಾತ್ರೆಯ ಬೆಲೆಯೆಷ್ಟು?

ಮೊಲ್ನುಪಿರವಿರ್ ಮಾತ್ರೆಯ ಬೆಲೆಯೆಷ್ಟು?

ಇದರ ಬೆಲೆ ರೂ.1500ರಿಂದ 2500ರವರೆಗೆ ಇದೆ. ಈ ಮಾತ್ರೆ 800mg ತೆಗೆದುಕೊಳ್ಳುವಂತೆ ತಜ್ಞರು ತಿಳಿಸಿದ್ದಾರೆ ಆದ್ದರಿಂದ 200mg ಮಾತ್ರೆಯನ್ನು 12 ಗಂಟೆಗೊಮ್ಮೆ ತೆಗೆದುಕೊಳ್ಳಬೇಕು. ಈ ರೀತಿ 5 ದಿನ ತೆಗೆದುಕೊಳ್ಳಬೇಕು.

ಮೊಲ್ನುಪಿರವಿರ್ ಎಂದರೇನು?

ಮೊಲ್ನುಪಿರವಿರ್ ಎಂದರೇನು?

ಯುಸ್ ಮೂಲದ ಔಷಧ ಕಂಪನಿ Emory University, Biopharmaceuticals and phrma giant Merck) ಮೊದಲಿಗೆ ಕೋವಿಡ್‌ 19ಗೆ ಮಾತ್ರೆ ಕಂಡು ಹಿಡಿಯಿತು. ಇದನ್ನು ಬಳಸಲು ಯುಕೆಯ ಡ್ರಗ್‌ ರೆಗ್ಯೂಲೇಟರ್ ಅನುಮತಿ ನೀಡಿದ್ದು ತುರ್ತು ಸಂದರ್ಭದಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಈ ಮಾತ್ರೆ ಬಳಸಲು ಅನುಮತಿ ಸಿಕ್ಕಿದೆ.

ಮೊಲ್ನುಪಿರವಿರ್ ಮಾತ್ರೆಯನ್ನು ಯಾರು ಬಳಸಬಹುದು?

ಮೊಲ್ನುಪಿರವಿರ್ ಮಾತ್ರೆಯನ್ನು ಯಾರು ಬಳಸಬಹುದು?

ಭಾರತದಲ್ಲಿ ಈಗ ಆರೋಗ್ಯ ಸಂಬಂಧಿತ ತುರ್ತುಪರಿಸ್ಥಿತಿ ಎದುರಾಗಿರುವುದರಿಂದ ಈ ಮಾತ್ರೆ ಬಳಸಲು ಅನುಮತಿ ಸಿಕ್ಕಿದೆ. ಇದು ಕೋವಿಡ್‌ 19 ಸಣ್ಣ-ಪುಟ್ಟ ಲಕ್ಷಣಗಳು ಇರುವವರು, ಕೋವಿಡ್‌ 19 ಗಂಭೀರವಾಗುವ ಸಾಧ್ಯತೆ ಇದ್ದರೆ, ಆಸ್ಪತ್ರೆಗೆ ದಾಖಲಾದವರು ಹಾಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆದೆ ದೊರೆಯದಿರುವ ಪರಿಸ್ಥಿತಿಯಲ್ಲಿ ಬಳಸಬಹುದಾಗಿದೆ. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿ 5 ದಿನಗಳು ಕಳೆದಿದ್ದರೆ ಅಂಥ ರೋಗಿಗಳಿಗೆ ಈ ಮಾತ್ರೆ ನೀಡುವಂತಿಲ್ಲ.

ಈ ಮಾತ್ರೆಯನ್ನು ಕೋವಿಡ್‌ 19 ತಗುಲಿದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದರೆ ತೆಗೆದುಕೊಳ್ಳಬಹುದಾಗಿದೆ. ಸಣ್ಣಪುಟ್ಟ ಅಥವಾ ಸಾಧಾರಣ ಲಕ್ಷಣಗಳಿದ್ದರೆ ಅಥವಾ ರೋಗ ಲಕ್ಷಣಗಳು ಉಲ್ಬಣವಾಗುವಂತಿದ್ದರೆ ಅಂಥವರು ಈ ಮಾತ್ರೆಯನ್ನು ತೆಗೆದುಕೊಂಡರೆ ಒಳ್ಳೆಯದು. ಒಬೆಸಿಟಿ, ಮಧುಮೇಹ ಅಥವಾ ಹೃದಯ ಸಂಬಂಧಿ ಸಮಸ್ಯೆಯಿದ್ದರೆ ಅಥವಾ 60 ವಯಸ್ಸು ಮೇಲ್ಪಟ್ಟವರಾಗಿದ್ದರೆ ಪ್ರಾರಂಭದಲ್ಲಿಯೇ ಈ ಮಾತ್ರೆ ತೆಗೆದುಕೊಂಡರೆ ಕೋವಿಡ್‌ 19ನಿಂದ ಬೇಗನೆ ಚೇತರಿಸಿಕೊಳ್ಳಬಹುದಾಗಿದೆ.

ಗರ್ಭಿಣಿಯರು ಮಾತ್ರೆ ತೆಗೆದುಕೊಳ್ಳಬಹುದೇ?

ಗರ್ಭಿಣಿಯರು ಮಾತ್ರೆ ತೆಗೆದುಕೊಳ್ಳಬಹುದೇ?

ಪ್ರಾಣಿಗಳ ಮೇಲೆ ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿರುವ ಅಂಶವೆಂದರೆ ಗರ್ಭಿಣಿಯರಿಗೆ ಈ ಮಾತ್ರೆ ನೀಡಿದರೆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದರೆ ಗರ್ಭಿಣಿಯರು ಈ ಮಾತ್ರೆ ತೆಗೆದುಕೊಳ್ಳುವುದರಿಂದ ಗರ್ಭಪಾತವಾಗಬಹುದೇ ಅಥವಾ ಹುಟ್ಟುವ ಮಗುವಿನಲ್ಲಿ ನ್ಯೂನ್ಯತೆ ಉಂಟಾಗಬಹುದೇ ಎಂಬುವುದರ ಬಗ್ಗೆ ಯಾವುದೇ ಅಧಿಕೃತ ವರದಿಯಿಲ್ಲ. ಆದ್ದರಿಂದ ಗರ್ಭಿಣಿಯರಿಗೆ ಈ ಮಾತ್ರೆಯನ್ನು ನೀಡಲಾಗುತ್ತಿಲ್ಲ.

ಈ ಮಾತ್ರೆ ತೆಗೆದುಕೊಂಡವರು 3 ತಿಂಗಳವರೆಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

18 ವರ್ಷದ ಕೆಳಗಿನವರಿಗೂ ಈ ಮಾತ್ರೆ ನೀಡಲಾಗುತ್ತಿಲ್ಲ

18 ವರ್ಷದ ಕೆಳಗಿನವರಿಗೂ ಈ ಮಾತ್ರೆ ನೀಡಲಾಗುತ್ತಿಲ್ಲ

ಈ ಮಾತ್ರೆ ಮಕ್ಕಳ ಬೆಳವಣಿಗೆ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ 18 ವರ್ಷ ಕೆಳಗಿನ ಮಕ್ಕಳಿಗೆ ನೀಡಲಾಗುತ್ತಿಲ್ಲ.

English summary

Covid antiviral oral pill Molnupiravir launched in India; Know Price, dosage and other details in Kannada

Covid antiviral oral pill Molnupiravir launched in India. It is used to treat COVID-19 in those infected by SARS-CoV-2. Know Price, dosage and other details in Kannada. Read on...
Story first published: Wednesday, January 5, 2022, 13:56 [IST]
X
Desktop Bottom Promotion