For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಕೋವಿಡ್‌ 19 ಲಸಿಕೆ ಪಡೆಯಲು ಏನು ಮಾಡಬೇಕು?

|

2020 ಈ ವರ್ಷದಲ್ಲಿ ಕೊರೊನಾವೈರಸ್‌ ಬೀರಿದ ಕರಾಳ ಛಾಯೆ ಜನರು ತಮ್ಮ ಜೀವಿತಾವಧಿಯಲ್ಲಿ ಮರೆಯುವುದಿಲ್ಲ, ಇದೀಗ ಈ ಹೆಮ್ಮೆರಿಯನ್ನು ಹಡೆಮುರಿ ಕಟ್ಟಲು ಲಸಿಕೆ ಬಂದಿದೆ ಎಂಬುವುದೇ ಸಮಧಾನಕರ ಸಂಗತಿಯಾಗಿದೆ. ಕೊರೊನಾ ಲಸಿಕೆಯನ್ನು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ನೀಡಲಾರಂಭಿಸಿದೆ. ಭಾರತದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಈ ಲಸಿಕೆ ಬಳಸುವಂತೆ ಸೂಚಿಸಲಾಗಿದೆ. ಕುರಿತು ನೀವು ತಿಳಿದಿರಬೇಕಾದ ವಿಚಾರಗಳ ಬಗ್ಗೆ ಹೇಳಲಾಗಿದೆ ನೋಡಿ.

ಕೋವಿಡ್ 19 ಲಸಿಕೆ ನೀಡಲು ಸಿದ್ಧವಾಗಿರುವ ಭಾರತ ಸರ್ಕಾರ ಇದರ ಕುರಿತು ಮೂರು ವೀಡಿಯೋ ಟ್ವೀಟ್‌ ಮಾಡಿದ್ದು ಲಸಿಕೆ ಕುರಿತು ಜನರಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದೆ.

ಕೋವಿಡ್‌ 19 ಲಸಿಕೆ ಕುರಿತ ಪ್ರಶ್ನೆಗಳಿಗೆ AIIMS ಮುಖ್ಯಸ್ಥರು ನೀಡಿರುವ ಉತ್ತರ ಹೀಗಿದೆ ನೋಡಿ:

ಕೋವಿಡ್‌ 19 ಲಸಿಕೆ ಶೀಘ್ರದಲ್ಲಿಯೇ ದೊರೆಯಲಿದೆಯೇ?

ಕೋವಿಡ್‌ 19 ಲಸಿಕೆ ಶೀಘ್ರದಲ್ಲಿಯೇ ದೊರೆಯಲಿದೆಯೇ?

ಹೌದು, ಕೋವಿಡ್‌ 19 ಲಸಿಕೆ ಕುರಿತು ವಿವಿಧ ಹಂತದಲ್ಲಿ ಟ್ರಯಲ್‌ ನಡೆಯುತ್ತಿದ್ದು ಬಹುತೇಕ ಲಸಿಕೆಗಳು ಮೂರನೇ ಹಂತದಲ್ಲಿ ಟ್ರಯಲ್ ನಡೆಯುತ್ತಿದ್ದು ಲಸಿಕೆ ಬಹುತೇಕ ಸಿದ್ಧವಾಗಿದೆ. ಇದರ ಕುರಿತು ಕ್ಲಿಯರೆನ್ಸ್ ಅನುಮೋದನೆ ಸಿಕ್ಕ ಕೂಡಲೇ ಸರ್ಕಾರ ಔಷಧಿ ನೀಡಲು ಸಿದ್ಧತೆ ನಡೆಸಿದೆ.

ಎಲ್ಲರಿಗೂ ಔಷಧಿ ಒಂದೇ ಸಮಯದಲ್ಲಿ ದೊರೆಯಲಿದೆಯೇ?

ಇದು ಲಸಿಕೆಯ ಉತ್ಪಾದನೆಯನ್ನು ಅವಲಂಬಿಸಿದೆ. ಸರ್ಕಾರ ಲಸಿಕೆ ಮೊದಲು ಯಾರಿಗೆ ಸಿಗಬೇಕು ಎಂಬ ಕುರಿತು ನಿರ್ಧರಿಸಿದೆ. ಅದರಂತೆ ಎರಡು ವರ್ಗದವರಿಗೆ ದೊರೆಯಲಿದೆ. ಒಂದು ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ವಾರಿಯರ್ಸ್‌ಗೆ ಸಿಗಲಿದೆ, ಮತ್ತೊಂದು ವರ್ಗ ಎಂದರೆ 50 ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯ ಸಮಸ್ಯೆ ಇರುವ 50 ವರ್ಷದ ಕೆಳಗಿನವರು.

ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆ?

ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆ?

ಲಸಿಕೆ ತೆಗೆದುಕೊಳ್ಳುವುದು ಸ್ವಇಚ್ಛೆಗೆ ಸಂಬಂಧಿಸಿದ್ದು. ಆದರೆ ಈ ಲಸಿಕೆ ತೆಗೆದುಕೊಳ್ಳುವುದರಿಂದ ನಮ್ಮನ್ನು ರಕ್ಷಿಸಬಹುದು, ನಮ್ಮ ಆಪ್ತರನ್ನು ಕೊರೊನಾದಿಂದ ರಕ್ಷಿಸಬಹುದಾಗಿದೆ.

ಎಷ್ಟೋ ಡೋಸ್ ಲಸಿಕೆ ಪಡೆಯಬೇಕು?

ಎರಡು ಡೋಸ್‌ ಲಸಿಕೆ ಇರುತ್ತದೆ. 28 ದಿನಗಳ ಅಂತರದಲ್ಲಿ ಈ ಲಸಿಕೆ ತೆಗದುಕೊಳ್ಳಬೇಕು.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಯಾವಾಗ ಉತ್ಪತ್ತಿಯಾಗುತ್ತದೆ?

ಎರಡನೇ ಡೋಸ್‌ ಪಡೆದ ಎರಡು ವಾರಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಇದರ ಅಡ್ಡ ಪರಿಣಾಮಗಳೇನು?

ಇದರ ಅಡ್ಡ ಪರಿಣಾಮಗಳೇನು?

ಎಲ್ಲಾ ಲಸಿಕೆಗಳಲ್ಲೂ ಸ್ವಲ್ಪ ಅಡ್ಡಪರಿಣಾಮಗಳು ಇದ್ದೇ ಇರುತ್ತದೆ. ಈ ಲಸಿಕೆ ತೆಗೆದುಕೊಂಡಾಗ ಸಣ್ಣ ಜ್ವರ, ನೋವು, ಮೈಕೈ ನೀವು ಬರುವ ಸಾಧ್ಯತೆ ಇದೆ.

ಅನೇಕ ಕೊರೊನಾ ಲಸಿಕೆಗಳಲ್ಲಿ ಹೇಗೆ ಒಂದು ಅಥವಾ ಅಧಿಕ್ಕಿಂತ ಹೆಚ್ಚಿನ ಲಸಿಕೆಯನ್ನು ಆಯ್ಕೆ ಮಾಡಲಾಗುವುದು?

ಲಸಿಕೆ ಕಂಡು ಹಿಡಿದ ಬಳಿಕ ಅದರ ಪರಿಣಾಮ ಹಾಗೂ ಅಡ್ಡ ಪರಿಣಾಮಗಳ ಕುರಿತು ಸರಿಯಾದ ಪರೀಕ್ಷೆ ಮಾಡಲಾಗುವುದು. ಡ್ರಗ್ ನಿಯಂತ್ರಕ CDSCO ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ ನಂತರ ಲೈಸೆನ್ಸ್ ನೀಡಲಾಗುವುದು.

ಲಸಿಕೆ ತೆಗೆದುಕೊಳ್ಳುವಾಗ ಒಂದೇ ಕಂಪನಿಯ ಡೋಸ್‌ಗಳನ್ನು ಮಾತ್ರ ತೆಗೆದುಕೊಳ್ಳಬೇಕು.

 ನಾನು ಲಸಿಕೆ ಪಡೆದುಕೊಳ್ಳಲು ಅರ್ಹ ಎಂಬುವುದು ತಿಳಿಯುವುದು ಹೇಗೆ?

ನಾನು ಲಸಿಕೆ ಪಡೆದುಕೊಳ್ಳಲು ಅರ್ಹ ಎಂಬುವುದು ತಿಳಿಯುವುದು ಹೇಗೆ?

ಈಗ ಮೊದಲಿಗೆ ಲಸಿಕೆಯನ್ನು ತುರ್ತು ಔಷಧಿಯಾಗಿ ಬಳಸುತ್ತಿರುವುದರಿಂದ ಮೊದಲಿಗೆ ಆರೋಗ್ಯಕಾರ್ಯಕರ್ತರಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಆರೋಗ್ಯ ಇಲಾಖೆಗೆ ವ್ಯಕ್ತಿಯ ರಿಜಿಸ್ಟರ್ ಮೊಬೈಲ್‌ಗೆ ಸಂದೇಶ ಬರುತ್ತದೆ, ಸಮಯವೂ ತಿಳಿಸಿರುತ್ತಾರೆ. ಅದರಂತೆ ಬಂದು ಲಸಿಕೆಯನ್ನು ಪಡೆದುಕೊಳ್ಳಬೇಕು.

ರಿಜಿಸ್ಟರ್ ಮಾಡಿಸದೆಯೇ ಲಸಿಕೆ ಸಿಗುವುದೇ?

ಇಲ್ಲ, ರಿಜಿಸ್ಟರ್ ಮಾಡಿಸಿಕೊಂಡವರಿಗೆ ಮಾತ್ರ ಔಷಧ ಲಭಿಸುವುದು ಹಾಗೂ ಇದೇ ಇದರ ಸರಿಯಾದ ರೀತಿ ಕೂಡ ಹೌದು.

 ರಿಜಿಸ್ಟ್ರೇಷನ್‌ ಏನೆಲ್ಲಾ ಡಾಕ್ಯೂಮೆಂಟ್ (ದಾಖಲೆ) ಬೇಕು?

ರಿಜಿಸ್ಟ್ರೇಷನ್‌ ಏನೆಲ್ಲಾ ಡಾಕ್ಯೂಮೆಂಟ್ (ದಾಖಲೆ) ಬೇಕು?

ಪೋಟೋ ಜೊತೆಗೆ ಡ್ರೈವಿಂಗ್ ಲೈಸೆನ್ಸ್, ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಪ್ಯಾನ್ ಕಾರ್ಡ್, ಎಂಪಿ, ಎಂಎಲ್ಎ, ಎಂಎಲ್‌ಸಿಯಿಂದ ಪಡೆದಂತಹ ಅಫೀಶಿಯಲ್ ಐಡಿ ಕಾರ್ಡ್, ಬ್ಯಾಂಕ್‌/ಪೋಸ್ಟ್ ಆಫೀಸ್‌ನ ಪಾಸ್‌ಬುಕ್, ಪಾಸ್‌ಪೋರ್ಟ್, ಪಿಂಚಣಿ ದಾಖಲೆಗಳು, ವೋಟರ್ ಐಡಿ, ಸರ್ಕಾರಿ ಉದ್ಯೋಗದಲ್ಲಿ ಇದ್ದರೆ ಐಡಿ ಕಾರ್ಡ್.

ಫೋಟೋ ಐಡಿ ಇಲ್ಲದಿದ್ದರೆ ರಿಜಿಸ್ಟ್ರೇಷನ್ ಮಾಡಬಹುದೇ?

ಇಲ್ಲ, ಲಸಿಕೆ ಪಡೆದ ಬಳಿಕ ಇದರ ಕುರಿತ ಹೆಚ್ಚಿನ ಮಾಹಿತಿಯ ದಾಖಲೆ ಸಂಗ್ರಹಿಸುತ್ತದೆ, ಈ ಕಾರಣಕ್ಕಾಗಿ ರಿಜಿಸ್ಟ್ರೇಷನ್ ಮಾಡಿಸಲು ಫೋಟೋ ಐಡಿ ಬೇಕೇ ಬೇಕು.

 ಲಸಿಕೆ ಪಡೆಯುವ ದಿನಾಂಕ ತಿಳಿಯುವುದು ಹೇಗೆ?

ಲಸಿಕೆ ಪಡೆಯುವ ದಿನಾಂಕ ತಿಳಿಯುವುದು ಹೇಗೆ?

ರಿಜಿಸ್ಟರ್ ಮೊಬೈಲ್‌ಗೆ ಮೆಸೇಜ್ ಬರುತ್ತದೆ.

ಲಸಿಕೆ ಬಳಿಕ ಅಪ್‌ಡೇಟ್‌ ನೀಡಲಾಗುವುದೇ?

ಹೌದು, QR-code ಮೂಲಕ ಸರ್ಟಿಫಿಕೇಟ್ ಕೂಡ ನೀಡಲಾಗುವುದು.

ಸೋಂಕು ಇದ್ದಾಗ ಕೊರೊನಾ ಲಸಿಕೆ ಪಡೆಯಬಹುದೇ?

ಯಾವುದೇ ರೋಗ ಲಕ್ಷಣಗಳು ಇದ್ದಾಗ ಈ ಲಸಿಕೆ ಪಡೆದರೆ ಅದು ಹರಡುವ ಸಾಧ್ಯತೆ ಹೆಚ್ಚು, ಅಲ್ಲದೆ ಅಂಥ ಪರಿಸ್ಥಿತಿಯಲ್ಲಿ ನಿಡಬಹುದೇ ಎಂಬುವುದು ಕೂಡ ಈಗ ಗೊತ್ತಿಲ್ಲ, ಆದ್ದರಿಂದ ರೋಗ ಲಕ್ಷಣ ಕಡಿಮೆಯಾದ 14 ದಿನಗಳ ಬಳಿಕ ತೆಗೆದುಕೊಳ್ಳುವುದು ಒಳ್ಳೆಯದು.

 ಕೋವಿಡ್‌-19ನಿಂದ ಗುಣಮುಖರಾದವರು ಈ ಔಷಧ ತೆಗೆದುಕೊಳ್ಳಬೇಕೆ?

ಕೋವಿಡ್‌-19ನಿಂದ ಗುಣಮುಖರಾದವರು ಈ ಔಷಧ ತೆಗೆದುಕೊಳ್ಳಬೇಕೆ?

ಹೌದು, ಈ ಲಸಿಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಪ್ರಯೋಜನಕಾರಿಯಾಗಿದೆ.

ಮಧುಮೇಹ, ಕ್ಯಾನ್ಸರ್, ಬಿಪಿ ಮುಂತಾದ ಕಾಯಿಲೆ ಇರುವವರು ಲಸಿಕೆ ತೆಗೆದುಕೊಳ್ಳಬಹುದೇ?

ಹೌದು, ಇಂಥ ವ್ಯಕ್ತಿಗಳಿಗೆ ಈ ಲಸಿಕೆ ತುಂಬಾನೇ ಮುಖ್ಯವಾಗಿದೆ, ಏಕೆಂದರೆ ಇಂಥ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊರೊನಾ ಬರುವ ಸಾಧ್ಯತೆ ಹೆಚ್ಚು.

ಲಸಿಕೆ ಪಡೆಯುವಾಗ ಏನಾದರೂ ಮುನ್ನೆಚ್ಚರಿಕೆವಹಿಸಬೇಕೆ?

ಲಸಿಕೆ ಪಡೆದ ಬಳಿಕ ಅರ್ಧ ಗಂಟೆ ಆಸ್ಪತ್ರೆಯಲ್ಲಿಯೇ ಇರಬೇಕು, ಒಂದು ವೇಳೆ ಏನಾದರೂ ಅಸ್ವಸ್ಥ ಕಂಡು ಬಂದರೆ ಆರೈಕೆ ಮಾಡಲಾಗುವುದು.

ಈ ಲಸಿಕೆ ಸುರಕ್ಷತೆವೇ?

ಈ ಲಸಿಕೆ ಸುರಕ್ಷತೆವೇ?

ಈ ಲಸಿಕೆಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯಿಂದ ಅನುಮೋದನೆ ಸಿಕ್ಕ ಬಳಿಕವಷ್ಟೇ ನೀಡುತ್ತಿದ್ದು ಇದು ಸುರಕ್ಷಿತವಾಗಿದೆ.

ಭಾರತದಲ್ಲಿ ಲಭ್ಯವಿರುವ ಲಸಿಕೆ, ಇತರ ದೇಶಗಳಲ್ಲಿ ಲಭ್ಯವಿರುವ ಲಸಿಕೆಯಷ್ಟೇ ಪರಿಣಾಮಕಾರಿಯೇ?

ಹೌದು, ಇತರ ವಿದೇಶ ಕಂಫನಿಗಳಲ್ಲಿ ಉತ್ಪಾದನೆಯಾದ ಲಸಿಕೆಯಷ್ಟೇ ಇದು ಕೂಡ ಪರಿಣಾಮಕಾರಿಯಾಗಿದೆ.

English summary

COVID 19 Vaccine in India: Registration, Eligibility, Schedule and All your Covid vaccine questions answered

Here is COVID 19 Vaccine in India: Registration, Eligibility, Schedule and All your Covid vaccine questions answered, have a look.
X