For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಲಸಿಕೆ: ಕೋವಿಡ್‌ಶೀಲ್ಡ್, ಕೊವಾಕ್ಸಿನ್ ಅಡ್ಡಪರಿಣಾಮಗಳು

|

ಕೊರೊನಾ ಬಂದಾಗಿನಿಂದ ಈ ಮಹಾಮಾರಿಗೆ ಲಸಿಕೆ ಯಾವಾಗ ಬರುತ್ತದೆ? ಎಂಬುವುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿತ್ತು. 2020ರಲ್ಲಿ ಅಬ್ಬರಿಸಿದ ಕೊರೊನಾಗೆ ದಿಗ್ಬಂಧನ ಹಾಕಲು 2021ರಲ್ಲಿ ಲಸಿಕೆ ಸಿಕ್ಕಾಗಿದೆ.

ಭಾರತದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ಹಾಕಲಾಗುತ್ತಿದ್ದು ಇದೀಗ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಕಗೆ ಈ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಕೋವಿಡ್‌ ಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ತೆಗೆದುಕೊಂಡ 14 ದಿನಗಳ ಅಂತರದಲ್ಲಿ ಮತ್ತೊಂದು ಡೋಸ್‌ ಲಸಿಕೆ ತೆಗೆದುಕೊಳ್ಳಬೇಕು.

ಕೊರೊನಾ ಲಸಿಕೆಯನ್ನು ನೀಡುವಾಗ ಸರ್ಕಾರ ಎಲವೊಂದು ಮುನ್ನೆಚ್ಚರಿಕೆವಹಿಸಿದ್ದು, ಜೊತೆಗೆ ಲಸಿಕೆ ಕುರಿತ ಮಾಹಿತಿಯ ಕರಪತ್ರವನ್ನು ನೀಡುತ್ತಿದೆ.

ಕೋವಿಡ್‌ ಶೀಲ್ಡ್ ಹಾಗೂ ಕೊವಾಕ್ಸಿನ್ ಎರಡೂ ಕೊರೊನಾಗೆ ಸಂಬಂಧಿಸಿದ ಲಸಿಕೆಯಾದರೂ ಕೂಡ ಕೋವಿಡ್ ಶೀಲ್ಡ್ ತೆಗೆದವರು ಕೊವಾಕ್ಸಿನ್ ತೆಗೆದುಕೊಳ್ಳುವಂತಿಲ್ಲ, ಹಾಗೆಯೇ ಕೊವಾಕ್ಸಿನ್ ತೆಗೆದುಕೊಂಡವರು ಕೋವಿಡ್‌ ಶೀಲ್ಡ್ ತೆಗೆದುಕೊಳ್ಳುವಂತಿಲ್ಲ. ಯಾವ ಲಸಿಕೆ ತೆಗೆದುಕೊಂಡಿದ್ದಾರೂ ಅದೇ ಲಸಿಕೆಯ ಡೋಸ್ ತೆಗೆದುಕೊಳ್ಳಬೇಕು.

ಕೊರೊನಾ ಲಸಿಕೆ ಕೊರೊನಾವನ್ನು ತಡೆಗಟ್ಟಲು ಪರಿಣಾಮಕಾರಿಯಾಗಿದ್ದು ಈ ಲಸಿಕೆ ತೆಗೆದುಕೊಂಡರೆ ಕೆಲವೊಂದು ಅಡ್ಡಪರಿಣಾಮಗಳೂ ಇವೆ.

ನಾವಿಲ್ಲಿ ಕೋವಿಡ್ ಶೀಲ್ಡ್ ಹಾಗೂ ಕೊವಾಕ್ಸಿನ್ ತೆಗೆದುಕೊಂಡರೆ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಕೋವಿಡ್‌ಶೀಲ್ಡ್ ಅಡ್ಡ ಪರಿಣಾಮ

ಕೋವಿಡ್‌ಶೀಲ್ಡ್ ಅಡ್ಡ ಪರಿಣಾಮ

ಕೋವಿಡ್‌ ಶೀಲ್ಡ್ ಲಸಿಕೆ ಪಡೆದರೆ ಕೆಲವರಲ್ಲಿ ತಲೆನೋವು, ತಲೆಸುತ್ತು, ಸ್ನಾಯುಗಳಲ್ಲಿ ನೋವು, ಚುಚ್ಚಿದ ಭಾಗದಲ್ಲಿ ಊತ ಮತ್ತು ನೋವು, ವಾಂತಿ ಕಂಡು ಬರುವುದು. ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಇಂಥ ಲಕ್ಷಣಗಳು ಕಂಡು ಬಂದಾಗ ಪ್ಯಾರಾಸಿಟಮೋಲ್ ನೀಡಲಾಗುವುದು. ಅಪರೂಪಕ್ಕೆ demyelinating (ಮೆದುಳಿನ ನರಕ್ಕೆ ಹಾನಿಯಾಗುವುದು) ಉಂಟಾಗುವುದು. ಇದು ಅಪಾಯಕಾರಿಯಾದ ಅಡ್ಡಪರಿಣಾಮ.

ಕೊವಾಕ್ಸಿನ್ ಅಡ್ಡಪರಿಣಾಮಗಳು

ಕೊವಾಕ್ಸಿನ್ ಅಡ್ಡಪರಿಣಾಮಗಳು

ಕೊವಾಕ್ಸಿನ್ ತೆಗೆದುಕೊಂಡ ಕೆಲವರಲ್ಲಿ ಚುಚ್ಚಿದ ಜಾಗದಲ್ಲಿ ನೋವು, ತಲೆನೋವು, ತಲೆಸುತ್ತು, ಜ್ವರ, ಮೈಕೈ ನೋವು, ಕಿಬ್ಬೊಟ್ಟೆ ನೋವು, ವಾಂತಿ, ಸುಸ್ತು, ಬೆವರುವುದು, ಚಳಿಯಾಗುವುದು, ಕೆಮ್ಮು, ಲಸಿಕೆ ಹಾಕಿದ ಜಾಗದಲ್ಲಿ ಊತ ಇವೆಲ್ಲಾ ಕಂಡು ಬರುವುದು.

ಯಾರಿಗೆ ನೀಡಬಾರದು

ಯಾರಿಗೆ ನೀಡಬಾರದು

ಅನೇಕ ಕಾಯಿಲೆಯಿದ್ದು, ಜೊತೆಗೆ ಕೊರೊನಾ ಸೋಂಕು ಇದ್ದರೆ ಅಂಥವರಿಗೆ ಲಸಿಕೆ ನೀಡಲಾಗುವುದಿಲ್ಲ, ಅಂಥವರಿಗೆ ಪ್ಲಾಸ್ಮ ಚಿಕಿತ್ಸೆ ನೀಡಲಾಗುವುದು. ನರ ಸಂಬಂಧಿ ಸಮಸ್ಯೆ, ಕಣ್ಣಿನ ಸಮಸ್ಯೆ, ಹೃದಯ ಸಮಸ್ಯೆ, ಕ್ಯಾನ್ಸರ್ ಈ ರೋಗಿಗಳಿಗೆ ಕೊರೊನಾ ಲಸಿಕೆ ನೀಡಬಹುದು.

ಭಾರತದಲ್ಲಿ ಈಗ ಕೊರೊನಾ ಲಸಿಕೆ ಯಾರಿಗೆ ನೀಡುತಿಲ್ಲ?

ಭಾರತದಲ್ಲಿ ಈಗ ಕೊರೊನಾ ಲಸಿಕೆ ಯಾರಿಗೆ ನೀಡುತಿಲ್ಲ?

ಭಾರತದಲ್ಲಿ ಕೆಲವೊಂದು ವರ್ಗಕ್ಕೆ ಕೊರೊನಾ ಲಸಿಕೆ ನೀಡುತ್ತಿಲ್ಲ, ಅವರೆಂದರೆ ಎದೆ ಹಾಲುಣಿಸುವ ತಾಯಂದಿರು, ಗರ್ಭಿಣಿಯರು, ಗರ್ಭ ನಿರೀಕ್ಷೆಯಲ್ಲಿರುವವರು, 18 ವರ್ಷ ಕೆಳಗಿನವರಿಗೆ ಕೋವಿಡ್‌ಶೀಲ್ಡ್ ಹಾಗೂ ಕೊವಾಕ್ಸಿನ್ ಎರಡೂ ಲಸಿಕೆ ನೀಡುತ್ತಿಲ್ಲ.

English summary

COVID-19 Vaccination: Side-Effects,Contraindications Of Covaxin And Covishield in Kannada

COVID-19 vaccination: Side-effects, contraindications of Covaxin and Covishield, read on...
Story first published: Monday, January 18, 2021, 15:10 [IST]
X
Desktop Bottom Promotion