Just In
Don't Miss
- News
ಮಧ್ಯ ಪ್ರಾಚ್ಯದಲ್ಲಿ ಮಹಾಯುದ್ಧ! ಇರಾನ್ ಅಣುಸ್ಥಾವರದ ಮೇಲೆ ಅಟ್ಯಾಕ್!
- Finance
ಏಪ್ರಿಲ್ 13ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Automobiles
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
- Sports
ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್!
- Movies
ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಿರಿಯ ನಾಗರಿಕರಿಗೆ ಕೋವಿಡ್ 19 ಲಸಿಕೆ: ನೋಂದಣಿ ಹೇಗೆ?
ಭಾರತವು ಕೊರೊನಾವೈರಸ್ ವಿರುದ್ಧ ಹೇಗೆ ಸಮರ್ಥವಾಗಿ ಹೋರಾಡುತ್ತಿದೆ ಎಂಬುವುದರ ಬಗ್ಗೆ ವಿಶ್ವವೇ ಹೊಗಳುತ್ತಿದೆ. ಅಮೆರಿಕದಂಥ ದೈತ್ಯ ದೇಹ ಕೊರೊನಾದ ಎದುರು ಮಂಡಿಯೂರಿದಾಗ ಭಾರತ ಮಾತ್ರ ಹೆಚ್ಚಿನ ಹಾನಿ ಸಂಭವಿಸದಂತೆ ಸಮರ್ಥವಾಗಿ ನಿಭಾಯಿಸಿದ್ದು ಮಾತ್ರವಲ್ಲ, ಲಸಿಕೆಯನ್ನು ಕೂಡ ಕಂಡು ಹಿಡಿಯಿತು.
ಭಾರತದಲ್ಲಿ ಕೊರೊನಾ ತಡೆಗಟ್ಟಲು ಕೊವಾಕ್ಸಿನ್ ಹಾಗೂ ಕೋವಿಡ್ ಶೀಲ್ಡ್ ಲಸಿಕೆ ನೀಡುತ್ತಿದ್ದು ಮೊದಲಿಗೆ ಕೊರೊನಾ ವಾರಿಯರ್ಸ್‌ಗೆ ನೀಡಲಾಯಿತು. ಇದಕ್ಕೆ ಎರಡನೇ ಹಂತದಲ್ಲಿ ಲಸಿಕೆ, ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದು ಅದಕ್ಕಾಗಿ ನೋಂದಣಿ ಮಾರ್ಚ್ 1ರಿಂದ ಶುರುವಾಗಿದೆ. ಕೋವಿಡ್ 19 ಲಸಿಕೆ ಪಡೆಯಲು ಎಲ್ಲಿ ನೋಂದಣಿ ಮಾಡಿಸಬೇಕು, ಯಾರು ಮಾಡಿಸಬೇಕು ಎಂಬುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಎರಡನೇ ಹಂತದಲ್ಲಿ ನೀಡಲಾಗುತ್ತಿರುವ ಕೋವಿಡ್ 19 ಲಸಿಕೆಗೆ ಯಾರು ಅರ್ಹರು?
60 ವರ್ಷ ಮೇಲ್ಪಟ್ಟವರು ಕೋವಿಡ್ 19 ಲಸಿಕೆ ಪಡೆಯಲು ಅರ್ಹರು. ಇನ್ನು ಇತರ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟವರು ಈ ಲಸಿಕೆಗೆ ನೋಂದಣಿ ಮಾಡಬಹುದಾಗಿದೆ.

ಎಲ್ಲಿ ನೋಂದಣಿ ಮಾಡಬೇಕು?
- Co-Win app, ಆರೋಗ್ಯ ಸೇತು app ಅಥವಾ cowin.gov.in ಸೈಟ್‌ಗೆ ಲಾಗಿನ್ ಆಗಬೇಕು.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ನೀಡಬೇಕು.
- ನಿಮ್ಮ ಅಕೌಂಟ್ ಕ್ರಿಯೇಟ್ ಆದಾಗ OTP ಬರುತ್ತದೆ.
- ನಂತರ ನಿಮ್ಮ ಹೆಸರು, ವಯಸ್ಸು, ಲಿಂಗ ನಮೂದಿಸಿ, ನಂತರ ಗುರುತಿನ ದಾಖಲೆ ನೀಡಿ.
- 45 ವರ್ಷ ಮೇಲ್ಪಟ್ಟವರಾದರೆ ವೈದ್ಯರು ನಿಮ್ಮ ಅನಾರೋಗ್ಯದ ಕುರಿತು ನೀಡಿರುವ ಸರ್ಟಿಫಿಕೇಟ್ ಫ್ರೂಫ್ ಆಗಿ ನೀಡಬೇಕು.
- ನಂತರ ದಿನಾಂಕ ಹಾಗೂ ಸೆಂಟರ್ (ಕೇಂದ್ರ) ಆಯ್ಕೆ ಮಾಡಿ.
- ಒಂದು ಮೊಬೈಲ್ ಸಂಖ್ಯೆಯಿಂದ 4 ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು.
ಇನ್ನು ಟೆಕ್ ಬಗ್ಗೆ ಅಷ್ಟು ಅರಿವು ಇಲ್ಲದವರು ಏನು ಮಾಡಬಹುದು?
ಅವರು ಸಮೀಪದ ಸೇವಾ ಕೇಂದ್ರಕ್ಕೆ ಹೋಗಿ ರಿಜಿಸ್ಟರ್ ಮಾಡಬಹುದು.
ಅಲ್ಲದೆ 1507 ಕಾಲ್ ಸೆಂಟರ್ ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಲಭ್ಯ
ಈ ಲಸಿಕೆ ಪಡೆಯಲು ಯಾವುದೇ ದುಡ್ಡು ಕೊಡಬೇಕಾಗಿಲ್ಲ. ಇನ್ನು ಖಾಸಿಗೆ ಆಸ್ಪ್ರೆಯಲ್ಲಾದರೆ ರೂ. 150 ಲಸಿಕೆಗೆ , ರೂ.100 ಸರ್ವೀಸ್ ಚಾರ್ಜ್ ನೀಡಬೇಕಾಗುವುದು.

ನಿಮಗೆ ಬೇಕಾದ ಆರೋಗ್ಯ ಕೇಂದ್ರ ಆಯ್ಕೆ ಮಾಡುವ ಸೌಲಭ್ಯ
ನೀವು ಲಸಿಕೆಗೆ ಬುಕ್ ಮಾಡುವಾಗ ಅದರಲ್ಲಿ ಯಾವ ಆರೋಗ್ಯ ಕೇಂದ್ರದಲ್ಲಿ ಪಡೆದುಕೊಳ್ಳುತ್ತೀರಿ ಎಂಬ ಆಯ್ಕೆ ಇರುತ್ತದೆ. ಇದರಲ್ಲಿ ನೀವು ಬೇಕಾದರೆ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಆಯ್ಕೆ ಮಾಡಬಹುದು.

ಬುಕ್ ಮಾಡಲು ಸಹಾಯಕರೂ ಇದ್ದಾರೆ
ಹೌದು, ನಿಮಗೆ ಮೊಬೈಲ್‌ನಲ್ಲಿ ಬುಕ್ ಮಾಡುವುದು ಹೇಗೆ ಎಂದು ತಿಳಿಯದೇ ಹೋದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಐಡಿ ಫ್ರೂಫ್ ಜೊತೆ ಹೋಗಿ, ಅವರು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತಾರೆ.

ಬೇರೆ ರಾಜ್ಯದಲ್ಲಿ ಲಸಿಕೆ ಪಡೆಯಬಹುದೇ?
ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿದ್ದರೆ ಅಲ್ಲಿಯೂ ಪಡೆದುಕೊಳ್ಳಬಹುದಾಗಿದೆ.

ಬೇರೆ ಆರೋಗ್ಯ ಸಮಸ್ಯೆಯಿದ್ದರೆ ಅದರ ಫ್ರೂಫ್ ನೀಡಬೇಕು
ಎರಡನೇ ಹಂತದಲ್ಲಿ 45 ವರ್ಷದ ಮೇಲ್ಪಟ್ಟವರು ಕೋವಿಡ್ 19 ಲಸಿಕೆ ಪಡೆಯಲು ಅನಾರೋಗ್ಯ ಸಮಸ್ಯೆಯ ಕುರಿತು ನಿಮ್ಮ ವೈದ್ಯರು ನೀಡಿರುವ ಸರ್ಟಿಫಿಕೇಟ್ ನೀಡಬೇಕು.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ನೀವು ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿದಾಗ OTP ಬರುತ್ತದೆ, ಆಗ ನಿಮ್ಮ ಅಕೌಂಟ್ ಕ್ರಿಯೇಟ್ ಆಗುತ್ತದೆ, ನಿಮ್ಮ ಮನೆಯ 60 ವರ್ಷ ಮೇಲ್ಪಟ್ಟ ಸದಸ್ಯರ ಅಕೌಂಟ್ ಕೂಡ ಕ್ರಿಯೇಟ್ ಮಾಡಬಹುದು.