Just In
Don't Miss
- News
ಮಧ್ಯ ಪ್ರಾಚ್ಯದಲ್ಲಿ ಮಹಾಯುದ್ಧ! ಇರಾನ್ ಅಣುಸ್ಥಾವರದ ಮೇಲೆ ಅಟ್ಯಾಕ್!
- Finance
ಏಪ್ರಿಲ್ 13ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Automobiles
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
- Sports
ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್!
- Movies
ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗಿಸುವ ಕೋವಿಡ್ 19: ಲೈಂಗಿಕ ಆರೋಗ್ಯ ಮರಳಿ ಪಡೆಯುವುದು ಹೇಗೆ?
ಕೊರೊನಾವೈರಸ್ ಎಂಬ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನು ಹೇಗೆ ಕಾಡುತ್ತಿದೆ ಎಂಬುವುದು ಎಲ್ಲರಿಗೆ ತಿಳಿದೇ ಇದೆ. ಈ ವರ್ಷ ಕೊರೊನಾಗೆ ಲಸಿಕೆ ಬಂದಿರುವುದರಿಂದ ಸ್ವಲ್ಪ ನಿಟ್ಟಿಸಿರು ಬಿಡಬಹುದಾದರೂ ಕೊರೊನಾ ಲಸಿಕೆಯಿಂದ ಕೊರೊನಾವನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಿಲ್ಲ, ಇದರ ರೂಪಾಂತರ ಇದ್ದೇ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಕೊರೊನಾವೈರಸ್ ಸೋಂಕು ತಗುಲಿದವರ ಸಂಖ್ಯೆ 100 ಮಿಲಿಯನ್ ದಾಟಿದೆ. ಅದರಲ್ಲೂ ಕೊರೊನಾ ಸೋಂಕಿತರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಅಧಿಕ. ಕೊರೊನಾವೈರಸ್ ಸೋಂಕು ತಗಲಿದರೆ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ ಎಂದು ಅಧ್ಯಯನಗಳು ಹೇಳಿದ್ದೆವು, ಇದೀಗ ಬಂದ ಹೊಸ ಅಧ್ಯಯನ ವರದಿ ಕೊರೊನಾವೈರಸ್ ಸೋಂಕು ತಗುಲಿದರೆ ಪುರುಷರ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.
ಕೊರೊನಾವೈರಸ್ ತಗುಲಿದರೆ ಪುರುಷರಲ್ಲಿ ವೀರ್ಯಾಣುಗಳು ಕಡಿಮೆಯಾಗುವುದು, ಇದರಿಂದ ಪುರುಷ ಸಾಮರ್ಥ್ಯ ಕಡಿಮೆಯಾಗುವುದಾಗಿ ಜರ್ಮನಿಯ ಗೀಸೆನ್‌ನಲ್ಲಿರುವ ಲೈಬಿಗ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ತಿಳಿಸಿದೆ.
ಈ ಲೇಖನದಲ್ಲಿ ಕೊರೊನಾವೈರಸ್‌ನಿಂದ ಚೇತರಿಸಿಕೊಂಡಿರುವ ಪುರುಷರು ಕಡಿಮೆಯಾಗಿರುವ ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ಹೇಳಲಾಗಿದೆ ನೋಡಿ:

ವ್ಯಾಯಾಮ
ಪ್ರತಿದಿನ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ಇದು ಟೆಸ್ಟೋಸ್ಟಿರೋನ್ ಪ್ರಮಾಣ ಹೆಚ್ಚಿಸುತ್ತೆ. ವ್ಯಾಯಾಮ ಮಾಡುವ ಪುರುಷರಿಗೆ ಹೋಲಿಸಿದರೆ ವ್ಯಾಯಾಮ ಮಾಡದೇ ಇರುವ ಪುರುಷರ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆ ಇರುತ್ತದೆ ಎಂದು ಯುರೋಪಿನಿಯನ್ ಅಧ್ಯಯನ ವರದಿ (European Journal of Applied Psychology) ಹೇಳಿದೆ.

ವಿಟಮಿನ್ ಸಿ
ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಸಹಕಾರಿ, ಆದ್ದರಿಂದಲೇ ಕೊರೊನಾ ಸೋಂಕಿತರಿಗೆ ಹೆಚ್ಚು ವಿಟಮಿನ್ ಸಿ ಆಹಾರ ನೀಡಲಾಗುತ್ತದೆ. ಈ ವಿಟಮಿನ್ ಸಿ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ. ಆದ್ದರಿಂದ ಕೊರೊನಾದಿಂದ ಚೇತರಿಸಿದ ಬಳಿಕವೂ ವಿಟಮಿನ್ ಸಿ ಆಹಾರ ಹೆಚ್ಚಾಗಿ ಸೇವಿಸಿ.

ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ
ಮಾನಸಿಕ ಒತ್ತಡ ಆರೋಗ್ಯವಂತ ಪುರುಷನ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಮಾಡುವುದು, ಇನ್ನು ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗಿರುತ್ತದೆ, ಇನ್ನು ಹೆಚ್ಚು ಒತ್ತಡಕ್ಕೆ ಒಳಗಾಗುವುದರಿಂದ ಅಪಾಯ ಮತ್ತಷ್ಟು ಹೆಚ್ಚು. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ, ನಿಮ್ಮ ಪ್ರೀತಿಯ ವ್ಯಕ್ತಿಗಳ ಜೊತೆ ಸಮಯ ಕಳೆಯಿರಿ, ಸಂತೋಷವಾಗಿರಲು ಪ್ರಯತ್ನಿಸಿ.

ಮೆಂತೆ
ಮೆಂತೆ ಲೈಂಗಿಕ ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿ. ಅಂತರಾಷ್ಟ್ರೀಯ ಸ್ಪೋರ್ಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಪುರುಷರು ಮೆಂತೆ ತಿನ್ನುವುದರಿಂದ ಟೆಸ್ಟೋಸ್ಟಿರೋನ್ ಹೆಚ್ಚಾಗುತ್ತದೆ, ಇದರಿಂದ ಅವರ ಬಲ ಹೆಚ್ಚಾಗುತ್ತೆ ಎಂದು ಹೇಳಿದೆ. ಆದ್ದರಿಂದ ಸ್ವಲ್ಪ ಮೆಂತೆ ದಿನಾ ತಿನ್ನುವುದು ಒಳ್ಳೆಯದು.

ಅಶ್ವಗಂಧ
ಅಶ್ವಗಂಧ ಕೊರೊನಾದಿಂದ ಚೇತರಿಸಿಕೊಳ್ಳುವಲ್ಲಿ ಸಹಕಾರಿ ಎಂದು ಆಯುಷ್ ಇಲಾಖೆ ಕೂಡ ಹೇಳಿದೆ. ಅಶ್ವಗಂಧ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಪುರುಷರು ಇದನ್ನು ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ.

ಪುರುಷರ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಇತರ ಸಲಹೆ:
* ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ, ಇದು ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು ಮಾತ್ರವಲ್ಲ ನಿಮ್ಮ ಒಟ್ಟು ಆರೋಗ್ಯ ಕಾಪಾಡುತ್ತೆ.
* ಮದ್ಯಪಾನ ಮಿತಿಯಲ್ಲಿ ಮಾಡಿ.
* ಅಧಿಕ ಮೈತೂಕ ಕಡಿಮೆ ಮಾಡಿ.
* ದಿನದಲ್ಲಿ 8 ಗಂಟೆ ನಿದ್ದೆ ಮಾಡಿ.
* ಸೋಯಾ ಹಾಗೂ ವೀರ್ಯಾಣು ಗುಣಮಟ್ಟ ಕಡಿಮೆಮಾಡುವ ಆಹಾರವನ್ನು ದೂರಿವಿಡಿ.