For Quick Alerts
ALLOW NOTIFICATIONS  
For Daily Alerts

ಕೊರೊನಾ ಬಿಕ್ಕಟ್ಟಿನಿಂದ ಜೀವನಶೈಲಿಯಲ್ಲಿ ಆದ ಸವಾಲುಗಳನ್ನು ಎದುರಿಸುವುದು ಹೇಗೆ?

|

ಕೊರೊನಾ ಬಿಕ್ಕಟ್ಟಿನಿಂದಾಗಿ ಪ್ರತಿಯೊಬ್ಬರ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಜೀವನಶೈಲಿ ತುಂಬಾ ಪ್ರಭಾವ ಬೀರುತ್ತದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಜನರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.

ಕೊರೊನಾ ಬಿಕ್ಕಟ್ಟಿನಿಂದ ಜೀವನಶೈಲಿಯಲ್ಲಿ ಆದ ಸವಾಲುಗಳ ಬಗ್ಗೆ ನೇರ ಸಂದರ್ಶನ | Boldsky Kannada
Covid-19: How To Tackle Lifestyle Challenges By Dr Sharad Kulkarni

ಒಂದು ಕಡೆ ಕೊರೊನಾ ವೈರಸ್ ಭಯ, ಮತ್ತೊಂದು ಕಡೆ ವ್ಯಾಪಾರ ವ್ಯವಹಾರಗಳಿಲ್ಲ, ಜನರು ಕೆಲಸಗಳನ್ನು ಕಳೆದು ಕೊಳ್ಳುತ್ತಿದ್ದಾರೆ. ಇನ್ನು ಜಿಮ್‌, ಫಿಟ್ನೆಸ್‌ ಸೆಂಟರ್‌ಗೆ ಹೋಗ್ತಾ ಇದ್ದವರಿಗೆ ಹೋಗುವುದಕ್ಕೆ ಸಾಧ್ಯವಾಗ್ತಾ ಇಲ್ಲ. ಇವೆಲ್ಲಾ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತಿದೆ.

ಕೊರೊನಾ ಬಿಕ್ಕಟ್ಟಿನಿಂದಾಗಿ ಜೀವನಶೈಲಿಯಲ್ಲಿ ಎದುರಾದ ಸವಾಲುಗಳನ್ನು ಎದುರಿಸುವುದು ಹೇಗೆ? ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಏನು ಮಾಡಬೇಕು ಎಂಬೆಲ್ಲಾ ಉಪಯುಕ್ತ ಟಿಪ್ಸ್ ನೀಡಿದ್ದಾರೆ ಡಾ. ಶರದ್‌ ಕುಲಕರ್ಣಿ.

ಕನ್ನಡ ಬೋಲ್ಡ್‌ ಸ್ಕೈ ಫೇಸ್‌ಬುಕ್‌ ಲೈವ್‌ನಲ್ಲಿ ಜನರ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿರುವ ಅವರು ಈ ಸಮಯದಲ್ಲಿ ಆರೋಗ್ಯ ಕಾಪಾಡಲು ಏನು ಮಾಡಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀವು ಕಷಾಯ ಕುಡಿಯುತ್ತಿದ್ದರೆ ಎಷ್ಟು ಪ್ರಮಾಣದಲ್ಲಿ ಕುಡಿದರೆ ಒಳ್ಳೆಯದು ಎಂಬೆಲ್ಲಾ ಮಾಹಿತಿ ನೀಡಿದ್ದಾರೆ ನೋಡಿದ್ದಾರೆ ನೋಡಿ:

1. ಆರೋಗ್ಯಕ್ಕಾಗಿ ಮೊದಲನೇ ಟಿಪ್ಸ್-ಪ್ರಾಣಯಾಮ

1. ಆರೋಗ್ಯಕ್ಕಾಗಿ ಮೊದಲನೇ ಟಿಪ್ಸ್-ಪ್ರಾಣಯಾಮ

ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಾಣಯಾಮ ಮಹತ್ವದ ಪಾತ್ರವಹಿಸುತ್ತದೆ. ಇದು ತುಂಬಾ ಸರಳವಾದ ವ್ಯಾಯಾಮ ವಾಗಿದ್ದರೂ ಇದರಿಂದ ದೊರೆಯುವ ಪ್ರಯೋಜನ ಮಾತ್ರ ತುಂಬಾನೇ ಇದೆ. ಬೆಳಗ್ಗೆ ಎದ್ದು ಫ್ರೆಶ್‌ ಅಪ್‌ ಆದ ಮೇಲೆ ಒಂದು 10 ನಿಮಿಷ ಪ್ರಾಣಯಾಮ ಮಾಡಲು ಮೀಸಲಿಡುವುದು ಒಳ್ಳೆಯದು. ಇದನ್ನು ಪ್ರತಿನಿತ್ಯ ಮಾಡಬೇಕು. ಪ್ರಾಣಯಾಮದಲ್ಲಿ ನಾಡಿ ಶೋಧನಾ ಪ್ರಾಣಯಾಮ ತಪ್ಪದೆ ಮಾಡಿ.

ಒಂಟಿತನ ಕಾಡುತ್ತಿದೆಯೇ? ಭ್ರಮರಿ ಪ್ರಾಣಯಾಮ ಒಳ್ಳೆಯದು

ಕೆಲವರಿಗೆ ಈ ಲಾಕ್‌ಡೌನ್‌ನಿಂದಾಗಿ ಒಂಟಿತನ ಕಾಡುತ್ತಿರುತ್ತದೆ, ಇದರಿಂದ ಖಿನ್ನತೆ ಕೂಡ ಉಂಟಾಗುವುದು, ಇವುಗಳಿಂದ ಹೊರಬರಲು ಭ್ರಮರಿ ಪ್ರಾಣಯಾಮ ತುಂಬಾನೇ ಸಹಕಾರಿಯಾಗಿದೆ. ಇದನ್ನು ಮಾಡುವ ವಿಧಾನ ಸರಳವಾಗಿದೆ. ನಿಮ್ಮ ಎರಡು ತೋರು ಬೆರಳಿನಿಂದ ಕಿವಿಗಳನ್ನು ಮುಚ್ಚಿ, ಉಳಿದ ಬೆರಳುಗಳಿಂದ ಕಣ್ಣನ್ನು ಮೆಲ್ಲನೆ ಮುಚ್ಚಿ ಹಿಡಿದು ದೀರ್ಘವಾದ ಉಸಿರು ಎಳೆದು ನಿಧಾನಕ್ಕೆ ಬಿಡಿ. ಈ ರೀತಿ 4-5 ಬಾರಿ ಮಾಡಿದರೆ ಸಾಕು. ಇದು ನಿಮ್ಮ ಮನಸ್ಸಿನಲ್ಲಿರುವ ಚಿಂತೆ, ದುಗುಡ ಹೊರಹಾಕುವಲ್ಲಿ ತುಂಬಾನೇ ಸಹಕಾರಿ.

ಯೋಗಾಸನಗಳನ್ನು ಮಾಡಿ

ಅದರಲ್ಲೂ ಸರ್ವಾಂಗ ಆಸನ ತುಂಬಾ ಒಳ್ಳೆಯದು. ಬೆಳಗ್ಗೆ ಹಾಗೂ ಸಂಜೆ 2 ನಿಮಿಷ ಸರ್ವಾಂಗ ಆಸನ ಮಾಡುವುದು ತುಂಬಾನೇ ಒಳ್ಳೆಯದು. ಈ ಆಸನ ಮಾಡುವಾಗ ಮೊದಲಿಗೆ ಪರಿಣಿತರ ಸಲಹೆ ಬೇಕಾಗುತ್ತದೆ. ಇನ್ನು ಸೂರ್ಯ ನಮಸ್ಕಾರ ಅಭ್ಯಾಸ ಮಾಡುವುದು ಕೂಡ ಒಳ್ಳೆಯದೆ.

2. ವಿಟಮಿನ್ ಡಿ ಅವಶ್ಯಕ

2. ವಿಟಮಿನ್ ಡಿ ಅವಶ್ಯಕ

ಇನ್ನು ಆರೋಗ್ಯಕ್ಕೆ ವಿಟಮಿನ್ ಡಿ ಅವಶ್ಯಕ, ಇದು ಕಡಿಮೆಯಾದರೆ ಕಾಯಿಲೆಗಳು ಬರುತ್ತದೆ. ಆದ್ದರಿಂದ ಬಾಲ್ಕನಿ ಅಥವಾ ಟೆರೇಸ್‌ಗೆ ಹೋಗಿ ಸ್ವಲ್ಪ ಹೊತ್ತು ಬಿಸಿಲು ಕಾಯುವುದು ಒಳ್ಳೆಯದು.

3. ನಿದ್ದೆ ಕೂಡ ಅವಶ್ಯಕ

3. ನಿದ್ದೆ ಕೂಡ ಅವಶ್ಯಕ

ಲಾಕ್‌ಡೌನ್ ಬಳಿಕ ಕೆಲವರು ನಿದ್ದೆ ಸಮಯ ತುಂಬಾ ಬದಲಾಗಿದೆ. ದಿನದಲ್ಲಿ ಲ್ಯಾಪ್‌ ಟಾಪ್, ಮೊಬೈಲ್‌ ಬಳಸುವುದು ತುಂಬಾ ಅವಶ್ಯಕ. ತುಂಬಾ ತಡವಾಗಿ ಏಳುವುದು, ತುಂಬಾ ತಡವಾಗಿ ಮಲಗಲು ಹೋಗುವುದು ಇವೆಲ್ಲಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ದೆ ಸರಿಯಾದ ಸಮಯಕ್ಕೆ ಮಾಡಬೇಕು. ರಾತ್ರಿ 10-11 ಗಂಟೆ ಹೊತ್ತಿಗೆ ನಿದ್ದೆ ಮಾಡಬೇಕು, ಬೆಳಗ್ಗೆ 5-6 ಗಂಟೆಗೆ ನಿದ್ದೆ ಮಾಡಿ. ಇನ್ನು ಮಧ್ಯಾಹ್ನ ನಿದ್ದೆ ಮಾಡುವವರು ಆ ಅಭ್ಯಾಸ ಬಿಟ್ಟರೆ ಒಳ್ಳೆಯದು.

4. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಗಿಡ ಮೂಲಿಕೆ ಬಳಕೆ ಬಗ್ಗೆ ಟಿಪ್ಸ್

4. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಗಿಡ ಮೂಲಿಕೆ ಬಳಕೆ ಬಗ್ಗೆ ಟಿಪ್ಸ್

  • ದಿನ ನಿತ್ಯ ಆಹಾರದಲ್ಲಿ ಅರಿಶಿಣ ಬಳಸಿ
  • ಇನ್ನು 3-4 ತುಳಸಿ ಎಲೆ ಜಜ್ಜಿ, ಅದಕ್ಕೆ ಸ್ವಲ್ಪ ಶುಂಠಿ ಕೂಡ ಹಾಕಿ ಜಜ್ಜಿ, ಜೇನು ತುಪ್ಪ ಜೊತೆ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
  •  5. ಆಹಾರಕ್ರಮ

    5. ಆಹಾರಕ್ರಮ

    • ಸರಿಯಾದ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು, ಬೇರೆ-ಬೇರೆ ಸಮಯದಲ್ಲಿ ತಿನ್ನುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುವುದು. ಆಹಾರವನ್ನು ಸೇವಿಸುವಾಗ ಕೂಡ ಸಾವಧಾನವಾಗಿ ತಿನ್ನಬೇಕು. ಇದರಿಂದ ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ಸೇರುತ್ತದೆ.
    • ತುಂಬಾ ಉಪ್ಪು, ತುಂಬಾ ಖಾರ, ಸಿಹಿ ಪದಾರ್ಥ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥ ತಿನ್ನುವುದು ಕಡಿಮೆ ಮಾಡಬೇಕು.

English summary

Covid-19: How To Tackle Lifestyle Challenges Tips Dr Sharad Kulkarni

Here are how to tackle lifestyle challenges during covid 19, Read on,
X
Desktop Bottom Promotion