For Quick Alerts
ALLOW NOTIFICATIONS  
For Daily Alerts

ಕೊರೋನ ಸೋಂಕಿತರ ಮೇಲೆ ಸಂಶೋಧನೆ: ಆ್ಯಂಟಿ ಬಾಡಿ ಕುರಿತು ತಿಳಿದ ಬಂತು ಅಚ್ಚರಿಯ ಅಂಶ

|

ಕೊರೋನಾ ವೈರಸ್ ಸೋಂಕು ಪ್ರಾರಂಭವಾದ ಅಂದಿನಿಂದ ಇಂದಿನವರೆಗೆ ವಿಶ್ವದಾದ್ಯಂತ ಅದೆಷ್ಟು ಜನರು ತಮ್ಮ ಪ್ರಾಣವನ್ನು ಚೆಲ್ಲಿದ್ದಾರೆ ಮತ್ತು ಈಗಲೂ ಪ್ರಾಣ ಬಿಡುತ್ತಿದ್ದಾರೆ ಎಂಬುದರ ಅಂಕಿ ಅಂಶವನ್ನು ಒಮ್ಮೆ ನೋಡಿದರೆ ತಲೆ ತಿರುಗುತ್ತದೆ. ಇದರ ಪ್ರಮುಖ ಕಾರಣವನ್ನು ನೋಡುವುದಾದರೆ ಸೋಂಕಿತ ವ್ಯಕ್ತಿಗಳ ದೇಹದ ರೋಗ - ನಿರೋಧಕ ಶಕ್ತಿ ಲೆಕ್ಕಕ್ಕೆ ಬರುತ್ತದೆ.

ಕೆಲವರು ಹುಟ್ಟಿನಿಂದ ಮೇಲೆ ನೋಡಲು ಸಣ್ಣ ಇದ್ದರೂ ಒಳಗಿನಿಂದ ತುಂಬಾ ಸ್ಟ್ರಾಂಗ್ ಇರುತ್ತಾರೆ. ಅಂದರೆ ಅವರ ದೇಹದ ರೋಗ - ನಿರೋಧಕ ಶಕ್ತಿ ಅವರನ್ನು ಹಲವು ಬಗೆಯ ರೋಗ ರುಜಿನಗಳಿಂದ ಕಾಪಾಡುತ್ತದೆ. ಇನ್ನು ಕೆಲವರು ಮೇಲೆ ನೋಡಲು ದಷ್ಟಪುಷ್ಟವಾಗಿರುತ್ತಾರೆ. ಆದರೆ ಮನೆಯ ಹೊರಗಡೆ ಬೇರೆಡೆ ಎಲ್ಲಾದರೂ ಒಂದು ಲೋಟ ನೀರು ಕುಡಿದರೆ ನಾಲ್ಕೈದು ದಿನಗಳು ನೆಗಡಿ, ಕೆಮ್ಮು, ಶೀತ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಾರೆ.

ನಮಗೆ ಕಣ್ಣಿಗೆ ಕಾಣದ ನಮ್ಮ ದೇಹದ ರೋಗ - ನಿರೋಧಕ ಶಕ್ತಿಯ ನಿಜವಾದ ಪ್ರಭಾವವೇ ಇದು. ಕೇವಲ ಮೇಲೆ ವ್ಯಕ್ತಿಯ ದೇಹದ ಗಾತ್ರವನ್ನು ನೋಡಿ ಆಂತರಿಕವಾಗಿ ಆತ ಸದೃಢವಾಗಿದ್ದಾನೆ ಅಥವಾ ಇಲ್ಲ ಎಂದು ಹೇಳಲು ಬರುವುದಿಲ್ಲ.

ಪಕ್ಕದ ಕುತಂತ್ರಿ ದೇಶದ ಕಣ್ಣಿಗೆ ಕಾಣದ ಸೂಕ್ಷ್ಮಾಣು ಒಂದು ಇಂದು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ ಎಂದರೆ ಅದಕ್ಕೆ ಇದೇ ಮುಖ್ಯವಾದ ಕಾರಣ. ರೋಗ - ನಿರೋಧಕ ಶಕ್ತಿ ಎಂಬುದು ಮಕ್ಕಳಿಗೆ ಅಥವಾ ದೊಡ್ಡವರಿಗೆ ಕಡಿಮೆ ಅಥವಾ ಜಾಸ್ತಿ ಇರುತ್ತದೆ ಎಂದು ನಮಗೆ ನಾವೇ ಅಂದುಕೊಳ್ಳುವುದು ತುಂಬಾ ದೊಡ್ಡ ತಪ್ಪು.

ಏಕೆಂದರೆ ಇದುವರೆಗೂ ನಾವು ನೋಡಿದ ಹಲವು ಪ್ರಕರಣಗಳಲ್ಲಿ ಬಹಳಷ್ಟು ವಯಸ್ಸಾದ ಅಜ್ಜ - ಅಜ್ಜಿಯರು ಕರೋನಾ ವೈರಸ್ ಸೋಂಕಿನ ವಿರುದ್ಧ ಬೀಗುತ್ತಾ ಗೆದ್ದು ಬಂದಿದ್ದಾರೆ. ಅದೇ ರೀತಿ ಇನ್ನೂ ಮದುವೆಯಾಗದ ಬಿಸಿ ರಕ್ತದ ಯುವಕ ಯುವತಿಯರು ಸೋಂಕಿಗೆ ಬಲಿಯಾಗಿ ಪ್ರಾಣ ಬಿಟ್ಟಿದ್ದಾರೆ. ಹೀಗಿರಬೇಕಾದರೆ ಕರೋನ ವೈರಸ್ ಸೋಂಕಿನ ವಿಚಾರದ ಬಗ್ಗೆ ನಾವು ಇಂದು ಏನೇ ಮಾತಾಡಿದರೂ ಅದು ತಪ್ಪಾಗುತ್ತದೆ.

ಈಗ ಜಗತ್ತಿನಲ್ಲೆಡೆ ಕರೋನ ವೈರಸ್ ಸೋಂಕಿನ ಎರಡನೇ ಅಲೆಯ ಬಗ್ಗೆ ಮಾತು ಕೇಳಿ ಬರುತ್ತಿದೆ. ಒಂದು ಬಾರಿ ಸೋಂಕಿಗೆ ಗುರಿಯಾಗಿ ಹುಷಾರಾಗಿ ನೆಮ್ಮದಿಯಾಗಿ ಜೀವನ ಮಾಡುತ್ತಿರುವವರಿಗೆ ಮತ್ತೊಮ್ಮೆ ಕೊರೋನ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ವಿಶ್ವದ ಕೆಲವೊಂದು ಕಡೆ ಎರಡನೇ ಬಾರಿಗೆ ಕಾಣಿಸುತ್ತಿರುವ ಕೊರೊನಾ ವೈರಸ್ ಉಪಟಳಕ್ಕೆ ಹಿಂದಿಗಿಂತ ಬಹಳ ವೇಗವಾಗಿ ಸಾವುಗಳು ಸಂಭವಿಸುತ್ತಿವೆ ಎನ್ನುವುದು ಸತ್ಯವಾಗಿ ತೋರುತ್ತಿದೆ.

ಹಾಗಾದರೆ ಇದಕ್ಕೆಲ್ಲ ಕಾರಣಗಳು ಏನಿರಬಹುದು? ಕೆಲವರು ಹೇಳುತ್ತಾರೆ, ದೇಹದಲ್ಲಿ ಆಂಟಿ ಬಾಡಿಗಳು ಉತ್ಪತ್ತಿ ಆಗಿರುವ ಕಾರಣದಿಂದ ಇಂದು ಹಲವರು ಸೋಂಕಿನಿಂದ ಬಹಳ ಬೇಗನೆ ಚೇತರಿಕೆ ಕಾಣುತ್ತಿದ್ದಾರೆ ಎಂದು. ಆದರೆ ಇದು ಸತ್ಯವೇ ಎಂಬುದು ಇನ್ನಷ್ಟು ಸಂಶೋಧನೆಗಳ ಮೂಲಕ ತಿಳಿದು ಬರಬೇಕಾಗಿದೆ.

ವ್ಯಕ್ತಿಯ ದೇಹದಲ್ಲಿ ಸೋಂಕು ಉಂಟಾದ ಬಳಿಕ ತಯಾರಾಗುವ ಆಂಟಿ ಬಾಡಿ ಗಳ ಪ್ರಭಾವ ಮುಂಬರುವ ದಿನಗಳಲ್ಲಿ ಹೇಗಿರಲಿದೆ ಇದರಿಂದ ವ್ಯಕ್ತಿಯ ಜೀವಕ್ಕೆ ಎಷ್ಟರ ಮಟ್ಟಿಗೆ ರಕ್ಷಣೆ ಸಿಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೊರೊನಾ ಸೋಂಕಿನ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿ

ಕೊರೊನಾ ಸೋಂಕಿನ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿ

ಯಾವುದೇ ಒಬ್ಬ ವ್ಯಕ್ತಿಗೆ ಕರೋನ ವೈರಸ್ ಸೋಂಕು ತಗುಲಿದ ಬಳಿಕ ಆತನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಒಳ ಬಂದಂತಹ ಹೊಸದಾದ ಸೂಕ್ಷ್ಮ ರೋಗಾಣುಗಳ ವಿರುದ್ಧ ಆಂಟಿ ಬಾಡಿಗಳನ್ನು ಸ್ವತಹ ಸಿದ್ಧ ಪಡಿಸಿಕೊಳ್ಳುತ್ತದೆ. ಇದನ್ನು ವೈದ್ಯಲೋಕದಲ್ಲಿ ರೋಗ - ನಿರೋಧಕ ಶಕ್ತಿಯ ಪ್ರತಿರೋಧತೆ ಎಂದು ಕರೆಯುತ್ತಾರೆ. ಒಬ್ಬ ಸೋಂಕಿತ ವ್ಯಕ್ತಿಯಲ್ಲಿ ಹೀಗೆ ಉಂಟಾದ ರೋಗ - ನಿರೋಧಕ ವ್ಯವಸ್ಥೆಯ ಪ್ರತಿರೋಧ ಸುಮಾರು ಐದಾರು ತಿಂಗಳುಗಳ ಕಾಲ ಆತನ ದೇಹದಲ್ಲಿ ಉಳಿಯುತ್ತದೆ ಮತ್ತು ಆತನನ್ನು ಮತ್ತೊಮ್ಮೆ ಅದೇ ಬಗೆಯ ಸೋಂಕಿಗೆ ಒಳಗಾಗದಂತೆ ರಕ್ಷಣೆ ಮಾಡುತ್ತದೆ. ' ಜರ್ನಲ್ ಸೈನ್ಸ್ ' ಎಂಬ ಸಂಶೋಧನೆಯಲ್ಲಿ ಪ್ರಕಟವಾದ ವರದಿಯಲ್ಲಿ ಕೊರೋನಾ ವೈರಸ್ ವಿರುದ್ಧ ಮನುಷ್ಯನ ದೇಹದ ರೋಗ - ನಿರೋಧಕ ಶಕ್ತಿ ಎಷ್ಟು ಪ್ರಭಾವಶಾಲಿ ಎಂಬುದರ ಬಗ್ಗೆ ಅತ್ಯಂತ ವಿವರವಾಗಿ ಉಲ್ಲೇಖ ಮಾಡಲಾಗಿದೆ.

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ಇದಕ್ಕೆ ಸಂಬಂಧ ಪಟ್ಟಂತೆ ಇನ್ನೂ ಕೆಲವು ಅಧ್ಯಯನಗಳು ಹೇಳುವುದನ್ನು ನೋಡಿದರೆ ಕೆಲವು ವ್ಯಕ್ತಿಗಳ ದೇಹದಲ್ಲಿ ಆಂಟಿ ಬಾಡಿಗಳು ಬಹಳ ಬೇಗನೆ ನಶಿಸಿ ಹೋಗುತ್ತವೆ. ಏಕೆಂದರೆ ಅವರ ದೇಹದಲ್ಲಿ ಉತ್ಪತ್ತಿಯಾದ ಆಂಟಿ ಬಾಡಿಗಳು ಬಹಳ ದುರ್ಬಲವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಅವರ ದೇಹದಲ್ಲಿ ತಯಾರಾದ ಆಂಟಿ ಬಾಡಿಗಳು ಅವರನ್ನು ಕೊರೋನಾ ಸಾವಿನ ದವಡೆಯಿಂದ ದೀರ್ಘ ಕಾಲದವರೆಗೆ ಕಾಪಾಡುತ್ತವೆ ಎಂದು ಯಾವುದೇ ನಂಬಿಕೆಯಿಂದ ಹೇಳಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮಧ್ಯೆ ನಮ್ಮನ್ನು ಸೇರಿದಂತೆ ಅವರು ಜನರು ಇಂದಿಗೂ ಕೂಡ ತಮ್ಮ ದೇಹದಲ್ಲಿ ದುರ್ಬಲ ರೋಗ - ನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಕೆಲವರಿಗೆ ಅವರ ದೇಹದ ರೋಗ - ನಿರೋಧಕ ಶಕ್ತಿ ಹೇಗಿರುತ್ತದೆ ಎಂದರೆ ಕರೋನ ವೈರಸ್ ಮೇಲ್ಭಾಗದ ಪ್ರೋಟೀನ್ ಅಂಶ ದೇಹದಲ್ಲಿನ ಜೀವಕೋಶವನ್ನು ಸೇರುವ ಪ್ರಕ್ರಿಯೆಯನ್ನು ಕಂಡು ಹಿಡಿಯಲು ಕೂಡ ಸಾಧ್ಯವಾಗುವುದಿಲ್ಲ.

ರೋಗ - ನಿರೋಧಕ ಶಕ್ತಿ ಹೇಗೆ ಕೆಲಸ ಮಾಡುತ್ತೆ?

ರೋಗ - ನಿರೋಧಕ ಶಕ್ತಿ ಹೇಗೆ ಕೆಲಸ ಮಾಡುತ್ತೆ?

ಇನ್ನು ತಮ್ಮ ದೇಹದಲ್ಲಿ ಪ್ರಬಲವಾದ ರೋಗ - ನಿರೋಧಕ ಶಕ್ತಿಯನ್ನು ಹೊಂದಿದವರು ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಬಾಡಿ ಗಳನ್ನು ಕರೋನ ವೈರಸ್ ಸೋಂಕಿನ ವಿರುದ್ಧ ಹೋರಾಡಲು ಸ್ವಯಂ ಚಾಲಿತವಾಗಿ ಉತ್ಪತ್ತಿ ಮಾಡಿಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಒಂದು ವೇಳೆ ಕರೋನ ವೈರಸ್ ಸೋಂಕು ಮತ್ತೊಮ್ಮೆ ಕಂಡು ಬಂದರೆ ತಕ್ಷಣವೇ ರೋಗ- ನಿರೋಧಕ ಶಕ್ತಿಯಿಂದ ಉತ್ಪತ್ತಿಯಾದ ಆಂಟಿ ಬಾಡಿಗಳು ಕರೋನ ವೈರಸ್ ಸೂಕ್ಷ್ಮಾಣುಗಳು ವ್ಯಕ್ತಿಯ ದೇಹ ಸೇರಿದ ತಕ್ಷಣ ಮೇಲ್ಬಾಗದ ಪ್ರೋಟೀನ್ ಕಣಗಳನ್ನು ನಾಶ ಪಡಿಸಿ ಕರೋನ ವೈರಸ್ ಸೋಂಕು ಮತ್ತೊಮ್ಮೆ ಬರದಂತೆ ವ್ಯಕ್ತಿಯನ್ನು ಕಾಪಾಡುತ್ತವೆ.

 ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ಇನ್ನು ಕರೋನ ಸೋಂಕಿತರನ್ನು ಮುಂದಿಟ್ಟುಕೊಂಡು ಸಂಶೋಧನೆಗೆ ಮುಂದಾದ ವಿಜ್ಞಾನಿಗಳಿಗೆ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ ಸೋಂಕಿತ ವ್ಯಕ್ತಿಗಳಲ್ಲಿ ಮೊಟ್ಟ ಮೊದಲ ಬಾರಿಗೆ ಕಂಡು ಬಂದ ಆಂಟಿ ಬಾಡಿಗಳ ಪ್ರಮಾಣ ಅವರನ್ನು ಎರಡನೇ ಬಾರಿಗೆ ಪರೀಕ್ಷೆ ಮಾಡಿದಾಗ ಸಾಕಷ್ಟು ಕಡಿಮೆಯಾಗಿದ್ದವು ಮತ್ತು ಅದೇ ವ್ಯಕ್ತಿಯನ್ನು ಮೂರನೇ ಬಾರಿಗೆ ಕೆಲವು ದಿನಗಳ ನಂತರ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ತಮ್ಮ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ ಕಂಡಿದ್ದವು. ಕೊನೆಯ ಬಾರಿ ಪರೀಕ್ಷೆ ಮಾಡಿದ ಕಾಲಾವಧಿಯನ್ನು ನೋಡಿದರೆ ಅದಾಗಲೇ ವ್ಯಕ್ತಿಯು ಸೋಂಕಿಗೆ ಒಳಗಾಗಿ ಐದರಿಂದ ಆರು ತಿಂಗಳುಗಳು ಕಳೆದಿದ್ದವು.

ಇದರಿಂದ ವಿಜ್ಞಾನಿಗಳು ಕೊನೆಯಲ್ಲಿ ಬಿಡುಗಡೆ ಮಾಡಿದ ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿದ ವಿಚಾರ ಈ ರೀತಿ ಇತ್ತು. ಅದೇನೆಂದರೆ ಸೋಂಕಿತ ವ್ಯಕ್ತಿಗಳನ್ನು ದೀರ್ಘಾವಧಿಯ ಸಂಶೋಧನೆಗೆ ಒಳ ಪಡಿಸಿ ನೋಡಿದಾಗ ಅವರಲ್ಲಿ ಆಂಟಿ ಬಾಡಿಗಳು ಕ್ರಮೇಣವಾಗಿ ಕಡಿಮೆಯಾದ ಉದಾಹರಣೆಗಳು ಕಂಡು ಬಂದವು. ಮೊದಲ ಬಾರಿಗೆ ಆಗತಾನೆ ಸೋಂಕು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಆಸ್ಪತ್ರೆಗಳಲ್ಲಿ ಕೊಡುವ ಚಿಕಿತ್ಸೆ ಮತ್ತು ಮನೆಯಲ್ಲಿ ಮಾಡಿಕೊಳ್ಳುವ ದೇಹದ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವ ಪ್ರಕ್ರಿಯೆ ಆರಂಭದಲ್ಲಿ ಸೋಂಕಿತ ವ್ಯಕ್ತಿಯಲ್ಲಿ ಆಂಟಿ ಬಾಡಿಗಳ ಸಂಖ್ಯೆಯನ್ನು ಹೆಚ್ಚು ಮಾಡುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ಬಹಳ ಬೇಗನೆ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ದಿನ ಕಳೆದಂತೆ ಅಂದರೆ ಸೋಂಕು ಕಂಡು ಬಂದ ಸುಮಾರು ಎರಡು ಮೂರು ತಿಂಗಳ ನಂತರ ದೇಹದಲ್ಲಿ ಆಂಟಿ ಬಾಡಿಗಳ ಪ್ರಮಾಣ ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಸುಮಾರು ಐದಾರು ತಿಂಗಳು ತಲುಪುವ ಹೊತ್ತಿಗೆ ಸೋಂಕಿತ ವ್ಯಕ್ತಿಯಲ್ಲಿ ಆಂಟಿ ಬಾಡಿಗಳ ಸಂಖ್ಯೆ ಸಂಪೂರ್ಣವಾಗಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುತ್ತದೆ ಎಂದು ಹೇಳಬಹುದು. ಇಂತಹ ಸಂದರ್ಭದಲ್ಲಿ ಎರಡನೇ ಬಾರಿಗೆ ಸೋಂಕಿತ ವ್ಯಕ್ತಿಗೆ ಮತ್ತೊಮ್ಮೆ ಸೋಂಕು ಎದುರಾಗಬಹುದು.

ಕೊನೆಯದಾಗಿ

ಕೊನೆಯದಾಗಿ

ಆದರೆ ಈ ಮೇಲಿನ ಎಲ್ಲ ಅಂಶಗಳಿಂದ ಪ್ರಸ್ತುತ ಕರೋನ ವೈರಸ್ ಸೋಂಕಿನ ಬಗ್ಗೆ ಹಾಗೂ ದೇಹದಲ್ಲಿರುವ ಆಂಟಿ ಬಾಡಿಗಳ ಪ್ರತಿರೋಧತೆಯ ಬಗ್ಗೆ ಯಾವುದೇ ನಿರ್ಧಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದೊಂದು ಹೊಸ ಬಗೆಯ ವೈರಸ್ ಆಗಿರುವುದರಿಂದ ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ದಿನದಿಂದ ದಿನಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುವ ರೋಗ - ಲಕ್ಷಣಗಳು ಕರೋನ ವೈರಸ್ ನ ಹೊಸ ರೂಪವನ್ನು ಹುಟ್ಟು ಹಾಕಿದಂತೆ ತೋರುತ್ತಿದೆ. ಹಾಗಾಗಿ ಸಂಶೋಧಕರಿಗೆ ಈ ಬಗ್ಗೆ ಇನ್ನಷ್ಟು ಮಾಹಿತಿಯ ಅಗತ್ಯವಿದೆ.

English summary

COVID-19: Antibody Response In Most People Strong, Does Not Decline Rapidly, Study Says

COVID-19: Antibody response in most people strong, does not decline rapidly, study says, Read on.
X
Desktop Bottom Promotion