For Quick Alerts
ALLOW NOTIFICATIONS  
For Daily Alerts

ಕೊರೊನಾ 2ನೇ ಅಲೆ: ಹೀಗೆ ಮಾಡಿ ವೈರಸ್‌ ವಿರುದ್ಧ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿ

|

ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಕೊರೊನಾ ಕಾಟ ಕಡಿಮೆಯಾಗುತ್ತಿದೆ. ಲಸಿಕೆ ಬಂದಾಗಿದೆ ಕೆಲವೇ ತಿಂಗಳುಗಳಲ್ಲಿ ಪರಿಸ್ಥಿತಿ ಮೊದಲಿನಂತಾಗುವುದು ಎಂದೇ ಎಲ್ಲರೂ ಭಾವಿಸಿದ್ದರು. ಮದುವೆಗಳಲ್ಲಿ ಜನ ಸೇರಲು ಪ್ರಾರಂಭಿಸಿದ್ದರು, ಶಾಲೆಗಳು ಪ್ರಾರಂಭವಾಯ್ತು, ಕೆಲ ಆಫೀಸ್‌ಗಳಲ್ಲಿ ಉದ್ಯೋಗಿಗಳಿಗೆ ಆಫೀಸ್‌ಗೆ ಬಂದು ಕೆಲಸ ಮಾಡುವಂತೆ ಸೂಚನೆಯೂ ನೀಡಲಾಗಿದೆ. ಇನ್ನೇನು ಕೊರೊನಾ ದೂರವಾಯ್ತು ಅಂದುಕೊಳ್ಳುಷ್ಟರಲ್ಲಿ ಕೊರೊನಾ ವೈರಸ್ ಎರಡನೇಯ ಅಲೆಯ ಆತಂಕ ಶುರುವಾಗಿದೆ.

ಕೊರೊನಾವೈರಸ್‌ ಎರಡನೇ ಅಲೆಗೆ ಕಾರಣವೇನೆಂದು ನೋಡಿದರೆ ಜನರು ತೋರುತ್ತಿರುವ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಕೆಲವರು ಸಾಮಾಜಿಕ ಅಂತರ, ಕೈ ತೊಳೆಯುವುದು, ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮಾಡಿದರೆ ಇನ್ನು ಕೆಲವರು ಈ ಕುರಿತು ನಿರ್ಲಕ್ಷ್ಯ ತೋರುತ್ತಿದ್ದಾರೆ, ಈ ಕಾರಣದಿಂದಾಗಿ ಕೊರೊನಾ ಹರಡುತ್ತಿದೆ.

ಕೊರೊನಾ ವೈರಸ್‌ ರೋಗ ನಿರೋಧಕ ಸಾಮರ್ಥ್ಯ ಇರುವವರಿಗೆ ಹೆಚ್ಚಿನ ಅಪಾಯ ತರುತ್ತದೆ ಎಂಬುವುದು ಈಗಾಗಲೇ ಸಾಬೀತಾಗಿದೆ. ಕೊರೊನಾ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.

ನಾವಿಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ, ಈ ಟಿಪ್ಸ್ ಪಾಲಿಸುವುದರಿಂದ ಕೊರೊನಾವನ್ನು ತಡೆಗಟ್ಟುವುದು ಮಾತ್ರವಲ್ಲ ಇತರ ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು ನೋಡಿ:

ನೀವೇನು ತಿನ್ನುತ್ತಿದ್ದೀರಿ ಎಂಬುವುದನ್ನು ಗಮನಿಸಿ

ನೀವೇನು ತಿನ್ನುತ್ತಿದ್ದೀರಿ ಎಂಬುವುದನ್ನು ಗಮನಿಸಿ

ಆರೋಗ್ಯಕರ ಆಹಾರಕ್ರಮ ಆರೋಗ್ಯವನ್ನು ನೀಡಿದರೆ ಅನಾರೋಗ್ಯಕರ ಆಹಾರಕ್ರಮ ಕಾಯಿಲೆಯನ್ನು ತರುತ್ತದೆ. ಕಡಿಮೆ ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಸೇವಿಸಿ. ಸಕ್ಕರೆ ಅಥವಾ ಸಿಹಿ ಪದಾರ್ಥಗಳನ್ನು ಕಡಿಮೆ ತಿನ್ನಿ. ನಿಮ್ಮ ಆಹಾರದಲ್ಲಿ ಹಣ್ಣು, ತರಕಾರಿಗಳು ಹೆಚ್ಚಾಗಿ ಇರಲಿ.

ಇನ್ನು ತುಳಸಿ, ಅರಿಶಿಣ, ಜೀರಿಗೆ, ಕಾಳು ಮೆಣಸು, ಚಕ್ಕೆ, ಲಂಗ, ಶುಂಠಿ, ಸೂರ್ಯ ಕಾಂತಿ ಬೀಜ, ಕುಂಬಳಕಾಯಿ ಬೀಜ ಇವುಗಳನ್ನು ಬಳಸಿ.

ನಿದ್ದೆ ಕಡಿಮೆ ಮಾಡಬೇಡಿ

ನಿದ್ದೆ ಕಡಿಮೆ ಮಾಡಬೇಡಿ

ದೇಹ ಆರೋಗ್ಯವಾಗಿರಲು 7-8 ಗಂಟೆ ನಿದ್ದೆ ಅವಶ್ಯಕ. ಕಡಿಮೆ ನಿದ್ದೆ ನೇರವಾಗಿ ನಿಮ್ಮ ರೋಗ ನಿರೋಧಕ ಸಾಮರ್ಥ್ಯ ಕುಗ್ಗಿಸುತ್ತೆ. ಅಲ್ಲದೆ ಕಡಿಮೆ ನಿದ್ದೆ ಕೊರೊನಾ ಲಸಿಕೆಯ ಪ್ರಭಾವವನ್ನು ಕೂಡ ಕಡಿಮೆ ಮಾಡುತ್ತೆ.

ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ

ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ

ದಿನದಲ್ಲಿ 8 ಲೋಟ ನೀರು ಅವಶ್ಯಕ. ಬಿಸಿ ನೀರಿನಲ್ಲಿ ಸ್ವಲ್ಪ ಅಶ್ವಗಂಧ ಪುಡಿ, ಅರಿಶಿಣ ಪುಡಿ ಹಾಕಿ ಕುಡಿದರೆ ತುಂಬಾನೇ ಒಳ್ಳೆಯದು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ವ್ಯಾಯಾಮ ಮಾಡದೇ ಇರಬೇಡಿ

ವ್ಯಾಯಾಮ ಮಾಡದೇ ಇರಬೇಡಿ

ನಮ್ಮ ದೇಹಕ್ಕೆ ವ್ಯಾಯಾಮ ಇಲ್ಲದಿದ್ದರೆ ಬೇಗನೆ ಕಾಯಿಲೆ ಬರುತ್ತದೆ. ಆದ್ದರಿಂದ ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಿ. ನಡೆಯುವುದು, ಓಡುವುದು, ಯೋಗ, ಜಿಮ್ ಹೀಗೆ ನಿಮಗಿಷ್ಟವಾದ ವರ್ಕೌಟ್ ಮಾಡಿ.

ಮಾನಸಿಕ ಒತ್ತಡ ಕಡಿಮೆ ಮಾಡಿ

ಮಾನಸಿಕ ಒತ್ತಡ ಕಡಿಮೆ ಮಾಡಿ

ಅನೇಕ ಕಾರಣಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚುವುದು, ಆದರೆ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ನಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಧ್ಯಾನ ಮಾಡಿ, ಮನಸ್ಸಿಗೆ ಇಷ್ಟವಾಗುವ ಸಂಗೀತ ಕೇಳಿ. ಇವುಗಳಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.

ಪ್ರಯಾಣ

ಪ್ರಯಾಣ

ಎಲ್ಲಾ ಸುರಕ್ಷಿತ ಕ್ರಮಗಳೊಂದಿಗೆ ಪ್ರಯಾಣ ಮಾಡಿ. ಪ್ರಯಾಣ ಮಾಡುವಾಗ ಮಾಸ್ಕ್‌ ಕಡ್ಡಾಯವಾಗಿ ಧರಿಸಿ, ಕೈಗಳಿಗೆ ಸ್ಯಾನಿಟೈಸರ್‌ ಹಚ್ಚಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಸಪ್ಲಿಮೆಂಟ್ಸ್

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಸಪ್ಲಿಮೆಂಟ್ಸ್

* ವಿಟಮಿನ್ ಸಿ: ಇದು ಕೆಮ್ಮು, ಶೀತ ಈ ರೀತಿಯ ಸಮಸ್ಯೆ ಬರದಂತೆ ಆರೋಗ್ಯ ಕಾಪಾಡುತ್ತದೆ.

* ವಿಟಮಿನ್ ಡಿ : ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಹೊತ್ತು ಬಿಸಿಲಿನಲ್ಲಿ ನಿಲ್ಲಿ.

ಸತು: ಸತು ಸಪ್ಲಿಮೆಂಟ್ ಅಥವಾ ಸತುವಿನಂಶವಿರುವ ಆಹಾರ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.

ಬೆರ್ರಿ ಹಣ್ಣುಗಳನ್ನು ತಿನ್ನಿ, ಬೆಳ್ಳುಳ್ಳಿ, ಅರಿಶಿಣ ಬಳಸಿ.

ಇವುಗಳ ಜೊತೆಗೆ ಆಯುಷ್ ಇಲಾಖೆ ನೀಡಿರುವ ಈ ಸಲಹೆಯನ್ನು ಪಾಲಿಸಿ:

ಇವುಗಳ ಜೊತೆಗೆ ಆಯುಷ್ ಇಲಾಖೆ ನೀಡಿರುವ ಈ ಸಲಹೆಯನ್ನು ಪಾಲಿಸಿ:

* ಬಿಸಿ ಬಿಸಿಯಾದ ನೀರು ಕುಡಿಯಿರಿ.

* ಯೋಗ, ಧ್ಯಾನ, ಪ್ರಾನಯಾಮ ಮಾಡಿ.

* ಅರಿಶಿಣ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿ ಬಳಸಿ.

* ಹರ್ಬಲ್ ಟೀ ಅಥವಾ ಗಿಡ ಮೂಲಿಕೆಗಳನ್ನು ಹಾಕಿ ಕುದಿಸಿದ ಕಷಾಯ ಕುಡಿಯಿರಿ.

* ಸಕ್ಕರೆ ಬದಲಿಗೆ ಬೆಲ್ಲ ಬಳಸಿ.

* ಮೂಗಿನ ತುದಿಗೆ ಶುದ್ಧ ತುಪ್ಪ, ಸಾಸಿವೆಯೆಣ್ಣೆ ಅಥವಾ ತೆಂಗಿನೆಣ್ಣೆ ಹಚ್ಚಿ

* ಪುದೀನಾ ಎಲೆ ಹಾಗೂ ಅರಿಶಿಣ ಹಾಕಿದ ಹಬೆ ಅಥವಾ ಸ್ಟೀಮ್ ತೆಗೆದುಕೊಳ್ಳಿ.

ಹೀಗೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

English summary

Coronavirus Second Wave: Ways to Boosting Your Immune System Against Coronavirus

Coronavirus Second Wave: Ways to boosting your immune system against coronavirus, read on...
Story first published: Friday, February 26, 2021, 13:30 [IST]
X