For Quick Alerts
ALLOW NOTIFICATIONS  
For Daily Alerts

ಕೊರೊನಾ 3ನೇ ಅಲೆ: ಇದರ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು

|

ಕೊರೊನಾ 2ನೇ ದೇಶದಲ್ಲಿ ಎಷ್ಟರ ಮಟ್ಟಿಗೆ ದುಃಸ್ವಪ್ನವಾಗಿ ಕಾಡಿದೆ ಎಂಬುವುದನ್ನು ನೋಡಿದ್ದೇವೆ. ಬೆಡ್‌ ಸಿಗದೆ ಜನರು ರೋಡ್‌ನಲ್ಲಿ ನರುಳುತ್ತಾ ಸಾಯುವುದನ್ನು, ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದೆ ಸತ್ತಿದ್ದನ್ನು ನೋಡುವಾಗ ಈ ಕ್ರೂರಿ ಕೊರೊನಾದ ಅಟ್ಟಹಾಸ ಒಮ್ಮೆ ಮುಗಿಯಲಿ ದೇವರೇ ಎಂಬುವುದೇ ಎಲ್ಲರ ಪ್ರಾರ್ಥನೆಯಾಗಿತ್ತು..ಕೊರೊನಾ 2ನೇ ಅಲೆ ಕಡಿಮೆಯಾಗುತ್ತಾ ಬರುವಾಗಲೇ ತಜ್ಞರು 3ನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದರು.

ಈಗ ಕೇರಳದಲ್ಲಿ ಕೊರೊನಾ ಕೇಸ್‌ ಅಧಿಕವಾಗುತ್ತಿರುವುದನ್ನು 3ನೇ ಅಲೆ ಶುರುವಾಗಿದೆಯೇ ಎಂಬ ಆತಂಕ ಜನರಿಗೆ ಕಾಡುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಇಳಿಮುಖವಾಗುತ್ತಿದ್ದ ಕೇಸ್‌ಗಳಲ್ಲಿ ಏರಿಕೆ ಕಂಡು ಬರುತ್ತಿವೆ, ಹಾಗಾದರೆ 3ನೇ ಅಲೆ ಶುರುವಾಯ್ತೇ? ಎಂದು ಕೇಳಿದರೆ ತಜ್ಞರು ಇಲ್ಲ ಅಂತಿದ್ದಾರೆ. ಇನ್ನೂ 3ನೇ ಅಲೆ ಪ್ರಾರಂಭವಾಗಿಲ್ಲ, ಆದರೆ ಆಗುವ ಸಾಧ್ಯತೆ ಇವೆ ಎನ್ನುತ್ತಿದ್ದಾರೆ.

3ನೇ ಅಲೆಯ ಆತಂಕ ಇರುವುದಕ್ಕೆ ಕೋವಿಡ್‌ 19 ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ತೋರಬಾರದು, ಮಾಸ್ಕ್‌ ಧರಿಸಿ, ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಪಾಲಿಸಿ, ಬಹುಮುಖ್ಯವಾಗಿ ಲಸಿಕೆ ಪಡೆಯಿರಿ.

3ನೇ ಅಲೆಯ ಬಗ್ಗೆ ಯಾರಿಗೂ ಏನೂ ಸ್ಪಷ್ಟತೆ ಇಲ್ಲ, ಆದರೆ ಈ ಅಲೆಯ ಬಗ್ಗೆ ವೈದ್ಯಕೀಯ ತಜ್ಞರು ಹಾಗೂ ವಿಜ್ಞಾನಿಗಳ ಲೆಕ್ಕಾಚಾರ ಹೀಗಿವೆ:

ಊಹಿಸಿದಕ್ಕಿಂತ ನಿಧಾನವಾಗಿ ಕೊರೊನಾ 3ನೇ ಅಲೆ ಬರಬಹುದು:

ಊಹಿಸಿದಕ್ಕಿಂತ ನಿಧಾನವಾಗಿ ಕೊರೊನಾ 3ನೇ ಅಲೆ ಬರಬಹುದು:

ಸಾಮಾನ್ಯವಾಗಿ ಕೊರೊನಾ ಅಲೆಗಳ ನಡುವಿನ ಅಂತರ 15-16 ವಾರಗಳಿರುತ್ತವೆ. ಮೇ ತಿಂಗಳಿನಲ್ಲಿ ಕೊರೊನಾ ಅಲೆಯ ತೀವ್ರತೆ ಹೆಚ್ಚಾಗಲಿದೆ ಎಂದು ಊಹಿಸಲಾಗಿತ್ತು, ಅದರಂತೆ ಮೇ ತಿಂಗಳಿನಲ್ಲಿ ಕೊರೊನಾದ ಆರ್ಭಟ ಜೋರಾಗಿಯೇ ಇತ್ತು. ಕೊರೊನಾ 3ನೇ ಅಲೆ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಬರಬಹುದು ಎಂದು ಹೇಳಲಾಗುತ್ತಿತ್ತು, ಕೆಲವು ಅಧ್ಯಯನಗಳು ಭಾರತದಲ್ಲಿ 3ನೇ ಅಲೆ ಸುಮಾರು ಡಿಸೆಂಬರ್‌ ಸಮಯದಲ್ಲಿ ಕಾಣಿಸಬಹುದು ಎಂದು ಊಹಿಸಲಾಗಿದೆ.

3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಗಂಭೀರ ಪರಿಣಾಮ ಬೀರಲ್ಲ

3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಗಂಭೀರ ಪರಿಣಾಮ ಬೀರಲ್ಲ

3ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿತ್ತು. ಇದೀಗ ಏಮ್ಸ್ ಹಾಗೂ ವಿಶ್ವ ಸಂಸ್ಥೆ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಗಂಭೀರ ಪರಿಣಾಮ ಬೀರಲ್ಲ ಎಂದು ತಿಳಿದುಬಂದಿದೆ. ಮಕ್ಕಳಲ್ಲಿ ಸೆರೋಪಾಸಿಟಿವಿಟಿ ಪ್ರಮಾಣ (ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು) ಅಧಿಕವಿರುವುದರಿಂದ ಮಕ್ಕಳಿಗೆ ಕೋವಿಡ್ 19 ಅಪಾಯ ತುಂಬಾ ಕಡಿಮೆ ಎಂದು ಹೇಳಿದೆ.

ಕೋವಿಡ್‌ ಲಸಿಕೆ ಹೆಚ್ಚು ಪರಿಣಾಮಕಾರಿಯಲ್ಲ, ಆದ್ದರಿಂದ ಬೂಸ್ಟರ್ ಬೇಕಾಗುವುದು

ಕೋವಿಡ್‌ ಲಸಿಕೆ ಹೆಚ್ಚು ಪರಿಣಾಮಕಾರಿಯಲ್ಲ, ಆದ್ದರಿಂದ ಬೂಸ್ಟರ್ ಬೇಕಾಗುವುದು

ಕೋವಿಡ್ 19 ಲಸಿಕೆ ಪಡೆದವರಿಗೂ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ತಗುಲಿದೆ. ರೂಪಾಂತರ ವೈರಸ್‌ ತಡೆಗಟ್ಟುವಲ್ಲಿ ಲಸಿಕೆ ಅಷ್ಟು ಪರಿಣಾಮಕಾರಿಯಲ್ಲ ಎಂಬುವುದು ಈಗಾಗಲೇ ಸಾಬೀತಾಗಿದೆ. ಆದ್ದರಿಂದ ವೈರಸ್‌ ವಿರುದ್ಧ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಲು ಬೂಸ್ಟರ್ ಅಗ್ಯತವಿದೆ ಎಂದು ಹೇಳಲಾಗುತ್ತಿದೆ.

3ನೇ ಅಲೆ ತೀವ್ರ ಸ್ವರೂಪದಲ್ಲಿ ಇರುವ ಸಾಧ್ಯತೆ ಕಡಿಮೆ

3ನೇ ಅಲೆ ತೀವ್ರ ಸ್ವರೂಪದಲ್ಲಿ ಇರುವ ಸಾಧ್ಯತೆ ಕಡಿಮೆ

2ನೇ ಅಲೆಯಲ್ಲಿ ಅತೀ ಹೆಚ್ಚಿನ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂದಿತ್ತು. ಆದರೆ ಕೊರೊನಾ 3ನೇ ಅಲೆ ಅಷ್ಟು ಭೀಕರ ಸ್ವರೂಪದ್ದಲ್ಲ ಎಂಬ ಮಾತು ಕೇಳಿ ಬರುತ್ತಿವೆಯಾದರೂ ರೂಪಾಂತರ ವೈರಸ್‌ ಡೆಲ್ಟಾ ಪ್ಲಸ್‌ ತುಂಬಾ ವೇಗವಾಗಿ ಹರಡುವುದು ಎಂಬುವುದು ಸಾಬೀತಾಗಿದೆ. ಆದ್ದರಿಂದ 3ನೇ ಅಲೆ ಹೆಚ್ಚಿನ ಜನರಿಗೆ ಬಾಧಿಸಬಹುದೇ ಅಥವಾ ಇಲ್ಲವೇ ಎಂದು ಹೇಳಲು ತಜ್ಞರಿಗೆ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಮಿಶ್ರ ಅಭಿಪ್ರಾಯವಿದೆ.

ಮುನ್ನೆಚ್ಚರಿಕೆ ಕ್ರಮದಿಂದ ಮಾತ್ರ 3ನೇ ಅಲೆ ಎದುರಿಸಲು ಸಾಧ್ಯ

ಮುನ್ನೆಚ್ಚರಿಕೆ ಕ್ರಮದಿಂದ ಮಾತ್ರ 3ನೇ ಅಲೆ ಎದುರಿಸಲು ಸಾಧ್ಯ

3ನೇ ಅಲೆ ಹೇಗಿರುತ್ತದೆ ಎಂಬುವುದು ನಿಖರವಾಗಿ ಹೇಳಲು ವಿಜ್ಞಾನಿಗಳಾಗಲಿ, ವೈದ್ಯರಿಗಾಗಲಿ ಸಾಧ್ಯವಾಗುತ್ತಿಲ್ಲ. ಆದರೆ ಮುನ್ನೆಚ್ಚರಿಕೆವಹಿಸುವ ಮೂಲಕ 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಬೇಕು. 2ನೇ ಅಲೆಯಲ್ಲಿ ಉಂಟಾದಂತೆ ಆಮ್ಲಜನಕ ಹಾಗೂ ಬೆಡ್‌ನ ಕೊರತೆ ಮರುಕಳಿಸಬಾರದು. ಆದ್ದರಿಂದ 3ನೇ ಅಲೆ ಎದುರಿಸಲು ಸಮರ್ಥವಾಗಿ ಸಜ್ಜಾಗಬೇಕಾಗಿದೆ. ಜನರು ಲಾಕ್‌ಡೌನ್ ತೆರವಾಗಿದೆ ಎಂದು ನಿರ್ಲಕ್ಷ್ಯವಹಿಸಿದರೆ ಆಪತ್ತಿಗೆ ಆಹ್ವಾನ ನೀಡಿದಂತೆ, ಆದ್ದರಿಂದ ನಿಮ್ಮ ಜಾಗ್ರತೆಯಲ್ಲಿ ನೀವಿರಿ.

English summary

Coronavirus 3rd Wave: What Do We Know About The Possible Third Wave Of COVID-19 in Kannada

Coronavirus 3rd Wave: What do we know about the possible third wave of COVID-19 in kannada, read on...
Story first published: Tuesday, August 3, 2021, 16:37 [IST]
X
Desktop Bottom Promotion