For Quick Alerts
ALLOW NOTIFICATIONS  
For Daily Alerts

ಕೊರೊನಾ ಲಸಿಕೆ ಪಡೆಯಲಿದ್ದೀರಾ? ಲಸಿಕೆ ಬಗ್ಗೆ ನೀವು ಅರಿಯಲೇಬೇಕಾದ ಸಂಗತಿಗಳು

|

ಕೊರೊನಾ ಎಂಬ ಮಹಾಮಾರಿಯನ್ನು ಮುಗಿಸಲು ಭಾರತ ಹಂತ-ಹಂತವಾವಾಗಿ ಸಜ್ಜಾಗುತ್ತಿದೆ. ನಮ್ಮಲ್ಲೇ ತಯಾರಾದ ಕೊರೊನಾ ಲಸಿಕೆ ಕೊರೊನಾ ತಡೆಗಟ್ಟಲು ಸಮರ್ಥವಾಗಿದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದ್ದು ಮೊದಲ ಹಂತದಲ್ಲಿ ಎಲ್ಲಾ ಕೊರೊನಾ ವಾರಿಯರ್ಸ್‌ಗೆ ಈ ಔಷಧಿ ನೀಡಲಾಯಿತು. ಇದೀಗ ಎರಡನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ನೀಡಲು ಮುಂದಾಗಿದೆ. ಇನ್ನೇನು ಕೆಲವೇ ತಿಂಗಳಿನಲ್ಲಿ ಭಾರತದಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ಲಭಿಸಲಿದೆ.

ಕೊರೊನಾ ಲಸಿಕೆ ನೀಡಲು ಪ್ರಾರಂಭಿಸಿ ತಿಂಗಳು ಕಳೆದರೂ ಜನರಿಗೆ ಇದರ ಕುರಿತು ಇನ್ನೂ ಅನೇಕ ಪ್ರಶ್ನೆಗಳಿವೆ.

ಕೊರೊನಾ ಲಸಿಕೆ ತೆಗೆದುಕೊಳ್ಳುವವರು ಅನುಸರಿಸಬೇಕಾದ ಅನುಸರಿಸಬೇಕಾದ ಅಗ್ಯತ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:

ಭಾರತದಲ್ಲಿ ಲಭ್ಯವಿರುವ ಎರಡೂ ಲಸಿಕೆಗಳು ಸುರಕ್ಷಿತ

ಭಾರತದಲ್ಲಿ ಲಭ್ಯವಿರುವ ಎರಡೂ ಲಸಿಕೆಗಳು ಸುರಕ್ಷಿತ

ಭಾರತದಲ್ಲಿ ಕೊವಾಕ್ಸಿನ್ ಹಾಗೂ ಕೋವಿಡ್‌ ಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡುತ್ತಿದ್ದು ಈ ಎರಡೂ ಲಸಿಕೆಗಳು ಸುರಕ್ಷಿತವಾಗಿದೆ ಎಂಬುವುದು ಸಂಶೋಧನೆಯಿಂದ ದೃಢಪಟ್ಟಿರುವ ಅಂಶವಾಗಿದೆ. ಪುನೆಯ ಸೆರಂ ಇನ್ಸಿಟ್ಯೂಟ್ ಆಫ್‌ ಇಂಡಿಯಾ ಕೋವಿಡ್‌ ಶೀಲ್ಡ್ ತಯಾರಿಸಿದೆ. ಭಾರತ್‌ ಬಯೋಟೆಕ್ ಸಂಸ್ಥೆಯು ಕೊವಾಕ್ಸಿನ್ ಲಸಿಕೆಯನ್ನು ಸಿದ್ಧ ಪಡಿಸಿದೆ.

ಈ ಲಸಿಕೆಗಳಲ್ಲಿ ಯಾವುದಾದರು ಒಂದು ಬಗೆಯ ಲಸಿಕೆಯನ್ನು ಎರಡು ಡೋಸ್‌ನಲ್ಲಿ ಅಂದ್ರೆ ಒಮ್ಮೆ ಪಡೆದ ಬಳಿಕ 14 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕು.

ಕೊರೊನಾ ಲಸಿಕೆ ಪಡೆಯುವ ಮುಂಚೆ ಏನು ಮಾಡಬೇಕೆಂದು ನೀಡಿರುವ ಮಾರ್ಗಸೂಚಿ

ಕೊರೊನಾ ಲಸಿಕೆ ಪಡೆಯುವ ಮುಂಚೆ ಏನು ಮಾಡಬೇಕೆಂದು ನೀಡಿರುವ ಮಾರ್ಗಸೂಚಿ

* ಮೆಡಿಸಿನ್ ಅಥವಾ ಡ್ರಗ್‌(ಔಷಧ) ಅಲರ್ಜಿ ಇದ್ದವರು ತಜ್ಞರಿಂದ ಕ್ಲಿಯರೆನ್ಸ್ ಪಡೆಯಬೇಕು. ವೈದ್ಯರು ನಿಮಗೆ ಸಿಆರ್‌ಪಿ (ರಿಯಾಕ್ಟಿವ್ ಪ್ರೊಟಿನ್), ಸಿಬಿಸಿ (ಕಂಪ್ಲೀಟ್ ಬ್ಲಡ್ ಕೌಂಟ್) ಅಥವಾ ಇಮ್ಯುನೋಗ್ಲೋಬುಲಿನ್ ಪರೀಕ್ಷೆ ಮಾಡಿಸುವಂತೆ ಸೂಚಿಸುತ್ತಾರೆ.

* ಒಂದು ವೇಳೆ ವೈದ್ಯರು ಲಸಿಕೆ ಮುಂಚೆ ತೆಗೆದುಕೊಳ್ಳುವ ಔಷಧ ಹಾಗೂ ಆಹಾರದ ಬಗ್ಗೆ ಏನಾದರೂ ಸೂಚಿಸಿದ್ದರೆ ಅದನ್ನು ಪಾಲಿಸಬೇಕು.

* ಈ ಲಸಿಕೆ ಪಡೆಯಲು ಬರುವಾಗ ಯಾವುದೇ ಆತಂಕ ಬೇಡ, ರಿಲ್ಯಾಕ್ಸ್ ಆಗಿರಿ ಎಂದು ವೈದ್ಯರು ಹೇಳುತ್ತಾರೆ.

* ಯಾರಿಗೆ ಮಧುಮೇಹ, ರಕ್ತದೊತ್ತಡ ಇದ್ದವರನ್ನು ಗಮನಿಸುತ್ತಾ ಇರಬೇಕು. ಕ್ಯಾನ್ಸರ್‌ಗೆ ಕೀಮೋ ಪಡೆದುಕೊಂಡವರನ್ನೂ ಕೂಡ ಲಸಿಕೆ ಬಳಿಕ ಗಮನಿಸಬೇಕು.

* ಅಲ್ಲದೆ ಬ್ಲಡ್‌ ಪ್ಲಾಸ್ಮಾ ಪಡೆದುಕೊಂಡಿದ್ದರೆ ಅಥವಾ ಮೋನೋಕ್ಲೋನಲ್ ಆ್ಯಂಟಿಬಾಡೀಸ್ ತೆಗೆದುಕೊಂಡಿದ್ದರೆ ಅಥವಾ ಒಂದೂವರೆ ತಿಂಗಳಿನ ಒಳಗೆ ಯಾವುದಾದರೂ ಸೋಂಕು ತಗುಲಿದ್ದರೆ ಅಂಥವರು ಈಗಲೇ ಲಸಿಕೆ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.

ಲಸಿಕೆ ಪಡೆದ ಬಳಿಕ ಏನು ಮಾಡಬೇಕು?

ಲಸಿಕೆ ಪಡೆದ ಬಳಿಕ ಏನು ಮಾಡಬೇಕು?

* ಲಸಿಕೆ ಪಡೆದ ತಕ್ಷಣ ಹೋಗುವಂತಿಲ್ಲ, ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲೇ ರೆಸ್ಟ್ ಮಾಡಿ ಹೋಗಬೇಕು. ಹೀಗೆ ಮಾಡುವುದರಿಂದ ಒಂದು ವೇಳೆ ಲಸಿಕೆ ಪಪಡೆದ ತಕ್ಷಣವೇ ಏನಾದರೂ ಅಲರ್ಜಿ ಲಕ್ಷಣ ಕಂಡು ಬಂದರೆ ತಕ್ಷಣವೇ ಚಿಕಿತ್ಸೆ ನೀಡಬಹುದು.

ಲಸಿಕೆ ಪಡೆದ ಬಳಿಕ ಏನಾದರೂ ಅಲರ್ಜಿ ಕಾಣಿಸಿದರೆ ಕೂಡಲೇ ಲಸಿಕೆ ಪಡೆದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ.

* ಕೆಲವರಿಗೆ ಲಸಿಕೆ ಪಡೆದ ಬಳಿಕ ಜ್ವರ, ಚುಚ್ಚಿದ ಭಾಗದಲ್ಲಿ ನೋವು ಮುಂತಾದ ಲಕ್ಷಣಗಳು ಕಂಡು ಬರಬಹುದು. ಹೀಗೆ ಕಂಡು ಬಂದರೆ ಹೆದರುವ ಅವಶ್ಯಕತೆ ಇಲ್ಲ.

* ತಲೆಸುತ್ತು, ಚಳಿಯಾಗುವುದು ಈ ರೀತಿಯೆಲ್ಲಾ ಕಂಡು ಬಂದರೆ ಒಂದೆರಡು ದಿನದಲ್ಲಿ ಸರಿ ಹೋಗುವುದು, ಆದ್ದರಿಂದ ಆತಂಕ ಬೇಡ.

ಈ ವಿಷಯಗಳು ನೆನಪಿರಲಿ

ಈ ವಿಷಯಗಳು ನೆನಪಿರಲಿ

ಲಸಿಕೆ ಕೊರೊನಾ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿ. ಆದರೆ ಲಸಿಕೆ ಪಡೆದ ತಕ್ಷಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಲಸಿಕೆ ಪಡೆದ ಬಳಿಕ ಕೆಲವು ವಾರಗಳು ಬೇಕು. ಆದ್ದರಿಂದ ಲಸಿಕೆ ಪಡೆದರೂ ಹೊರಗಡೆ ಹೋಗುವಾಗ ಕೊರೊನಾ ಮಾರ್ಗಸೂಚಿ ತಪ್ಪದೆ ಪಾಲಿಸಿ. ಆಗಾಗ ಕೈ ತೊಳೆಯಿರಿ ಅಥವಾ ಸ್ಯಾನಿಟೈಸ್ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಲಸಿಕೆ ಕುರಿತು ಅನಗ್ಯತ ಆತಂಕ ಬೇಡ, ಈ ಲಸಿಕೆ ನೀವೂ ಪಡೆಯಿರಿ, ನಿಮ್ಮ ಆಪ್ತರಿಗೆ, ಮನೆಯವರಿಗೆ ಲಸಿಕೆ ತೆಗೆದುಕೊಳ್ಳುಂತೆ ಹೇಳಿ.

English summary

Corona Vaccine: What Are The COVID-19 Vaccination Measures One Must Know

Corona Vaccine: What Are The COVID-19 vaccination measures one must know, read on...
X
Desktop Bottom Promotion