For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಈಗ ಅಪಾಯಾರಿ ಕಾಂಗೋ ಜ್ವರದ ಆತಂಕ, ಇದರ ಲಕ್ಷಣಗಳು ಹಾಗೂ ತಡೆಗಟ್ಟುವುದು ಹೇಗೆ?

|

ಕೊರೊನಾ ವೈರಸ್‌ ಆರ್ಭಟ ಭಾರತದಲ್ಲಿ ಮುಗಿದಿಲ್ಲ, ಅದರ ಜೊತೆಗೆ ಇದೀಗ ಮತ್ತೊಂದು ಭಯಾನಕ ವೈರಸ್‌ನ ಆತಂಕ ಶುರುವಾಗಿದೆ. ಭಾರತದಲ್ಲಿ ಅಪಾಯಕಾರಿಯಾದ ಕಾಂಗೋ ಜ್ವರ ಕಾಣಿಸಿಕೊಂಡಿದೆ. ಕಾಂಗೋ ಜ್ವರವನ್ನು Congo haemorrhagic fever ಎಂದು ಕರೆಯಲಾಗುತ್ತದೆ, ಈ ಜ್ವರಕ್ಕೆ ಪ್ರಾಣಿಗಳಾಗಲಿ, ಮನುಷ್ಯರಾಗಲಿ ಯಾವುದೇ ಚುಚ್ಚು ಮದ್ದಿಲ್ಲ. ಈ ಜ್ವರ ಬಂದರೆ ಸಾವನ್ನಪ್ಪುವವರ ಪ್ರಮಾಣ ಶೇ. 10-40ರಷ್ಟು ಇರುವುದರಿಂದ ಇದು ಅಪಾಯಕಾರಿಯಾದ ರೋಗವಾಗಿದೆ.

ಪ್ರಾಣಿಗಳಲ್ಲಿ ಕಾಂಗೋ ರೋಗ ಹೇಗೆ ಬರುತ್ತದೆ?

ಪ್ರಾಣಿಗಳಲ್ಲಿ ಕಾಂಗೋ ರೋಗ ಹೇಗೆ ಬರುತ್ತದೆ?

ಸಾಕುಪ್ರಾಣಿಗಳಾದ ಹಸು, ಕುರಿ, ಆಡು ಇವುಗಳಲ್ಲಿ ಈ ರೋಗ ಕಂಡು ಬರಬಹುದು ಅಲ್ಲದೆ ಪಕ್ಷಿಗಳ ಮೂಲಕವೂ ಈ ರೋಗ ಹರಡುವ ಸಾಧ್ಯತೆ ಇದೆ. ಪ್ರಾಣಿಗಳಲ್ಲಿ ಟಿಕ್‌ ಬೋರ್ನ್‌ ವೈರಸ್‌ನಿಂದಾಗಿ ಉಂಟಾಗುತ್ತದೆ. ಈ ವೈರಸ್‌ ಇರುವ ಪ್ರಾಣಿಗಳನ್ನು ಕೀಟಗಳು ಕಡಿದು, ಅದು ಮತ್ತೊಂದು ಪ್ರಾಣಿಯನ್ನು ಕಚ್ಚಿದಾಗ ಆ ಮೂಲಕ ಹರಡುತ್ತದೆ. ಈ ವೈರಸ್‌ ಪ್ರಾಣಿಗಳ ರಕ್ತದಲ್ಲಿ ಸೇರಿಕೊಳ್ಳುತ್ತದೆ.

ಮನುಷ್ಯರಿಗೆ ಹೇಗೆ ಹರಡುತ್ತದೆ?

ಮನುಷ್ಯರಿಗೆ ಕೂಡ ಸೋಂಕು ಇರುವ ಕೀಟಗಳಿಂದ ಅಥವಾ ಸೋಂಕು ಇರುವ ಪ್ರಾಣಿಗಳ ಸಂಪರ್ಕದಿಂದ ಬರುತ್ತದೆ. ಕೃಷಿಕರು, ಪ್ರಾಣಿ ಸಂಗೋಪನೆ ಮಾಡುವವರಿಗೆ ಈ ಜ್ವರ ಬರುವ ಅಪಾಯ ಹೆಚ್ಚು. ಏಕೆಂದರೆ ಇವರು ಆಡು, ಕುರಿ ಈ ಪ್ರಾಣಿಗಳ ನೇರ ಸಂಪರ್ಕಕ್ಕೆ ಬರುವುದು ಹೆಚ್ಚು.

ಮನುಷ್ಯರಿಂದ ಮನುಷ್ಯರಿಗೆ ಅವರ ಎಂಜಲು, ಅಥವಾ ರಕ್ತದ ಮೂಲಕ ಹರಡುವುದು. ಆದ್ದರಿಂದ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಸೂಜಿ ಚುಚ್ಚುವಾಗ ಒಬ್ಬರು ಬಳಸಿದ ಸೂಜಿಯನ್ನು ಚುಚ್ಚಬಾರದು, ಅಲ್ಲದೆ ಶೇವಿಂಗ್‌ ಶಾಪ್‌ಗಳಲ್ಲಿಯೂ ಅಷ್ಟೇ ಒಂದೇ ಬ್ಲೇಡ್‌ ಬಳಸಬಾರದು.

 ಕಾಂಗೋ ಜ್ವರದ ಲಕ್ಷಣಗಳು

ಕಾಂಗೋ ಜ್ವರದ ಲಕ್ಷಣಗಳು

ಕಾಂಗೋ ವೈರಸ್ ಮನುಷ್ಯನ ದೇಹವನ್ನು ಸೇರಿದ ಮೇಲೆ 2-3 ದಿನಗಳಲ್ಲಿ ಈ ರೋಗದ ಲಕ್ಷಣಗಳು ಕಂಡು ಬರುತ್ತದೆ. ಇದರ ಇನ್‌ಕ್ಯೂಬೇಷನ್ ಅವಧಿ 5-6 ದಿನಗಳು. ಈ ವೈರಸ್‌ ದೇಹದಲ್ಲಿ 13 ದಿನಗಳವರೆಗೂ ಇರಬಹುದು.

ಕಾಂಗೋ ರೋಗದ ಲಕ್ಷಣಗಳು

  • ಜ್ವರ
  • ಮೈಕೈ ನೋವುತಲೆಸುತ್ತು
  • ಕುತ್ತಿಗೆ ನೋವು
  • ಮೈಯಲ್ಲಿ ಬಿಗಿಯಾದ ಅನುಭವ
  • ಬೆನ್ನುನೋವು
  • ಕಣ್ಣುಗಳಲ್ಲಿ ಊತ
  • ತಲೆನೋವು'
  • ಬೆಳಕು ನೋಡಲು ಸಾಧ್ಯವಾಗದಿರುವುದು (ಫೋಟೋಫೋಬಿಯಾ)ಇವುಗಳ ಜೊತೆಗೆ
  • ಗೊಂದಲ
  • ಬೇಧಿ
  • ಕಿಬ್ಬೊಟ್ಟೆ ನೋವು
  • ಗಂಟಲು ಕೆರೆತ
  • 3-4 ದಿನಗಳ ಕಳೆದ ಬಳಿಕ

    ಖಿನ್ನತೆ, ತುಂಬಾ ಕಿಬ್ಬೊಟ್ಟೆ ನೋವು, ಲಿವರ್‌ ಗಾತ್ರ ದೊಡ್ಡದಾಗುವುದು (hepatomegaly) ಸಮಸ್ಯೆ ಕಂಡು ಬರುವುದು.

     ಇನ್ನು ಪರೀಕ್ಷೆ ಮಾಡಿಸಿದಾಗ

    ಇನ್ನು ಪರೀಕ್ಷೆ ಮಾಡಿಸಿದಾಗ

    • ಅಧಿಕ ಹೃದಯ ಬಡಿತ ಇರುವುದು ತಿಳಿದು ಬರುವುದು
    • ತ್ವಚೆಯಲ್ಲಿ ಗುಳ್ಳೆಗಳು ಎದ್ದು ಅದು ಒಡೆದು ರಕ್ತ ಸೋರುವುದು, ರೋಗಿಯಲ್ಲಿ ಲಕ್ಷಣಗಳು ಉಲ್ಭಣವಾದರೆ ಕಿಡ್ನಿಗೆ ಹಾನಿಯುಂಟಾಗುವುದು. ವೈರಸ್‌ ದೇಹವನ್ನು ಸೇರಿದ 5 ದಿನಗಳಲ್ಲಿಯೇ ಲಿವರ್‌ಗೆ ಹಾನಿಯುಂಟಾಗುವುದು. ಎರಡನೇ ವಾರದಲ್ಲಿ ಸಾವಿನ ಸಂಖ್ಯೆ ಶೇ. 30ರಷ್ಟು ಇದೆ.
    • ವ್ಯಕ್ತಿ ಗುಣಮುಖ ಆಗುವುದಾದರೆ 9 ದಿನಗಳ ಬಳಿಕವಷ್ಟೇ ಹೇಳಲಾಗುವುದು.

      ರೋಗ ಪತ್ತೆ ಹೇಗೆ

      ELISA (enzyme-linked immunosorbent assay)

      ಆ್ಯಂಟಿಜೆನ್ ಪರೀಕ್ಷೆ

      ಸೆರಮ್ ನ್ಯೂಟ್ರಾಲೈಸೇಷನ್

      RT-PCR

      ವೈರಸ್ ಐಸೋಲೇಷನ್ ಬೈ ಸೆಲ್ ಕಲ್ಚರ್

       ಚಿಕಿತ್ಸೆ

      ಚಿಕಿತ್ಸೆ

      ಈ ರೋಗ ಕಂಡು ಬಂದ ತಕ್ಷಣ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು, ಆ್ಯಂಟಿ ವೈರಲ್ ಡ್ರಗ್ ribavirin ನೀಡಲಾಗುವುದು, ಇದು ಈ ರೋಗವನ್ನು ನಿಯಂತ್ರಿಸುವಲ್ಲಿ ತಕ್ಕ ಮಟ್ಟಿಗೆ ಪರಿಣಾಮಕಾರಿಯಾಗಿದೆ.

      ತಡೆಗಟ್ಟುವುದು ಹೇಗೆ?

      ಇದಕ್ಕೆ ಯಾವುದೇ ಚುಚ್ಚುಮದ್ದಿಲ್ಲ, ಜನರು ಈ ರೀಗ ಬರುವುದನ್ನು ತಡೆಗಟ್ಟಲು ಹಲವಾರು ಮುನ್ನೆಚ್ಚರಿಕೆ ವಹಿಸಬೇಕು

      • ಪ್ರಾಣಿಗಳಿಂದ ಸೋಂಕು ಹರಡುವುದನ್ನು ತಡೆಗಟ್ಟಲು
      • ಮೈ ಸಂಪೂರ್ಣ ಮುಚ್ಚುವ ಉಡುಪು ಧರಿಸುವುದು (ಉದ್ದ ತೋಳಿನ ಶರ್ಟ್, ಫುಲ್ ಪ್ಯಾಂಟ್)
      • ತೆಳು ಬಣ್ಣದ ಬಟ್ಟೆ ಧರಿಸುವುದು
      • ಕೀಟ ಕೊಲ್ಲುವ ಕೀಟ ನಾಶಕ ಸಿಂಪಡಿಸುವುದು
      • ಬಟ್ಟೆಗೂ, ತ್ವಚೆಗೂ ಕೀಟಗಳು ಕಚ್ಚದಂತೆ ಕ್ರೀಮ್ ಹಚ್ಚುವುದು ಅಥವಾ ಸ್ಪ್ರೇ ಬಳಸುವುದು
      • ಬಟ್ಟೆಯಲ್ಲಿ ಯಾವುದಾದರೂ ಕೀಟವಿದೆಯೇ ಎಂದು ಎಚ್ಚರಿಕೆವಹಿಸುವುದು
      • ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಗಟ್ಟುವುದು ಹೇಗೆ

        • ಪ್ರಾಣಿಗಳನ್ನು ಮುಟ್ಟುವಾಗ ಗ್ಲೌಸ್ ಧರಿಸಿ.
        • ಪ್ರಾಣಿಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಅವುಗಳನ್ನು ಐಸೋಲೇಟ್ ಮಾಡಿ.
        • ಮನುಷ್ಯರಿಂದ-ಮುನುಷ್ಯರಿಗೆ ಹರಡುವುದನ್ನು ತಡಗಟ್ಟುವುದು ಹೇಗೆ

          • CCHF ಇರುವ ಜನರ ನೇರ ಸಂಪರ್ಕಕ್ಕೆ ಬರಬೇಡಿ
          • ಕಾಂಗೋ ಜ್ವರ ಇರುವವರ ಆರೈಕೆ ಮಾಡುವಾಗ ಕೈಗೆ ಗ್ಲೌಸ್ ಧರಿಸಿ ಅಲ್ಲದೆ ಸಂಪೂರ್ಣ ಮುನ್ನೆಚ್ಚರಿಕೆವಹಿಸಿ ಅವರ ಆರೈಕೆ ಮಾಡಿ.
          • ಆಗಾಗ ಕೈಗಳನ್ನು ಸೋಪು ಹಚ್ಚಿ ತೊಳೆಯಿರಿ.
English summary

Congo Fever Causes, Symptoms, Treatment and Precautions in Kannada

Here is Congo fever, causes, symptoms and treatment and precaustion, have a look,
X
Desktop Bottom Promotion