For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಾಡುವ 7 ಕಾಯಿಲೆಗಳು, ತಡೆಗಟ್ಟುವುದು ಹೇಗೆ?

|

ಬೇಸಿಗೆ ಬಂತೆಂದರೆ ಆ ಕಾಲಕ್ಕೆ ತಕ್ಕಂತೆ ಕೆಲವೊಂದು ಕಾಯಿಲೆಗಳು ಬರುವುದು ಸಹಜ. ಬೆವರು ಸಾಲೆಗಳಿಂದ ಹಿಡಿದು ಕಾಮಲೆ ರೋಗದಂಥ ರೋಗಗಳು ಈ ಸಮಯದಲ್ಲಿ ಹೆಚ್ಚಾಗಿ ಕಂಡು ಬರುವುದು.

Common Summer Ailments And Ways To Prevent Them

ಭಾರತದಲ್ಲಿ ಮೇ ಮತ್ತು ಜೂನ್‌ ತಿಂಗಳಲ್ಲಿ ಹೆಚ್ಚು ಉಷ್ಣಾಂಶ ಕಂಡು ಬರುತ್ತದೆ. ಕೆಲವು ಕಡೆ ಜೂನ್‌ ತಿಂಗಳಿನಲ್ಲಿ ಮುಂಗಾರು ಆರಂಭವಾದರೂ, ದೆಹಲಿಯಂಥ ಕಡೆಗಳಲ್ಲಿ ಜೂನ್‌ ಬಂದರೂ ಸೆಕೆ ಕಡಿಮೆಯಾಗಿರುವುದಿಲ್ಲ.

ಮೇ ತಿಂಗಳಿನಲ್ಲಂತೂ ಕೆಲವು ಕಡೆ ಉಷ್ಣಾಂಶ 40 ಡಿಗ್ರಿc ದಾಟಿರುವುದರಿಂದ ಸೆಕೆಯಿಂದಾಗಿ ಜನರು ಬಸವಳಿದು ಹೋಗಿರುತ್ತಾರೆ. ಈ ಸಮಯದಲ್ಲಿ ಸೆಕೆ ಹೆಚ್ಚಾದಂತೆ ಕೆಲವೊಂದು ಆರೋಗ್ಯ ಸಮಸ್ಯೆ ಕಾಡುವುದು. ಇಲ್ಲಿ ನಾವು ಬೇಸಿಗೆಯಲ್ಲಿ ಕಾಡುವ ಕಾಯಿಲೆಗಳು ಹಾಗೂ ಅವುಗಳು ಬಾರದಂತೆ ತಡೆಗಟ್ಟಲು ಏನು ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಸನ್‌ ಬರ್ನ್‌ (ಬಿಸಿಲಿನಲ್ಲಿ ತ್ವಚೆ ಕೆಂಪಾಗುವುದು)

ಸನ್‌ ಬರ್ನ್‌ (ಬಿಸಿಲಿನಲ್ಲಿ ತ್ವಚೆ ಕೆಂಪಾಗುವುದು)

ಬಿಸಿಲಿನಲ್ಲಿ ಓಡಾಡಿದಾಗ ಮುಖದ ತ್ವಚೆ ಕೆಂಪಾಗಿ ಮುಟ್ಟಿದಾಗ ತುಂಬಾ ಉರಿ ಉರಿ ಅನಿಸುವುದು. ಇವುಗಳು ಕೆಲವರಿಗೆ ಗಾಯದ ರೀತಿಯಲ್ಲೂ ಉಂಟಾಗಬಹುದು. ಬಿಸಿಲಿನಲ್ಲಿ ಓಡಾಡಿದ ಕೆಲವು ಗಂಟೆಗಳಲ್ಲಿ ಕೆಲವರಿಗೆ ಹೀಗೆ ಉಂಟಾಗುತ್ತದೆ. ಅದರಲ್ಲೂ ಬಿಳುಪು ಮೈಯವರಿಗೆ ಬೇಗನೆ ಸನ್‌ಬರ್ನ್‌ ಉಂಟಾಗುವುದು. ಈ ರೀತಿ ಸನ್‌ಬರ್ನ್‌ನಿಂದಾಗಿ ತ್ವಚೆ ಸೌಂದರ್ಯ ಹಾಳಾಗುತ್ತದೆ ಹಾಗೂ ಮುಖದಲ್ಲಿ ಕಪ್ಪು ಕಲೆಗಳು ಬೀಳುವುದು.

ತಡೆಗಟ್ಟುವುದು ಹೇಗೆ?

ಬಿಸಿಲಿಗೆ ಹೋಗುವ ಮುನ್ನ SPF40 ಇರುವ ಸನ್‌ಸ್ಕ್ರೀನ್ ಬಳಸಿ.

ಹೀಟ್ ಸ್ಟ್ರೋಕ್ (ಬಿಸಿಲಿನ ಹೊಡೆತ ಉಂಟಾಗುವುದು)

ಹೀಟ್ ಸ್ಟ್ರೋಕ್ (ಬಿಸಿಲಿನ ಹೊಡೆತ ಉಂಟಾಗುವುದು)

ಹೀಟ್‌ ಸ್ಟ್ರೋಕ್‌ ಇದನ್ನು ಸನ್‌ ಸ್ಟ್ರೋಕ್ ಎಂದು ಕರೆಯುತ್ತಾರೆ. ಇದು ಉರಿ ಬಿಸಿಲಿನಲ್ಲಿ ತುಂಬಾ ಹೊತ್ತು ನಿಂತಾಗ ದೇಹದ ಉಷ್ಣತೆ ಹೆಚ್ಚಾಗಿ ಸನ್‌ ಸ್ಟ್ರೋಕ್ ಉಂಟಾಗುವುದು. ಸನ್‌ಸ್ಟ್ರೋಕ್‌ ತುಂಬಾ ಅಪಾಯಕಾರಿ.

ತಡೆಯುವ ವಿಧಾನ:

ಸನ್‌ಸ್ಟ್ರೋಕ್‌ ಉಂಟಾಗುವುದನ್ನು ತಡೆಯಲು ಮಧ್ಯಾಹ್ನ 12 ಗಂಟೆಯಿಂದ ಸಂಜೆ ಗಂಟೆಯವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವುದು ಮಾಡಬೇಡಿ, ಈ ಸಮಯದಲ್ಲಿ ಸೂರ್ಯ ಕಿರಣಗಳು ಪ್ರಖರವಾಗಿರುತ್ತವೆ. ಈ ಸಮಯದಲ್ಲಿ ಹೊರಗಡೆ ಹೋಗುವಾಗ ಕೊಡೆ ಹಿಡಿಯುವುದು, ಸನ್‌ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು.

ಫುಡ್‌ ಪಾಯಿಸನ್

ಫುಡ್‌ ಪಾಯಿಸನ್

ಇನ್ನು ಬೇಸಿಗೆಯಲ್ಲಿ ಫುಡ್‌ ಪಾಯಿಸನ್‌ ಸಮಸ್ಯೆ ಕೂಡ ಹೆಚ್ಚಾಗಿ ಉಂಟಾಗುವುದು. ಬ್ಯಾಕ್ಟಿರಿಯಾ, ವೈರಸ್‌ಗಳು, ಪ್ಯಾರಾಸೈಟ್ಸ್ ಇವೆಲ್ಲಾ ಫುಡ್‌ ಪಾಯಿಸನ್ ಉಂಟಾಗಲು ಪ್ರಮುಖ ಕಾರಣಗಳು.

ತಡೆಗಟ್ಟುವುದು ಹೇಗೆ?

ಹೊರಗಡೆ ಊಟದ ಬದಲಿಗೆ ಮನೆಯೂಟ ಒಳ್ಳೆಯದು. ಹೊರಗಡೆ ಸಿಗುವ ಆಹಾರ ಶುಚಿತ್ವದಿಂದ ಮಾಡಿರದಿದ್ದರೆ, ಆಹಾರವನ್ನು ಸರಿಯಾಗಿ ಮುಚ್ಚಿಡದೆ ಇದ್ದರೆ ಫುಡ್ ಪಾಯಿಸನ್ ಉಂಟಾಗುವುದು.

ತಲೆನೋವು

ತಲೆನೋವು

ಇನ್ನು ಕೆಲವರಿಗೆ ಬಿಸಿಲಿನ ಬೇಗೆ ಅಧಿಕವಾದಂತೆ ತಲೆನೋವು ಉಂಟಾಗುವುದು. ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸ ಉಂಟಾದಾಗ ತಲೆನೋವು ಉಂಟಾಗುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆನೋವು ಉಂಟಾಗುವುದು.

ತಡೆಗಟ್ಟುವುದು ಹೇಗೆ?

ಬಿಸಿಲಿನಲ್ಲಿ ಓಡಾಡುವಾಗ ತಲೆಗೆ ಬಟ್ಟೆ ಹಾಕಿ, ಕೊಡೆ ಹಿಡಿಯಿರಿ ಹಾಗೂ ಈ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ.

ಬೆವರಿನ ಸಾಲೆಗಳು

ಬೆವರಿನ ಸಾಲೆಗಳು

ಬೆವರಿನ ಸಾಲೆ ಈ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತದೆ. ಉಷ್ಣಾಂಶ ಹೆಚ್ಚಾದಂತೆ ಈ ಸಮಸ್ಯೆ ಉಂಟಾಗುವುದು. ಬೆವರು ಸಾಲೆಗಳು ಎದ್ದಾಗ ಮೈಮೇಲೆ ಕೆಂಪು ಗುಳ್ಳೆಗಳು ಎದ್ದು, ತುರಿಕೆ ಉಂಟಾಗುವುದು.

ತಡೆಗಟ್ಟುವುದು ಹೇಗೆ?

ಹೆಚ್ಚು ಬಿಸಿಲಿನಲ್ಲಿ ಓಡಾಡಬಾರದು ಹಾಗೂ ತುಂಬಾ ಬೆವರು ಬರುವಷ್ಟು ವ್ಯಾಯಾಮ ಮಾಡದಿರಿ ಹಾಗೂ ತಣ್ಣೀರಿನಲ್ಲಿ ಸ್ನಾನ ಮಾಡಿ.

ಟೈಫಾಯ್ಡ್

ಟೈಫಾಯ್ಡ್

ಶುಚಿತ್ವವಿಲ್ಲದ ಆಹಾರ ಹಾಗೂ ನೀರು ಸೇವಿಸುವುದರಿಂದ ಸಲ್ಮೋನೆಲ್ಲಾ ಟೈಫಿ ಎಂಬ ಬ್ಯಾಕ್ಟಿರಿಯಾದಿಂದಾಗಿ ಟೈಫಾಯ್ಡ್ ರೋಗ ಬರುತ್ತದೆ. ಇನ್ನು ಈ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ತಡೆಗಟ್ಟುವುದು ಹೇಗೆ?)

ನೀರನ್ನು ಕುದಿಸಿ ಕುಡಿಯಿರಿ, ಆಹಾರ ತಯಾರಿಸುವಾಗ ಶುಚಿತ್ವದ ಕಡೆ ಗಮನ ನೀಡಿ.

ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆ ತಡೆಗಟ್ಟುವುದು ಹೇಗೆ?

ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆ ತಡೆಗಟ್ಟುವುದು ಹೇಗೆ?

* ತುಂಬಾ ಬಿಸಿಲಿನಲ್ಲಿ ಓಡಾಡಬೇಡಿ.

* ಸಾಕಷ್ಟು ನೀರು ಕುಡಿಯಿರಿ.

* ಸನ್‌ಸ್ಕ್ರೀನ್ ಬಳಸಿ

* ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.

* ಹೊರಗಡೆ ಊಟ ಸೇವಿಸಬೇಡಿ.

* ಹತ್ತಿಯ ಬಟ್ಟೆ ಧರಿಸಿ.

English summary

Common Summer Ailments And Ways To Prevent Them

Summer ailments also tend to increase, which is why we should take necessary preventive measures to lower the risk of summer ailments.Here, we've listed down some common summer ailments that you must protect yourself against.
Story first published: Monday, May 4, 2020, 16:29 [IST]
X
Desktop Bottom Promotion