For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕೈ ಮತ್ತು ಪಾದಗಳು ತಣ್ಣಗಾಗುವುದೇಕೆ? ಇದನ್ನು ತಡೆಯುವ ಮಾರ್ಗಗಳೇನು?

|

ಚಳಿಗಾಲ ಕೆಲವರನ್ನು ತುಂಬಾ ಕಾಡುತ್ತದೆ. ಅಂತಹವರು ಕೋಲ್ಡ್‌ನಿಂದ ತಪ್ಪಿಸಿಕೊಳ್ಳಲು ತುಂಬಾ ಬೆಚ್ಚಗಿನ ಬಟ್ಟೆಗಳನ್ನು ಧರಿಸುತ್ತಾರೆ. ತಣ್ಣನೆಯ ನೀರಿನಿಂದ ದೂರವಿದ್ದರೂ, ಅವರು ತುಂಬಾ ಶೀತವನ್ನು ಅನುಭವಿಸುತ್ತಾರೆ. ಬೆಚ್ಚನೆಯ ಬಟ್ಟೆಯಿಂದ ದೇಹ ಬೆಚ್ಚಗಾಗುತ್ತದೆ ಆದರೆ ಕೈಕಾಲು ಹೆಚ್ಚು ತಣ್ಣಗಾಗುತ್ತದೆ.

ಕೈ ಮತ್ತು ಪಾದಗಳನ್ನು ಬೆಚ್ಚಗಾಗಿಸಲು, ಜನರು ತಮ್ಮ ಕೈಗಳನ್ನು ಬೆಂಕಿಯ ಬಳಿ ಹಿಡಿದುಕೊಳ್ಳುತ್ತಾರೆ, ತಮ್ಮ ಕಾಲುಗಳಿಗೆ ಸಾಕ್ಸ್ಗಳನ್ನು ಧರಿಸುತ್ತಾರೆ. ಇದರ ಜೊತೆಗೆ ನೀವು ಈ ಕೆಳಗಿನ ಸಲಹೆಗಳನ್ನು ಸಹ ಪಾಲಿಸಬಹುದು. ಇದರಿಂದ ಕೈ-ಕಾಲುಗಳು ಬೆಚ್ಚಗಿರುತ್ತವೆ. ಮೊದಲಿಗೆ ಕೈ-ಕಾಲು ತಣ್ಣಗಾಗುವುದು ಏಕೆ ಎಂಬುದನ್ನು ನೋಡೋಣ.

ಚಳಿಗಾಲದಲ್ಲಿ ಕೈ-ಕಾಲ ತಣ್ಣಗಾಗುವುದು ಏಕೆ?:

ಚಳಿಗಾಲದಲ್ಲಿ ಕೈ-ಕಾಲ ತಣ್ಣಗಾಗುವುದು ಏಕೆ?:

ವಿಪರೀತ ಚಳಿಯಿಂದಾಗಿ ಕೈ ಮತ್ತು ಪಾದಗಳಿಗೆ ರಕ್ತದ ಹರಿವು ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ಕೆಲವರು ಚಳಿಗಾಲದಲ್ಲಿ ಕೈ ಮತ್ತು ಪಾದಗಳಲ್ಲಿ ಹೆಚ್ಚು ಶೀತವನ್ನು ಅನುಭವಿಸುತ್ತಾರೆ. ಹೊರಗೆ ತುಂಬಾ ಚಳಿ ಇದ್ದಾಗ ಕೈಕಾಲುಗಳ ರಕ್ತನಾಳಗಳು ಸೆಟೆದುಕೊಳ್ಳಲು ಶುರುವಾಗುತ್ತದೆ. ಆದರೆ, ಚಳಿಗಾಲದಲ್ಲಿ ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಭಯ ಪಡುವ ಅಗತ್ಯವಿಲ್ಲ. ಚಳಿಗಾಲದಲ್ಲಿ ಈ ಸಮಸ್ಯೆಯನ್ನು ತಪ್ಪಿಸಲು ನೀವು ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.

ಶೀತದಿಂದ ಕೈ ಮತ್ತು ಪಾದಗಳನ್ನು ರಕ್ಷಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಿ:

ಶೀತದಿಂದ ಕೈ ಮತ್ತು ಪಾದಗಳನ್ನು ರಕ್ಷಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಿ:

ಕೈ ಮತ್ತು ಕಾಲುಗಳಿಗೆ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ:

ಚಳಿಗಾಲದಲ್ಲಿ, ನಿಮ್ಮ ಕೈಗಳು ಮತ್ತು ಪಾದಗಳು ಹೆಚ್ಚಾಗಿ ತಂಪಾಗಿರುತ್ತವೆ, ಆದ್ದರಿಂದ ನಿಮ್ಮ ಕೈ ಮತ್ತು ಪಾದಗಳಿಗೆ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಮನೆಯಿಂದ ಹೊರಗೆ ಹೋಗುವಾಗ, ನಿಮ್ಮ ಕೈಗಳಿಗೆ ಕೈಗವಸುಗಳನ್ನು ಧರಿಸಿ ಮತ್ತು ನಿಮ್ಮ ಕಾಲುಗಳಿಗೆ ಬೆಚ್ಚಗಿನ ಸಾಕ್ಸ್ಗಳನ್ನು ಧರಿಸಿ, ಇದರಿಂದ ನಿಮ್ಮ ಕೈಗಳು ಮತ್ತು ಪಾದಗಳು ತಣ್ಣಗಾಗುವುದಿಲ್ಲ.

ಎಣ್ಣೆಯಿಂದ ಮಸಾಜ್:

ಎಣ್ಣೆಯಿಂದ ಮಸಾಜ್:

ಕೈ ಮತ್ತು ಪಾದಗಳು ತಣ್ಣಗಾಗಿದ್ದರೆ, ನಂತರ ಉಗುರು ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ. ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ, ಇದು ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ. ಇದರಿಂದ ಪಾದಗಳಲ್ಲಿ ಯಾವುದೇ ಬಿಗಿತ ಮತ್ತು ತುರಿಕೆ ಇರುವುದಿಲ್ಲ ಜೊತೆಗೆ ಕೈ ಮತ್ತು ಪಾದಗಳಲ್ಲಿ ಉಷ್ಣತೆ ಇರುತ್ತದೆ.

ವ್ಯಾಯಾಮ ಮಾಡಿ:

ವ್ಯಾಯಾಮ ಮಾಡಿ:

ಕೈ ಮತ್ತು ಕಾಲುಗಳಲ್ಲಿ ಹೆಚ್ಚು ತಣ್ಣೆಯ ಅನುಭವ ಆಗುತ್ತಿದ್ದರೆ, ನಂತರ ಪ್ರತಿದಿನ ವ್ಯಾಯಾಮ ಮಾಡಿ. ವ್ಯಾಯಾಮವು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಕೈ ಮತ್ತು ಕಾಲುಗಳು ತಣ್ಣಗಾಗುವುದನ್ನು ಕಡಿಮೆ ಮಾಡುತ್ತದೆ.

ಹೀಟಿಂಗ್ ಪ್ಯಾಡ್:

ಹೀಟಿಂಗ್ ಪ್ಯಾಡ್:

ಚಳಿಗಾಲದಲ್ಲಿ ಕೈಗಳು ಮತ್ತು ಪಾದಗಳು ತುಂಬಾ ತಂಪಾಗಿದ್ದರೆ, ನಂತರ ವಿದ್ಯುತ್ ಹೀಟಿಂಗ್ ಪ್ಯಾಡ್ ಅನ್ನು ಬಳಸಿ. ಹೀಟಿಂಗ್ ಪ್ಯಾಡ್ ನಿಮ್ಮ ದೇಹವನ್ನು ಬೆಚ್ಚಗಿಡುತ್ತದೆ ಜೊತೆಗೆ ಚಳಿಗಾಲದಲ್ಲಿ ರಕ್ತ ಸಂಚಾರವೂ ಚೆನ್ನಾಗಿ ಆಗುತ್ತದೆ.

ಕಲ್ಲುಪ್ಪು ಪರಿಣಾಮಕಾರಿ:

ಕಲ್ಲುಪ್ಪು ಪರಿಣಾಮಕಾರಿ:

ಕಲ್ಲು ಉಪ್ಪು ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ, ಜೊತೆಗೆ ನೋವು ಮತ್ತು ಊತದಿಂದ ನಿವಾರಿಸುತ್ತದೆ. ಉಗುರುಬೆಚ್ಚಗಿನ ನೀರಿನ ಟಬ್‌ಗೆ ಕಲ್ಲು ಉಪ್ಪನ್ನು ಹಾಕಿ. ಅದರಲ್ಲಿ ನಿಮ್ಮ ಕೈ ಮತ್ತು ಪಾದಗಳನ್ನು ನೆನೆಸಿ. ಬೆಚ್ಚಗಿನ ನೀರು ಕೈ ಮತ್ತು ಪಾದಗಳನ್ನು ಬೆಚ್ಚಗಾಗಿಸುತ್ತದೆ ಮತ್ತು ತುರಿಕೆಯಿಂದ ದೂರವಿಡುತ್ತದೆ.

ಕಬ್ಬಿಣದಂಶವಿರುವ ಆಹಾರವನ್ನು ಸೇವಿಸಿ:

ಕಬ್ಬಿಣದಂಶವಿರುವ ಆಹಾರವನ್ನು ಸೇವಿಸಿ:

ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು, ಆದ್ದರಿಂದ ಬೀಟ್ರೂಟ್, ಪಾಲಕ್, ಖರ್ಜೂರ, ವಾಲ್ನಟ್ಸ್, ಸೇಬುಗಳಂತಹ ಕಬ್ಬಿಣದ ಭರಿತ ಆಹಾರಗಳನ್ನು ಸೇವಿಸಿ.

ದ್ರವ ಪದಾರ್ಥಗಳನ್ನು ಸೇವಿಸಿ:

ದ್ರವ ಪದಾರ್ಥಗಳನ್ನು ಸೇವಿಸಿ:

ಚಳಿಗಾಲದಲ್ಲಿ ಬಾಯಾರಿಕೆ ಇರುವುದಿಲ್ಲ, ಹಾಗಾಗಿ ದೇಹಕ್ಕೆ ಅಗತ್ಯವಾಗಿರುವ ನೀರನ್ನು ಜನರು ಕುಡಿಯುವುದಿಲ್ಲ. ದೇಹದಲ್ಲಿ ನೀರಿನ ಕೊರತೆಯಿಂದ ರಕ್ತ ಸಂಚಾರ ಸರಿಯಾಗಿ ಆಗದೇ ಕೈಕಾಲು ತುಂಬಾ ತಣ್ಣಗಾಗುತ್ತದೆ. ಆದ್ದರಿಂದ ಸಾಕಷ್ಟು ನೀರು ಜೊತೆಗೆ ದ್ರವ ಪದಾರ್ಥಗಳನ್ನು ಸೇವಿಸಿ.

English summary

Cold Hands and Feet Causes, Treatment and Remedies in Kannada

Here we talking about Cold Hands and Feet Causes, Treatment and Remedies in Kannada, read on
Story first published: Tuesday, November 16, 2021, 15:19 [IST]
X
Desktop Bottom Promotion