For Quick Alerts
ALLOW NOTIFICATIONS  
For Daily Alerts

ಫಿಟ್‌ ಇಂಡಿಯಾ ಚಳುವಳಿಗೆ ಕರೆ ನೀಡಿದ 2020 ಬಜೆಟ್

|

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020ರ ಕೇಂದ್ರ ಬಜೆಟ್ ಮಾಡಿದ್ದು ಅದರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆರೋಗ್ಯವೇ ಭಾಗ್ಯ ಎಂಬ ನಿಟ್ಟಿನಲ್ಲಿ ಬಡವರಿಗೂ ಕೂಡ ಉತ್ತಮ ಆರೋಗ್ಯ ಸೌಲಭ್ಯ ನೀಡಬೇಕೆಂದು ಆಯುಷ್ಮಾನ್ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ನೋಡಿ ಇಲ್ಲಿದೆ.

Budget 2020

ಮೋದಿ ಸರಕಾರದ ಆರೋಗ್ಯ ಕೊಡುಗೆ
* ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರುವ ಮೋದಿ ಸರಕಾರ ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ. ಅನುದಾನ ನೀಡಿದೆ.
* ಈ ಬಾರಿ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಇಂಧ್ರಧನುಷ್ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಈ ಯೋಜನೆ ಮುಖಾಂತರ ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಭಾರತ ಮುಂದಾಗಿದೆ. 5 ಹೊಸ ಲಸಿಕೆಗಳನ್ನು ಇದರಲ್ಲಿ ಸೇರಿಸಲಾಗಿದೆ.
* ಈ ಬಾರಿಯ ಬಜೆಟ್‌ನಲ್ಲಿ ಕ್ಷಯ ರೋಗವನ್ನು ಸಂಪೂರ್ಣ ನಿರ್ಮೋಲನೆ ಮಾಡಲು ಒತ್ತು ನೀಡಲಾಗಿದೆ.
* ಜನರ ಆರೋಗ್ಯ ಸುಧಾರಿಸಲು ಸ್ವಚ್ಛ ಕುಡಿಯುವ ನೀರು ಹಾಗೂ ಸ್ವಚ್ಛ ಭಾರತ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
* ಆಯುಷ್ಮಾನ್ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈ ಯೋಜನೆ ಇಲ್ಲದೆ ಜಿಲ್ಲೆಗಳ
* ಇದುವರೆಗೆ 20 ಸಾವಿರ ಆಸ್ಪತ್ರೆಯಲ್ಲಿ ಆಯುಷ್ಮಾನ್ ಟ್ರೀಟ್‌ಮೆಂಟ್ ಸೌಲಭ್ಯವಿದ್ದು ಇದನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
* ಬಡ ಜನರಿಗೆ ಅನುಕೂಲವಾಗಲು ಅವರಿಗೆ ಅತ್ಯಂತ ಉತ್ತಮವಾಧ ಆರೋಗ್ಯ ಸೌಲಭ್ಯ ದೊರೆಯುವ ದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.
* 2024ರಷ್ಟರಲ್ಲಿ ಎಲ್ಲಾ ಜಿಲ್ಲೆಯ ಜನೌಷಧಿ ಕೇಂದ್ರದಲ್ಲಿ 2000ಕ್ಕೂ ಅಧಿಕ ಔಷಧಿಗಳು ದೊರೆಯುವಂತೆ ಮಾಡಲಾಗುವುದು.
* ಜೀವನಶೈಲಿಯಿಂದಾಗಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆರೋಗ್ಯಕರ ಜೀವನ ಶೈಲಿ ರೂಪಿಸಲು ಫಿಟ್‌ ಇಂಡಿಯಾ ಹೆಲ್ತ್‌ ಚಳುವಳಿಗೆ ಮೋದಿ ಸರಕಾರ ಒತ್ತು ನೀಡಿದೆ.

Read more about: ಆರೋಗ್ಯ health
English summary

Budget 2020 Give More Important To Fit India Movement

Here are highlights of health budget 2020, Take a look,
X
Desktop Bottom Promotion