For Quick Alerts
ALLOW NOTIFICATIONS  
For Daily Alerts

ಕಂದು ಮೊಟ್ಟೆಯಲ್ಲಿ ಬಿಳಿ ಮೊಟ್ಟೆಗಿಂತ ಅಧಿಕ ಪೋಷಕಾಂಶಗಳಿರುತ್ತೆ ಎನ್ನುವುದು ತಪ್ಪು ಕಲ್ಪನೆ!

|

ಇಂದು ವಿಶ್ವ ಮೊಟ್ಟೆ ದಿನ. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ ಪ್ರತಿದಿನ ಮೊಟ್ಟೆಯನ್ನು ತಮ್ಮ ಡಯಟ್‌ನಲ್ಲಿ ಸೇರಿಸಿರುವವರು ಅನೇಕ ಜನರಿದ್ದಾರೆ. ಮೊಟ್ಟೆಯಲ್ಲಿ ಯಾವ ಮೊಟ್ಟೆ ಒಳ್ಳೆಯದು ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ, ಬಿಳಿ ಮೊಟ್ಟೆಗಿಂತ ಕಂದು ಬಣ್ಣದ ಮೊಟ್ಟೆ ಒಳ್ಳೆಯದಾ? ಕಂದು ಬಣ್ಣದ ಮೊಟ್ಟೆಯಲ್ಲಿ ಬಿಳಿ ಬಣ್ಣದ ಮೊಟ್ಟೆಯಲ್ಲಿರುವುದಕ್ಕಿಂತಾ ಅಧಿಕ ಪೋಷಕಾಂಶಗಳಿರುತ್ತಾ? ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ....

ಮೊಟ್ಟೆ ಬೇರೆ-ಬೇರೆ ಬಣ್ಣದಲ್ಲಿರಲು ಕಾರಣವೇನು?

ಮೊಟ್ಟೆ ಬೇರೆ-ಬೇರೆ ಬಣ್ಣದಲ್ಲಿರಲು ಕಾರಣವೇನು?

ನಾಟಿ ಕೋಳಿ ಮೊಟ್ಟೆ ಕಂದು ಬಣ್ಣದಲ್ಲಿರುತ್ತದೆ, ಅದೇ ಗಿರಿರಾಜ ಮುಂತಾದ ಕೋಳಿ ಮೊಟ್ಟೆ ತೆಳು ಕಂದು ಬಣ್ಣದಲ್ಲಿರುತ್ತದೆ, ಬಾಯ್ಲರ್‌ ಕೋಳಿ ಮೊಟ್ಟೆ ಬಿಳಿ ಬಣ್ಣದಲ್ಲಿರುತ್ತದೆ.

ಒಂದೊಂದು ವರ್ಗದ ಕೋಳಿಗಳ ಪಿಗ್ಮೆಂಟೇಷನ್ ಭಿನ್ನವಾಗಿರುತ್ತೆ. ನಾಟಿಕೋಳಿಗಳಲ್ಲಿ ಕೆಲ ಕೋಳಿಗಳು ಬಿಳಿ ಮೊಟ್ಟೆಯನ್ನು ಇಡುತ್ತವೆ. ಆದ್ದರಿಂದ ಮೊಟ್ಟೆ ಬಣ್ಣಕ್ಕಿಂತ ಯಾವ ಕೋಳಿಯ ಮೊಟ್ಟೆ ಎಂಬುವುದು ಮುಖ್ಯವಾಗುತ್ತೆ.

ಬಿಳಿ ಬಣ್ಣದ ಮೊಟ್ಟೆಗಿಂತ ಕಂದು ಬಣ್ಣದ ಮೊಟ್ಟೆ ಆರೋಗ್ಯಕರವೇ?

ಬಿಳಿ ಬಣ್ಣದ ಮೊಟ್ಟೆಗಿಂತ ಕಂದು ಬಣ್ಣದ ಮೊಟ್ಟೆ ಆರೋಗ್ಯಕರವೇ?

ಬಿಳಿ ಬಣ್ಣದ ಮೊಟ್ಟೆಗಿಂತ ಕಂದು ಬಣ್ಣದ ಮೊಟ್ಟೆ ಆರೋಗ್ಯಕರ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಮೊಟ್ಟೆ ಯಾವುದೇ ಬಣ್ಣದಲ್ಲಿರಲಿ ಅದರಲ್ಲಿರುವ ಪೋಷಕಾಂಶ ಒಂದೇ ರೀತಿ ಇರುತ್ತದೆ.

ಬಿಳಿ ಹಾಗೂ ಕಂದು ಬಣ್ಣದ ಮೊಟ್ಟೆಗಳೆರಡೂ ಆರೋಗ್ಯಕರ. ಈ ಎರಡೂ ಬಗೆಯ ಮೊಟ್ಟೆಗಳಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಪ್ರೊಟೀನ್ ಒಂದೇ ರೀತಿ ಇರುತ್ತದೆ.

ಈ ಬಗ್ಗೆ ಅನೇಕ ಸಮಶೋಧನೆಗಳನ್ನು ನಡೆಸಲಾಗಿದೆ, ಅದರಲ್ಲಿ ಕಂಡು ಬಂದಿರುವ ಅಂಶವೇನೆಂದರೆ ಮೊಟ್ಟೆಯ ಸಿಪ್ಪೆಯ ಬಣ್ಣ ಬದಲಾದರೆ ಪೋಷಕಾಂಶಗಳಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ.

ಆದರೆ ಓಡಾಡಿಕೊಂಡು ಇರುವ ಕೋಳಿಗಾದರೆ (ನಾಟಿಕೋಳಿ) ಸೂರ್ಯ ಬೆಳಕು ಬೀಳುತ್ತದೆ ಹಾಗೂ ನೈಸರ್ಗಿಕವಾಗಿ ಆಹಾರವನ್ನು ಹೆಕ್ಕಿ ತಿನ್ನುತ್ತವೆ. ಈ ಮೊಟ್ಟೆಯಲ್ಲಿ ವಿಟಮಿನ್‌ ಡಿ ಅಧಿಕವಿರುತ್ತದೆ. ಆದ್ದರಿಂದ ಬಾಯ್ಲರ್ ಕೋಳಿಗಿಂತ ನಾಟಿಕೋಳಿ ಒಳ್ಳೆಯದು.

ಮೊಟ್ಟೆಯ ಬಣ್ಣ ವ್ಯತ್ಯಾಸವಾದರೆ ರುಚಿಯಲ್ಲಿ ವ್ಯತ್ಯಾಸವಿರುತ್ತದೆಯೇ?

ಮೊಟ್ಟೆಯ ಬಣ್ಣ ವ್ಯತ್ಯಾಸವಾದರೆ ರುಚಿಯಲ್ಲಿ ವ್ಯತ್ಯಾಸವಿರುತ್ತದೆಯೇ?

ಕೆಲವರು ಕಂದು ಬಣ್ಣದ ಮೊಟ್ಟೆ ಹೆಚ್ಚು ರುಚಿಯಾಗಿರುತ್ತೆ ಎಂದು ಹೇಳಿದರೆ ಇನ್ನು ಕೆಲವರು ಬಿಳಿ ಮೊಟ್ಟೆ ಇಷ್ಟಪಡುತ್ತಾರೆ. ಆದರೆ ಬಾಯ್ಲರ್‌ ಕೋಳಿ ಮೊಟ್ಟೆಗಿಂತ ನಾಟಿ ಕೋಳಿ ಮೊಟ್ಟೆಯ ಹಳದಿ ರುಚಿ ಭಿನ್ನವಾಗಿರುತ್ತೆ. ನಾಟಿ ಕೋಳಿ ಮೊಟ್ಟೆ ತುಂಬಾ ರುಚಿ ಅನಿಸುವುದು.

ನಾಟಿ ಕೋಳಿಯ ಬಿಳಿ ಅಥವಾ ಕಂದು ಬಣ್ಣದ ಮೊಟ್ಟೆಯಾಗಿರಲಿ ರುಚಿ ಹೆಚ್ಚು, ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಬಾಯ್ಲರ್‌ ಕೋಳಿಯ ಕಂದು ಬಣ್ಣದ ಮೊಟ್ಟೆಯ ರುಚಿ, ಬಿಳಿ ಬಣ್ಣದ ಮೊಟ್ಟೆಯ ರುಚಿಗಿಂತ ಭಿನ್ನವಾಗಿರಲ್ಲ, ಎಲ್ಲಾ ಒಂದೇ ರೀತಿ ಇರುತ್ತದೆ.

ಕಂದು ಬಣ್ಣದ ಮೊಟ್ಟೆಗೆ ಬೆಲೆ ಅಧಿಕ ಏಕೆ?

ಕಂದು ಬಣ್ಣದ ಮೊಟ್ಟೆಗೆ ಬೆಲೆ ಅಧಿಕ ಏಕೆ?

ಮೊಟ್ಟೆಯ ಬಣ್ಣ ನೋಡಿ ಅಧಿಕ ಬೆಲೆಕೊಟ್ಟು ತರಬೇಡಿ, ಬದಲಿಗೆ ಯಾವ ಕೋಳಿಯ ಮೊಟ್ಟೆ ಎಂದು ಖಚಿತಪಡಿಸಿ. ಓಡಾಡಿಕೊಂಡು ಬೆಳೆದ ಕೋಳಿಯ ಮೊಟ್ಟೆಯಾದರೆ ಆ ಮೊಟ್ಟೆಯ ಅವುಗಳಲ್ಲಿ ವಿಟಮಿನ್ ಡಿ ಹಾಗೂ ಒಮೆಗಾ 3 ಅಧಿಕವಿರುತ್ತದೆ. ಆದ್ದರಿಂದ ನಾಟಿ ಕೋಳಿಯ ಮೊಟ್ಟೆ ಬಾಯ್ಲರ್‌ ಕೋಳಿಯ ಮೊಟ್ಟೆಗಿಂತ ಶ್ರೇಷ್ಠ.

English summary

Brown eggs vs white eggs : Know Difference, Nutrition and Benefits in Kannada

Brown eggs vs white eggs: which one is better, Are brown eggs healthier than white eggs, read on?
X
Desktop Bottom Promotion