For Quick Alerts
ALLOW NOTIFICATIONS  
For Daily Alerts

ನೆಲದ ಮೇಲೆ ಕುಳಿತು ಊಟ ಮಾಡಿದರೆ ಆರೋಗ್ಯ ಲಾಭ ಅಪಾರ

|

ನೆಲದ ಮೇಲೆ ಕಾಲುಗಳನ್ನು ಮಡಚಿಕೊಂಡು ಊಟದ ತಟ್ಟೆಯನ್ನು ಎದುರಿಗಿಟ್ಟು ತಿನ್ನುವಂತಹ ಆನಂದವು ನಿಜವಾಗಿಯೂ ಯಾವುದೇ ಟೇಬಲ್ ನಲ್ಲಿ ಕುಳಿತುಕೊಂಡು ತಿಂದರೆ ಸಿಗದು. ಹಿಂದೆ ಇದೇ ಸಂಸ್ಕೃತಿಯು ನಮ್ಮ ದೇಶದಲ್ಲಿತ್ತು. ಆದರೆ ಇಂದು ಟೇಬಲ್ ಗಳಿಂದಾಗಿ ನೆಲದ ಮೇಲೆ ಕುಳಿತುಕೊಂಡು ತಿನ್ನುವವರ ಸಂಖ್ಯೆಯು ತೀರ ಕಡಿಮೆ ಆಗಿದೆ.

Why Sitting On Floor While Eating Is Healthy

ಟೇಬಲ್ ನಲ್ಲಿ ಕುಳಿತುಕೊಂಡು ತಿನ್ನುವ ಪರಿಣಾಮವಾಗಿ ನಮ್ಮಲ್ಲಿ ಕೆಲವೊಂದು ರೋಗಗಳು ಕೂಡ ಆವರಿಸಿದೆ ಎಂದು ಹೇಳಬಹುದು. ಇದರಲ್ಲಿ ಮುಖ್ಯವಾಗಿ ಹೊಟ್ಟೆಯ ಕೆಲವು ಸಮಸ್ಯೆಗಳು ಪ್ರಮುಖವಾಗಿದೆ. ಇದರಲ್ಲಿ ಅಜೀರ್ಣ, ಅಸಿಡಿಟಿ ಇತ್ಯಾದಿಗಳು ಇವೆ.

ಆದರೆ ನೆಲದ ಮೇಲೆ ಕುಳಿತುಕೊಂಡು ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಯೋಗ ಮತ್ತು ಆಯುರ್ವೇದವು ಹೇಳಿದೆ. ವೈಜ್ಞಾನಿಕವಾಗಿಯೂ ಇದು ಸಾಬೀತು ಆಗಿದೆ. ಇದರ ಬಗ್ಗೆ ನಾವು ಇಲ್ಲಿ ತಿಳಿಯುವ.

ಯೋಗ ಭಂಗಿಯಲ್ಲಿ ಕುಳಿತುಕೊಳ್ಳುವ ಲಾಭಗಳು

ಯೋಗ ಭಂಗಿಯಲ್ಲಿ ಕುಳಿತುಕೊಳ್ಳುವ ಲಾಭಗಳು

ನೆಲದ ಮೇಲೆ ಊಟ ಮಾಡಲು ಕುಳಿತುಕೊಳ್ಳುವ ವೇಳೆ ನೀವು ನಿಜವಾಗಿಯೂ ಒಂದು ಯೋಗ ಭಂಗಿಯಲ್ಲಿ ಇರುತ್ತೀರಿ. ಇದನ್ನು ಸುಖಾಸನ, ಸ್ವಸ್ತಿಕಾಸನ ಅಥವಾ ಸಿದ್ಧಾಸನ ಎಂದು ಕರೆಯಲಾಗುತ್ತದೆ. ಇದು ತುಂಬಾ ಸರಳ ಎಂದು ನಿಮಗೆ ಅನಿಸಬಹುದಾದರೂ ಇವುಗಳನ್ನು ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಹಲವಾರು ರೀತಿಯ ಆರೋಗ್ಯ ಲಾಭಗಳು ನಿಮಗೆ ಸಿಗುವುದು. ಸುಖಾಸನವು ಎರಡು ಕಾಲುಗಳನ್ನು ಮಡಚಿಕೊಂಡಿರುವಂತಹ ಭಂಗಿಯಾಗಿದೆ.

ಇಲ್ಲಿ ಕಾಲುಗಳಿಗೆ ಆರಾಮ ನೀಡಿ ಬೆನ್ನ ಮೂಳೆ ನೇರವಾಗಿಸಿ, ಎದೆಯನ್ನು ಮುಂದಕ್ಕೆ ತರಬೇಕು. ಇದು ನಿಮ್ಮನ್ನು ನೇರವಾಗಿ ಇಡುತ್ತದೆ ಮತ್ತು ಪಾದಗಳು ಒಂದಕ್ಕೊಂದು ವಿರುದ್ಧ ಮೊಣಕಾಲಿನ ಭಾಗದಲ್ಲಿ ಇರುವುದು. ಇದು ದೇಹದ ಮೇಲಿನ ಭಾಗಕ್ಕೆ ಸ್ಥಿರವಾದ ಭಂಗಿ. ಭುಜವು ತಿರುವುದು ಮತ್ತು ಕುತ್ತಿಗೆಯು ಒತ್ತಲ್ಪಡುವುದು.

ಜೀರ್ಣಕ್ರಿಯೆ ಸುಧಾರಿಸುವುದು

ಜೀರ್ಣಕ್ರಿಯೆ ಸುಧಾರಿಸುವುದು

ಕಾಲುಗಳನ್ನು ಮಡಚಿಕೊಂಡು ಕುಳಿತುಕೊಂಡರೆ ಆಗ ಅದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗಲಿದೆ. ಊಟ ಮಾಡಲು ಮುಂದೆ ಬಾಗುವುದು ಹಾಗೂ ಮತ್ತೆ ಮೊದಲಿನ ಸ್ಥಿತಿಗೆ ಬರುವುದು ಹೊಟ್ಟೆಯ ಸ್ನಾಯುಗಳಿಗೆ ಜೀರ್ಣಕ್ರಿಯೆ ರಸವನ್ನು ಸ್ರವಿಸಲು ನೆರವಾಗಲಿದೆ.

ಇದರಿಂದಾಗಿ ಸರಿಯಾದ ಜೀರ್ಣಕ್ರಿಯೆ ಆಗುವುದು. ಈ ಭಂಗಿಯಲ್ಲಿ ಕುಳಿತುಕೊಂಡರೆ ಆಗ ಮನಸ್ಸು ಶಾಂತವಾಗುತ್ತದೆ ಮತ್ತು ಬೆನ್ನಿನ ಕೆಳಭಾಗಕ್ಕೆ ಒತ್ತಡ ಹಾಕುವ ಪರಿಣಾಮವಾಗಿ ಆರಾಮ ಸಿಗುವುದು. ಇದರಿಂದ ಸ್ನಾಯುಗಳ ಒತ್ತಡವು ಕಡಿಮೆ ಆಗುವುದು ಮತ್ತು ರಕ್ತದೊತ್ತಡವು ಕಡಿಮೆ ಆಗುವುದು.

ಜೀವಿತಾವಧಿ ಹೆಚ್ಚಿಸುವುದು

ಜೀವಿತಾವಧಿ ಹೆಚ್ಚಿಸುವುದು

ಕೈಗಳನ್ನು ಬಳಸದೆ ಹಾಗೆ ನೀವು ನೆಲದಿಂದ ಮೇಲಕ್ಕೆ ಎದ್ದರೆ ಅದರಿಂದ ನಿಮ್ಮ ಜೀವಿತಾವಧಿಯು ಹೆಚ್ಚಾಗುವುದು. ನೆಲದ ಮೇಲೆ ಕುಳಿತುಕೊಂಡದ್ದರಿಂದ ಮೇಲಕ್ಕೆ ಎದ್ದೇಳಲು ನಿಜವಾಗಿಯೂ ದೇಹದಲ್ಲಿ ಹೆಚ್ಚಿನ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯು ಬೇಕಾಗಿದೆ ಎಂದು ವಿಜ್ಞಾನವು ಹೇಳಿದೆ. ಇಂತಹ ಶಕ್ತಿಯಿಂದಾಗಿ ಸಾಮಾನ್ಯ ಅಪಘಾತ, ಗಾಯ ಮತ್ತು ಬೀಳುವುದನ್ನು ತಡೆಯುವುದು.

ನೆಲದ ಮೇಲೆ ಕುಳಿತುಕೊಂಡದ್ದರಿಂದ ಮೇಲಕ್ಕೆ ಎದ್ದೇಳಲು ಕಷ್ಟವಾಗುತ್ತಲಿದ್ದರೆ ಆಗ ಆ ವ್ಯಕ್ತಿಯು ಮುಂದಿನ ಆರು ವರ್ಷಗಳಲ್ಲಿ ಸಾಯುವಂತಹ ಸಾಧ್ಯತೆಯು ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಈ ಅಧ್ಯಯನಕ್ಕೆ 51ರಿಂದ 80ರ ಹರೆಯದವರನ್ನು ಸೇರಿಸಲಾಗಿತ್ತು.

ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ನೀಡುವುದು

ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ನೀಡುವುದು

ನೆಲದ ಮೇಲೆ ಕಾಲುಗಳನ್ನು ಮಡಚಿಕೊಂಡು ಕುಳಿತರೆ ಅದರಿಂದ ದೇಹಕ್ಕೆ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಸಿಗುವುದು. ಈ ಭಂಗಿಯಿಂದ ಸೊಂಟ, ಮೊಣಕಾಲು ಮತ್ತು ಹಿಂಗಾಲಿಗೆ ಶಕ್ತಿ ಸಿಗುವುದು. ಬೆನ್ನುಹುರಿ, ಭುಜ ಮತ್ತು ಎದೆಗೆ ಇದು ಸ್ಥಿತಿಸ್ಥಾಪಕತ್ವ ನೀಡುವುದು.

ಇದರಿಂದಾಗಿ ದೇಹವು ಹೆಚ್ಚು ಸ್ಥಿತಿಸ್ಥಾಪಕತ್ವಕ್ಕೆ ಒಳಗಾಗಿ ಕೆಲವೊಂದು ಕಾಯಿಲೆಗಳು ದೂರವಾಗುವುದು. ಈ ಬಲ ಮತ್ತು ಸ್ಥಿತಿಸ್ಥಾಪಕತ್ವದಿಂದ ನೇರವಾಗಿ ಎದ್ದು ನಿಲ್ಲಲು ಆಗುವುದು, ಅದೇ ರೀತಿಯಾಗಿ ಬೆನ್ನಿಗೆ ನೋವು ಮಾಡದೆ ಭಾರವಾದ ವಸ್ತುಗಳನ್ನು ಎತ್ತಲು ಸಹಕಾರಿ ಆಗುವುದು.

ದೇಹರಚನೆಯನ್ನು ಸರಿಪಡಿಸಲು ಸಹಕಾರಿ

ದೇಹರಚನೆಯನ್ನು ಸರಿಪಡಿಸಲು ಸಹಕಾರಿ

ಸ್ನಾಯುಗಳು, ಗಂಟು, ಬೆನ್ನು ಮತ್ತು ಕುತ್ತಿಗೆ ಮೇಲೆ ಬೀಳುವಂತಹ ಅತಿಯಾದ ಒತ್ತಡವನ್ನು ಕಡಿಮೆ ಮಾಡಲು ಒಳ್ಳೆಯ ಭಂಗಿಯು ಅತೀ ಅಗತ್ಯ. ಊಟದ ವೇಳೆ ನೀವು ಹಾಗೆ ನೆಲದ ಮೇಲೆ ಕಾಲುಗಳನ್ನು ಮಡಚಿಕೊಂಡು ಕುಳಿತರೆ ಆಗ ಇದು ದೇಹದ ಭಂಗಿಯನ್ನು ಅದಾಗಿಯೇ ಸರಿಪಡಿಸುವುದು. ಸುಖಾಸನ ಭಂಗಿಯಲ್ಲಿ ನೀವು ಕುಳಿತುಕೊಂಡರೆ ಆಗ ಬೆನ್ನನ್ನು ನೇರವಾಗಿಡಿ ಮತ್ತು ಬೆನ್ನನ್ನು ಎಳೆದು, ಭುಜಗಳಣ್ನು ಹಿಂದಕ್ಕೆ ತಳ್ಳಿ. ಈ ಭಂಗಿಯು ಎಲ್ಲಾ ರೀತಿಯ ಸೆಳೆತ ಮತ್ತು ನೋವಿನಿಂದ ನಿಮ್ಮನ್ನು ಪಾರು ಮಾಡುವುದು.

English summary

Benefits of Sitting on the Floor while Eating

Here we are discussing about why sitting on floor while eating is healthy. Read more.
X
Desktop Bottom Promotion