For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆ ಬೇಗ ಎದ್ದೇಳಲು ಆಯುರ್ವೇದದ ಸಲಹೆಗಳು

|

ಬೆಳಗ್ಗೆ ಬೇಗನೆ ಎದ್ದು ಕಚೇರಿಗೆ ಹೋಗಲಿಕ್ಕೆ ಇದ್ದರೂ ಏಳಲು ಕೆಲವೊಮ್ಮೆ ಸಾಧ್ಯವಾಗಲ್ಲ. ನಿದ್ರೆ ಎಷ್ಟೇ ಬಂದಿದ್ದರೂ ಕೆಲವರಿಗೆ ಹಾಸಿಗೆ ಬಿಟ್ಟು ಎದ್ದೇಳಲು ಸಾಧ್ಯವೇ ಆಗುವುದಿಲ್ಲ. ಇದು ಹೆಚ್ಚಿನ ಜನರಲ್ಲಿ ಕಂಡುಬರುವಂತಹ ಸಮಸ್ಯೆಯಾಗಿದೆ. ಇದೀಗ ಲಾಕ್‌ಡೌನ್‌ ನಿಂದಾಗಿ ಬೆಳಗ್ಗೆ ಏಳುವುದಕ್ಕೆ ಇನ್ನಷ್ಟು ನಿರ್ಲಕ್ಷ್ಯ ಅಥವಾ ಸೋಮಾರಿತನ ಕಾಡುತ್ತದೆ.

Ayurvedic Tips For Getting Up Early In The Morning

ಇದಕ್ಕೆ ಕಾರಣಗಳು ಹಲವಾರು ಇದೆ. ಯಾಕೆಂದರೆ ತಡವಾಗಿ ಮಲಗುವುದು, ನಿದ್ರೆ ಸರಿಯಾಗಿ ಆಗದಿರುವುದು, ಅನಾರೋಗ್ಯಕರ ಆಹಾರ ಕ್ರಮ ಇತ್ಯಾದಿಗಳು

ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದಂತೆ ಈ ಸಮಸ್ಯೆಗೆ ಕೂಡ ಪರಿಹಾರವಿದೆ. ಅದರಲ್ಲೂ ಆಯುರ್ವೇದದಲ್ಲಿ ಈ ಸಮಸ್ಯೆಗೆ ಪರಿಹಾರವಿದೆ. ಆಯುರ್ವೇದ ಪ್ರಕಾರ ಬ್ರಾಹ್ಮಿ ಮುಹೂರ್ತ ಅಂದರೆ ಮುಂಜಾನೆ ಎದ್ದೇಳಬೇಕು. ಅದು ಕೂಡ ಸೂರ್ಯ ಮೂಡುವ 45 ನಿಮಿಷಕ್ಕೆ ಮೊದಲು.

ಬೆಳಗ್ಗೆ ಬೇಗನೆ ಎದ್ದೇಳಲು ಏನು ಮಾಡಬೇಕು

ಬೆಳಗ್ಗೆ ಬೇಗನೆ ಎದ್ದೇಳಲು ಮತ್ತು ಉಲ್ಲಾಸದಿಂದ ಇರಲು ನಾವು ನಿಮಗೆ ಕೆಲವೊಂದು ಆಯುರ್ವೇದಿಕ್ ವಿಧಾನಗಳನ್ನು ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿಯಿರಿ.

1. ಮಲಗುವ ಮೊದಲು ಎಲ್ಲಾ ಗ್ಯಾಜೆಟ್ಸ್ ಗಳನ್ನು ಸ್ವಿಚ್ ಆಫ್ ಮಾಡಿ

1. ಮಲಗುವ ಮೊದಲು ಎಲ್ಲಾ ಗ್ಯಾಜೆಟ್ಸ್ ಗಳನ್ನು ಸ್ವಿಚ್ ಆಫ್ ಮಾಡಿ

ಮೊಬೈಲ್ ಫೋನ್ ಗಳು, ಟ್ಯಾಬ್ಸ್ ಅಥವಾ ಲ್ಯಾಪ್ ಟಾಪ್, ಟಿವಿ ಇತ್ಯಾದಿಗಳು ನಿಮಗೆ ಬೆಳಗ್ಗೆ ಬೇಗನೆ ಎದ್ದೇಳಲು ತೊಂದರೆ ನೀಡುವುದು. ನೀವು ರಾತ್ರಿ ವೇಳೆ ಇದನ್ನು ಬಳಸಿದರೆ ಅದರಿಂದ ನಿದ್ರೆಯು ಬೇಗನೆ ಬರಲ್ಲ. ಹೀಗಾಗಿ ರಾತ್ರಿ ತಡವಾಗಿ ಮಲಗುತ್ತೀರಿ. ಮಲಗುವ ಮೊದಲು ಇವುಗಳನ್ನು ಸ್ವಿಚ್ ಆಫ್ ಮಾಡಿ.

2. ರಾತ್ರಿ ಹಗುರ ಊಟ ಮಾಡಿ

2. ರಾತ್ರಿ ಹಗುರ ಊಟ ಮಾಡಿ

ರಾತ್ರಿ ವೇಳೆ ತುಂಬಾ ಕಡಿಮೆ ಊಟ ಮಾಡಿ. ಅತಿಯಾದ ಎಣ್ಣೆಯುಕ್ತ ಆಹಾರ ಮತ್ತು ಸಿಹಿ ತಿಂದರೆ ಅದರಿಂದ ದೇಹವು ತುಂಬಾ ಜಿಡ್ಡುಗಟ್ಟಿದಂತೆ ಆಗುವುದು. ಹೊಟ್ಟೆಯು ಹಗುರವಾಗಿದ್ದರೆ ಅದರಿಂದ ಬೆಳಗ್ಗೆ ಬೇಗನೆ ಏಳಬಹುದು ಮತ್ತು ದೇಹವು ಹಗುರವಾಗಿರುವುದು.

3. ಮಲಗುವ ಮೊದಲು ಒಂದು ಲೋಟ ನೀರು ಕುಡಿಯಿರಿ

3. ಮಲಗುವ ಮೊದಲು ಒಂದು ಲೋಟ ನೀರು ಕುಡಿಯಿರಿ

ಮಲಗುವ ಮೊದಲು ಒಂದು ಲೋಟ ನೀರು ಕುಡಿಯಿರಿ ಮತ್ತು ಇದರಿಂದ ಯಾವುದೇ ರೀತಿಯ ಹಾನಿ ಆಗದು. ಇದರಿಂದ ಮೂತ್ರಕೋಶವು ಸರಿಯಾಗಿ ಕೆಲಸ ಮಾಡುವುದು ಮತ್ತು ಬೆಳಗ್ಗೆ ಬೇಗನೆ ಏಳುವಂತೆ ಮೂತ್ರದ ಮೂಲದ ಎಚ್ಚರ ಮಾಡುವುದು.

4. ಅಲರಾಂ ಅನ್ನು ಬೆಡ್ ಸಮೀಪ ಇಡಬೇಡಿ

4. ಅಲರಾಂ ಅನ್ನು ಬೆಡ್ ಸಮೀಪ ಇಡಬೇಡಿ

ಬೆಳಗ್ಗೆ ಬೇಗನೆ ಎದ್ದೇಳಲು ಅಲರಾಂನ್ನು ಹಾಸಿಗೆಯಿಂದ ದೂರವಿಡಿ. ನೀವು ಸ್ನೂಜ್ ಬಟನ್ ಒತ್ತುವುದರಿಂದ ಇದು ತಡೆಯುತ್ತದೆ ಮತ್ತು ಮತ್ತೆ ಮಲಗುವುದನ್ನು ತಪ್ಪಿಸುವುದು. ಅಲರಾಂ ದೂರವಿದ್ದರೆ ಹಾಸಿಗೆಯಿಂದ ಎದ್ದೇಳಬಹುದು.

5. ತಣ್ಣೀರಿನಿಂದ ಸ್ನಾನ ಮಾಡಿ

5. ತಣ್ಣೀರಿನಿಂದ ಸ್ನಾನ ಮಾಡಿ

ಬೆಳಗ್ಗೆ ಎದ್ದು ತಣ್ಣೀರಿನಿಂದ ಸ್ನಾನ ಮಾಡಿದರೆ ಅದರಿಂದ ನೀವು ಹೆಚ್ಚು ಉಲ್ಲಾಸಿತರಾಗುವಿರಿ ಮತ್ತು ನಿಮ್ಮ ಏಕಾಗ್ರತೆಯ ಮಟ್ಟವು ಹೆಚ್ಚಾಗುವುದು.

6. ಎದ್ದ ಬಳಿಕ ಹಾಸಿಗೆ ಮೇಲೆ ಕೂರಬೇಡಿ

6. ಎದ್ದ ಬಳಿಕ ಹಾಸಿಗೆ ಮೇಲೆ ಕೂರಬೇಡಿ

ನಿದ್ರೆಯಿಂದ ಎದ್ದ ಬಳಿಕ ಕೆಲವರಿಗೆ ಹಾಸಿಗೆ ಮೇಲೆ ಹಾಗೆ ಕುಳಿತುಕೊಂಡು ಬಿಡುವ ಅಭ್ಯಾಸವಿದೆ. ಇದರಿಂದ ನೀವು ಅಲ್ಲೇ ಮತ್ತೆ ನಿದ್ರೆಗೆ ಜಾರಬಹುದು. ಇದರಿಂದ ನೀವು ಎದ್ದ ಕೂಡಲೇ ಹಾಸಿಗೆ ಬಿಟ್ಟು ಹೋಗಿ.

7. ಅಸಾಮಾನ್ಯ ನಿರೀಕ್ಷೆ ಇಟ್ಟುಕೊಳ್ಳಬೇಡಿ, ವಾಸ್ತವಿಕವಾಗಿರಿ

7. ಅಸಾಮಾನ್ಯ ನಿರೀಕ್ಷೆ ಇಟ್ಟುಕೊಳ್ಳಬೇಡಿ, ವಾಸ್ತವಿಕವಾಗಿರಿ

ನೀವು ಸೂರ್ಯ ಮೂಡಿದ ಬಳಿಕ ಎಂಟು ಗಂಟೆಗೆ ಹಾಸಿಗೆ ಬಿಟ್ಟು ಎದ್ದೇಳುವಂತಹ ಅಭ್ಯಾಸ ಬೆಳೆಸಿಕೊಂಡಿದ್ದರೆ ಆಗ ನೀವು ಒಮ್ಮೆಲೇ ಐದು ಗಂಟೆಗೆ ಏಳಬೇಡಿ. ಇದರ ಬದಲಿಗೆ ನೀವು ಏಳು ಗಂಟೆ, ಆರು ಗಂಟೆ ಹೀಗೆ ಒಂದೊಂದು ಗಂಟೆ ಮುಂಚಿತವಾಗಿ ಎದ್ದು ಅಭ್ಯಾಸ ಮಾಡಿಕೊಳ್ಳಿ.

8. ಗುರಿಯ ಬಗ್ಗೆ ಶಿಸ್ತು ಇರಲಿ

8. ಗುರಿಯ ಬಗ್ಗೆ ಶಿಸ್ತು ಇರಲಿ

ಆರಂಭದಲ್ಲಿ ನಿಮಗೆ ಸಮಯಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಆದರೆ ನೀವು ಇದರಿಂದ ಹೊಂದಾಣಿಕೆ ಮಾಡಿಕೊಳ್ಳಬೇಡಿ. ನಿದ್ರೆಯ ಆವರ್ತನ ಮೇಲೆ ಒಮ್ಮೆ ಇದು ಪ್ರಭಾವ ಬೀರಿದರೆ ಆಗ ಅದು ಅಭ್ಯಾಸವಾಗುವುದು.

9. ಮುಂಜಾನೆ ಎದ್ದೇಳುವ ಲಾಭಗಳನ್ನು ತಿಳಿಯಿರಿ

9. ಮುಂಜಾನೆ ಎದ್ದೇಳುವ ಲಾಭಗಳನ್ನು ತಿಳಿಯಿರಿ

ಇದು ತುಂಬಾ ಪರಿಣಾಮಕಾರಿ ಆಗಿದೆ ಮತ್ತು ನೀವು ಇದರ ಲಾಭಗಳನ್ನು ತಿಳಿದುಕೊಳ್ಳಬಹುದು. ನೀವು ನಿಮ್ಮ ಜೀವನದ ಗುರಿ ಮುಟ್ಟಲು ಇದು ನೆರವಾಗುವುದು. ಬೆಳಗ್ಗೆ ಬೇಗನೆ ಎದ್ದೇಳುವುದನ್ನು ತಿಳಿಯಿರಿ ಮತ್ತು ದೇಹ ಹಾಗೂ ಮನಸ್ಸಿನ ಮೇಲೆ ಇದು ಪರಿಣಾಮ ಬೀರುವುದನ್ನು ತಿಳಿಯಿರಿ.

10. ನಿಮ್ಮ ಮೇಲೆ ನಂಬಿಕೆ ಇರಲಿ

10. ನಿಮ್ಮ ಮೇಲೆ ನಂಬಿಕೆ ಇರಲಿ

ಕೆಲವೊಂದು ಸಲ ವೈಫಲ್ಯದಿಂದಾಗಿ ನಮಗೆ ಗುರಿ ಸಾಧಿಸಲು ತುಂಬಾ ಕಷ್ಟವಾಗಿ ಹೋಗಬಹುದು. ಆದರೆ ಇದರಿಂದ ಧೈರ್ಯ ಕುಂದಬಾರದು. ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ತಿಳಿಯಬೇಕು ಮತ್ತು ಮುಂಜಾನೆ ಬೇಗನೆ ಎದ್ದೇಳುವುದು ಕಷ್ಟವೇನಲ್ಲ. ಆರಂಭದಲ್ಲಿ ಇದು ಕಷ್ಟವಾಗಬಹುದು. ಆದರೆ ಇದಕ್ಕೆ ಹೊಂದಿಕೊಂಡರೆ ಆಗ ಅದು ಅಸಾಧ್ಯವೇನಲ್ಲ.

ಮುಂಜಾನೆ ಎದ್ದ ಬಳಿಕ ನೀವು ತುಂಬಾ ಉಲ್ಲಾಸದಿಂದ ಇರುವಿರಿ. ನಿಮಗೆ ದಿನವಿಡಿ ಬೇಕಾಗಿರುವಂತಹ ಶಕ್ತಿಯು ದೊರಕುವುದು. ನೀವು ಬೇಗನೆ ಎದ್ದೇಳುವಂತೆ ದೇಹದ ಮೇಲೆ ಒತ್ತಡ ಹಾಕಬೇಡಿ. ಇದರಿಂದಾಗಿ ನೀವು ದಿನವಿಡಿ ತುಂಬಾ ನಿದ್ರೆ ಮತ್ತು ಆಲಸ್ಯದಿಂದ ಇರಬೇಕಾಗುತ್ತದೆ. ದೇಹವನ್ನು ಇದಕ್ಕೆ ಹೊಂದಿಕೊಳ್ಳುವಂತೆ ಮಾಡಿ. ಧಾನ್ಯ ಮತ್ತು ಯೋಗಾಭ್ಯಾಸ ಮಾಡಿದರೆ ಅದರಿಂದ ನಿಮಗೆ ಉಲ್ಲಾಸ ಸಿಗುವುದು.

English summary

Ayurvedic Tips to Wake Up Early In The Morning

Here we are discussing about Ayurvedic Tips For Getting Up Early In The Morning. Mentioned below are a few Ayurvedic tips that might help you wake up early in the morning and feel fresh. Read more.
X
Desktop Bottom Promotion