Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವ್ಯಾಯಾಮ ಮಾಡದೇ ಮೈ ಕರಗಿಸಲು ಈ ಡ್ರಿಂಕ್ಸ್ ಕುಡಿಯಿರಿ
ಕರೋನಾ ವೈರಸ್ ಕಾರಣದಿಂದಾಗಿ ಜಿಮ್ ಗೆ ಹೋಗುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಗಳಲ್ಲೇ ಬಂಧಿಯಾಗಿ ಬಿಟ್ಟಿದ್ದೇವೆ. ಸಹಜ ಸ್ಥಿತಿ ಯಾವಾಗ ಮರುಳುತ್ತೇವೆ ಎಂಬ ಬಗ್ಗೆ ಸಧ್ಯ ಯಾವುದೇ ಮುನ್ಸೂಚನೆಯೂ ಸಿಗುತ್ತಿಲ್ಲ. ದಿನನಿತ್ಯದ ವರ್ಕ್ ಔಟ್ ಗಳನ್ನು ಮಾಡದೆ ಈಗಾಗಲೇ ತಿಂಗಳು ಕಳೆದಿದೆ. ಖಂಡಿತ ಇದು ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

ಇದೆಲ್ಲವೂ ಅನಾರೋಗ್ಯಕಾರಿ ಆಹಾರ ಪದ್ಧತಿಯಿಂದಲೂ ಆಗಬಹುದು. ಹಾಗಾಗಿ ನಮ್ಮ ದೇಹದಲ್ಲಿ ಅನಗತ್ಯ ಕೊಬ್ಬಿನಾಂಶದ ಶೇಖರಣೆಯಾಗುತ್ತದೆ. ಹೆಚ್ಚುವರಿ ತೂಕವಾಗುತ್ತದೆ. ಹೊಟ್ಟೆಯ ಭಾಗದ ಕೊಬ್ಬು ಅಧಿಕವಾಗುತ್ತದೆ. ಯಾವುದೇ ರೀತಿಯ ದೈಹಿಕ ಚಟುವಟಿಕೆ ಇಲ್ಲದೆ ಇದ್ದರೆ ಮತ್ತು ಅನಾರೋಗ್ಯಕಾರಿ ಆಹಾರ ಸೇವಿಸಿದರೆ ತೂಕ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ತೂಕ ಇಳಿಸಿಕೊಳ್ಳುವುದಕ್ಕೆ ವರ್ಕ್ ಔಟ್ ನ ಹೊರತಾಗಿಯೂ ನೀವು ಕೆಲವು ಪಾನೀಯಗಳನ್ನು ಸೇವಿಸುವುದರಿಂದಾಗಿ ಸಾಧಿಸಬಹುದು. ಈ ಬಗ್ಗೆ ನಿಮಗೆಷ್ಟು ತಿಳಿದಿದೆ?
ಒಂದು ವೇಳೆ ನಿಮಗೆ ಮನೆಯಲ್ಲಿ ಯಾವುದೇ ಕೆಲಸ ಇಲ್ಲದೆ ಇದ್ದರೆ ಮತ್ತು ತೂಕ ಇಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೆ ಕೊಬ್ಬು ಇಳಿಸುವಿಕೆಗೆ ನೆರವು ನೀಡುವ ಪಾನೀಯದ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ಯಿದ್ದೇವೆ. ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ನೀವು ಈ ಪಾನೀಯವನ್ನು ತಯಾರಿಸಬಹುದು. ಬೇಕಿಂಗ್ ಸೋಡಾ ಮತ್ತು ಆಪಲ್ ಸಿಡರ್ ವಿನೆಗರ್.
ಹಾಗಾದ್ರೆ ಈ ಪಾನೀಯ ತಯಾರಿಸುವುದು ಹೇಗೆ ತಿಳಿಯೋಣ
ಒಂದು ಗ್ಲಾಸ್ ತೆಗೆದುಕೊಳ್ಳಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಆಪಲ್ ಸಿಡರ್ ವಿನೆಗರ್ ಮತ್ತು ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ. ಇದೀಗ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಫ್ಯಾಟ್ ಕರಗಿಸುವ ಪಾನೀಯ ಸಿದ್ಧವಾದಂತೆ.
ಆಪಲ್ ಸಿಡರ್ ವಿನೆಗರ್ ಮತ್ತು ಬೇಕಿಂಗ್ ಸೋಡಾ ಸೇವಿಸುವ ಲಾಭಗಳು
- ಈ ಡ್ರಿಂಕ್ ನಲ್ಲಿ ಹಲವು ನ್ಯೂಟ್ರಿಯಂಟ್ ಗಳು ಮಿಕ್ಸ್ ಆಗಿರುತ್ತದೆ ಮತ್ತು ಎನ್ಜೈಮ್ ಗಳಿರುತ್ತದೆ. ಇದು ಜೀರ್ಣಕ್ರಿಯೆ ಹೆಚ್ಚಿಸುವುದಕ್ಕೆ ನೆರವು ನೀಡುತ್ತದೆ. ಪ್ರತಿದಿನ ಇದನ್ನು ಸೇವಿಸುವುದರಿಂದಾಗಿ ತೂಕ ಇಳಿಸುವಿಕೆಗೆ ನೆರವು ನೀಡುತ್ತದೆ.
- ಆಪಲ್ ಸಿಡರ್ ವಿನೆಗರ್ ಆರೋಗ್ಯದ ಟಾನಿಕ್ ಗಳ ತಯಾರಿಕೆಯಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಸೇಬುವನ್ನು ಫರ್ಮೆಂಟೇಷನ್ ಪ್ರಕ್ರಿಯೆಗೆ ಒಳಪಡಿಸಿ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಅಸೆಟಿಕ್ ಆಮ್ಲವಿರುತ್ತದೆ. ಇದು ತೂಕ್ ಇಳಿಸಲು ನೆರವು ನೀಡುತ್ತದೆ ಎಂದು ನಂಬಲಾಗಿದೆ.
- ಬೇಕಿಂಗ್ ಸೋಡಾ- ಇದು ಕ್ಯಾಲೋರಿ ಅಧಿಕ ಸೇವನೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಹದ್ದುಬಸ್ತಿಯಲ್ಲಿ ಇಡುತ್ತದೆ. ಅಜೀರ್ಣತೆಯ ಸಮಸ್ಯೆಗೂ ಇದು ಸಹಾಯ ಮಾಡುತ್ತದೆ. .
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


