For Quick Alerts
ALLOW NOTIFICATIONS  
For Daily Alerts

ರೂಪಾಂತರಗೊಂಡ ಕೊರೊನಾವೈರಸ್ : ಇದರ ಬಗ್ಗೆ ನೀವು ಅರಿಯಲೇಬೇಕಾದ ಅಂಶಗಳಿವು

|

ಕೊರೊನಾ ಆತಂಕ ಕೊನೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿತ್ತು. ಇನ್ನೇನು ಮುಂಬರುವ ವರ್ಷದಲ್ಲಿ ಪರಿಸ್ಥಿತಿ ಮೊದಲಿನಂತೆ ಸಾಮಾನ್ಯವಾಗುವುದು ಎಂದು ಅಂದುಕೊಂಡಿದ್ದಾಗಲೇ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ. 2020ರಲ್ಲಿ ಚೀನಾದ ಕೊರೊನಾವೈರಸ್ ಭೀಕರವಾಗಿ ಕಾಡಿದರೆ ಇದೀಗ ಬ್ರಿಟನ್ ವೈರಸ್‌ ಆತಂಕ ಎಲ್ಲೆಡೆ ಭಯ ಶುರುವಾಗಿದೆ.

ರೂಪಾಂತರಗೊಂಡಿರುವ ಈ ಕೊರೊನಾವೈರಸ್‌ ಬ್ರಟಿನ್‌ ಬಹುತೇಕ ಮಂದಿಯಲ್ಲಿ ಪತ್ತೆಯಾಗಿದ್ದು, ಇದೀಗ ವಿದೇಶದಿಂದ ಬರುವವರ ಕುರಿತು ಮತ್ತಷ್ಟು ಜಾಗ್ರತೆವಹಿಸಬೇಕಾಗಿದೆ. ಈಗಾಗಲೇ ಭಾರತದಲ್ಲಿ ಬ್ರಿಟನ್ ಹಾಗೂ ಯುರೋಪ್‌ ದೇಶದ ನಡುವೆ ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ, ವಿದೇಶದಿಂದ ಬಂದವರನ್ನು ಪರೀಕ್ಷಿಸಿ ಕ್ವಾರೆಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ತಜ್ಞರ ಪ್ರಕಾರ ಈ ರೂಪಾಂತರಗೊಂಡಿರುವ ವೈರಸ್‌ ಬೇಗನೆ ಹರಡುವ ಲಕ್ಷಣ ಹೊಂದಿರುವುದರಿಂದ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ, ಬನ್ನಿ ಈ ವೈರಸ್‌ ರೂಪಾಂತರ ಎಂದರೇನು, ಇದನ್ನು ಲಸಿಕೆಯಿಂದ ತಡೆಗಟ್ಟಲು ಸಾಧ್ಯವೇ ಎಂಬುವುದನ್ನು ನೋಡೋಣ:

ಚೀನಾದ ವೈರಸ್‌ಗಿಂತ ಅಪಾಯಕಾರಿ ಬ್ರಿಟನ್ ಕೊರೊನಾವೈರಸ್

ಚೀನಾದ ವೈರಸ್‌ಗಿಂತ ಅಪಾಯಕಾರಿ ಬ್ರಿಟನ್ ಕೊರೊನಾವೈರಸ್

ಬ್ರಿಟನ್ ವೈರಸ್‌ ಬೇಗನೆ ಹರಡುವ ಗುಣ ಹೊಂದಿದ್ದು ಹೆಚ್ಚು ಅಪಾಯಕಾರಿಯಾಗಿದೆ.

ಕೋವಿಡ್ 19 ಲಸಿಕೆ ಇದೀಗ ಮಾರುಕಟ್ಟೆಗೆ ಬಂದಿದ್ದು ಈ ಲಸಿಕೆ ಹೊಸ ಕೊರೊನಾವೈರಸ್‌ ತಳಿಯನ್ನು ತಡೆಗಟ್ಟಬಹುದೇ? ಬ್ರಿಟನ್‌ನಲ್ಲಿ ಕಂಡು ಬಂದಿರುವ ಕೋವಿಡ್‌ 19 ಹೊಸ ತಳಿಯ ಹೆಚ್ಚಿನ ಮಾಹಿತಿ ತಿಳಿಯೋಣ:

ಬಿಬಿಸಿ ವರದಿ ಪ್ರಕಾರ ಹೊಸ ರೂಪಾಂತರವಾಗಿರುವ ಕೊರೊನಾವೈರಸ್‌ ತಳಿ ಈ ಮೂರು ಕಾರಣಗಳಿಂದಾಗಿ ತುಂಬಾ ಅಪಾಯಕಾರಿ:

* ಈ ಹೊಸ ತಳಿ ಬೇಗನೆ ಜನರಿಂದ-ಜನರಿಗೆ ಹರಡುತ್ತದೆ.

* ಬ್ರಿಟನ್‌ನಲ್ಲಿ ಶೇ. 70ರಷ್ಟು ಕೊರೊನಾ ಸೋಂಕಿತರಲ್ಲಿ ಈ ರೂಪಾಂತರ ವೈರಸ್ ಪತ್ತೆಯಾಗಿದೆ. ಜಾಗ್ರತೆ ವಹಿಸದಿದ್ದರೆ ಇತರ ದೇಶಗಳಿಗೂ ಬೇಗನೆ ಹರಡುವುದು.

* ಹೊಸ ವೈರಸ್‌ನಲ್ಲಿರುವ ಸ್ಪೈಕ್ ಪ್ರೋಟೀನ್‌ಗೆ ಬದಲಾವಣೆಗಳಾಗಿವೆ, ಇದು ದೇಹದ ಜೀವಕೋಶಗಳಿಗೆ ಹಾನಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 ರೂಪಾತಂತರ ಎಂದರೇನು?

ರೂಪಾತಂತರ ಎಂದರೇನು?

ಒಂದು ವೈರಸ್‌ ದೇಹವನ್ನು ಸೇರಿದಾಗ ಅದು ಲಕ್ಷಾಂತರ ವೈರಸ್‌ ಉತ್ಪಾದಿಸುತ್ತದೆ, ಈ ವೈರಸ್‌ ಎಲ್ಲವೂ ಒಂದೇ ಬಗೆಯದು ಆಗಿರುವುದಿಲ್ಲ, ಇದು ಮತ್ತೆ-ಮತ್ತೆ ಉತ್ಪಾದನೆಯಾದಾಗ ಆ ವೈರಸ್‌ನಲ್ಲಿ ಬೇರೆಯದೇ ಗುಣ ಲಕ್ಷಣಗಳು ಕಂಡು ಬರುವುದು, ಇದುವೇ ವೈರಸ್‌ ರೂಪಾಂತರವಾಗುವುದು.

ವೈರಸ್‌ ರೂಪಾಂತರವಾಗುವುದು ಸಾಮಾನ್ಯ ಪ್ರಕ್ರಿಯೆ. ಸಾಕಷ್ಟು ಬಾರಿ ಈ ರೀತಿ ರೂಪಾಂತರಗೊಂಡ ವೈರಸ್ ಎಲ್ಲವೂ ಅಪಾಯಕಾರಿಯಾಗಿರುವುದಿಲ್ಲ, ಕೆಲವೊಂದು ಬೇಗನೆ ಸತ್ತು ಹೋಗುತ್ತವೆ, ಆದರೆ ಕೆಲವೊಮ್ಮೆ ಮಾತ್ರ ತೀವ್ರ ಸ್ವರೂಪ ಪಡೆದು ಮತ್ತಷ್ಟು ಅಪಾಯಕಾರಿಯಾಗುತ್ತವೆ. ಬ್ರಿಟನ್‌ನಲ್ಲಿ ಕಂಡು ಬಂದಿರುವುದು ಕೊರೊನಾವೈರಸ್‌ನ ಅಂಥದ್ದೇ ಇಂದು ರೂಪಾಂತರವಾಗಿದೆ.

ರೂಪಾಂತರಗೊಂಡ ವೈರಸ್ ಎಷ್ಟು ಅಪಾಯಕಾರಿ?

ರೂಪಾಂತರಗೊಂಡ ವೈರಸ್ ಎಷ್ಟು ಅಪಾಯಕಾರಿ?

ಕಳೆದ ವಾರ ಬ್ರಿಟನ್‌ನಲ್ಲಿ ರೂಪಾಂತರಗೊಂಡ ಈ ವೈರಸ್‌ ಪತ್ತೆಯಾಯಿತು. ಇದು ಬೇಗನೆ ಹರಡುವ ಗುಣ ಹೊಂದಿದ್ದು ಇದರಿಂದ ಸಾವನ್ನಪ್ಪುವರ ಸಂಖ್ಯೆ ಕಡಿಮೆ.

ಹಳೆಯ ಕೊರೊನಾವೈರಸ್‌ಗೆ ಹೋಲಿಸಿದರೆ ಈ ಹೊಸ ತಳಿ ಹರಡುವ ವೇಗ ಶೇ. 70ರಷ್ಟು ಅಧಿಕವಾಗಿದೆ.

 ಲಸಿಕೆಯಿಂದ ರೂಪಾಂತರಗೊಂಡಿರುವ ಕೊರೊನಾವೈರಸ್‌ ತಡೆಗಟ್ಟಲು ಸಾಧ್ಯವೇ?

ಲಸಿಕೆಯಿಂದ ರೂಪಾಂತರಗೊಂಡಿರುವ ಕೊರೊನಾವೈರಸ್‌ ತಡೆಗಟ್ಟಲು ಸಾಧ್ಯವೇ?

ಕೊರೊನಾವೈರಸ್‌ ಲಸಿಕೆ ರೂಪಾಂತರಗೊಂಡಿರುವ ಕೊರೊನಾವೈರಸ್‌ ನಿಯಂತ್ರಿಸುವಲ್ಲಿ ಅಷ್ಟು ಪರಿಣಾಮಕಾರಿಯಲ್ಲ ಎಂಬುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಬ್ರಟಿನ್ ಪ್ರಧಾನಿ ಬೋರೀಸ್ ಜೋನ್‌ಸನ್ ಹೇಳಿದ್ದಾರೆ. ಅದೇ ಸಮಯದಲ್ಲಿ ಬ್ರಿಟನ್‌ನ ಚೀಫ್‌ ಸೈಟಿಂಫಿಕ್ ಅಡ್ವೈಸರ್ ಪ್ಯಾಟ್ರಿಕ್ ವ್ಯಾಲೆನ್ಸ್‌ ಲಸಿಕೆ ಕೊರೊನಾವೈರಸ್‌ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ವೃದ್ಧಿಸುವುದು ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆ ರೂಪಾಂತರಗೊಂಡಿರುವ ಕೊರೊನಾವೈರಸ್ ತಡೆಗಟ್ಟುವಲ್ಲಿ ಎಷ್ಟರಮಟ್ಟಿಗೆ ಸಹಕಾರಿ ಎಂಬುವುದರ ಬಗ್ಗೆ ತಜ್ಞರಿಗೆ ಇನ್ನೂ ತಿಳಿದು ಬಂದಿಲ್ಲ.

English summary

All You Need To Know About The New Mutant Strain Of Coronavirus In UK in Kannada

All you need to know about the new mutant strain of Coronavirus in UK in Kannada...
X
Desktop Bottom Promotion