Just In
Don't Miss
- Automobiles
2026ರ ವೇಳಗೆ ಭಾರತದಲ್ಲಿ ಓಡಲಿದೆ ಮೊದಲ ಬುಲೆಟ್ ರೈಲು
- Technology
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಾ? ಎಷ್ಟು ದಂಡ ಬಾಕಿ ಇದೆ?..ಹೀಗೆ ತಿಳಿಯಿರಿ!
- News
ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ಅಧ್ಯಕ್ಷರಾಗಿದ್ದ ಪಲ್ಲೋಂಜಿ ಮಿಸ್ತ್ರಿ ನಿಧನ
- Movies
ಅಭಿಮಾನಿಗಳಿಗೆ ಮನವಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
- Finance
ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ
- Sports
ಆಸ್ಟ್ರೇಲಿಯಾ vs ಶ್ರೀಲಂಕಾ ಟೆಸ್ಟ್ ಸರಣಿ: ಮೊದಲ ಪಂದ್ಯದ ಸಂಭಾವ್ಯ ತಂಡ, ಪ್ರಿವ್ಯೂ
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಶೇ.90ರಷ್ಟು ವೇಗದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ವೈರಸ್: ಎಚ್ಚರ, ಎಚ್ಚರ!
ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷಿ ಎಂಬಂತಿದೆ ಕೊರೊನಾ ಎಂಬ ಮಹಾಮಾರಿಯ ಕತೆ. 2 ವರ್ಷದಿಂದ ಈ ಕಾಯಿಲೆ ಜನರ ಜೀವನ ಮೇಲೆ ಬೀರಿರುವ ಪ್ರಭಾವ ಅಷ್ಟಿಟ್ಟಲ್ಲ. ಜನರು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಕೊರೊನಾ ಲಸಿಕೆಗಳು ಸಿಕ್ಕಿದ ಮೇಲೆ ಇದರ ಆರ್ಭಟ ತಗ್ಗಿದರೂ ಈಗ ನಾಲ್ಕನೇ ಅಲೆಯ ಆತಂಕ ಶುರುವಾಗಿದೆ.
ಕಳೆದ 24 ಗಂಟೆಗಳಿಂದ ಕೊರೊನಾ ಕೇಸ್‌ಗಳು ಶೇ.90ರಷ್ಟು ವೇಗವಾಗಿ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,183 ಹೊಸ ಕೇಸ್‌ಗಳು ಪತ್ತೆಯಾಗಿವೆ. ನೆನ್ನೆ 1,150 ಕೊರೊನಾ ಕೇಸ್‌ಗಳಿತ್ತು, 24 ಗಂಟೆಗಳಲ್ಲಿ 89.8ರಷ್ಟು ಕೇಸ್‌ಗಳು ಅಧಿಕವಾಗಿವೆ.
ಇದರಲ್ಲಿ ಆತಂಕದ ಸಂಗತಿಯೆಂದರೆ 214 ಜನರು 24 ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ, ಕೇರಳದಲ್ಲಿ ಏಪ್ರಿಲ್ 13ರಿಂದ 16ರ ನಡುವೆ 150 ಸಾವುಗಳಾಗಿವೆ.

ಕೊರೊನಾ ನಾಲ್ಕನೇ ಅಲೆಯ ಆತಂಕ
ದಿನದಿಂದ ದಿನಕ್ಕೆ ಕೊರೊನಾ ಕೇಸ್‌ಗಳಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಕೊರೊನಾ ಶುರುವಾದಾಗಿನಿಂದ ಇಲ್ಲಿಯವರೆಗೆ ಸುಮಾರು 4.30 ಕೋಟಿ ಜನರಿಗೆ ಈ ವೈರಲ್ ತಗುಲಿದೆ.
ದೆಹಲಿಯಲ್ಲಿ ಕೊರೊನಾ ಕೇಸ್‌ಗಳಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಕಳೆದ ಎರಡು ವಾರಗಳಿಂದ ನೋಯ್ಡಾ, ಘಾಜಿಯಾಬಾದ್ ಮುಂತಾದ ಕಡೆ ಕೇಸ್‌ಗಳು ಹೆಚ್ಚಾಗುತ್ತಿದೆ. ಕೊರೊನಾ ಕೇಸ್‌ಗಳು ಈ ರೀತಿ ಹೆಚ್ಚಾಗುತ್ತಿದ್ದರೆ ಮತ್ತೆ ಲಾಕ್‌ಡೌನ್ ಶುರುವಾಗಬಹುದೇ ಎಂಬ ಆತಂಕ ಶುರುವಾಗಿದೆ.
ಆದ್ದರಿಂದ ಕೊರೊನಾ ಕೇಸ್ ಹೆಚ್ಚಾದ ಮೇಲೆ ಲಾಕ್‌ಡೌನ್ ಅಂತ ಕಷ್ಟಪಡುವ ಬದಲಿಗೆ ಈಗ ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ.

ಕೈಗಳ ಶುಚಿತ್ವ ಕಡೆ ಗಮನ ನೀಡಿ:
ಕೈಗಳನ್ನು ಆಗಾಗ ತೊಳೆಯಿರಿ. ಇನ್ನು ಮನೆಯಿಂದ ಹೊರಗಡೆ ಹೋಗುವಾಗ ಸ್ಯಾನಿಟೈಸರ್ ಜೊತೆಗೆ ಕೊಂಡೊಯ್ಯಿರಿ. ಆಗಾಗ ಕೈಗೆ ಹಾಕುತ್ತಾ ಇರಿ. ಸಾರ್ವಜನಿಕ ಸ್ಥಳಗಳಲ್ಲಿ ಹೋಗುವಾಗ ಜನರ ಗುಂಪು ಇರುವ ಕಡೆ ಹೋಗಬೇಡಿ.

ಮಾಸ್ಕ್ ಬಳಸಿ
ಮಾಸ್ಕ್‌ನಿಂದ ರಿಲೀಫ್ ಸಿಕ್ಕಿದೆ ಅಂತ ಬಳಸದೆ ಇರಬೇಡಿ, ಹೊರಗಡೆ ಹೋಗುವಾಗ ಡಬಲ್ ಮಾಸ್ಕ್ ಧರಿಸಿ.

ಪಾರ್ಟಿ-ಫಂಕ್ಷನ್‌ಗಳಿಗೆ ಹೋಗುವುದು ಕಡಿಮೆ ಮಾಡಿ
ಈಗ ತುಂಬಾ ಕಡೆ ಪಾರ್ಟಿ-ಫಂಕ್ಷನ್‌ಗಳು ನಡೆಯುತ್ತುವೆ, ನೀವು ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು. ಇದರಿಂದ ನಿಮ್ಮ ಸುರಕ್ಷಿತೆ ಹೆಚ್ಚುವುದು.

ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ
ಕೊರೊನಾ ರೋಗ ಲಕ್ಷಣಗಳಾದ ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಾಣಿಸಿದರೆ ಕೊರೊನಾ ಪರೀಕ್ಷೆ ಮಾಡಿಸಿ. ಇನ್ನು ಕೊರೊನಾ ಲಕ್ಷಣಗಳು ಕಂಡು ಬಂದಾಗ ಇತರರನ್ನು ಸಂಪರ್ಕ ಮಾಡಬೇಡಿ, ಐಸೋಲೇಟ್‌ನಲ್ಲಿ ಇರಿ.

ಬೂಸ್ಟರ್ ತೆಗೆದುಕೊಳ್ಳಿ
ಈಗಾಗಲೇ ಬಹುತೇಕ ಜನರಿಗೆ 2 ಡೋಸ್ ಲಸಿಕೆಯಾಗಿರುತ್ತದೆ, ಇಲ್ಲಾ ಅಂದ್ರೆ ಬೇಗನೆ ಹಾಕಿಸಿಕೊಳ್ಳಿ. 2 ಡೋಸ್ ಲಸಿಕೆ ಆದವರು ಬೂಸ್ಟರ್ ಹಾಕಿಸಿಕೊಳ್ಳಿ.