For Quick Alerts
ALLOW NOTIFICATIONS  
For Daily Alerts

ಉಬ್ಬಸ ನಿವಾರಣೆ ಮಾಡಲು ಕೆಲವೊಂದು ನೈಸರ್ಗಿಕ ವಿಧಾನಗಳು

|

ಉರಿಯೂತ ಮತ್ತು ಶ್ವಾಸನಾಳಗಳ ಕುಗ್ಗುವಿಕೆಯಿಂದಾಗಿ ಉಬ್ಬಸವು ಉಂಟಾಗುವುದು. ಇದರ ಪ್ರಮುಖ ಲಕ್ಷಣಗಳೆಂದರೆ ಅದು ಅಸ್ತಮಾ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ(ಸಿಒಪಿಡಿ) ಇವೆರಡರಿಂದ ಶ್ವಾಸನಾಳವು ತುಂಬಾ ಕುಗ್ಗುವುದು ಮತ್ತು ಶ್ವಾಸಕೋಶದ ಸಣ್ಣ ನಾಳಗಳಲ್ಲಿ ಕಫವು ತುಂಬುವುದು. ಉಬ್ಬಸಕ್ಕೆ ಇನ್ನು ಕೆಲವೊಂದು ಕಾರಣಗಳೆಂದರೆ ಸೋಂಕು, ಅಲರ್ಜಿ ಪ್ರಕ್ರಿಯೆ ಅಥವಾ ಶ್ವಾಸನಾಳಗಳಿಗೆ ದೈಹಿಕವಾಗಿ ಹಾನಿಯಾಗಿರುವುದು.

ಉಸಿರಾಡುವ ವೇಳೆ ವಿಸಲ್ ಹೊಡೆದ ರೀತಿ ಆಗುವುದು, ಉಸಿರಾಟದಲ್ಲಿ ತೊಂದರೆ ಉಬ್ಬಸದ ಪ್ರಮುಖ ಲಕ್ಷಣಗಳು. ಉಬ್ಬಸವನ್ನು ನೈಸರ್ಗಿಕವಾಗಿ ನಿವಾರಣೆ ಮಾಡಲು ಕೆಲವೊಂದು ವಿಧಾನಗಳು ಇಲ್ಲಿವೆ. ಉಬ್ಬಸ ಬಂದರೆ ಆಗ ನೀವು ತಕ್ಷಣವೇ ಹೋಗಿ ವೈದ್ಯರನ್ನು ಭೇಟಿ ಮಾಡಿ. ಇದರ ಹೊರತಾಗಿ ಇಲ್ಲಿ ಕೊಟ್ಟಿರುವಂತಹ ಕೆಲವೊಂದು ನೈಸರ್ಗಿಕ ವಿಧಾನಗಳನ್ನು ನೀವು ಬಳಸಿಕೊಳ್ಳಬಹುದು.

Wheezing Naturally

ದೀರ್ಘವಾಗಿ ಉಸಿರಾಟ

ದೀರ್ಘವಾಗಿ ಉಸಿರಾಡುವುದರಿಂದ ಉಸಿರಾಟದ ತೊಂದರೆ ನಿವಾರಣೆ ಮಾಡಬಹುದು. ಒಂದು ಅಧ್ಯಯನದ ಪ್ರಕಾರ ಯೋಗಗಳಲ್ಲಿ ಮಾಡುವಂತಹ ದೀರ್ಘ ಉಸಿರಾಡವು ಅಸ್ತಮಾ ಮತ್ತು ಉಬ್ಬಸದಿಂದ ಉಂಟಾಗುವಂತಹ ಉಸಿರಾಟದ ತೊಂದರೆ ನಿವಾರಣೆ ಮಾಡಬಹುದು.

•ನೆಲದ ಮೇಲೆ ಮಲಗಿಕೊಳ್ಳಿ ಮತ್ತು ಕೈಗಳನ್ನು ಹೊಟ್ಟೆಯ ಮೇಲಿಡಿ.

•ದೀರ್ಘವಾಗಿ ಉಸಿರಾಡಿ ಮತ್ತು ಕೆಲವು ಸೆಕೆಂಡುಗಳ ಕಾಲ ಉಸಿರಾಟವನ್ನು ಹಿಡಿದಿಡಿ.

•ನಿಧಾನವಾಗಿ ಬಾಯಿ ಮೂಲಕ ಉಸಿರಾಡಿ.

•ಈ ವ್ಯಾಯಾಮವನ್ನು ನೀವು 5-10 ನಿಮಿಷ ಕಾಲ ದಿನದಲ್ಲಿ ಹಲವಾರು ಬಾರಿ ನಡೆಸಿ.

Most Read: ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

ಹಬೆ ಎಳೆಯುವುದು

ಹಬೆಯನ್ನು ಎಳೆಯುವುದು ತುಂಬಾ ಪರಿಣಾಮಕಾರಿಯಾಗಿ ಸೈನಸ್ ನ್ನು ನಿವರಣೆ ಮಾಡುವುದು ಮತ್ತು ಶ್ವಾಸನಾಳಗಳನ್ನು ತೆರೆಯುವುದು. ಇದರಿಂದ ಉಸಿರಾಡಲು ತೊಂದರೆ ಆಗದು.

•ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಕೆಲವು ಹನಿ ಪುದೀನಾ ಎಣ್ಣೆ ಅಥವಾ ಬೇರೆ ಸಾರಭೂತ ತೈಲ ಹಾಕಿಕೊಳ್ಳಿ.

•ಮುಖವನ್ನು ಪಾತ್ರೆಯ ಕಡೆಗೆ ಇಡಿ ಮತ್ತು ತಲೆಗೆ ಒಂದು ಟವೆಲ್ ಹಾಕಿಕೊಳ್ಳಿ. ಇದರಿಂದ ಹಬೆಯು ಹೊರಗೆ ಹೋಗದು.

•ಈ ವೇಳೆ ನೀವು ದೀರ್ಘವಾಗಿ ಉಸಿರು ಎಳೆದುಕೊಳ್ಳಬೇಕು.

Wheezing Naturally

ಶುಂಠಿ

ಶುಂಠಿಯಲ್ಲಿ ಉರಿಯೂತ ಶಮನಕಾರಿ ಮತ್ತು ಆಂಟಿಆಕ್ಸಿಡೆಂಟ್ ಗುಣಗಳು ಇವೆ. ಇದು ಶ್ವಾಸಕೋಶದ ಸೋಂಕಿನಿಂದಾಗಿ ಉಂಟಾಗಿರುವ ಉರಿಯೂತ ಕಡಿಮೆ ಮಾಡುವುದು. ಆರ್ ಎಸ್ ವಿ ವೈರಸ್ ವಿರುದ್ಧ ಶುಂಠಿಯು ತುಂಬಾ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ. ಇದು ಶ್ವಾಸಕೋಶದಲ್ಲಿ ಸೋಂಕು ಹರಡುವ ಸಾಮಾನ್ಯ ವೈರಸ್ ಆಗಿದೆ.

ಶುಂಠಿ ಜಗಿಯಿರಿ ಅಥವಾ ಅದರ ಚಾ ಮಾಡಿ ಕುಡಿಯಿರಿ.

ತುಟಿಗಳನ್ನು ಮುಚ್ಚಿಕೊಂಡು ಉಸಿರಾಟ

ಉಸಿರಾಟದ ತೊಂದರೆ ಆಗ ನೀವು ತುಟಿಗಳನ್ನು ಜತೆಯಾಗಿಸಿ, ಮುಚ್ಚಿಕೊಂಡು ಉಸಿರಾಡಬೇಕು. ಇದರಿಂದ ಉಸಿರಾಟದ ತೊಂದರೆ ಕಡಿಮೆ ಆಗುವುದು.

•ಭುಜಗಳನ್ನು ಆರಾಮವಾಗಿಸಿಕೊಂಡು ಕುಳಿತುಕೊಳ್ಳಿ.

•ಕೆಲವು ಸೆಕೆಂಡುಗಳ ಕಾಲ ಮೂಗಿನಿಂದ ಉಸಿರಾಡಿ ಮತ್ತು ನಾಲ್ಕು ಸಂಖ್ಯೆ ಮನಸ್ಸಿನಲ್ಲಿ ನೆನೆಸುತ್ತಿದ್ದ ತುಟಿಗಳಿಂದ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ.

•10 ನಿಮಿಷ ಕಾಲ ಇದನ್ನು ಮುಂದುವರಿಸಿ.

ಬಿಸಿ ಪಾನೀಯ

ಬಿಸಿ ಪಾನೀಯವು ಶ್ವಾಸನಾಳವನ್ನು ತೆರೆಯುವುದು ಮತ್ತು ಕಫ ನಿವಾರಿಸುವುದು. ಕೆಫಿನ್ ಇರುವಂತಹ ಚಾ ಮತ್ತು ಕಾಫಿ ಶ್ವಾಸಕೋಶಕ್ಕೆ ಹೋಗುವಂತಹ ನಾಳಗಳನ್ನು ತೆರೆಯುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

•ಕಾಫಿ, ಗಿಡಮೂಲಿಕೆ ಚಹಾ ಅಥವಾ ಸ್ವಲ್ಪ ಬಿಸಿ ನೀರು ದಿನದಲ್ಲಿ ಮೂರು ಸಲ ಕುಡಿಯಿರಿ.

Wheezing Naturally

ತಾಜಾ ಹಣ್ಣುಗಳು ಮತ್ತು ತರಕಾರಿಗಳು

ಹಣ್ಣುಗಳು ಮತ್ತು ತರಕಾರಿಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದ್ದು, ಶ್ವಾಸಕೋಶಕ್ಕೆ ಇದು ತುಂಬಾ ಒಳ್ಳೆಯದು ಎಂದು ಅಧ್ಯಯನಗಳ ವರದಿಯು ಹೇಳಿವೆ. ವಿಟಮಿನ್ ಸಿ ಇರುವಂತಹ ಆಹಾರಗಳಾಗಿರುವಂತಹ ಬ್ರಾಕೋಲಿ, ಟೊಮೆಟೊ, ದೊಣ್ಣೆ ಮೆಣಸು ಇತ್ಯಾದಿ ಸೇವಿಸಿದರೆ ಉಬ್ಬಸದ ಸಮಸ್ಯೆ ನಿವಾರಣೆ ಆಗುವುದು.

Most Read: ಉಸಿರಾಟ ತೊಂದರೆ: ಇದು ಅಸ್ತಮಾವೇ ಅಥವಾ ಬೇರೆ ಏನಾದರೂ ಕಾಯಿಲೆಯೇ?

ಆರ್ದ್ರಕ

ಆರ್ದ್ರಕ ವನ್ನು ಕೋಣೆಯಲ್ಲಿ ಬಳಸಿಕೊಂಡರೆ ಆಗ ಶ್ವಾಸನಾಳವು ಕಟ್ಟಿರುವದು ನಿವಾರಣೆ ಆಗುವುದು ಮತ್ತು ಉಬ್ಬಸ ತೀವ್ರತೆಯು ಕಡಿಮೆ ಆಗುವುದು. ಆರ್ದ್ರಕದ ನೀರಿಗೆ ನೀವು ಪುದೀನಾ ಎಣ್ಣೆಯನ್ನು ಹಾಕಿಕೊಳ್ಳಿ.

•ಉಬ್ಬಸ ನಿವಾರಣೆಗೆ ಜೀವನಶೈಲಿ ಬದಲಾಯಿಸಿಕೊಳ್ಳಿ.

•ಧೂಮಪಾನ ತ್ಯಜಿಸಿ ಮತ್ತು ಅತಿಯಾಗಿ ಹೊಗೆಯ ಬಳಿಗೆ ಹೋಗಬೇಡಿ.

•ವ್ಯಾಯಾಮ ಮಾಡಿ.

•ಚಳಿ ಮತ್ತು ಒಣ ವಾತಾವರಣದಲ್ಲಿ ನೀವು ವ್ಯಾಯಾಮ ಮಾಡಬೇಡಿ.

•ಅಲರ್ಜಿ ಮತ್ತು ಕಲುಷಿತ ವಾತಾವರಣದಿಂದ ದೂರವಿರಿ.

English summary

Ways To Reduce Your Wheezing Naturally

Wheezing occurs when there is an inflammation and narrowing of the airways. The most common causes are asthma and chronic obstructive pulmonary disease (COPD), both of which cause narrowing and spasms in the small airways of the lungs. Ways to reduce wheezing are humidifiers, hot drinks, deep breathing, steam inhalation, etc.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X