For Quick Alerts
ALLOW NOTIFICATIONS  
For Daily Alerts

ಹೊಟ್ಟೆ ತುಂಬ ಊಟ ಮಾಡಿದ ಬಳಿಕ ಇಂತಹ ಅನಾರೋಗ್ಯಕರ ಕಾರ್ಯಗಳನ್ನು ಮಾಡಲೇಬೇಡಿ…

|

ನಮಗೆ ಹಿಂದಿನಿಂದಲೂ ಹಿರಿಯರು ಕೆಲವೊಂದು ಆಹಾರ ಕ್ರಮಗಳನ್ನು ಹೇಳಿಕೊಟ್ಟಿದ್ದಾರೆ. ಇದರ ಪ್ರಕಾರ ನಾವು ನಡೆದರೆ ಖಂಡಿತವಾಗಿಯೂ ಆರೋಗ್ಯಕಾರಿ ಜೀವನ ನಮ್ಮದಾಗಿಸಿಕೊಳ್ಳಬಹುದು. ಆದರೆ ಅದೆಲ್ಲವನ್ನೂ ಕೇಳುವಂತಹ ವ್ಯವದಾನವು ನಮಗಿಲ್ಲ ಮತ್ತು ಆಹಾರ ಕೂಡ ಬಾಯಿಗೆ ರುಚಿಯಿರುವುದನ್ನು ತಿನ್ನುತ್ತೇವೆ. ಆದರೆ ಹೊಟ್ಟೆ ತುಂಬಾ ತಿಂದ ಬಳಿಕ ಹೆಚ್ಚಾಗಿ ನಿದ್ರೆ ಬರುವುದು ಸಹಜ. ಹೆಚ್ಚಿನವರು ಮಧ್ಯಾಹ್ನ ಊಟ ಮಾಡಿದ ಬಳಿಕ ನಿದ್ರೆಗೆ ಶರಣಾಗುವರು. ಇನ್ನು ಕೆಲವರು ಹೊಟ್ಟೆ ತುಂಬಾ ಊಟ ಮಾಡಿ ಧೂಮಪಾನ ಮಾಡುವರು, ಚಹಾ ಕುಡಿಯುವ ಜನರು ಕೂಡ ಇದ್ದಾರೆ.

ಚಹಾ ಕುಡಿದರೆ ಆಹಾರ ಕರಗುವುದು ಎಂದು ನಂಬಲಾಗಿದೆ. ಆದರೆ ಇಂತಹ ಕೆಲವೊಂದು ಅಭ್ಯಾಸಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದು. ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ಯಾವ್ಯಾವ ಕೆಲಸಗಳನ್ನು ಮಾಡಬಾರದು ಎಂದು ನಾವು ನಿಮಗೆ ಈ ಲೇಖನ ಮೂಲಕ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಅಳವಡಿಸಿಕೊಂಡು ಹೋದರೆ ಆಗ ಆರೋಗ್ಯವು ನಿಮ್ಮದಾಗುವುದು. ಊಟವಾದ ತಕ್ಷಣ ನೀವು ಕಡೆಗಣಿಸಬೇಕಾದ ಐದು ಅಂಶಗಳು ಇಲ್ಲಿವೆ...

ನಿದ್ರಿಸುವುದು

ನಿದ್ರಿಸುವುದು

ಹೆಚ್ಚಾಗಿ ಮಧ್ಯಾಹ್ನ ಊಟವಾದ ಬಳಿಕ ಸ್ವಲ್ಪ ನಿದ್ರೆ ಮಾಡ ಬೇಕೆಂದು ಹಿಂದಿನಿಂದಲೂ ನಂಬಿಕೊಂಡು ಬಂದಿರುವುದು. ಆದರೆ ನೀವು ಊಟ ಮಾಡಿದ ಬಳಿಕ ಮಲಗಿದರೆ ಅದರಿಂದ ಆಹಾರವು ಜೀರ್ಣವಾಗುವುದಿಲ್ಲ. ಇದರಿಂದ ನೀವು ನಿದ್ರೆಯಿಂದ ಎದ್ದ ಬಳಿಕವೂ ಹೊಟ್ಟೆ ತುಂಬಿದಂತೆ ಇರುವುದು. ಊಟ ಮಾಡಿದ ತಕ್ಷಣ ನೀವು ಮಲಗಿದರೆ ಅದರಿಂದ ನಿಮಗೆ ಆರಾಮ ಕೂಡ ಸಿಗದು.

ಧೂಮಪಾನ

ಧೂಮಪಾನ

ಊಟವಾದ ತಕ್ಷಣ ನೀವು ಧೂಮಪಾನ ಮಾಡುವುದು ಹತ್ತು ಸಲ ಧೂಮಪಾನ ಮಾಡಿದಂತೆ ಎಂದು ಹೇಳಲಾಗುತ್ತದೆ. ಇದು ಎಷ್ಟು ನಿಜ ಅಥವಾ ಸುಳ್ಳು ಎಂದು ಗೊತ್ತಿಲ್ಲ. ಆದರೆ ಧೂಮಪಾನವು ನಿಮ್ಮ ದೇಹಕ್ಕೆ ಹಾನಿ ಉಂಟು ಮಾಡುವುದು ಮತ್ತು ಊಟವಾದ ತಕ್ಷಣ ನೀವು ಧೂಮಪಾನ ಮಾಡಬಾರದು. ಊಟವಾದ ತಕ್ಷಣ ಮಾತ್ರವಲ್ಲದೆ ಧೂಮಪಾನ ಮಾಡದೇ ಇದ್ದರೆ ತುಂಬಾ ಒಳ್ಳೆಯದು.

Most Read:2019 ಚಂದ್ರ ಗ್ರಹಣದ ಪ್ರಭಾವ ರಾಶಿಚಕ್ರದ ಮೇಲೆ ಹೇಗಿರುತ್ತೆ ನೋಡಿ...

ಸ್ನಾನ ಮಾಡುವುದು

ಸ್ನಾನ ಮಾಡುವುದು

ಊಟವಾದ ತಕ್ಷಣ ನೀವು ಹೋಗಿ ಸ್ನಾನ ಮಾಡಿದರೆ ಆಗ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುವುದು. ಸ್ನಾನ ಮಾಡುವ ವೇಳೆ ಹೊಟ್ಟೆಯ ಸುತ್ತಲಿನ ರಕ್ತವು ಬೇರೆ ಕಡೆಗೆ ಹೋಗುವುದರಿಂದ ಜೀರ್ಣ ಕ್ರಿಯೆಯು ವಿಳಂಬವಾಗುವುದು.

ಹಣ್ಣುಗಳು

ಹಣ್ಣುಗಳು

ನಮ್ಮ ಹೊಟ್ಟೆಯಲ್ಲಿ ವಿವಿಧ ರೀತಿಯ ಆಹಾರವು ತುಂಬಾ ವಿಭಿನ್ನವಾಗಿ ಜೀರ್ಣವಾಗುವುದು. ಊಟಕ್ಕೆ ಮೊದಲು ನೀವು ಹಣ್ಣುಗಳನ್ನು ತಿಂದರೆ ಅದು ಜೀರ್ಣಕ್ರಿಯೆಗೆ ಸುಲಭವಾಗುವುದು. ಹಣ್ಣುಗಳನ್ನು ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟವಾದ ಎರಡು ಗಂಟೆ ಬಳಿಕ ಸೇವಿಸಬೇಕು. ಊಟವಾದ ತಕ್ಷಣ ನೀವು ಹಣ್ಣುಗಳ ಸೇವನೆ ಮಾಡಿದರೆ ಆಗ ಆಹಾರ ಜೀರ್ಣವಾಗಲು ತುಂಬಾ ಕಷ್ಟಪಡುವುದು.

Most Read:ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!

ಚಹಾ

ಚಹಾ

ಚಹಾ ತುಂಬಾ ಆಮ್ಲೀಯವಾಗಿರುವುದು ಮತ್ತು ಇದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ನೀವು ಆಹಾರದಲ್ಲಿ ಯಾವುದೇ ರೀತಿಯ ಪ್ರೋಟೀನ್ ಸೇವನೆ ಮಾಡಿದರೆ ಅದರ ಬಳಿಕ ನೀವು ಚಾ ಕುಡಿದರೆ ಆಗ ಅದು ಆಹಾರದಲ್ಲಿರುವ ಪ್ರೋಟೀನ್ ನ್ನು ಗಟ್ಟಿಯಾಗಿಸುವುದು. ಇದರಿಂದಾಗಿ ಜೀರ್ಣಕ್ರಿಯೆಗೆ ತುಂಬಾ ಕಷ್ಟವಾಗುವುದು. ಊಟವಾದ ತಕ್ಷಣ ಚಾ ಕುಡಿದರೆ ಅದರಿಂದ ದೇಹಕ್ಕೆ ಕಬ್ಬಿನಾಂಶ ಹೀರಿಕೊಳ್ಳಲು ಕಠಿಣವಾಗುವುದು. ಊಟದ ಮೊದಲು ಅಥವಾ ಊಟವಾದ ತಕ್ಷಣ ಚಾ ಸೇವನೆ ಮಾಡಬೇಡಿ.

English summary

Unhealthy Things You Should Never Do after a Full Meal

Often, after a full meal, I naturally feel sleepy. On weekends, I sometimes head back to bed after lunch. Some of my smoker friends like to go for a puff immediately after a meal. Others like to have a cup of tea thinking it will help them digest the food. Many of these habits do you more harm than good.
X
Desktop Bottom Promotion