Just In
- 17 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 19 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಅರಿಶಿನ ಬೆರೆಸಿದ ನೀರು: ತಯಾರಿಸುವ ವಿಧಾನ ಹಾಗೂ ಆರೋಗ್ಯ ಪ್ರಯೋಜನಗಳು
ಪ್ರತಿಯೊಂದು ಅಡುಗೆ ಮನೆಗಳಲ್ಲಿ ಸಿಗುವ, ಹಲವಾರು ಔಷಧೀಯ ಗುಣಗಳನ್ನು ಹೊಂದಿರುವಂತಹ ಅರಿಶಿನ ವನ್ನು ಹಿಂದಿನಿಂದಲೂ ಭಾರತೀಯರು ಆಯುರ್ವೇದದಲ್ಲಿ ಚಿಕಿತ್ಸೆಗೆ ಬಳಸಿಕೊಂಡು ಬರಲಾಗುತ್ತಿದೆ. ಅರಿಶಿನ ದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಮತ್ತು ಇದು ನೈಸರ್ಗಿಕವಾಗಿ ಕೆಲವು ಕಾಯಿಲೆಗಳನ್ನು ನಿವಾರಣೆ ಮಾಡುವುದು. ಅರಿಶಿನ ಹಾಲಿನಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಅರಿಶಿನ ನೀರಿನಲ್ಲೂ ಔಷಧೀಯ ಗುಣಗಳು ಇವೆ.
ಅರಿಶಿನ ನೀರನ್ನು ಕೂಡ ಸೇವಿಸಬಹುದು. ಇದು ರಕ್ತವನ್ನು ಶುದ್ಧೀಕರಿಸುವುದು. ಬೆಳಗ್ಗೆ ನೀವು ಅರಿಶಿನ ನೀರನ್ನು ಕುಡಿದರೆ ಅದರಿಂದ ಮೆದುಳಿನ ಶಕ್ತಿಯು ಹೆಚ್ಚಾಗುವುದು. ಅರಿಶಿನ ದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಗಂಟು ನೋವು ಮತ್ತು ಉರಿಯೂತ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅರಿಶಿನದ ಲಾಭಗಳ ಬಗ್ಗೆ ಈಗಾಗಲೇ ತಿಳಿದಿರುವ ನಾವು ಅರಿಶಿನ ನೀರನ್ನು ಕುಡಿಯಲು ಹಲವಾರು ಕಾರಣಗಳಿವೆ.

ಅರಿಶಿನ ನೀರನ್ನು ತಯಾರಿಸುವುದು ಹೇಗೆ
*ಬೇಕಾಗುವ ಸಾಮಗ್ರಿಗಳು
*ಅರ್ಧ ಲಿಂಬೆ
*¼ ಚಮಚ ಅರಿಶಿನ ಹುಡಿ
*1 ಲೋಟ ಬಿಸಿ ನೀರು
*ರುಚಿಗೆ ಬೇಕಾದಷ್ಟು ಜೇನುತುಪ್ಪ
Most Read: ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ವಿಧಾನ
*ಅರ್ಧ ಲಿಂಬೆ ರಸವನ್ನು ಒಂದು ಲೋಟಕ್ಕೆ ಹಿಂಡಿಕೊಳ್ಳಿ.
ಇದಕ್ಕೆ ಈಗ ಅರಿಶಿನ ಹಾಕಿ.
*ಎರಡನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಬಿಸಿ ನೀರು ಹಾಕಿಕೊಂಡು ಲೋಟ ಪೂರ್ತಿ ತುಂಬಿ.
*ರುಚಿಗೆ ಬೇಕಾದಷ್ಟು ಜೇನುತುಪ್ಪ ಹಾಕಿಕೊಳ್ಳಿ.
ಈಗ ಸರಿಯಾಗಿ ಮಿಶ್ರಣ ಮಾಡಿ.
*ಅರಿಶಿನ ಹುಡಿಗೆ ಲೋಟದ ಅಡಿಭಾಗದಲ್ಲಿ ನಿಲ್ಲುವ ಕಾರಣದಿಂದಾಗಿ ನೀವು ಸರಿಯಾಗಿ ಅಲುಗಾಡಿಸಿ ನೀರು ಕುಡಿಯಿರಿ.

ಅರಿಶಿನ ನೀರಿನ ಲಾಭಗಳು
ಕ್ಯಾನ್ಸರ್ ಅಪಾಯ ತಗ್ಗಿಸುವುದು-ಹಲವಾರು ಸಂಶೋಧನೆಗಳಿಂದ ಕಂಡುಕೊಂಡಿರುವಂತಹ ವಿಚಾರವೆಂದರೆ ಅರಿಶಿನ ದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಕ್ಯಾನ್ಸರ್ ಕಾರಕ ಕೋಶಗಳು ಬೆಳೆಯುವುದನ್ನು ತಡೆಯುವುದು. ಇದರಿಂದಾಗಿ ಮೇಧೋಜೀರಕ ಗ್ರಂಥಿ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಇತರ ಕೆಲವು ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವುದು ಎಂದು ಅಧ್ಯಯನಗಳು ಹೇಳಿವೆ.

ಉರಿಯೂತ ಶಮನಕಾರಿ ಗುಣಗಳು
ಅರಿಶಿನದಲ್ಲಿ ಕರ್ಕ್ಯುಮಿನ್ ಎನ್ನುವುದು ಒಂದು ಅದ್ಭುತ ಅಂಶವಾಗಿದೆ ಮತ್ತು ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು. ಕರ್ಕ್ಯುಮಿನ್ ನಿಂದಾಗಿ ಅರಿಶಿನ ವು ಒಳ್ಳೆಯ ಉರಿಯೂತ ಶಮನಕಾರಿ ಆಗಿದೆ. ಇದು ಸಂಧಿವಾತ ರೋಗಿಗಳಿಗೆ ಕೂಡ ತುಂಬಾ ಒಳ್ಳೆಯದು. ಸಂಧಿವಾತದ ರೋಗಿಗಳಿಗೆ ಉರಿಯೂತವನ್ನು ನೈಸರ್ಗಿಕವಾಗಿ ತಗ್ಗಿಸಲು ಇದು ನೆರವಾಗುವುದು.ಉರಿಯೂತ ನಿವಾರಣೆ ಮಾಡಲು ಹಸಿ ಅರಿಶಿನ ವು ತುಂಬಾ ಪರಿಣಾಮಕಾರಿ. ಸಂಧಿವಾತ ಇರುವವರು ಹಸಿ ಅರಿಶಿನ ಬಳಸಿಕೊಂಡು ಚಾ ತಯಾರಿಸಿ, ಅದರಿಂದ ಅತ್ಯಧಿಕ ಲಾಭ ಪಡೆಯಬಹುದು ಅಥವಾ ನೇರವಾಗಿ ಅರಿಶಿನ ನೀರನ್ನು ಕುಡಿಯಬಹುದು.

ಮೆದುಳಿನ ಕಾರ್ಯಕ್ಷಮತೆ ಅಧಿಕಗೊಳಿಸುವುದು
ಅರಿಶಿನವು ವಯಸ್ಸಾಗುವ ವೇಳೆ ಬರುವಂತಹ ಅಲ್ಝೈಮರ್ ಮತ್ತು ಖಿನ್ನತೆ ಅಪಾಯ ಕಡಿಮೆ ಮಾಡುವುದು. ಕರ್ಕ್ಯುಮಿನ್ ಅಂಶವು ಮೆದುಳಿನ ಕಾರ್ಯವನ್ನು ಉತ್ತೇಜಿಸುವುದು ಮತ್ತು ಜ್ಞಾಪಕ ಶಕ್ತಿ ಸುಧಾರಿಸುವುದು. ಅಧ್ಯಯನಗಳ ಪ್ರಕಾರ ಅರಿಶಿನ ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು. ಇದು ತಾರ್ಕಿಕವಾಗಿ ಆಲೋಚಿಸುವುದನ್ನು ಉತ್ತೇಜಿಸುವುದು.
Most Read: ಚಿನ್ನದ ದೇವತೆ 'ಅರಿಶಿನ'ದ ಚಿನ್ನದಂತಹ ಗುಣಗಳು...

ಹೊಟ್ಟೆಯ ಆರೋಗ್ಯ ಸುಧಾರಿಸುವುದು
ಅರಿಶಿನ ವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಹೊಟ್ಟೆಗೆ ಸಂಬಂಧಿಸಿರುವ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಅರಿಶಿನ ವು ಒಳ್ಳೆಯ ಸುವಾಸನೆ ಹಾಗೂ ರುಚಿ ಹೊಂದಿರುವ ಕಾರಣದಿಂದಾಗಿ ಅದು ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುವುದು. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಅರಿಶಿನ ವನ್ನು ನಿಮ್ಮ ಆಹಾರದಲ್ಲಿ ಬಳಕೆ ಮಾಡುವ ಕಾರಣದಿಂದ ಜೀರ್ಣಕ್ರಿಯೆಯು ಸುಧಾರಣೆ ಆಗುವುದು. ಇದು ಆಹಾರದ ರುಚಿ ಹೆಚ್ಚು ಮಾಡುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಹೊಟ್ಟೆಯ ಉರಿಯೂತ ಕಡಿಮೆ ಮಾಡುವುದು. ಪಿತ್ತರಸದ ಉತ್ಪತ್ತಿಯನ್ನು ಇದು ಉತ್ತೇಜಿಸುವುದು ಮತ್ತು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ತಡೆಯುವುದು.

ನೋವಿನ ವಿರುದ್ಧ ಹೋರಾಡಲು ನೆರವಾಗುವುದು
ದೇಹದಲ್ಲಿ ನೋವು ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ. ಅರಿಶಿನ ವು ದೇಹದ ನೋವನ್ನು ನಿವಾರಣೆ ಮಾಡುವುದು. ಇದು ಸಂಧಿವಾತದ ನೋವನ್ನು ಕಡಿಮೆ ಮಾಡುವುದು. ನೈಸರ್ಗಿಕ ನೋವು ನಿವಾರಕವಾಗಿ ನೀವು ಅರಿಶಿನ ನೀರನ್ನು ಕುಡಿಯ ಬಹುದು. ಅರಿಶಿನ ಹಾಲು ಅಥವಾ ಅರಿಶಿನ ನೀರು ನೋವು ನಿವಾರಣೆ ಮಾಡಲು ನೆರವು ನೀಡುವುದು. ಸಂಧಿವಾತ ಇರುವಂತಹವರು ವೈದ್ಯರಿಂದ ಸಲಹೆ ಪಡೆದುಕೊಂಡು ಅರಿಶಿನ ದ ಕ್ಯಾಪ್ಸೂಲ್ ಗಳನ್ನು ಸೇವಿಸಬಹುದು ಅಥವಾ ಅರಿಶಿನ ನೀರನ್ನು ಕುಡಿಯಬಹುದು.