For Quick Alerts
ALLOW NOTIFICATIONS  
For Daily Alerts

ನಾಲಿಗೆಯ ಕ್ಯಾನ್ಸರ್-ನೀವು ತಿಳಿಯಲೇಬೇಕಾದ ಸಂಗತಿಗಳು

|

ಬಾಯಿಯ ಒಳಭಾಗದಲ್ಲಿ ಆವರಿಸುವ ಹಲವಾರು ಕ್ಯಾನ್ಸರ್ ಗಳ ಪೈಕಿ ನಾಲಿಗೆಯ ಕ್ಯಾನ್ಸರ್ ಒಂದು. ಇತರ ಯಾವುದೇ ಕ್ಯಾನ್ಸರ್ ನಂತೆ ಒಂದು ಅಂಗ ಅಥವಾ ಅಂಗಾಂಶದ ಜೀವಕೋಶಗಳು ನಿಯಂತ್ರಣ ಮೀರಿ ಬೆಳವಣಿಗೆ ಪಡೆದು ಗಡ್ಡೆಯ ರೂಪ ತಳೆಯುವುದನ್ನು ಬಾಯಿಯ ಒಳಭಾಗದ ಅಂಗಗಳಲ್ಲಿಯೂ ಕಾಣಬಹುದು.

ನಾಲಿಗೆಯ ಕ್ಯಾನ್ಸರ್ ನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಮೇಲುನಾಲಿಗೆಯ ಕ್ಯಾನ್ಸರ್ (oral tongue cancer), ಅಥವಾ ನಾವು ಬಾಯಿಯಿಂದ ಹೊರಚಾಚಬಹುದಾದ ನಾಲಿಗೆಯ ಭಾಗಕ್ಕೆ ಆವರಿಸಬಹುದಾದ ಕ್ಯಾನ್ಸರ್ ಹಾಗೂ ಎರಡನೆಯದು ಕೆಳನಾಲಿಗೆಯ ಕ್ಯಾನ್ಸರ್ (base of tongue cancer),ಅಥವಾ ನಾಲಿಗೆಯ ಬುಡಕ್ಕೆ ಆವರಿಸುವ ಕ್ಯಾನ್ಸರ್.

ಮೊದಲ ಬಗೆ ಸುಲಭವಾಗಿ ಗಮನಕ್ಕೆ ಬರುತ್ತದೆ. ಆದರೆ ಎರಡನೆಯ ವಿಧ ಕಣ್ಣಿಗೆ ಗೋಚರಿಸದೇ ಇರುವ ಕಾರಣ ಇದರ ಪ್ರಭಾವ ನಿಧಾನವಾಗಿ ವಿಸ್ತರಿಸುತ್ತಾ ಗಂಟಲಿನಲ್ಲಿರುವ ದುಗ್ಧರಸ ಹಾದುಹೋಗುವ ಭಾಗವನ್ನು ಆವರಿಸಿದ ಬಳಿಕವೇ ಇದರ ಇರುವಿಕೆಯ ಅರಿವಾಗುತ್ತದೆ. ಇತರ ಕ್ಯಾನ್ಸರ್ ಗಳಿಗೆ ಹೋಲಿಸಿದಾಗ ನಾಲಿಗೆಯ ಕ್ಯಾನ್ಸರ್ ಅತಿ ಕಡಿಮೆ ವ್ಯಕ್ತಿಗಳಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ ವೃದ್ಧರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಮಕ್ಕಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಅತ್ಯಪರೂಪವಾಗಿದೆ...

ಲಕ್ಷಣಗಳು

ಲಕ್ಷಣಗಳು

ನಾಲಿಗೆಗೆ ಕ್ಯಾನ್ಸರ್ ತಗಲಿರುವ ಮೊದಲ ಲಕ್ಷಣವೆಂದರೆ ನಾಲಿಗೆಯ ಪಕ್ಕದ ಭಾಗದಲ್ಲಿ ಕಾಣಬರುವ ಚಿಕ್ಕ ಗಂಟುಗಳು ಅಥವಾ ಗುಳ್ಳೆಗಳು. ಇವು ಚಿಕ್ಕದಾಗಿ ಪ್ರಾರಂಭಗೊಂಡು ನಿಧಾನವಾಗಿ ಬೆಳೆಯುತ್ತಲೇ ಹೋಗುತ್ತವೆ, ಇಲ್ಲವಾಗುವ ಗುಣವನ್ನೇ ತೋರುವುದಿಲ್ಲ. ಸಾಮಾನ್ಯವಾಗಿ ಇವು ಗುಲಾಬಿಮಿಶ್ರಿತ ಕೆಂಪು ಬಣ್ನದಲ್ಲಿರುತ್ತವೆ. ಕೆಲವು ಸಂದರ್ಭಗಳಲ್ಲಿ ಇವುಗಳನ್ನು ಮುಟ್ಟಿದರೆ ಅಥವಾ ಅಕಸ್ಮಾತ್ ಕಚ್ಚಿದರೆ ಇಲ್ಲಿಂದ ರಕ್ತ ಒಸರುತ್ತದೆ.

Most Read:ಸೈಲೆಂಟ್ ಕಿಲ್ಲರ್ 'ಶ್ವಾಸಕೋಶದ ಕ್ಯಾನ್ಸರ್‌'ನ ಲಕ್ಷಣಗಳು

ಈ ಲಕ್ಷಣಗಳೂ ಜೊತೆಯಾಗಿ ಕಾಣಿಸಿಕೊಳ್ಳಬಹುದು

ಈ ಲಕ್ಷಣಗಳೂ ಜೊತೆಯಾಗಿ ಕಾಣಿಸಿಕೊಳ್ಳಬಹುದು

*ನಾಲಿಗೆಯಲ್ಲಿ ಅಥವಾ ಅಕ್ಕಪಕ್ಕದ ಅಂಗಗಳಲ್ಲಿ ನೋವು

ಬದಲಾದ ಧ್ವನಿ, ವಿಶೇಷವಾಗಿ ಗಡಸುಗೊಳ್ಳುವುದು

*ಆಹಾರವನ್ನು ನುಂಗಲು ಕಷ್ಟಕರವಾಗುವುದು

*ಒಂದು ವೇಳೆ ಇವುಗಳಲ್ಲಿ ಕನಿಷ್ಟ ಒಂದಾದರೂ ಲಕ್ಷಣವಿದ್ದು *ನಾಲಿಗೆಯಲ್ಲಿ ಗುಳ್ಳೆಯೂ ಇದ್ದರೆ ಹಾಗೂ ಒಂದು ವಾರವಾದರೂ ಕಡಿಮೆಯಾಗದೇ ಇದ್ದರೆ ವೈದ್ಯರನ್ನು ಕಾಣುವುದು ಅಗತ್ಯ.

ನಾಲಿಗೆಯ ಬುಡದಲ್ಲಿ ತೊಂದರೆ ಪ್ರಾರಂಭವಾಗಿದ್ದರೆ

ನಾಲಿಗೆಯ ಬುಡದಲ್ಲಿ ತೊಂದರೆ ಪ್ರಾರಂಭವಾಗಿದ್ದರೆ

ಒಂದು ವೇಳೆ ನಾಲಿಗೆಯ ಬುಡದಲ್ಲಿ ತೊಂದರೆ ಪ್ರಾರಂಭವಾಗಿದ್ದರೆ ಇದರ ಲಕ್ಷಣಗಳು ಗಮನಕ್ಕೆ ಬಾರದಿರುವ ಸಾಧ್ಯತೆ ಅಧಿಕ. ಪ್ರಾರಂಭಿಕ ಅವಸ್ಥೆಯಲ್ಲಿರುವ ಈ ಬಗೆಯ ಕ್ಯಾನ್ಸರ್ ನ ಲಕ್ಷಣಗಳನ್ನು ಕೇವಲ ದಂತವೈದ್ಯರು ಮಾತ್ರವೇ ಕೆಲವು ಪರೀಕ್ಷೆಗಳ ಮೂಲಕ ಖಚಿತಪಡಿಸಬಲ್ಲರು. ಅಥವಾ ಬೇರಾವುದೋ ತೊಂದರೆಗಾಗಿ ನಿಮ್ಮ ವೈದ್ಯರು ನಡೆಸುವ ಪರೀಕ್ಷೆಯಿಂದಲೂ ಈ ಲಕ್ಷಣಗಳು ಗೋಚರಿಸಬಹುದೇ ವಿನ: ಸಾಮಾನ್ಯವಾಗಿ ಗಮನಕ್ಕೆ ಬಾರದೇ ಹೋಗುತ್ತದೆ.

ಕಾರಣಗಳು

ಕಾರಣಗಳು

ಹೆಚ್ ಪಿ ವಿ (The human papillomavirus (HPV) ಎಂಬ ವೈರಸ್ ನ ಸೋಂಕಿನಿಂದ ನಾಲಿಗೆಯ ಬುಡದಲ್ಲಿ ಈ ಕ್ಯಾನ್ಸರ್ ಉಂಟಾಗುತ್ತದೆ. ಅಲ್ಲದೇ ಗರ್ಭಕಂಠದ ಕ್ಯಾನ್ಸರ್, ಶಿಶ್ನದ ಕ್ಯಾನ್ಸರ್ ಹಾಗೂ ಗುದದ್ವಾರದ ಕ್ಯಾನ್ಸರ್ ಗೂ ಇದೇ ವೈರಸ್ ಕಾರಣ. ಸಾಮಾನ್ಯವಾಗಿ ಇದು ಲೈಂಗಿಕ ಸಂಪರ್ಕದ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ವೈರಸ್ ಗಳಲ್ಲಿಯೂ ಕೆಲವಾರು ವಿಧಗಳಿವೆ. ಎಲ್ಲಾ ಹೆಚ್ ಪಿ ವಿ ಗಳಿಂದ ಮಾರಣಾಂತಿಕ ಕ್ಯಾನ್ಸರ್ ಉಂಟಾಗುವುದಿಲ್ಲ. ಆದರೆ ಕೆಲವು ಮಾರಣಾಂತಿಕ ವಾಗಿದ್ದು ಇವುಗಳನ್ನು ಅತಿ ಹೆಚ್ಚಿನ ರೋಗಕಾರಕ ಹೆಚ್ ಪಿ ವಿ (high-risk HPV) ಎಂದು ವರ್ಗೀಕರಿಸಲಾಗಿದೆ.

ಇಂತಹ ಕೆಟ್ಟ ಅಭ್ಯಾಸಗಳೂ ನಾಲಿಗೆಯ ಕ್ಯಾನ್ಸರ್ ಗೆ ಕಾರಣವಾಗಬಹುದು

ಇಂತಹ ಕೆಟ್ಟ ಅಭ್ಯಾಸಗಳೂ ನಾಲಿಗೆಯ ಕ್ಯಾನ್ಸರ್ ಗೆ ಕಾರಣವಾಗಬಹುದು

*ತಂಬಾಕು ಸೇವನೆ

*ಮದ್ಯಪಾನ

*ಅಡ್ಡಾದಿಡ್ಡಿಯಾಗಿರುವ ಹಲ್ಲುಗಳು

*ಹಲ್ಲು ಮತ್ತು ಒಸಡುಗಳ ಬಗ್ಗೆ ಅಗತ್ಯ ಕಾಳಜಿ ವಹಿಸದೇ ಇರುವುದು.

*ಅಲ್ಲದೇ ಈ ರೋಗ ಅನುವಂಶಿಕವಾಗಿಯೂ ಬರಬಹುದಾದ ಕಾಯಿಲೆಯಾಗಿದ್ದು ಕುಟುಂಬ ಹಿನ್ನೆಲೆಯಲ್ಲಿ ಈ ಪರಿಯ ಕ್ಯಾನ್ಸರ್ ಇದ್ದರೆ ವಂಶಜರಿಗೆ ಆವರಿಸುವ ಸಾಧ್ಯತೆಯಿದೆ.

ತಪಾಸಣೆ

ತಪಾಸಣೆ

ವೈದ್ಯರು ನಿಮ್ಮ ಬಾಯಿಯ ಒಳಭಾಗದ ಕೂಲಂಕಶ ತಪಾಸಣೆ ನಡೆಸುತ್ತಾರೆ ಹಾಗೂ ಇದಕ್ಕೆ ಅಗತ್ಯವೆನಿಸಿದ ಲಕ್ಷಣಗಳನ್ನು ತಿಳಿದುಕೊಳ್ಳಲು ಹಲವಾರು ಪ್ರಶ್ನೆಗಳನ್ನು ಕೇಳಬಹುದು. ಅವಶ್ಯವೆನಿಸಿದರೆ ಎಕ್ಸ್ ರೇ ಅಥವಾ ಸಿಟಿ ಸ್ಕ್ಯಾನ್ (computerized tomographyscan)ವರದಿಯನ್ನು ಪಡೆದುಕೊಳ್ಳಲು ಸಲಹೆ ಮಾಡಬಹುದು. ಹಲವು ಕೋನಗಳಿಂದ ತೆಗೆದ ಬಾಯಿಯ ಎಕ್ಸ್ ರೇ ಚಿತ್ರಗಳನ್ನು ಪರಿಶೀಲಿಸಿ ಹಲವು ವಿವರಗಳನ್ನು ಕ್ರೋಢೀಕರಿಸಿ ವಿಶ್ಲೇಷಿಸಿದ ಬಳಿಕವೇ ವೈದ್ಯರು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರಬಹುದು. ಇನ್ನೂ ಅಗತ್ಯ ಎನಿಸಿದರೆ ಬಾಯಿಯ ಒಳಗಣ ಭಾಗದ ಒಂದು ಸಣ್ಣ ಚೂರನ್ನು ವೈದ್ಯರು ಸಂಗ್ರಹಿಸಿ (ಬಯಾಪ್ಸಿ) ಪ್ರಯೋಗಶಾಲೆಗೆ ಕಳುಹಿಸಿಕೊಡಬಹುದು.

Most Read: ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

ಚಿಕಿತ್ಸೆ

ಚಿಕಿತ್ಸೆ

ಕ್ಯಾನ್ಸರ್ ಗಡ್ಡೆಯ ಇರುವಿಕೆ ಖಚಿತವಾದರೆ, ಇದು ಯಾವ ಹಂತದಲ್ಲಿದೆ ಮತ್ತು ಎಷ್ಟು ದೊಡ್ಡದಾಗಿದೆ ಮತ್ತು ನಿರ್ದಿಷ್ಟವಾಗಿ ಎಲ್ಲಿ ರೂಪುಗೊಂಡಿದೆ ಎಂಬ ಮಾಹಿತಿಗಳನ್ನು ಆಧರಿಸಿ ಚಿಕಿತ್ಸೆಯನ್ನು ವೈದ್ಯರೇ ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಈ ರೋಗಕ್ಕೆ ಶಸ್ತ್ರಚಿಕಿತ್ಸೆಯಿಂದ ಈ ಗಡ್ಡೆಯನ್ನು ನಿವಾರಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಸಾಮಾನ್ಯವಾಗಿ ಹೊರ ನಾಲಿಗೆಯ ಕ್ಯಾನ್ಸರ್ ಗಡ್ಡೆಗಳನ್ನು ಈ ರೀತಿಯಾಗಿ ತೆಗೆದು ಹಾಕಲಾಗುತ್ತದೆ. ಗಡ್ಡೆಯ ಭಾಗದ ಜೊತೆಗೇ ಅಕ್ಕಪಕ್ಕದ ಅಂಗಾಂಶದ ಕೊಂಚ ಆರೋಗ್ಯಕರ ಭಾಗವನ್ನೂ ವೈದ್ಯರು ನಿವಾರಿಸಿ ಗಡ್ಡೆಯ ಒಂದು ಜೀವಕೋಶವೂ ಉಳಿಯದಂತೆ ಎಚ್ಚರಿಕೆ ವಹಿಸುತ್ತಾರೆ. ಏಕೆಂದರೆ ಒಂದು ಜೀವಕೋಶ ಉಳಿದರೂ ಇದು ಮತ್ತೊಮ್ಮೆ ಗಡ್ಡೆಯಾಗುವ ಸಂಭವವಿದೆ.

ಕೆಳನಾಲಿಗೆಯ ಕ್ಯಾನ್ಸರ್ ಆಗಿದ್ದರೆ

ಕೆಳನಾಲಿಗೆಯ ಕ್ಯಾನ್ಸರ್ ಆಗಿದ್ದರೆ

ಒಂದು ವೇಳೆ ಇದು ಕೆಳನಾಲಿಗೆಯ ಕ್ಯಾನ್ಸರ್ ಆಗಿದ್ದರೆ ಇದಕ್ಕೆ ರೇಡಿಯೇಶನ್ ಥೆರಪಿ (ಎಕ್ಸ್ ರೇ ಅಥವಾ ಇತರ ವಿದ್ಯುನ್ಮಾನ ಕಿರಣಗಳನ್ನು ಹಾಯಿಸುವ ವಿಧಾನ). ಗಡ್ಡೆಯ ಲಕ್ಷಣಗಳನ್ನು ಅನುಸರಿಸಿ ಇದಕ್ಕೆ ಅತ್ಯುತ್ತಮವಾದ ಏಕಬಗೆಯ ಅಥವಾ ಎರಡು ಮತ್ತು ಇತರ ವಿಧಾನಗಳ ಏಕಕಾಲದ ಬಳಕೆಯನ್ನೂ ವೈದ್ಯರು ನಿರ್ಧರಿಸಬಹುದು. ಖೀಮೋಥೆರಪಿ, ಕ್ಯಾನ್ಸರ್ ವಿರುದ್ದ ಹೋರಾಡುವ ಔಷಧಿಗಳು ಮತ್ತು ರೇಡಿಯೇಶನ್ ಥೆರಪಿ ವಿಧಾನಗಳನ್ನು ಜೊತೆಯಾಗಿ ವೈದ್ಯರು ಅನುಸರಿಸಬಹುದು.

ನಿಯಮಿತವಾಗಿ ತಪಾಸಣೆ ಮಾಡುತ್ತಿರಬೇಕು

ನಿಯಮಿತವಾಗಿ ತಪಾಸಣೆ ಮಾಡುತ್ತಿರಬೇಕು

ಈ ಚಿಕಿತ್ಸೆ ನಿಧಾನವಾಗಿದ್ದು ಕ್ಯಾನ್ಸರ್ ಗಡ್ಡೆ ನಿವಾರಣೆಯಾದ ಬಳಿಕವೂ ಜಗಿಯಲು, ನಾಲಿಗೆಯನ್ನು ಮೊದಲಿನಂತೆ ಚಲಿಸುವಂತಾಗಿಸಲು ಹಾಗೂ ಸ್ಫುಟವಾಗಿ ಮಾತನಾಡಲು ಸಾಧ್ಯವಾಗುವಂತೆ ಮಾಡಲು ಕೆಲವಾರು ಬಾರಿ ಈ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗಿ ಬರಬಹುದು. ಅಲ್ಲದೇ ಕ್ಯಾನ್ಸರ್ ಪೂರ್ಣವಾಗಿ ಗುಣವಾದ ಬಳಿಕವೂ ನಿಯಮಿತವಾಗಿ ತಪಾಸಣೆಗೊಳಿಸಿಕೊಂಡು ಇದು ಮತ್ತೊಮ್ಮೆ ಆವರಿಸಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾ ಇರಬೇಕು.

Most Read: ಇದೇ ನೋಡಿ ಚರ್ಮದ ಕ್ಯಾನ್ಸರ್‌ನ ಆರು ಲಕ್ಷಣಗಳು, ಆದಷ್ಟು ಎಚ್ಚರವಾಗಿರಿ!

ರಕ್ಷಣೆ

ರಕ್ಷಣೆ

ಮೇಲುನಾಲಿಗೆ ಮತ್ತು ಕೆಳನಾಲಿಗೆಯ ಕ್ಯಾನ್ಸರ್ ಗೆ ಹೆಚ್ ಪಿ ವಿ ವೈರಸ್ ಪ್ರಮುಖ ಕಾರಣ ಎಂದು ಈಗಾಗಲೇ ಅರಿತಿದ್ದೇವೆ. ಹಾಗಾಗಿ ಈ ತೊಂದರೆಯಿಂದ ರಕ್ಷಿಸಿಕೊಳ್ಳಲು ಕೆಳಗಿನ ಕ್ರಮಗಳನ್ನು ಅನುಸರಿಸುವುದು ಅವಶ್ಯ. ಏಕಸಂಗಾತಿನಿಷ್ಠೆ ಅತ್ಯುತ್ತಮ. ಹೀಗಲ್ಲದಿರುವವರು ಎಚ್ ಪಿ ವಿ ವೈರಸ್ ನ ವಿರುದ್ದ ರಕ್ಷಣೆ ಪಡೆಯುವ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.ಏಕಸಂಗಾತಿಯ ಹೊರತಾದ ಲೈಂಗಿಕ ಸಂಬಂಧದಲ್ಲಿ ಪ್ರತಿ ಬಾರಿಯೂ ಲ್ಯಾಟೆಕ್ಸ್ ಕಾಂಡಮ್ಮುಗಳನ್ನು ಧರಿಸುವುದು ಅಗತ್ಯ ಯಾವುದೇ ರೂಪದಲ್ಲಿಯಾದರೂ ಸರಿ, ಎಷ್ಟೇ ಕನಿಷ್ಟ ಪ್ರಮಾಣವೆಂದರೂ ಸರಿ, ತಂಬಾಕು ಕ್ಯಾನ್ಸರ್ ಕಾರಕ! ಹಾಗಾಗಿ ಸಂಪೂರ್ಣ ತಂಬಾಕು ವರ್ಜನೆಯೇ ಸೂಕ್ತ. ಮದ್ಯಾಪಾನ ರಹಿತ ಜೀವನವೇ ಅತ್ಯುತ್ತಮ. ಸಾಧ್ಯವೇ ಇಲ್ಲ ಎನ್ನುವಷ್ಟು ವ್ಯಸನಿಗಳಾಗಿದ್ದರೆ ಇದನ್ನು ಕನಿಷ್ಟ ಪ್ರಮಾಣ ಮತ್ತು ದೀರ್ಘ ಅವಧಿಯ ಅಂತರಗಳ ಮೂಲಕ ದಾಸ ಮುಕ್ತರಾಗಬೇಕು. ಬಾಯಿಯ ಆರೋಗ್ಯ, ವಿಶೇಷವಾಗಿ ಹಲ್ಲು ಮತ್ತು ಒಸಡುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

English summary

Tongue Cancer- things you must know

This is one of several kinds of oral (mouth) cancers. Like other cancers, it happens when cells divide out of control and form a growth, or tumor.There are two types. One is called oral tongue cancer because it affects the part you can stick out. The other happens at the base of your tongue, where it connects to your throat.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X