Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ದೇಹದ ಕಲ್ಮಶಗಳನ್ನು ಹೊರಹಾಕಲು ಮನೆಯಲ್ಲಿಯೇ ಮಾಡಿ- ನೈಸರ್ಗಿಕ ಜ್ಯೂಸ್
ಹಬ್ಬ ಹರಿದಿನ ಹಾಗೂ ಇನ್ನಿತರ ಸಂಭ್ರಮದ ಕಾರ್ಯಕ್ರಮಗಳ ಸಂದರ್ಭದಲ್ಲಿ ಮನೆಯಲ್ಲಿ ತಿಂಡಿಗಳ ಅಬ್ಬರ ಹೆಚ್ಚಾಗಿರುತ್ತದೆ. ಹಬ್ಬ ಹರಿದಿನಗಳ ರಜಾ ಅವಧಿಯಲ್ಲಿ ಹಬ್ಬದ ವಿಶೇಷ ತಿಂಡಿಗಳನ್ನು ಸವಿಯುವುದು ಎಲ್ಲರಿಗೂ ಇಷ್ಟವಾದ ಸಂಗತಿಯೇ ಆಗಿದೆ. ಆದರೆ ಹೀಗೆ ಹೆಚ್ಚಾಗಿ ತಿಂಡಿ ತಿನಿಸುಗಳನ್ನು ತಿಂದು ಮೈಯಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದಾಗ ಅದನ್ನು ಇಳಿಸಿಕೊಳ್ಳಲು ಪ್ರಯತ್ನಿಸುವುದು ಸಹ ಅತಿ ಮುಖ್ಯವಾಗುತ್ತದೆ. ಅತಿಯಾದ ತೂಕ ಇಳಿಸಿಕೊಳ್ಳಲು ಕೆಲವರು ಉಪವಾಸ ಆರಂಭಿಸುತ್ತಾರೆ.
ಇನ್ನು ಕೆಲವರು ಆಹಾರ ಪದ್ಧತಿ ಬದಲಾಯಿಸಿಕೊಳ್ಳುತ್ತಾರೆ. ಆದಾಗ್ಯೂ ಇಂಥ ಕ್ರಮಗಳಿಂದ ಹೇಳಿಕೊಳ್ಳುವಂಥ ಪರಿಣಾಮಗಳು ಕಂಡು ಬಾರದೆ ನಿರಾಶೆ ಮೂಡುವುದೇ ಹೆಚ್ಚು. ಆದರೆ ದೇಹದಲ್ಲಿನ ಕಲ್ಮಶ ಹಾಗೂ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸುಲಭ ಉಪಾಯವೊಂದಿದೆ. ಅದಾವುದು ಅಂತೀರಾ? ತಿಳಿಯಲು ಈ ಅಂಕಣ ಪೂರ್ತಿ ಓದಿ.. ನೀವೂ ಟ್ರೈ ಮಾಡಿ..

ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಬೇಡ!
ಶರೀರದಲ್ಲಿನ ಕಲ್ಮಶ ಹಾಗೂ ಹೆಚ್ಚುವರಿ ಕೊಬ್ಬಿನ ಅಂಶಗಳ ನಿವಾರಣೆಗೆ ಒಂದು ನೈಸರ್ಗಿಕ ಜ್ಯೂಸ್ ನಿಮಗೆ ಸಹಾಯ ಮಾಡಬಲ್ಲದು. ಇದು ಖಂಡಿತವಾಗಿಯೂ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಅಲ್ಲ. ಇದನ್ನು ನೀವೇ ಮನೆಯಲ್ಲಿ ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿ ಸೇವಿಸಬಹುದು ಹಾಗೂ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು. ಎಲ್ಲರ ಅಡುಗೆ ಮನೆಯಲ್ಲಿ ಇರುವ ಶುಂಠಿ, ನಿಂಬೆ ಹಣ್ಣು ಹಾಗೂ ದಾಲ್ಚಿನ್ನಿಗಳನ್ನು ಬಳಸಿ ಕೇವಲ 10 ನಿಮಿಷಗಳಲ್ಲಿ ಈ ಆರೋಗ್ಯಕರ ಜ್ಯೂಸ್ ತಯಾರಿಸಬಹುದು.

ಕೊಬ್ಬು ಕರಗಿಸಲು ಬೆಸ್ಟ್ ಈ ನೈಸರ್ಗಿಕ ಜ್ಯೂಸ್
"ಈ ಆರೋಗ್ಯಕರ ಜ್ಯೂಸ್ ಸೇವನೆಯಿಂದ ಶರೀರದಲ್ಲಿನ ನೋವು ಮಾಯವಾಗಿ ನೈಸರ್ಗಿಕವಾಗಿಯೇ ಕೊಬ್ಬಿನ ಅಂಶ ಕರಗಲಾರಂಭಿಸುತ್ತದೆ. ಕ್ಷಾರ ಗುಣ (ಅಲ್ಕಲೈನ್) ಹೊಂದಿರುವ ಈ ಪೇಯ ಉದರ ಹಾಗೂ ಹೃದಯದ ಆರೋಗ್ಯಕ್ಕೂ ಅತ್ಯುತ್ತಮ ವಾಗಿದೆ. ದೇಹದಲ್ಲಿ ತೂಕ ಹೆಚ್ಚಲು ಕಾರಣವಾಗುವ ಕಲ್ಮಶಗಳು ಹಾಗೂ ಫ್ಯಾಟಿ ಆಸಿಡ್‌ಗಳನ್ನು ನಿವಾರಿಸಲು ಈ ಜ್ಯೂಸ್ ಸಹಕಾರಿಯಾಗಿದೆ"

ಹೀಗೆ ತಯಾರಿಸಿ ಆರೋಗ್ಯಕರ ಜ್ಯೂಸ್
ಒಂದು ಲೀಟರ್ ನೀರನ್ನು ಪಾತ್ರೆಯೊಂದಕ್ಕೆ ಹಾಕಿ ಕುದಿಸಿ. ಇದಕ್ಕೆ ಕೆಲ ಕತ್ತರಿಸಿದ ಶುಂಠಿಯ ತುಂಡುಗಳನ್ನು ಹಾಕಿ. ನಂತರ ಒಂಚೂರು ದಾಲ್ಚಿನ್ನಿಯನ್ನು ಸೇರಿಸಿ. ಈಗ 15 ರಿಂದ 20 ನಿಮಿಷಗಳವರೆಗೆ ಈ ದ್ರಾವಣ ತಣ್ಣಗಾಗಲು ಬಿಡಿ. ದ್ರಾವಣ ಸಂಪೂರ್ಣ ತಣ್ಣಗಾದ ಮೇಲೆ ಇದಕ್ಕೆ ಒಂದಿಷ್ಟು ನಿಂಬೆರಸ ಸೇರಿಸಿ. ಈಗ ಇದನ್ನು ಸೋಸಿ ಗಾಳಿಯಾಡದ ಬಾಟಲಿಯೊಂದಕ್ಕೆ ತುಂಬಿಟ್ಟರೆ ಯಾವಾಗ ಬೇಕಾದರೂ ಸೇವಿಸಬಹುದು.

ನೈಸರ್ಗಿಕ ಜ್ಯೂಸ್‌ನ ಆರೋಗ್ಯಕಾರಿ ಪ್ರಯೋಜನಗಳು
ನಿಂಬೆ ಹಾಗೂ ಶುಂಠಿಯ ಮಿಶ್ರಣ ಆರೋಗ್ಯ ಭಾಗ್ಯದ ಸಂಗಮವಾಗಿದೆ. ನಿಂಬೆಯಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳಿಂದ ಶರೀರದಲ್ಲಿನ ಫ್ಯಾಟ್ ಕರಗುತ್ತದೆ ಹಾಗೂ ಇನ್ಸುಲಿನ್‌ನ ನಿರೋಧಕ ಗುಣವನ್ನು ಹೆಚ್ಚಿಸಿ ಇಡೀ ಶರೀರದಲ್ಲಿರುವ ಕಲ್ಮಶ ಹಾಗೂ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕಾರಿಯಾಗಿದೆ. ಇನ್ನು ಶುಂಠಿಯ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿದೇ ಇದೆ. ಇದನ್ನು ಪುರಾತನ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತಿದೆ. ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಅಂಶಗಳು ಶುಂಠಿಯಲ್ಲಿವೆ. ಅಲ್ಲದೆ ಹಸಿವಿನ ಪ್ರಮಾಣವನ್ನು ಸಹಜ ಸ್ಥಿತಿಗೆ ತರುವ ವಿಶಿಷ್ಟ ಹಾರ್ಮೋನ್‌ಗಳನ್ನು ಶುಂಠಿ ಒಳಗೊಂಡಿದೆ. ನೈಸರ್ಗಿಕ ನೋವು ನಿವಾರಕವಾಗಿರುವ ಶುಂಠಿಯು ಜೀರ್ಣ ಕ್ರಿಯೆಯನ್ನು ಸುಧಾರಿಸಿ ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಶೀಘ್ರವಾಗಿ ಕರಗಿಸಲು ಸಹಾಯ ಮಾಡುತ್ತದೆ.

ದಾಲ್ಚಿನ್ನಿ
ಹಾಗೆಯೇ ಎಲ್ಲರ ಅಡುಗೆ ಮನೆಯ ಸಾಂಬಾರು ಡಬ್ಬಿಯಲ್ಲಿರುವ ದಾಲ್ಚಿನ್ನಿ ಸಹ ಅತ್ಯಂತ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ದೇಹದ ತೂಕವನ್ನು ಇಳಿಸಲು ಅತಿ ಉಪಯುಕ್ತವಾಗಿರುವ ದಾಲ್ಚಿನ್ನಿ, ದೇಹದಲ್ಲಿನ ಎಲ್‌ಡಿಎಲ್ ಎಂಬ ಬೇಡವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಶರೀರದ ಸಂಪೂರ್ಣ ಚಯಾಪಚಯ ಕ್ರಿಯೆಯನ್ನು ಸುಧಾರಿಸಿ ಆರೋಗ್ಯವಂತರಾಗಲು ದಾಲ್ಚಿನ್ನಿಯು ಉತ್ತಮವಾಗಿದೆ. ಇಷ್ಟೆಲ್ಲ ಆರೋಗ್ಯಕರ ಹಾಗೂ ನೈಸರ್ಗಿಕ ವಸ್ತುಗಳಿಂದ ತಯಾರಾದ ಈ ಜ್ಯೂಸ್ ಆರೋಗ್ಯಕ್ಕೆ ಅತ್ಯುಪಯುಕ್ತವಾಗಿದೆ. ಬೆಳಗಿನ ಕಾಫಿ ಅಥವಾ ಟೀ ಬಿಡಲಾಗದು ಆದರೂ ತೂಕ ಇಳಿಸಬೇಕೆಂಬ ಹುಮ್ಮಸ್ಸು ನಿಮ್ಮಲ್ಲಿದ್ದರೆ ಈ ಜ್ಯೂಸ್ ನಿಮಗೆ ಹೇಳಿ ಮಾಡಿಸಿದಂತಿದೆ.



Click it and Unblock the Notifications