For Quick Alerts
ALLOW NOTIFICATIONS  
For Daily Alerts

ದೇಹದ ಲಿವರ್‌ನ್ನು ಆಯುರ್ವೇದ ವಿಧಾನದ ಮೂಲಕ ಆರೋಗ್ಯವಾಗಿಡಲು 11 ಟಿಪ್ಸ್

|

ದೇಹದಲ್ಲಿನ ಪ್ರತಿಯೊಂದು ಅಂಗಾಂಗವು ತನ್ನದೇ ಆದ ಕಾರ್ಯನಿರ್ವಹಣೆಯಿಂದ ನಮಗೆ ನೆರವಾಗುವುದು. ದೇಹದ ಹೊರಗಡೆ ಇರುವಂತಹ ಅಂಗಾಂಗಗಳಿಗೆ ಏನಾದರೂ ಆದರೆ ಆಗ ನಮಗೆ ತಕ್ಷಣವೇ ಅದರ ಬಗ್ಗೆ ತಿಳಿದುಬರುವುದು. ಆದರೆ ದೇಹದ ಒಳಗಿನ ಅಂಗಾಂಗಗಳಿಗೆ ಸಮಸ್ಯೆಯಾದರೆ ಆಗ ಅದು ಬೇಗನೆ ನಮಗೆ ತಿಳಿಯದು. ಕೆಲವೊಂದು ಲಕ್ಷಣಗಳು ಕಂಡುಬಂದರೂ ಹೆಚ್ಚಾಗಿ ನಾವು ಇದನ್ನು ಕಡೆಗಣಿಸುತ್ತೇವೆ. ಹೀಗಾಗಿ ದೇಹದ ಒಳಗಿನ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕೆಂದರೆ ಆಗ ನಾವು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ದೇಹದ ಒಳಗಿನ ಅಂಗಾಂಗಗಳ ಮೇಲೆ ಅತಿಯಾದ ಒತ್ತಡವು ಬೀಳುವುದು. ಅದರಲ್ಲೂ ಪ್ರಮುಖವಾಗಿ ಯಕೃತ್(ಲಿವರ್) ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು. ಇದು ಆರೋಗ್ಯವಾಗಿದ್ದರೆ ಅರ್ಧ ಸಮಸ್ಯೆಗಳು ನಿವಾರಣೆ ಆದಂತೆ. ಇಂದು ವೈದ್ಯಕೀಯ ತಜ್ಞರು ಯಕೃತ್ ನ ಪರಿಸ್ಥಿತಿ, ದೀರ್ಘ ಅಥವಾ ಚಯಾಪಚಯದಿಂದಾಗಿ ಸಮಸ್ಯೆಯಾಗುವುದು ಎಂದು ಹೇಳುವರು.

ಇಂದಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಆರೋಗ್ಯದ ಬಗ್ಗೆ ಕಾಳಜಿಯು ಮೂಡುತ್ತಿದೆ. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ನಾವು ಸಂಪೂರ್ಣ ಆರೋಗ್ಯ ಪಡೆಯಬೇಕಾದರೆ ಮೊದಲಿಗೆ ಯಕೃತ್ ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮ ದೇಹದ ಶುದ್ಧೀಕರಿಸುವ ಮತ್ತು ಚಯಾಪಚಯದ ಅಂಗವಾಗಿದೆ. ಉದಾಹರಣೆಗೆ, ಕೆಲವರು ತುಂಬಾ ಮೌನ, ಗಂಭೀರ ಹಾಗೂ ಆಧ್ಯಾತ್ಮಿಕ ವಿಧಾನದಿಂದ ದೇಹದ ಶುದ್ಧೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕೆಲವು ವ್ಯಕ್ತಿಗಳು ನಗರದ ಜಂಜಾಟದಿಂದ ಹೊರಗೆ ಹೋಗಿ ಹೊಸ ವರ್ಷವನ್ನು ತುಂಬಾ ಏಕಾಂತದಲ್ಲಿ ಮತ್ತು ಇನ್ನು ಕೆಲವರು ಗುಂಪು ಧ್ಯಾನ ಮಾಡುವ ಮೂಲಕವಾಗಿ ಆರಂಭಿಸಿದ್ದಾರೆ.

ದೀರ್ಘಕಾಲಿಕ ಯಕೃತ್ ಕಾಯಿಲೆಗೆ ಪ್ರಮುಖ ಕಾರಣ

ದೀರ್ಘಕಾಲಿಕ ಯಕೃತ್ ಕಾಯಿಲೆಗೆ ಪ್ರಮುಖ ಕಾರಣ

ದೀರ್ಘಕಾಲಿಕ ಯಕೃತ್ ಕಾಯಿಲೆಗೆ ಪ್ರಮುಖ ಕಾರಣವೆಂದರೆ ಅದು ಆಲ್ಕೋಹಾಲ್. ಇದು ತುಂಬಾ ಸಾಮಾನ್ಯ ಕಾರಣ. ಇದರೊಂದಿಗೆ ವೈರಲ್ ಹೆಪಟೈಟಿಸ್ ಮತ್ತು ಬೊಜ್ಜು ಕೂಡ ಯಕೃತ್ ನ ಸಮಸ್ಯೆಗೆ ಕಾರಣವಾಗಿದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ತುಂಬಾ ಅಡ್ಡಪರಿಣಾಮಗಳು ಉಂಟಾಗದ ಮತ್ತು ನೈಸರ್ಗಿಕವಾಗಿ ಇರುವಂತಹ ಆಯುರ್ವೇದ ಚಿಕಿತ್ಸೆ ಮತ್ತು ಯೋಗವನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಸಮಸ್ಯೆ ಬರುವ ಮೊದಲೇ ಅದನ್ನು ತಡೆಯುವುದು ಉತ್ತಮ ಎಂದು ತಿಳಿಯಲಾಗಿದೆ. ಹೊಸ ವರ್ಷವು ಆರಂಭವಾದ ಬಳಿಕ ಯಕೃತ್ ನ್ನು ಶುದ್ಧೀಕರಿಸುವ ಬಗ್ಗೆ ಹೆಚ್ಚಿನ ಜನರು ಆಸಕ್ತಿ ವಹಿಸಿದ್ದಾರೆ ಮತ್ತು ಇದು ಜನಪ್ರಿಯತೆ ಕೂಡ ಪಡೆಯುತ್ತಿದೆ. ಯಕೃತ್ ನ್ನು ಆಯುರ್ವೇದ ವಿಧಾನದ ಮೂಲಕ ಆರೋಗ್ಯವಾಗಿಡುವುದು ಹೇಗೆ ಎಂದು ತಿಳಿಯಿರಿ.

ಒಂದು ಕಪ್ ಬಿಸಿ ಲಿಂಬೆ ಚಹಾ (ಲೆಮನ್ ಟೀ)

ಒಂದು ಕಪ್ ಬಿಸಿ ಲಿಂಬೆ ಚಹಾ (ಲೆಮನ್ ಟೀ)

ಬೆಳಗ್ಗೆ ನೀವು ಎದ್ದ ಕೂಡಲೇ ಮಾಡಬೇಕಾದ ಕೆಲಸವೆಂದರೆ ನೀವು ಒಂದು ಕಪ್ ಲೆಮನ್ ಚಾ ಕುಡಿಯಬೇಕು. ಬಿಸಿ ನೀರಿಗೆ ಲಿಂಬೆ ರಸ ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಿರಿ. ತಣ್ಣಗಿನ ಲಿಂಬೆ ರಸಕ್ಕೆ ನೀವು ಜೇನುತುಪ್ಪ ಬೆರೆಸಿಕೊಂಡು ಕುಡಿಯಬಹುದು. ಲಿಂಬೆಯು ತಲೆನೋವಿನಿಂದ ಶಮನ ನೀಡುವುದು ಮತ್ತು ಜೇನುತುಪ್ಪವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ನೆರವಾಗುವುದು.

ಶುಂಠಿ ಚಹಾ

ಶುಂಠಿ ಚಹಾ

ಕೆಲವು ತುಂಡು ಶುಂಠಿ ಜಗಿಯಿರಿ ಅಥವಾ ಶುಂಠಿ ಚಾ ಮಾಡಿಕೊಳ್ಳಿ. ನೀವು ರಾತ್ರಿ ವೇಳೆ ತುಂಬಾ ಮದ್ಯಪಾನ ಮಾಡಿದ್ದರೆ ಆಗ ಮರುದಿನ ಹೊಟ್ಟೆ ಸಮಸ್ಯೆ ಕಾಡುವುದು. ಇದನ್ನು ನೀವು ಶುಂಠಿ ಮೂಲಕ ಪರಿಹರಿಸಿಕೊಳ್ಳಬಹುದು. ಶುಂಠಿಯು ಪಿತ್ತರಸ ಉತ್ಪತ್ತಿಯನ್ನು ಉತ್ತೇಜಿಸುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು. ಕೆಲವು ತುಂಡು ಶುಂಠಿ ಹಾಕಿಕೊಂಡು ನೀರನ್ನು ಸರಿಯಾಗಿ ಕುದಿಸಿ ಮತ್ತು ಇದರ ಬಳಿಕ ನೀರು ತಣ್ಣಗಾಗಲು ಬಿಡಿ ಮತ್ತು ಇದಕ್ಕೆ ಜೇನುತುಪ್ಪ ಮತ್ತು ಕೆಲವು ಹನಿ ಲಿಂಬೆರಸ ಹಾಕಿ.

ಟೊಮೆಟೊ ಜ್ಯೂಸ್

ಟೊಮೆಟೊ ಜ್ಯೂಸ್

ಟೊಮೆಟೊದಲ್ಲಿ ಇರುವಂತ ಫ್ರಾಕ್ಟೋಸ್ ಎನ್ನುವ ಸಕ್ಕರೆ ಅಂಶವು ಬಾಹ್ಯ ಅಂಶವನ್ನು ಬೇಗನೆ ಚಯಾಪಚಯಗೊಳಿಸಲು ನೆರವಾಗುವುದು. ನಾರಿನಾಂಶದಿಂದ ಸಮೃದ್ಧವಾಗಿರುವಂತಹ ಸ್ವಲ್ಪ ಮಟ್ಟಿನ ವಿರೇಚಕ ಗುಣವಿದೆ. ಇದು ಹೊಟ್ಟೆಯ ಉಬ್ಬರ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅತಿಯಾಗಿ ಮದ್ಯಾಪಾನ ಮಾಡಿದ ವೇಳೆ ಯಕೃತ್ ಇದನ್ನು ಚಯಾಪಚಯಗೊಳಿಸಲು ಅತಿಯಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗುವುದು. ಹೀಗಾಗಿ ನಿಶ್ಯಕ್ತಿ ಹಾಗೂ ಬಳಲಿಕೆ ಉಂಟಾಗುವುದು. ಟೊಮೆಟೊ ಜ್ಯೂಸ್ ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸುವುದು ಮತ್ತು ಇದರಲ್ಲಿ ಇರುವಂತಹ ಗ್ಲುಟಾಥಿಯೋನ್ ಎನ್ನುವ ಅಂಶವು ವಿಷಕಾರಿ ಅಂಶದ ವಿರುದ್ಧ ಹೋರಾಡುವುದು.

ಎಲೆಕೋಸು ಸೂಪ್

ಎಲೆಕೋಸು ಸೂಪ್

ಎಲೆಕೋಸಿನ ಸೂಪ್ ಯಕೃತ್ ಗೆ ತುಂಬಾ ಒಳ್ಳೆಯದು. ಎಲೆಕೋಸಿನ ಸೂಪ್ ನ್ನು ಮದ್ಯಪಾನದಿಂದ ಉಂಟಾಗಿರುವಂತಹ ಹ್ಯಾಂಗ್ ಓವರ್ ನಿಂದ ಹೊರಗೆ ಬರಲು ನೀಡಲಾಗುತ್ತದೆ. ಕೊರಿಯಾದಿಂದ ರಷ್ಯಾ ಮತ್ತು ಲಿಥುವೇನಿಯಾದಲ್ಲೂ ಇದನ್ನು ಬಳಸಲಾಗುತ್ತದೆ. ಕಿರಿಕಿರಿ ಉಂಟು ಮಾಡುವ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡುವುದು ಮತ್ತು ದೇಹದಲ್ಲಿ ದ್ರವಾಂಶವು ಉಳಿಯುವಂತೆ ಮಾಡುವುದು.

ಊಟ ತಪ್ಪಿಸಬೇಡಿ

ಊಟ ತಪ್ಪಿಸಬೇಡಿ

ನೀವು ಕಳೆದ ರಾತ್ರಿ ಅತಿಯಾಗಿ ಕುಡಿದು, ತಿಂದಿದ್ದರೆ ಆಗ ಮರುದಿನ ನಿಮಗೆ ಹೊಟ್ಟೆಯು ತುಂಬಿದಂತೆ ಭಾಸವಾಗುವುದು. ಮರುದಿನ ಬೆಳಗ್ಗೆ ನಿಮಗೆ ಹಸಿವು ಕೂಡ ಆಗದೇ ಇರಬಹುದು. ಆದರೆ ನಿಶ್ಯಕ್ತಿಯಿಂದ ಹೊರಗೆ ಬರಲು ನೀವು ಹೆಚ್ಚಿನ ಶಕ್ತಿಯನ್ನು ಪಡೆಯಬೇಕಾಗಿದೆ. ಇದರಿಂದಾಗಿ ನೀವು ಆಹಾರ ಸೇವಿಸಬೇಕು. ನೀವು ತರಕಾರಿ ಸೂಪ್ ಮತ್ತು ಹಣ್ಣುಗಳನ್ನು ತಿಂದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.

ಹೊರಗೆ ಹಾಕಿ

ಹೊರಗೆ ಹಾಕಿ

ನೀವು ಅತಿಯಾಗಿ ಮದ್ಯಪಾನ ಮಾಡಿರುವುದರಿಂದ ದೇಹದಲ್ಲಿ ವಿಷಕಾರಿ ಅಂಶವು ತುಂಬಿದ್ದರೆ ಆಗ ನೀವು ಅದನ್ನು ವಾಂತಿ ಮಾಡುವ ಮೂಲಕವು ಹೊರಗೆ ಹಾಕಬಹುದು ಎಂದು ಆಯುರ್ವೇದವು ಸಲಹೆ ನೀಡುತ್ತದೆ.

ಕಲ್ಲುಪ್ಪು

ಕಲ್ಲುಪ್ಪು

ಕಲ್ಲುಪ್ಪಿನಲ್ಲಿ ಇರುವಂತಹ ಖನಿಜಾಂಶಗಳು ಮತ್ತು ನೀರಿನಾಂಶವು ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕಿ, ತೇವಾಂಶ ನೀಡುವುದು. ನೀವು ಹ್ಯಾಂಗ್ ಓವರ್ ಗೆ ಒಳಗಾಗಿದ್ದರೆ ಮತ್ತು ಶಕ್ತಿಯ ಕೊರತೆ ಇದ್ದರೆ ಆಗ ನೀವು ಕಲ್ಲುಪ್ಪು ಬಳಸಿಕೊಳ್ಳಿ. ಒಂದು ಲೋಟ ಬಿಸಿ ನೀರಿಗೆ ಕಲ್ಲುಪ್ಪು ಹಾಕಿಕೊಂಡು ಅದನ್ನು ಸರಿಯಾಗಿ ಕಲಸಿಕೊಳ್ಳಿ. ಅದಕ್ಕೆ ಕೆಲವು ಹನಿ ಲಿಂಬೆರಸ ಹಾಕಿದ ಬಳಿಕ ಕುಡಿಯಿರಿ.

ಉಪ್ಪಿನೊಂದಿಗೆ ಅಥವಾ ಇತರ ಸಾಮಗ್ರಿ ಜತೆ ಮಜ್ಜಿಗೆ

ಉಪ್ಪಿನೊಂದಿಗೆ ಅಥವಾ ಇತರ ಸಾಮಗ್ರಿ ಜತೆ ಮಜ್ಜಿಗೆ

ಅತಿಯಾಗಿ ಕೆಲಸ ಮಾಡಿರುವಂತಹ ಯಕೃತ್ ತಣ್ಣಗೆ ಆಗಲು ಉಪ್ಪು ಹಾಕಿರುವಂತಹ ಮಜ್ಜಿಗೆಯು ನೆರವಾಗುವುದು. ಚಯಾಪಚಯ ಕ್ರಿಯೆಗೆ ದಾಳಿಂಬೆ ಜ್ಯೂಸ್ ಕೂಡ ತುಂಬಾ ಸಹಕಾರಿ.

ಯೋಗ

ಯೋಗ

ನೀವು ಪ್ರತಿನಿತ್ಯವು ಯೋಗಾಭ್ಯಾಸ ಮಾಡಿದರೆ ಆಗ ಅದರಿಂದ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳು ತಾನಾಗಿಯೇ ಕಡಿಮೆ ಆಗುವುದು. ಯೋಗ ಮಾಡುವುದರಿಂದ ನೀವು ತುಂಬಾ ಶಾಂತ ಹಾಗೂ ಉಲ್ಲಾಸದಿಂದ ಇರುವಿರಿ. ಧಾನ್ಯ ಮತ್ತು ಯೋಗದ ಮೂಲಕವಾಗಿ ದೇಹದಲ್ಲಿ ಇರುವಂತಹ ಅಂಗಾಂಗಗಳನ್ನು ಆರೋಗ್ಯವಾಗಿ ಇಡಬಹುದು.

ಜೀರ್ಣಕ್ರಿಯೆ ಸರಿಯಾಗಿಲ್ಲವೇ? ಮದ್ಯಪಾನ ಕಡೆಗಣಿಸಿ

ಜೀರ್ಣಕ್ರಿಯೆ ಸರಿಯಾಗಿಲ್ಲವೇ? ಮದ್ಯಪಾನ ಕಡೆಗಣಿಸಿ

ಆಯುರ್ವೇದದ ಪ್ರಕಾರ ಜೀರ್ಣಕ್ರಿಯೆ ತುಂಬಾ ಕೆಟ್ಟದ್ದಾಗಿದ್ದರೆ ಆಗ ನಿಮ್ಮ ದೇಹವು ಆಲ್ಕೋಹಾಲ್ ನ್ನು ಜೀರ್ಣಿಸಿಕೊಳ್ಳಲು ಆಗಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು, ವಾಕರಿಕೆ ಮತ್ತು ಯಕೃತ್ ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು. ಹೀಗಾಗಿ ತಾತ್ಕಾಲಿಕ ಹ್ಯಾಂಗ್ ಓವರ್ ನಿಂದ ದೀರ್ಘಕಾಲಿಕ ಸಮಸ್ಯೆ ಬರಬಹುದು.

ಸ್ಟ್ರಾ ಉಸಿರಾಟ

ಸ್ಟ್ರಾ ಉಸಿರಾಟ

ನೀವು ಸ್ಟ್ರಾ ಉಸಿರಾಟದ ತಂತ್ರವನ್ನು ಬಳಸಿಕೊಳ್ಳಬಹುದು. ನೀವು ಸ್ಟ್ರಾದಲ್ಲಿ ಏನಾದರೂ ಪಾನೀಯ ಕುಡಿಯುತ್ತಿದ್ದೀರಿ ಎಂದು ಭಾವಿಸಿಕೊಂಡು ಉಸಿರಾಡಿ. ನೀವು ಮದ್ಯಪಾನ ಬಿಡಬೇಕೆಂದು ಬಯಸಿದ್ದರೆ ಆಗ ನೀವು ಪ್ರಾಣಾಯಾಮ ಮತ್ತು ಉಜ್ಜೈ ಉಸಿರಾಟ ಮತ್ತು ಸುದರ್ಶನ ಕ್ರಿಯೆ ಯೋಗದ ಮೂಲಕವಾಗಿ ಮದ್ಯಪಾನ ದೂರ ಮಾಡಬಹುದು. ಪ್ರಾಣಾಯಾಮ ಮತ್ತು ಇತರ ಕೆಲವೊಂದು ಯೋಗಾಸನಗಳನ್ನು ಮಾಡಿದರೆ ಆಗ ಆಲ್ಕೋಹಾಲ್ ಸೇವನೆ ಮಾಡಬೇಕೆಂಬ ಹಂಬಲವು ತುಂಬಾ ಕಡಿಮೆಯಾಗುವುದು. ಮದ್ಯಪಾನ ಮಾಡುವಂತಹ ವ್ಯಕ್ತಿಗಳು ತಮ್ಮ ದೇಹ ಪ್ರಕೃತಿ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಯಾಕೆಂದರೆ ಆಲ್ಕೋಹಾಲ್ ಸೇವನೆಯಿಂದಾಗಿ ದೇಹದ ವಿವಿಧ ಭಾಗ(ಪಿತ್ತ, ವಾತ ಮತ್ತು ಕಫ)ದ ಮೇಲೆ ಭಿನ್ನವಾಗಿ ಪರಿಣಾಮ ಬೀರುವುದು ಮತ್ತು ಯಕೃತ್ ಚಯಾಪಚಯ ಕ್ರಿಯೆಯನ್ನು ಅತಿಯಾಗಿ ಮಾಡುವಂತೆ ಒತ್ತಡ ಹಾಕುವುದು. ನಿಯಮಿತ ವ್ಯಾಯಾಮ, ಯೋಗ ಮತ್ತು ಉಸಿರಾಟದ ಅಭ್ಯಾಸಗಳನ್ನು ಮಾಡದೆ ಇರುವಂತಹ ಜೀವನಶೈಲಿಯನ್ನು ಪಾಲಿಸುವಂತಹ ವ್ಯಕ್ತಿಗಳಲ್ಲಿ ಆಲ್ಕೋಹಾಲ್ ನ್ನು ಜೀರ್ಣಿಸಿಕೊಳ್ಳುವಂತಹ ಶಕ್ತಿಯು ಇರುವುದಿಲ್ಲ. ಇದರಿಂದಾಗಿ ನೀವು ಒಬ್ಬ ಆಯುರ್ವೇದ ತಜ್ಞರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯುವುದು ಸೂಕ್ತ.

English summary

These 11 Ayurveda Tips To Take Care Of Your Liver

Is liver wellness on your resolution list yet? Today medical experts have voiced concern about the global burden of liver conditions, chronic or metabolic, direct fallout of the ubiquitous lifestyle problem. We do notice that more people are waking up to prioritize self-care over anything else. And they are realizing an important part of maintaining overall health is taking care of the liver, the main cleansing and metabolizing agent of our body.
X