For Quick Alerts
ALLOW NOTIFICATIONS  
For Daily Alerts

ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು

|

ಬೇಸಿಗೆ ಎಂದರೆ ಬೇಸರ ಹುಟ್ಟಿಸುವಷ್ಟು ಬಿಸಿಲು ಹಾಗೂ ಸೆಕೆಯನ್ನುಂಟುಮಾಡುವ ಕಾಲ. ಉರಿಬಿಸಿಲಿನ ಈ ಬೇಸಿಗೆಯಲ್ಲಿ ಸಾಕಷ್ಟು ಬಗೆಯ ಹಣ್ಣು-ಹಂಪಲುಗಳು ದೊರೆಯುತ್ತವೆ. ಆದರೆ ಅವುಗಳ ಜೊತೆಯಲ್ಲಿ ಸಹಿಸಲಾಗದಷ್ಟು ಆಯಾಸ, ಬೆವರು, ಸೆಕೆಯಿಂದ ಒಂದು ಬಗೆಯ ಕಿರಿಕಿರಿ. ಮನಸ್ಸಿಗೆ ಬೇಸರ ಉಂಟಾಗುವುದು ಸುಳ್ಳಲ್ಲ. ಸಾಧ್ಯವಾದಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳೋಣ ಎನ್ನುವ ಭಾವನೆ ಮೂಡುವುದು. ಇದಕ್ಕೆ ಕಾರಣ ವಾತಾವರಣದಲ್ಲಿ ಕಾಣುವ ಅತಿಯಾದ ಬಿಸಿಲು ಹಾಗೂ ತಾಪಮಾನ ಎನ್ನಬಹುದು. ಅತಿಯಾದ ಬಿಸಿಲಿನಿಂದಾಗಿ ವಾತಾವರಣದಲ್ಲಿ ಶುಷ್ಕತೆಯು ಹೆಚ್ಚಾಗುವುದು. ಅದು ನಮ್ಮ ಆರೋಗ್ಯ ಹಾಗೂ ದೇಹದ ಮೇಲೆ ಸಾಕಷ್ಟು ಪ್ರಭಾವ ಬೀರುವುದು.

ಬೇಸಿಗೆಯಲ್ಲಿ ಅತಿಯಾಗಿ ಬೆವರುವುದು ಹಾಗೂ ಆಯಾಸಕ್ಕೆ ಒಳಗಾಗುವುದರಿಂದ ದೇಹವು ಬಹುಬೇಗ ದಣಿಯುವುದು. ತ್ವಚೆಯಲ್ಲೂ ನೀರಿನಂಶ ಕಡಿಮೆಯಾಗುವುದರಿಂದ ಚರ್ಮ ರೋಗದ ಸಮಸ್ಯೆ ಉಂಟಾಗುವುದು. ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲೂ ಅಧಿಕ ನೀರಿನ ಸೇವನೆ ಅಗತ್ಯವಾಗಿ ಬೇಕಾಗುವುದು. ಇಲ್ಲವಾದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು. ಇದರೊಟ್ಟಿಗೆ ವಿವಿಧ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುವುದು. ಕಿಡ್ನಿ ಕಲ್ಲಿನ ಸಮಸ್ಯೆಗಳು, ಮಲ, ಮೂತ್ರಗಳ ವಿಸರ್ಜನೆಯಲ್ಲಿ ಉರಿಯೂತ ಉಂಟಾಗುವುದು, ತ್ವಚೆಯ ಮೇಲೆ ಉರಿ ಗುಳ್ಳೆಗಳು, ತುರಿಕೆ, ತಲೆ ಸುತ್ತು, ವಾಂತಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

ಬೇಸಿಗೆಯಲ್ಲಿ ಹಣ್ಣು-ತರಕಾರಿಗಳನ್ನು ಸಾಧ್ಯವಾದಷ್ಟು ತಿನ್ನಿ

ಬೇಸಿಗೆಯಲ್ಲಿ ಹಣ್ಣು-ತರಕಾರಿಗಳನ್ನು ಸಾಧ್ಯವಾದಷ್ಟು ತಿನ್ನಿ

ಪ್ರಕೃತಿಯ ನಿಯಮಗಳನ್ನು ಹಾಗೂ ಹವಾಮಾನಗಳನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ ನಾವು ಸೇವಿಸುವ ಆಹಾರ ಪದಾರ್ಥಗಳ ಸಹಾಯದಿಂದ ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಬೇಸಿಗೆಯಲ್ಲಿ ನೈಸರ್ಗಿಕವಾಗಿಯೇ ಸಾಕಷ್ಟು ಹಣ್ಣು-ಹಂಪಲುಗಳು ಹಾಗೂ ತರಕಾರಿಗಳು ವಿಶೇಷವಾಗಿ ದೊರೆಯುತ್ತವೆ. ಅವುಗಳ ಉಪಯೋಗ ಮಾಡುವುದರ ಮೂಲಕ ವಾತಾವರಣದಲ್ಲಿ ಇರುವ ಉಷ್ಣತೆಯು ಆರೋಗ್ಯದ ಮೇಲೆ ಯಾವುದೇ ಪ್ರಭಾವ ಬೀರದಂತೆ ಕಾಯ್ದುಕೊಳ್ಳಬಹುದು. ಬೇಸಿಗೆಯ ಸಮಯದಲ್ಲಿ ದೇಹವು ಹೆಚ್ಚು ನೀರನ್ನು ಬಯಸುವುದು. ನಿರ್ಜಲೀಕರಣ ಉಂಟಾಗುತ್ತಲೇ ಇರುತ್ತವೆಯಾದ್ದರಿಂದ ಹೆಚ್ಚು ಆಹಾರ ಸೇವಿಸುವ ಮನಸ್ಸು ಇರುವುದಿಲ್ಲ. ಕೇವಲ ಪಾನೀಯಗಳಂತಹ ಆಹಾರವನ್ನೇ ಸೇವಿಸಬೇಕೆನ್ನುವ ತುಡಿತ ಉಂಟಾಗುವುದು ಸಹಜ.

ಆರೋಗ್ಯ ತಜ್ಞರು ಅಭಿಪ್ರಾದ ಪ್ರಕಾರ

ಆರೋಗ್ಯ ತಜ್ಞರು ಅಭಿಪ್ರಾದ ಪ್ರಕಾರ

ಬೇಸಿಗೆಯ ಬಿಸಿಗೆ ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆಯನ್ನು ಕಂಡುಕೊಳ್ಳಬೇಕು. ಉಡುವ ಬಟ್ಟೆ ಹಾಗೂ ತಿನ್ನುವ ಆಹಾರದಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು. ಆಗ ಸಾಕಷ್ಟು ಸಮಸ್ಯೆಯಿಂದ ದೂರ ಸರಿಯಬಹುದು. ಅದರಲ್ಲೂ ಪ್ರಮುಖವಾಗಿ ಬೇಸಿಗೆಯ ಉಷ್ಣತೆಯಿಂದ ಉಂಟಾಗುವ ತೊಂದರೆಯನ್ನು ನಿಯಂತ್ರಣದಲ್ಲಿ ಇಡಬಹುದು. ಅದಕ್ಕಾಗಿ ಕೆಲವು ಸೂಕ್ತ ತರಕಾರಿ ಹಾಗೂ ಹಣ್ಣುಗಳ ಸೇವನೆಯ ಆಯ್ಕೆಯನ್ನು ನಾವು ಮಾಡಬೇಕು. ಆಗ ನಮ್ಮ ದೇಹದ ಉಷ್ಣತೆಯನ್ನು ನಾವು ನಿಯಂತ್ರಿಸಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಿಸುತ್ತಾರೆ. ಈಗಾಗಲೇ ಆರಂಭವಾದ ಬೇಸಿಗೆಯ ಬಿಸಿಲಿಗೆ ನೀವು ದಣಿದಿದ್ದೀರಿ ಹಾಗೂ ತಂಪಾದ ಸ್ಥಿತಿಯನ್ನು ಪಡೆದುಕೊಳ್ಳಲು ಯಾವ ಬಗೆಯ ಪರಿಹಾರವನ್ನು ಪಡೆಯಬಹುದು? ಎನ್ನುವ ಹುಡುಕಾಟದಲ್ಲಿ ಇದ್ದೀರಿ ಎಂದರೆ ನಿಮಗೆ ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ಬೇಸಿಗೆಯ ಬಿಸಿಯನ್ನು ತಂಪಾಗಿಸಿಕೊಳ್ಳಲು ಸಹಾಯ ಮಾಡುವ ಆಹಾರ ಹಾಗೂ ಪಾನೀಯಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದೆ... ತಂಪು ಪಾನೀಯಗಳು..

Most Read: ಕಿವಿಯ ರಂಧ್ರದಲ್ಲಿ ಪದೇ ಪದೇ ಕಾಡುವ ತುರಿಕೆಗೆ ಪರಿಣಾಮಕಾರಿ ಮನೆಮದ್ದುಗಳು

ಎಳನೀರು

ಎಳನೀರು

ಎಳನೀರು ಪ್ರಕೃತಿ ಮಾನವನಿಗೆ ನೀಡಿರುವ ದಿವ್ಯ ಔಷಧಿ ಎನ್ನಬಹುದು. ಇದರಲ್ಲಿ ವಿದ್ಯುದ್ವಿಚ್ಛೇದ್ಯಗಳು, ಖನಿಜಗಳು, ವಿಟಮಿನ್ಗಳು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಸೇವಿಸುವುದರಿಂದ ಕೆಲವೇ ಗಂಟೆಗಳಲ್ಲಿ ದೇಹವು ಶಕ್ತಿಯನ್ನು ಪಡೆದುಕೊಳ್ಳುವುದು. ಉಷ್ಣಾಂಶವು ಕಡಿಮೆಯಾಗುವುದು. ದೇಹದ ಸಮತೋಲನವನ್ನು ಕಾಯುವುದು. ಬೇಸಿಗೆಯಲ್ಲಿ ನಿಯಮಿತವಾಗಿ ಎಳನೀರಿನ ಸೇವನೆ ಮಾಡಿದರೆ ದೇಹದ ಆರೋಗ್ಯ ಉತ್ತಮವಾಗಿರುವುದು. ಚರ್ಮವು ಉತ್ತಮ ಹೊಳಪನ್ನು ಪಡೆದುಕೊಳ್ಳುವುದರ ಮೂಲಕ ಆರೋಗ್ಯವಾಗಿರುವಂತೆ ಮಾಡುತ್ತದೆ.

ಪುದೀನ ಮತ್ತು ಸೌತೆಕಾಯಿ ನೀರು

ಪುದೀನ ಮತ್ತು ಸೌತೆಕಾಯಿ ನೀರು

ತಾಜಾ ಪುದೀನ ಎಲೆಗಳು ಹಾಗೂ ಸೌತೆಕಾಯನ್ನು ತೆಗೆದುಕೊಳ್ಳಿ. ಪುದೀನವನ್ನು ಹೆಚ್ಚಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ. ಬಳಿಕ ಸೌತೆಕಾಯನ್ನು ಸ್ಲೈಸ್ ರೀತಿಯಲ್ಲಿ ಹೆಚ್ಚಿ ಅದೇ ಪಾತ್ರೆಗೆ ಹಾಕಿ. ನಂತರ ಒಂದಿಷ್ಟು ನೀರನ್ನು ಸೇರಿಸಿ. ಸುಮಾರು ಒಂದು ಗಂಟೆಗಳ ಕಾಲ ವಿಶ್ರಮಿಸಲು ಬಿಡಿ. ಬಳಿಕ ನೀರನ್ನು ಸೋಸಿಕೊಂಡು ಕುಡಿಯಿರಿ. ದಿನ ಪೂರ್ತಿ ಸವಿಯಲು ಸಂಗ್ರಹಿಸಿಟ್ಟುಕೊಳ್ಳಬಹುದು. ಈ ಮಿಶ್ರಣದ ನೀರಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುತ್ತವೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುವುದನ್ನು ತಡೆಯುತ್ತದೆ. ಉತ್ತಮ ಶಕ್ತಿಯನ್ನು ನೀಡುವುದರ ಜೊತೆಗೆ ನಿರ್ಜಲೀಕರಣ ಉಂಟಾಗುವುದನ್ನು ತಡೆಯುವುದು. ಅಲ್ಲದೆ ನಿಮಗೆ ಆರಾಮದಾಯಕ ಅನುಭವವನ್ನು ನೀಡುವುದು.

Most Read: ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಮಡಿಕೆ ಮಜ್ಜಿಗೆ

ಮಡಿಕೆ ಮಜ್ಜಿಗೆ

ಒಂದು ಪ್ರಮಾಣದ ಮೊಸರಿಗೆ ಐದು ಭಾಗ ನೀರನ್ನು ಸೇರಿಸಿ ಕಡೆಯಬೇಕು. ಬೆಣ್ಣೆಯನ್ನು ಬೇರ್ಪಡಿಸಿಕೊಂಡ ಬಳಿಕ ಬೆಣ್ಣೆಯನ್ನು ತೆಗೆಯಬೇಕು. ಹೀಗೆ ಬೆಣ್ಣೆ ಬೇರ್ಪಡಿಸಿದ ಮಜ್ಜಿಗೆಯು ಕುಡಿಯಲು ಅತ್ಯಂತ ಉತ್ತಮವಾಗಿರುತ್ತದೆ. ಈ ಮಜ್ಜಿಗೆಗೆ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಕುಡಿದರೆ ಅತ್ಯುತ್ತಮವಾಗಿರುತ್ತೆ. ರುಚಿಯಲ್ಲಿ ಅದ್ಭುತ ಅನುಭವ ನೀಡುವಂತೆಯೇ ದೇಹದಲ್ಲೂ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ಚೈತನ್ಯ ಶೀಲರಾಗಿರುವಂತೆ ಮಾಡುವುದು. ಪುರಾತನ ಕಾಲದಿಂದಲೂ ಬಳಸಿಕೊಂಡು ಬರುತ್ತಿರುವ ಪಾನೀಯಗಳಲ್ಲಿ ಇದೂ ಒಂದು. ಎಲ್ಲಾ ಋತುಮಾನಗಳಲ್ಲೂ ಇದರ ಸೇವನೆ ಅದ್ಭುತ ಅನುಭವವನ್ನು ನೀಡುವುದು.

ತಂಪಾದ ಹಾಲು

ತಂಪಾದ ಹಾಲು

ಹಾಲು ಅದ್ಭುತವಾದ ಪೇಯಗಳಲ್ಲಿ ಒಂದು. ಸಾಕಷ್ಟು ಪೋಷಕಾಂಶ ಹಾಗೂ ವಿಟಮಿನ್ಗಳನ್ನು ಒಳಗೊಂಡಿದೆ. ಆಯುರ್ವೇದದ ಪ್ರಕಾರ ತಂಪಾದ ಹಾಲನ್ನು ಕುಡಿಯುವುದರಿಂದ ದೇಹದಲ್ಲಿ ಉಷ್ಣತೆಯು ಕಡಿಮೆಯಾಗುತ್ತದೆ. ಪಿತ್ತವೂ ನಿಯಂತ್ರಣದಲ್ಲಿ ಇರುತ್ತದೆ. ದೇಹವನ್ನು ಪುನಃಶ್ಚೇತನ ಗೊಳಿಸುವುದರ ಜೊತೆಗೆ ಉತ್ತಮ ರೀತಿಯ ಪೋಷಣೆಯನ್ನು ನೀಡುತ್ತದೆ.

ನಿಂಬೆ ರಸ

ನಿಂಬೆ ರಸ

ಅತ್ಯಂತ ಔಷಧೀಯ ಗುಣವನ್ನು ಹೊಂದಿರುವ ಘಟಕಗಳಲ್ಲಿ ನಿಂಬು ಸಹ ಒಂದು. ನಿಂಬುವಿನಿಂದ ತಯಾರಿಸುವ ಪಾನೀಯ ಅಥವಾ ಪಾನಕವು ಅತ್ಯಂತ ಪ್ರಸಿದ್ಧವಾದ ಪಾನೀಯ. ಬೇಸಿಗೆಯಲ್ಲಿ ಹಾಗೂ ಸೂರ್ಯನ ಶಾಖದಿಂದ ಉಂಟಾಗುವ ಹಲಾವರು ತೊಂದರೆಗಳನ್ನು ಈ ಪಾನೀಯ ನಿಯಂತ್ರಿಸುತ್ತದೆ. ನಿಂಬೆ ರಸ, ಉಪ್ಪು ಮತ್ತು ನೀರನ್ನು ಬೆರೆಸಿಯೂ ಕುಡಿಯಬಹುದು. ನಿಂಬು ರಸ, ಸ್ವಲ್ಪ ಉಪ್ಪು, ಸಕ್ಕರೆ ಹಾಗೂ ನೀರನ್ನು ಬೆರೆಸಿ ಸಿಹಿಯಾದ ಪಾನಕದ ರೂಪದಲ್ಲೂ ಸೇವಿಸಬಹುದು. ಇಲ್ಲವೇ ನಿಂಬೆಯ ತುಂಡನ್ನು ನೀರಿನಲ್ಲಿ ಇಟ್ಟು, ಸ್ವಲ್ಪ ಸಮಯದ ಬಳಿಕ ಆ ನೀರನ್ನೂ ಸಹ ಸೇವಿಸಬಹುದು.

Most Read: ಏಳು ದಿನಗಳ ಕಾಲ ಬ್ರೇಕ್‌ಫಾಸ್ಟ್‌ಗೆ ಕೇವಲ ಮೊಟ್ಟೆಗಳನ್ನು ಮಾತ್ರ ತಿಂದ ಮಹಿಳೆಗೆ ಏನಾಯಿತು ಗೊತ್ತೇ?

ಬೇಸಿಗೆಯ ಬಿಸಿ ತಣಿಸುವ ಹಣ್ಣುಗಳು

ಬೇಸಿಗೆಯ ಬಿಸಿ ತಣಿಸುವ ಹಣ್ಣುಗಳು

ರಸ ಭರಿತರವಾದ ಕಲ್ಲಂಗಡಿಯಂತಹ ಹಣ್ಣುಗಳು

ಮೆಲನ್ ಹಣ್ಣುಗಳು ಎಂದು ಕರೆಯಲ್ಪಡುವ ರಸಭರಿತ ಹಣ್ಣುಗಳು ಬೇಸಿಗೆಯಲ್ಲಿ ಅದ್ಭುತವಾದ ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತವೆ. ಕಲ್ಲಂಗಡಿ, ಕರ್ಬೂಜ, ಕಿತ್ತಳೆ ಹಣ್ಣು ಸೇರಿದಂತೆ ಇನ್ನಿತರ ರಸ ಭರಿತ ಹಣ್ಣುಗಳು ವಿರೋಧಿ ಆಕ್ಸಿಡೆಂಟ್ಸ್ಗಳು, ವಿದ್ಯುದ್ವಿಚ್ಛೇದ್ಯಗಳನ್ನು ಶ್ರೀಮಂತವಾಗಿ ಪಡೆದುಕೊಂಡಿದೆ. ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ತಡೆಯುವುದರ ಮೂಲಕ ದಿನವಿಡೀ ತಾಜಾತನದಿಂದ ಕೂಡಿರುವಂತೆ ಮಾಡುವುದು.

ಐಸ್ ಆಪಲ್ ಅಥವಾ 'ತಾಳೆ ಹಣ್ಣು'

ಐಸ್ ಆಪಲ್ ಅಥವಾ 'ತಾಳೆ ಹಣ್ಣು'

ಅದ್ಭುತ ಆರೋಗ್ಯ ರಕ್ಷಣೆಯನ್ನು ಮಾಡುವ ಹಣ್ಣುಗಳಲ್ಲಿ ಐಸ್ ಆಪಲ್ ಸಹ ಒಂದು. ಇದು ವಿರೋಧಿ ಆಕ್ಸಿಡೆಂಟ್ಸ್ಗಳು, ವಿದ್ಯುದ್ವಿಚ್ಛೇದ್ಯಗಳನ್ನು ಶ್ರೀಮಂತವಾಗಿ ಪಡೆದುಕೊಂಡಿದೆ. ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ತಡೆಯುವುದು. ಅದ್ಭುತ ಶಕ್ತಿಯನ್ನು ದಿನವಿಡೀ ಹೊಂದಿರುವಂತೆ ಮಾಡುತ್ತದೆ. ಅಲ್ಲದೆ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು.

Most Read: ಆರೋಗ್ಯದ ಕಣ್ಣು ಅದುವೇ ಹಳ್ಳಿಗಾಡಿನ 'ತಾಳೆ ಹಣ್ಣು'

ಇಂಡಿಯನ್ ಗೂಸ್ ಬೆರ್ರಿ/ ನೆಲ್ಲಿಕಾಯಿ

ಇಂಡಿಯನ್ ಗೂಸ್ ಬೆರ್ರಿ/ ನೆಲ್ಲಿಕಾಯಿ

ಅತ್ಯಂತ ಚಿಕ್ಕ ಗಾತ್ರದಲ್ಲಿ ಇರುವ ಹಣ್ಣಾದರು ಇದರಲ್ಲಿ ಅದ್ಭುತ ಆರೋಗ್ಯಕರ ಗುಣಗಳಿವೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಆಯುರ್ವೇದದ ಪ್ರಕಾರ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ನೆಲ್ಲಿಕಾಯಿಯ ರಸ ಹಾಗೂ ಪಾನೀಯ ನಂಬಲಾಗದಂತಹ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಹಾಗೆಯೇ ತಿನ್ನಬಹುದು ಇಲ್ಲವೇ ಅದರ ರಸವನ್ನು ತೆಗೆದು ಪಾನೀಯದ ರೂಪದಲ್ಲೂ ಸೇವಿಸಿ ಆನಂದಿಸಬಹುದು. ಇದು ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡುವುದಲ್ಲದೆ ಪಿತ್ತಗಳಂತಹ ಸಮಸ್ಯೆಗಳಿಂದ ದೂರವಿಡುತ್ತದೆ.

ಬೇಸಿಗೆಯ ಬಿಸಿಗೆ ತಂಪಾಗಿಸುವ ತರಕಾರಿಗಳು

ಬೇಸಿಗೆಯ ಬಿಸಿಗೆ ತಂಪಾಗಿಸುವ ತರಕಾರಿಗಳು

ತರಕಾರಿಯನ್ನು ಬಳಸುವಾಗ ಹೆಚ್ಚು ನೀರಿನಂಶ ಇರುವ ತರಕಾರಿಯನ್ನು ಮೊದಲು ಆಯ್ಕೆ ಮಾಡಿ. ತಾಜಾ ಸಲಾಡ್, ಸೌತೆಕಾಯಿ ಮತ್ತು ಇನ್ನಿತರ ತರಕಾರಿಗಳನ್ನು ನೀವು ಬಳಸಬಹುದು. ಇವು ಬೇಸಿಗೆಯ ಬಿಸಿಯಿಂದ ಉಂಟಾಗುವ ತೊಂದರೆಗಳನ್ನು ನಿಯಂತ್ರಿಸುತ್ತವೆ. ಅಲ್ಲದೆ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವುದು. ಇವು ಬಹಳಷ್ಟು ಜಲಸಂಚಯನ ಮತ್ತು ಶಕ್ತಿಯನ್ನೂ ನೀಡಬಹುದು. ತಾಜಾ ಬೀಟ್ರೂಟ್ ಗಳು ಮತ್ತು ಕ್ಯಾರೆಟ್ಗಳು ದೇಹದ ಶಾಖವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆವೆ.

English summary

Summer foods and drinks to reduce body heat

Body heat is one of the most common conditions faced by people across the world. Before we start, it is essential to define body heat in order to be aware of this particular health condition. It is more commonly referred to as “heat stress”. A common cause of body heat is exposure to high temperatures that are not suitable for the body.
X
Desktop Bottom Promotion