For Quick Alerts
ALLOW NOTIFICATIONS  
For Daily Alerts

ಹೈ ಬಿಪಿ ಸಮಸ್ಯೆ ಇದೆಯೇ? ಇದಕ್ಕೆ ಮಾತ್ರೆಯ ಬದಲು ಇಂತಹ ನೈಸರ್ಗಿಕ ಟಿಪ್ಸ್ ಅನುಸರಿಸಿ

|

ಸಾಮಾನ್ಯವಾಗಿ ಸಿಟ್ಟು ಮಾಡಿಕೊಂಡರೆ ಬಿಪಿ ಏರಿಸಿಕೊಳ್ಳದಿರಿ ಎಂದು ಸಲಹೆ ನೀಡುತ್ತಾರೆ. ಆಂದರೆ ಸಿಟ್ಟಿಗೂ ಬಿಪಿಗೂ (ಅಧಿಕ ರಕ್ತದೊತ್ತಡ) ನೇರವಾದ ನಂಟಿದೆ ಎಂದೇ ಜನರು ತಿಳಿದುಕೊಂಡಿದ್ದಾರೆ. ಇದು ಅರ್ಧ ಸತ್ಯವೇ ಹೊರತು ಪೂರ್ಣಸತ್ಯವಲ್ಲ. ಏಕೆಂದರೆ ಸಿಟ್ಟಿನಲ್ಲಿದ್ದಾಗ ಮೆದುಳಿಗೆ ಹೆಚ್ಚಿನ ರಕ್ತಸಂಚಾರದ ಅಗತ್ಯವಿರುವ ಕಾರಣ ಹೃದಯ ಜೋರಾಗಿ ಹೊಡೆದುಕೊಳ್ಳುವ ಕಾರಣ ಆ ಕ್ಷಣ ರಕ್ತದೊತ್ತಡ ಹೆಚ್ಚುತ್ತದೆ. ಆದರೆ ಅಧಿಕ ರಕ್ತದೊತ್ತಡ ಎಂದರೆ ಸಿಟ್ಟಿಲ್ಲದ ಸಮಯದಲ್ಲಿಯೂ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹೃದಯ ರಕ್ತವನ್ನು ನೂಕುತ್ತಿರುವುದು.

ಈ ಸಮಯದಲ್ಲಿ ಸಿಟ್ಟು ಬಂದಾಗ ಇನ್ನೂ ಅಧಿಕವಾದ ಒತ್ತಡವನ್ನು ಹೇರುವ ಕಾರಣ ಬಿಪಿ ಇದ್ದವರು ಸಿಟ್ಟಿಗೇಳಬಾರದು ಎಂದು ವೈದ್ಯರು ಸಲಹೆ ಮಾಡುತ್ತಾರೆ. ಹೆಚ್ಚಿನವರು ಇದನ್ನೇ ಅಪಾರ್ಥ ಕಲ್ಪಿಸಿಕೊಂಡು ಸಿಟ್ಟು ಬಂದರೇ ಬೀಪಿ ಏರುತ್ತದೆ ಎಂದು ತಿಳಿದುಕೊಂಡಿದ್ದಾರೆ. ಅಧಿಕ ರಕ್ತದೊತ್ತಡಕ್ಕೆ ಕೆಲವಾರು ಕಾರಣಗಳಿವೆ. ಸ್ಥೂಲಕಾಯ ಅಥವಾ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬು ಮೊದಲ ಕಾರಣ. ಆದರೆ ಸೋಮಾರಿಗಳಾಗಿದ್ದು ತೆಳ್ಳನೆಯ ಶರೀರ ಹೊಂದಿರುವವರೂ ಅಧಿಕ ಬಿಪಿ ಹೊಂದಿರುತ್ತಾರೆ.

ವ್ಯತಿರಿಕ್ತವಾಗಿ ಕೊಂಚ ದಪ್ಪ ಎಂದು ಕಂಡುಬಂದರೂ ತಮ್ಮ ಕ್ರೀಡೆ, ನಿತ್ಯದ ವ್ಯಾಯಮ ಮೊದಲಾದ ಚಟುವಟಿಕೆಯಿಂದ ಇರುವವರ ರಕ್ತದೊತ್ತಡ ಆರೋಗ್ಯಕರ ಮಟ್ಟದಲ್ಲಿರುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡಕ್ಕೆ ನಮ್ಮ ಶಾರೀರಿಕ ಚಟುವಟಿಕೆಗಳು ನೇರವಾಗಿ ಸಂಬಂಧಿಸಿದೆ ಎಂದು ಸುಲಭವಾಗಿ ಹೇಳಬಹುದು. ಇದಕ್ಕೆ ಸೂಕ್ತವಾದ ಆಹಾರ ಕ್ರಮವೂ ಅಗತ್ಯ. ಆದರೆ ಕೆಲವರಲ್ಲಿ ಎಲ್ಲಾ ಸರಿ ಇದ್ದರೂ ಇನ್ನಾವುದೋ ಕಾರಣದಿಂದ ರಕ್ತದೊತ್ತಡ ಹೆಚ್ಚಿರಬಹುದು. ಆಗ ವೈದ್ಯರು ಕೆಲವು ತಪಾಸಣೆಗಳನ್ನು ಮಾಡಿ ಇದಕ್ಕೆ ಕಾರಣ ಹುಡುಕಿ ಸೂಕ್ತವಾದ ಮಾತ್ರೆಗಳನ್ನು ಸಲಹೆ ಮಾಡುತ್ತಾರೆ. ಅಧಿಕ ರಕ್ತದೊತ್ತಡವನ್ನು ತಹಬಂದಿಗೆ ತರಲು ಒಂದಿಷ್ಟು ಟಿಪ್ಸ್ ಅನ್ನು ಈ ಲೇಖನದಲ್ಲಿ ನಿಮಗಾಗಿ ನೀಡಿದ್ದೇವೆ, ಮುಂದೆ ಓದಿ...

ವ್ಯಾಯಾಮ ಮಾಡಿ

ವ್ಯಾಯಾಮ ಮಾಡಿ

ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ವಿಧಾನವೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿರಬೇಕು. ಒಳ್ಳೆಯ ವ್ಯಾಯಾಮ ದಿನಚರಿಯಿಂದಾಗಿ ಹೃದಯವು ತುಂಬಾ ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡಲು ನೆರವಾಗುವುದು. ಇದರಿಂದ ರಕ್ತದೊತ್ತಡವು ನೈಸರ್ಗಿಕವಾಗಿ ಕಡಿಮೆಯಾಗುವುದು. ತುಂಬಾ ಚಟುವಟಿಕೆಯಿಂದ ಇದ್ದರೆ ಆಗ ರಕ್ತದೊತ್ತಡವನ್ನು ಕೆಲವು ವಾರಗಳಲ್ಲಿ ನಿಯಂತ್ರಣಕ್ಕೆ ತರಬಹುದು. ಇದಕ್ಕಾಗಿ ಪ್ರತಿನಿತ್ಯವು ಸರಿಯಾಗಿ ವ್ಯಾಯಾಮ ಮಾಡಬೇಕು. ನೀವು ತುಂಬಾ ಸರಳ ಹಾಗೂ ಮನರಂಜಕವಾಗಿ ಕೆಲವೊಂದು ವ್ಯಾಯಾಮವನ್ನು ಮಾಡಬಹುದು. ಇದರಲ್ಲಿ ಮುಖ್ಯವಾಗಿ ಈಜು, ಟೆನಿಸ್ ಆಡುವುದು, ವೇಗವಾಗಿ ನಡೆಯುವುದು ಇತ್ಯಾದಿ.

ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ

ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ

ನಿಯಮಿತವಾಗಿ ಆಲ್ಕೋಹಾಲ್ ಸೇವನೆ ಮಾಡಿದರೆ ಅಧಿಕ ರಕ್ತದೊತ್ತಡವು ಹೆಚ್ಚಾಗುವುದು. ಅದಾಗ್ಯೂ, ನೀವು ದಿನಕ್ಕೆ ಒಂದು ಗ್ಲಾಸ್ ಆಲ್ಕೋಹಾಲ್ ಸೇವನೆ ಮಾಡಿದರೆ ಅದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುವುದು. ಅಧಿಕ ರಕ್ತದೊತ್ತಡದಿಂದಾಗಿ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಿಂದಾಗಿ ನಿಮ್ಮ ಜೀವನವು ಇನ್ನಷ್ಟು ಅಪಾಯಕ್ಕೆ ಒಳಗಾಗಬಹುದು.

ಸೊಂಟದ ಸುತ್ತಳತೆ ಗಮನಿಸಿ

ಸೊಂಟದ ಸುತ್ತಳತೆ ಗಮನಿಸಿ

ದೇಹದ ತೂಕವು ಹೆಚ್ಚಾದ ಕೂಡಲೇ ರಕ್ತದೊತ್ತಡ ಕೂಡ ಹೆಚ್ಚಾಗುವುದು. ತೂಕ ಇಳಿಕೆ ಮಾಡಿದರೆ, ಆಗ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಸೊಂಟದ ಸುತ್ತಲು ಕೊಬ್ಬು ತುಂಬಿಕೊಂಡಿರುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ನೀವು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕಾರಿ ಆಹಾರ ಸೇವನೆ ಮಾಡಿಕೊಂಡು ತೂಕ ಇಳಿಸಿಕೊಳ್ಳಬಹುದು.

ಉಪ್ಪು ಸೇವನೆ ಮಿತವಾಗಿರಲಿ

ಉಪ್ಪು ಸೇವನೆ ಮಿತವಾಗಿರಲಿ

ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿ ಇರಬೇಕು ಎಂದಾದರೆ ಆಗ ನೀವು ಉಪ್ಪು ಸೇವನೆಯನ್ನು ಮಿತವಾಗಿ ಇಟ್ಟುಕೊಳ್ಳಬೇಕು. ಹೆಚ್ಚು ಉಪ್ಪು ಸೇವಿಸಿದರೆ ಅದರಿಂದ ದೇಹದಲ್ಲಿ ಸೋಡಿಯಂ ಅಂಶವು ಹೆಚ್ಚಾವುದು. ಇದರಿಂದ ಕಿಡ್ನಿಗೆ ನಿಮ್ಮ ದೇಹದಿಂದ ದ್ರವವನ್ನು ಹೊರಗೆ ಹಾಕಲು ತುಂಬಾ ಕಷ್ಟವಾಗುವುದು. ಇದರ ಪರಿಣಾಮವಾಗಿ ರಕ್ತದೊತ್ತಡ ಕೂಡ ಹೆಚ್ಚಾಗುವುದು. ಇದರಿಂದ ಉಪ್ಪನ್ನು ಮಿತವಾಗಿ ಸೇವನೆ ಮಾಡಿ. ಆಹಾರದಲ್ಲಿ ಗಿಡಮೂಲಿಕೆ ಮತ್ತು ಸಾಂಬಾರ ಸೇರಿಸಿಕೊಳ್ಳಿ.

ಒತ್ತಡ ಕಡಿಮೆ ಮಾಡಿ

ಒತ್ತಡ ಕಡಿಮೆ ಮಾಡಿ

ನಮ್ಮ ಜೀವನ ತುಂಬಾ ವ್ಯಸ್ತ ಮತ್ತು ಒತ್ತಡದಿಂದ ಕೂಡಿರುವುದು. ಆದರೆ ನಾವು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಾರದು ಎಂದಲ್ಲ. ನಿಮ್ಮ ಒತ್ತಡದ ಮಟ್ಟವು ಹೆಚ್ಚಾಗುತ್ತಿದ್ದರೆ, ಆಗ ರಕ್ತದೊತ್ತಡವು ಹೆಚ್ಚಾಗುವುದು. ಒತ್ತಡಕ್ಕೆ ಕಾರಣವಾಗುವ ಸಮಸ್ಯೆ ಬಗ್ಗೆ ತಿಳಿಯಿರಿ ಮತ್ತು ಇದನ್ನು ಬಗೆಹರಿಸಲು ಪ್ರಯತ್ನಿಸಿ. ರಕ್ತದೊತ್ತಡ ಹೆಚ್ಚಾಗುವ ಮೊದಲು ನೀವು ಇದಕ್ಕೆ ಪರಿಹಾರ ಹುಡುಕಿ.

ಕೆಫಿನ್ ಕಡಿಮೆ ಮಾಡಿ

ಕೆಫಿನ್ ಕಡಿಮೆ ಮಾಡಿ

ಕೆಫಿನ್ ರಕ್ತದೊತ್ತಡವನ್ನು ಹಠಾತ್ ಆಗಿ ಹೆಚ್ಚಿಸುವುದು. ನಿಯಮಿತವಾಗಿ ಅತಿಯಾಗಿ ಕಾಫಿ ಸೇವನೆ ಮಾಡಿದರೆ ಅದರಿಂದ ಹೃದಯದ ಸಮಸ್ಯೆಗಳು, ಅಧಿಕ ರಕ್ತದೊತ್ತಡವು ಬರಬಹುದು.

ಚಾಕಲೇಟ್ ತಿನ್ನಿ!

ಚಾಕಲೇಟ್ ತಿನ್ನಿ!

ರೋಗಿ ಬಯಸಿದ್ದು ಹಾಲು ವೈದ್ಯ ಸೂಚಿಸಿದ್ದು ಹಾಲು ಎನ್ನುವ ಮಾತಿದೆ. ನಿಮ್ಮ ರೋಗಕ್ಕೆ ಚಾಕಲೇಟ್ ಮದ್ದಾದರೆ ಹೇಗಿರಬಹುದು ಯೋಚಿಸಿ. ಹೌದು, ಕಡುಬಣ್ಣದ ಚಾಕಲೇಟ್ ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನೇ ಉಂಟು ಮಾಡಲಿದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲಿದೆ.

ಬಿಪಿ ಪರೀಕ್ಷಿಸಿ

ಬಿಪಿ ಪರೀಕ್ಷಿಸಿ

ನಿಯಮಿತವಾಗಿ ಬಿಪಿ ಪರೀಕ್ಷಿಸಿ ರಕ್ತದೊತ್ತಡದ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬಾರದು. ನಿಯಮಿತವಾಗಿ ಪರೀಕ್ಷೆ ಮಾಡುವುದರಿಂದ ರಕ್ತದೊತ್ತಡದ ಏರುಪೇರನ್ನು ತಿಳಿದುಕೊಳ್ಳಬಹುದು. ದೊಡ್ಡ ಮಟ್ಟದ ಏರುಪೇರಿದ್ದರೆ ಆಗ ನೀವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಬಿಪಿ ಇಳಿಸಲು ನೀವು ತೆಗೆದುಕೊಳ್ಳುತ್ತಿರುವ ಮನೆಮದ್ದಿನ ಪರಿಣಾಮ ತಿಳಿದುಕೊಳ್ಳಲು ಇದು ನೆರವಾಗಲಿದೆ. ಬಿಪಿಯನ್ನು ನೈಸರ್ಗಿಕವಾಗಿ ತಗ್ಗಿಸಲು ಈ ಮೇಲಿನ ಟಿಪ್ಸ್ ಗಳನ್ನು ಪಾಲಿಸಿ, ಯಾವಾಗಲೂ ಸಂತಸದಿಂದ ಮತ್ತು ಒತ್ತಡ ರಹಿತವಾಗಿರಿ.

ದಾಸವಾಳದ ಹೂವು!

ದಾಸವಾಳದ ಹೂವು!

ದಾಸವಾಳದ ಹೂವಿನ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಸಾಕಷ್ಟು ವರ್ಷಗಳಿಂದ ಹೇಳಲಾಗುತ್ತದೆ.ಆದರೆ ಇತ್ತೀಚಿಗೆ ಇದು ಆಶ್ಚರ್ಯಕರ ರೀತಿಯಲ್ಲಿ ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುತ್ತದೆ ಎಂಬುದು ಸಾಬೀತಾಗಿದೆ. ಸ್ವಲ್ಪ ದಾಸವಾಳದ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ನೀರಿನಲ್ಲಿ ಕುದಿಸಿ.ಇದಕ್ಕೆ ಜೇನು, ಲಿಂಬೆ ರಸ ಮತ್ತು ಎರಡು ಚಕ್ಕೆಯನ್ನು ಹಾಕಿ ಕುದಿಸಿ. ಸ್ವಲ್ಪ ಹೊತ್ತು ತಣಿಯಲು ಬಿಟ್ಟು ನಂತರ ಇದನ್ನು ಕುಡಿಯಿರಿ. ಈ ರೀತಿ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಯಬಹುದು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿರುವ ಸಿಟ್ರುಲಿನ್ ಎಂಬ ಸಾವಯುವ ಸಂಯುಕ್ತವು ಹೃದಯವು ರಕ್ತವನ್ನು ಪಂಪ್ ಮಾಡಲು ಸಹಕರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದು ರೂಡಿಸಿಕೊಳ್ಳಿ.ಕಲ್ಲಂಗಡಿ ಬೀಜವೂ ಕೂಡ ರಕ್ತವನ್ನು ತಿಳಿಗೊಳಿಸಿ, ಮೂತ್ರಪಿಂಡದ ಕಾರ್ಯವನ್ನು ಸುಗಮಗೊಳಿಸಿ, ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಕರಿಸುತ್ತದೆ.

ನುಗ್ಗೆ ಕಾಯಿ

ನುಗ್ಗೆ ಕಾಯಿ

ನುಗ್ಗೆಕಾಯಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಫಲಕಾರಿ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಸಂಶೋಧನೆಗಳು ಸಾದರಪಡಿಸಿರುವಂತೆ, ಈ ಸಸ್ಯದ ಎಲೆಗಳಲ್ಲಿರುವ ಸಾರವು ರಕ್ತದೊತ್ತಡದ ಸಂಕೋಚನ (systolic) ಮತ್ತು ವ್ಯಾಕೋಚನವನ್ನು (diastolic) ಕಡಿಮೆಗೊಳಿಸಲು ಸಹಾಯಕಾರಿಯಾಗುತ್ತದೆ.

ಬೆರ್ರಿ ಸೇವನೆ ಮಾಡಿ

ಬೆರ್ರಿ ಸೇವನೆ ಮಾಡಿ

ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡಲು ಬೆರ್ರಿಗಳು ತುಂಬಾ ಒಳ್ಳೆಯದು. ಇದರಲ್ಲಿ ಫ್ಲಾವನಾಯ್ಡ್ ಗಳು ಸಮೃದ್ಧವಾಗಿದೆ. ಇದು ರಕ್ತದೊತ್ತಡ ನಿಯಂತ್ರಣ ಮಾಡುವಂತಹ ನೈಸರ್ಗಿಕ ಅಂಶವನ್ನು ಹೊಂದಿದೆ ಮತ್ತು ರಕ್ತದೊತ್ತಡವನ್ನು ಇದು ನಿಯಂತ್ರಣದಲ್ಲಿ ಇಡುವುದು. ಬೆರ್ರಿಗಳನ್ನು ಹಾಗೆಯೇ ಸೇವನೆ ಮಾಡಬಹುದು. ಇದಕ್ಕೆ ಉಪ್ಪು ಸೇರಿಸಬೇಡಿ. ಸ್ಟ್ರಾಬೆರಿ, ರಸ್ಬೇರಿ ಮತ್ತು ನೇರಳೆ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಿ.

English summary

Suffering from High BP? Ways to Manage it Naturally!

Blood pressure is the force of blood pushing through the coronary arteries that help carry blood throughout the body. Some symptoms of high blood pressure include headaches, nosebleeds, dizziness, chest pain, blood in urine, shortness of breath and visual changes.
Story first published: Thursday, March 21, 2019, 10:32 [IST]
X
Desktop Bottom Promotion