For Quick Alerts
ALLOW NOTIFICATIONS  
For Daily Alerts

ಕಾಲಜನ್ ಕೊರತೆಯಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

|

ನಮ್ಮ ದೇಹ ಎನ್ನುವುದು ವಿಶೇಷವಾಗಿ ರಚಿಸಲ್ಪಟ್ಟಿರುವುದು. ಇದರಲ್ಲಿ ಇರುವಂತಹ ಪ್ರತಿಯೊಂದು ಅಂಗಗಳು, ನರಗಳು, ಮಾಂಸ, ಮೂಳೆಗಳು ಹಾಗೂ ಅಂಗಾಂಶಗಳು ನಮ್ಮ ಆರೋಗ್ಯವನ್ನು ಕಾಪಾಡುವುದು. ಇದರಲ್ಲಿ ಯಾವುದೇ ಒಂದು ಅಂಶದ ಕೊರತೆ ಕಾಣಿಸಿಕೊಂಡರೂ ಆಗ ನಮಗೆ ಹಲವಾರು ರೀತಿಯ ಸಮಸ್ಯೆಗಳು ಬರಬಹುದು. ಮುಖ್ಯವಾಗಿ ನಮ್ಮ ದೇಹದ ಕಾರ್ಯ ಚಟುವಟಿಕೆ ಮೇಲೆ ಇದು ಪರಿಣಾಮ ಬೀರಬಹುದು. ಇದರಿಂದ ನಮ್ಮ ದೇಹವನ್ನು ಆರೋಗ್ಯವಾಗಿ ಹಾಗೂ ಸುಸ್ಥಿತಿಯಲ್ಲಿ ಇಡಲು ಬೇಕಾಗುವ ಪೋಷಕಾಂಶಗಳು ಹಾಗೂ ವಿಟಮಿನ್ ಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ನೀವು ಈ ವಿಭಾಗದಲ್ಲಿ ಮೊದಲು ಓದಿಕೊಂಡಿದ್ದರೆ ಆಗ ಕಾಲಜನ್ ಎನ್ನುವ ಹೆಸರನ್ನು ನೀವು ಕೇಳಿರಬಹುದು.

Signs that you lack Collagen in your Body

ಆದರೆ ನಿಮಗೆ ಇದು ಏನು ಎಂದು ಸರಿಯಾಗಿ ತಿಳಿಯದೆ ಇರಬಹುದು. ಇದು ನಮ್ಮ ದೇದಹದಲ್ಲಿ ಇರುವಂತಹ ಒಂದು ರೀತಿಯ ಪ್ರೋಟೀನ್ ಆಗಿದೆ. ಇದು ಮನುಷ್ಯನ ದೇಹದ ಚರ್ಮ, ಮೂಳೆ, ಸ್ನಾಯುಗಳು ಮತ್ತು ಸ್ನಾಯುರಜ್ಜುಗಳಲ್ಲಿ ಕಂಡುಬರುವುದು. ಕಾಲಜನ್ ನಮ್ಮ ಸಂಪೂರ್ಣ ದೇಹವನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುವುದು. ಇದು ಸಮಯಕ್ಕೆ ಅನುಗುಣವಾಗಿ ಕೊರತೆ ಕಾಡುವುದು ಮತ್ತು ಇದರಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಾಲಜನ್ ದೇಹದಲ್ಲಿ ಶೇ.30ರಷ್ಟು ಅಂಗಾಂಶಗಳನ್ನು ಉತ್ಪತ್ತಿ ಮಾಡುವುದು. ಇದರಿಂದ ದೇಹದಲ್ಲಿ ಕಾಲಜನ್ ಕೊರತೆಯಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಲೇಖನದಲ್ಲಿ ನಾವು ನಿಮಗೆ ಕಾಲಜನ್ ಕೊರತೆಯಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಚಿಹ್ನೆಗಳನ್ನು ವಿವರಿಸಿ ಹೇಳಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ.

ರಕ್ತದೊತ್ತಡ

ರಕ್ತದೊತ್ತಡ

ವಯಸ್ಸಾಗುತ್ತಾ ಇರುವಂತೆ ಕಾಲಜನ್ ಕೆಡಲು ಆರಂಭಿಸುತ್ತದೆ. ಇದರಿಂದ ದೇಹಕ್ಕೆ ರಕ್ತಸಂಚಾರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕಷ್ಟವಾಗುವುದು. ಕಾಲಜನ್ ಕಡಿಮೆ ಆದರೆ ಆಗ ಅದರಿಂದ ರಕ್ತದೊತ್ತಡವು ಕುಸಿಯುವುದು. ಇದರಿಂದ ನೀವು ರಕ್ತದೊತ್ತಡಕ್ಕೆ ಸಂಬಂಧಿಸಿ ಇರುವಂತಹ ಕೆಲವೊಂದು ಸಮಸ್ಯೆಗಳಾಗಿರುವ ನೋವು, ನಿಶ್ಯಕ್ತಿ, ಬಳಲಿಕೆ ಮತ್ತು ದೀರ್ಘಕಾಲಿಕ ತಲೆನೋವು ಕಂಡುಬರಬಹುದು.

most read: ಇಂತಹ ಲಕ್ಷಣಗಳು ಕಂಡುಬಂದರೆ- ಹೆಚ್ಚು ಉಪ್ಪಿನಂಶ ಇರುವ ಆಹಾರ ಸೇವಿಸುತ್ತಿದ್ದೀರಿ ಎಂದರ್ಥ!

ಗಂಟುಗಳಲ್ಲಿ ನೋವು

ಗಂಟುಗಳಲ್ಲಿ ನೋವು

ಗಂಟುಗಳನ್ನು ಜೋಡಿಸುವ ಕಾರ್ಟಿಲೆಜ್ ಎನ್ನುವ ಅಂಗಾಂಶವು ಕಾಲಜನ್ ನಿಂದ ಮಾಡಲ್ಪಟ್ಟಿದೆ. ಇದರಿಂದಾಗಿ ನಮ್ಮ ದೇಹಕ್ಕೆ ಪ್ರೋಟೀನ್ ಅತೀ ಅಗತ್ಯವಾಗಿರುವುದು. ಈ ಕಾರಣದಿಂದಾಗಿ ಕಾಲಜನ್ ಕೊರತೆ ಕಾಡಿದರೆ ಆಗ ಗಂಟು ನೋವು ಮತ್ತು ಗಂಟಿನ ಸಿಡಿತ ಕಂಡುಬರುವುದು. ಕಾಲಜನ್ ಸಪ್ಲಿಮೆಂಟ್ ಬಳಸಿಕೊಂಡರೆ ಇದರಿಂದ ಪರಿಹಾರ ಪಡೆಯಬಹುದು. ಆದರೆ ನೀವು ವೈದ್ಯರ ಸಲಹೆ ಪಡೆಯದೆ ಇದನ್ನು ಸೇವಿಸಬೇಡಿ.

ನೆರಿಗೆ

ನೆರಿಗೆ

ಕಾಲಜನ್ ದೇಹದಲ್ಲಿ ಚರ್ಮವನ್ನು ಆರೋಗ್ಯವಾಗಿ ಇಡುವುದು. ದೇಹದಲ್ಲಿ ಕಾಲಜನ್ ಕಡಿಮೆ ಆದರೆ ಆಗ ಚರ್ಮವು ತನ್ನ ನೈಸರ್ಗಿಕ ವಿನ್ಯಾಸ ಕಳೆದುಕೊಂಡು ಬಿಡುವುದು. ಇದರಿಂದ ಚರ್ಮದ ಸಮಸ್ಯೆಗಳಾಗಿರುವಂತಹ ನೆರಿಗೆ ಮತ್ತು ಗೆರೆಗಳು ಕಾಣಿಸಿಕೊಳ್ಳುವುದು. ಕಾಲಜನ್ ಸಪ್ಲಿಮೆಂಟ್ ಸೇವನೆ ಮಾಡುವ ಮೂಲಕ ನೀವು ಇಂತಹ ಸಮಸ್ಯೆ ನಿವಾರಣೆ ಮಾಡಬಹುದು.

ಕೂದಲಿನ ಸಮಸ್ಯೆಗಳು

ಕೂದಲಿನ ಸಮಸ್ಯೆಗಳು

ನಿಮಗೆ ಕಾಲಜನ್ ಸಮಸ್ಯೆ ಇದೆಯಾ ಅಥವಾ ಇಲ್ಲವಾ ಎನ್ನುವುದನ್ನು ಕೂದಲು ಹೇಳುತ್ತದೆ. ಕೂದಲಿನ ಕಿರುಚೀಲಗಳ ನಡುವಿನ ಜಾಗವನ್ನು ಕಾಲಜನ್ ತುಂಬುವುದು. ಕಾಲಜನ್ ಕೊರತೆ ಕಾಣಿಸಿಕೊಂಡ ವೇಳೆ ಕೂದಲಿನ ಕಿರುಚೀಲಗಳಿಗೆ ಸರಿಯಾದ ಪೋಷಕಾಂಶಗಳು ಸಿಗುವುದಿಲ್ಲ ಮತ್ತು ಇದರ ಪರಿಣಾಮವಾಗಿ ಕೂದಲು ಉದುರುವಿಕೆ ಕಂಡು ಬರುವುದು. ಕಾಲಜನ್ ಕಡಿಮೆ ಇದ್ದರೆ ಆಗ ಕೂದಲಿನ ವಿನ್ಯಾಸ ಬದಲಾಗುವುದು ಮತ್ತು ಕೂದಲಿನ ಬೆಳವಣಿಗೆ ಮೇಲೂ ಇದು ಪರಿಣಾಮ ಬೀರುವುದು.

most read: ಸತತ ಒಂದು ವಾರ ಕಾಲ ಎಳನೀರು ಕುಡಿದರೆ ಏನಾಗುವುದು?

ದಂತ ಸಮಸ್ಯೆಗಳು

ದಂತ ಸಮಸ್ಯೆಗಳು

ಕಾಲಜನ್ ವಸಡಿಗೆ ಅತೀ ಅಗತ್ಯವಾಗಿ ಬೇಕು. ಯಾಕೆಂದರೆ ಇದು ವಸಡುಗಳನ್ನು ಬಲಿಷ್ಠವಾಗಿ ಇಡುವುದು. ಕಾಲಜನ್ ಇಲ್ಲದೆ ಇದ್ದರೆ ವಸಡುಗಳು ದುರ್ಬಲಗೊಂಡು, ಹಲ್ಲುಗಳು ಅಲುಗಾಡಬಹುದು. ಕಾಲಜನ್ ಕೊರತೆಯಿಂದಾಗಿ ದಂತ ಸೂಕ್ಷ್ಮತೆ, ದಂತಕುಳಿ ಮತ್ತು ಬೇಗನೆ ಹಲ್ಲು ಉದುರುವ ಸಮಸ್ಯೆ ಕಾಣಿಸಬಹುದು.

ಸ್ನಾಯುಗಳ ಸೆಳೆತ

ಸ್ನಾಯುಗಳ ಸೆಳೆತ

ಕಾಲಜನ್ ಮೂಳೆಗಳು ಹಾಗೂ ಸ್ನಾಯುಗಳನ್ನು ಅಸ್ಥಿಪಂಜರದ ವ್ಯವಸ್ಥೆಗೆ ಸಂಪರ್ಕಿಸುವುದು. ಕಾಲಜನ್ ಕೊರತೆ ಕಾಣಿಸಿಕೊಂಡರೆ ಆಗ ಈ ಸಂಪರ್ಕವು ದುರ್ಬಲ ಆಗುವುದು. ಇದರಿಂದಾಗಿ ಸ್ನಾಯುಗಳಲ್ಲಿ ನೋವು ಮತ್ತು ಸೆಳೆತ ಕಂಡು ಬರಬಹುದು.

ಕೊನೇ ಮಾತು

ಕೊನೇ ಮಾತು

ಕಾಲಜನ್ ಎನ್ನುವುದು ದೇಹವನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುವುದು ಮತ್ತು ಸ್ಥಿತಿಸ್ಥಾಪಕತ್ವ ನೀಡುವುದು. ಇದು ಅಂಗಾಂಶಗಳಿಗೆ ಬೆಂಬಲ ನೀಡುವಂತಹ ಅಂಶವಾಗಿದೆ. ದೇಹದಲ್ಲಿ ಕಾಲಜನ್ ಕೊರತೆ ಕಾಣಿಸಿಕೊಂಡರೆ ಆಗ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಸಂಧಿವಾತ, ವ್ಯವಸ್ಥಿತ ಸ್ಕ್ಲೆರೋಸಿಸ್ ಮತ್ತು ಲೂಪಸ್ ಕಂಡುಬರಬಹುದು. ನಾವು ಸರಿಯಾಗಿ ಗಮನಿಸಿದರೆ ದೇಹವು ಕಾಲಜನ್ ಕೊರತೆಯ ಹಲವಾರು ಲಕ್ಷಣಗಳನ್ನು ನಮಗೆ ತೋರಿಸಿಕೊಡುವುದು. ಆದರೆ ನಾವು ಇಲ್ಲಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದು ಕೂಡ ಮುಖ್ಯ. ಅದೇನೆಂದರೆ ಧೂಮಪಾನ ತ್ಯಜಿಸಬೇಕು, ಸೂರ್ಯನ ಬಿಸಿಲಿಗೆ ಹೆಚ್ಚು ಮೈಯೊಡ್ಡಬಾರದು, ಕಾಲಜನ್ ಹೆಚ್ಚು ಮಾಡಲು ಕೆಲವೊಂದು ಕಾಲಜನ್ ಸಪ್ಲಿಮೆಂಟ್ ಗಳನ್ನು ವೈದ್ಯರ ಸಲಹೆ ಮೇರೆಗೆ ಪಡೆಯಬೇಕು. ನೀವು ಕಾಲಜನ್ ಸಪ್ಲಿಮೆಂಟ್ ತೆಗೆದುಕೊಳ್ಳುವ ಮೊದಲು ಅದರಿಂದ ನಿಮಗೆ ಅಲರ್ಜಿ ಆಗಬಹುದೇ ಎಂದು ತಿಳಿಯುವುದು ಅಗತ್ಯವಾಗಿದೆ.

English summary

Signs that you lack Collagen in your Body

Have you heard of the term “collagen” but don’t really know what it means? Collagen is a protein found in the human body found in the skin, bones, muscles and tendons. It is a substance that holds the body together. It begins to deteriorate with time, gradually leading to various health problems. Collagen makes for 30 percent of the cells, so a collagen deficiency in the system may cause a lot of problems.
X
Desktop Bottom Promotion