For Quick Alerts
ALLOW NOTIFICATIONS  
For Daily Alerts

ನಿಮಗೆ ಸೆಕ್ಸ್ ಅಲರ್ಜಿ ಇದೆ ಎಂದು ಸೂಚಿಸುವ ಈ ಏಳು ಲಕ್ಷಣಗಳು

|

ಲೈಂಗಿಕ ಜೀವನ ಸುಖಕರವಾಗಿರಲು ಕೇವಲ ಲೈಂಗಿಕ ಸಾಮರ್ಥ್ಯವಿದ್ದರೆ ಮಾತ್ರ ಸಾಲದು, ಲೈಂಗಿಕ ಆಸಕ್ತಿಯೂ ಇರಬೇಕು. ಹಾಗಾಗಿ ಒಮ್ಮೆ ಲೈಂಗಿಕ ಕ್ರಿಯೆಗಾಗಿ ಕಾಂಡಮ್ಮೊಂದನ್ನು ಧರಿಸಿ ತಯಾರಾಗುವುದರಲ್ಲಿಯೇ ನಿರಾಸಕ್ತಿ ಆವರಿಸಿದರೆ ಇದಕ್ಕೆ ಬೇರೆಯೇ ಕಾರಣವಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ನಿರಾಸಕ್ತಿಗೆ ಲೈಂಗಿಕ ಅಲರ್ಜಿಯೂ ಕಾರಣವಾಗಿರಬಹುದು. ಹೌದು, ವಿಚಿತ್ರ ಎಂದು ಅನ್ನಿಸಿದರೂ ವಾಸ್ತವವಾಗಿ ಹಲವು ವ್ಯಕ್ತಿಗಳಿಗೆ ಈ ತೊಂದರೆ ಇದ್ದರೂ ಈ ಬಗ್ಗೆ ಅರಿವೇ ಇರುವುದಿಲ್ಲ.

ನಿಮಗೂ ಲೈಂಗಿಕ ಅಲರ್ಜಿ ಇರಬಹುದು

ನಿಮಗೂ ಲೈಂಗಿಕ ಅಲರ್ಜಿ ಇರಬಹುದು

ಲೈಂಗಿಕ ಜೀವನ ಸುಖಕರವಾಗಿದೆ ಎಂದು ಅಂದುಕೊಳ್ಳುವ ವ್ಯಕ್ತಿಗಳಲ್ಲಿಯೂ ಈ ಅಲರ್ಜಿ ಇರಬಹುದು. ಆದರೆ ಇದರ ಇರುವಿಕೆಯನ್ನು ಕಂಡುಕೊಳ್ಳುವುದು ಕಷ್ಟ. ಏಕೆಂದರೆ ಹಚ್ಚಿನವರು ತಮ್ಮ ಲೈಂಗಿಕ ಕರ್ತವ್ಯವನ್ನು ತಕ್ಷಣವೇ ಮುಗಿಸಿದ ಬಳಿಕವೇ ಇವುಗಳ ಇರುವಿಕೆ ಪ್ರಕಟಗೊಳ್ಳುವ ಕಾರಣ ಹೆಚ್ಚಿನವರಿಗೆ ಈ ಅಲರ್ಜಿ ಇರುವುದೇ ತಿಳಿದಿರುವುದಿಲ್ಲ. ಬನ್ನಿ, ಈ ತೊಂದರೆ ಇರುವ ವ್ಯಕ್ತಿಗಳಲ್ಲಿ ಕಂಡುಬರುವ ಏಳು ಸಾಮಾನ್ಯ ಲಕ್ಷಣಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಒಂದು ವೇಳೆ ನಿಮ್ಮಲ್ಲೂ ಈ ಸೂಚನೆಗಳಿದ್ದರೆ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗ್ದಿದೆ.

ತುರಿಕೆ

ತುರಿಕೆ

ಒಂದು ವೇಳೆ ಲೈಂಗಿಕ ಮಿಲನದ ಬಳಿಕ ಜನನಾಂಗ ಮತ್ತು ಸೂಕ್ಷ್ಮಭಾಗಗಳಲ್ಲಿ ತುರಿಕೆಯುಂಟಾದರೆ ಇದಕ್ಕೆ ಹೆಚ್ಚಿನ ಗಮನ ನೀಡಿ. ಒಂದು ವೇಳೆ ಇದು ಶಿಲೀಂಧ್ರದ ಸೋಂಕಿನಿಂದ ಎದುರಾಗಿದ್ದರೆ ಸುಲಭ ಚಿಕಿತ್ಸೆಯಿಂದ ಇದು ಗುಣವಾಗಬೇಕು. ಹಾಗಲ್ಲದೇ ಇದ್ದು ಕೇವಲ ಲೈಂಗಿಕ ಕ್ರಿಯೆಯ ಬಳಿಕ ಮಾತ್ರವೇ ಈ ತುರಿಕೆ ಕಾಣಿಸಿಕೊಂಡರೆ ಹಾಗೂ ಈ ಸಮಯದಲ್ಲಿ ಯಾವುದೇ ಸ್ರಾವವೂ ಇಲ್ಲದಿದ್ದರೆ ಸಂಗಾತಿಯ ವೀರ್ಯಾಣುಗಳು ನಿಮಗೆ ಅಲರ್ಜಿಕಾರಕವಾಗಿರಬಹುದು.

ಉರಿ

ಉರಿ

ಒಂದು ವೇಳೆ ಮಿಲನದ ಸಮಯದಲ್ಲಿ ಅಥವಾ ಬಳಿಕದ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಂತೆ ಉರಿಯುತ್ತಿದ್ದರೆ (ವಿಶೇಷವಾಗಿ ನಿಮ್ಮ ಸಂಗಾತಿ ಸ್ಖಲಿಸಿದ ಬಳಿಕ) ತಕ್ಷಣವೇ ನೀವು ಸ್ತ್ರೀರೋಗತಜ್ಞರನ್ನು ಕಂಡು ನಿಮ್ಮ ಸಂಗಾತಿಯ ವೀರ್ಯಾಣುಗಳು ನಿಮಗೆ ಅಲರ್ಜಿಕಾರಕವೇ ಎಂದು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಈ ಅಲರ್ಜಿ ನಿಮಗಿದ್ದರೆ ಜನನಾಂಗದ ಅಂಚುಗಳು ಊದಿಕೊಳ್ಳುವುದು ಮತ್ತು ಭಾರೀ ಉರಿ ಕಾಣಿಸಿಕೊಳ್ಳುತ್ತದೆ.

Most Read: ಸೆಕ್ಸ್‌ಗೂ ಮುನ್ನ ಇಂತಹ 7 ಆಹಾರಗಳಲ್ಲಿ ಯಾವುದಾದರೂ ಒಂದನ್ನು ಸೇವಿಸಿ ಸಾಕು!

ಕಾಮಪರಾಕಾಷ್ಠೆ ನಿಮ್ಮನ್ನು ರೋಗಗ್ರಸ್ತಗೊಳಿಸುತ್ತದೆ

ಕಾಮಪರಾಕಾಷ್ಠೆ ನಿಮ್ಮನ್ನು ರೋಗಗ್ರಸ್ತಗೊಳಿಸುತ್ತದೆ

ಒಂದು ವೇಳೆ ನೀವು ಪುರುಷರಾಗಿದ್ದು ಸ್ಖಲನದ ಬಳಿಕ ನಿಮಗೆ ಜ್ವರ ಬಂದಂತಾಗುವುದು, ಮೂಗು ಸೋರುವುದು, ಭಾರೀ ತಲೆನೋವು (ಇವೆಲ್ಲಾ ಫ್ಲೂ ಜ್ವರದ ಲಕ್ಷಣಗಳು) ಕಾಣಿಸಿಕೊಂಡರೆ ನಿಮಗೆ ನಿಮ್ಮದೇ ವೀರ್ಯಾಣುಗಳ ಅಲರ್ಜಿ ಇರಬಹುದು. ಇದೊಂದು ಅತ್ಯಪರೂಪದ ಸಂಗತಿಯಾಗಿದ್ದು ಪೋಯ್ಸ್ (post-orgasmic illness syndrome (POIS)) ಎಂದು ಕರೆಯುತ್ತಾರೆ. ಒಂದು ವೇಳೆ ಈ ತೊಂದರೆ ನಿಮಗಿದ್ದರೆ ಆದಷ್ಟೂ ಬೇಗನೇ ಚಿಕಿತ್ಸೆ ಪಡೆದುಕೊಳ್ಳಬೇಕು.

ಮಹಿಳೆಯರಿಗೆ ಕಾಂಡಮ್ ಅಲರ್ಜಿಕಾರಕವಾಗಿರಬಹುದು

ಮಹಿಳೆಯರಿಗೆ ಕಾಂಡಮ್ ಅಲರ್ಜಿಕಾರಕವಾಗಿರಬಹುದು

ಒಂದು ವೇಳೆ ಕಾಂಡಂ ಉಪಯೋಗಿಸಿ ನಡೆಸಿದ ಸಂಸರ್ಗದ ಬಳಿಕ ನಿಮಗೆ ತುರಿಕೆ ಕಾಣಿಸಿಕೊಂಡರೆ ನಿಮಗೆ ಲ್ಯಾಟೆಕ್ಸ್ ರಬ್ಬರ್ ನ ಅಲರ್ಜಿ ಇರಬಹುದು. ಒಂದು ವೇಳೆ ಇದು ಹೌದಾದರೆ ಲ್ಯಾಟೆಕ್ಸ್ ರಬ್ಬರ್ ನಿಂದ ತಯಾರಿಸಲಾದ ಇತರ ಯಾವುದೇ ವಸ್ತುಗಳು ನಿಮಗೆ ಅಲರ್ಜಿಕಾರಕವೇ ಹೌದು. ಈ ಸಂಗತಿ ಗಮನಕ್ಕೆ ಬಂದರೆ ತಕ್ಷಣವೇ ಲ್ಯಾಟೆಕ್ಸ್ ಬಳಕೆಯನ್ನು ನಿಲ್ಲಿಸಿ ಇತರ ಕಚ್ಚಾವಸ್ತುವಿನಿಂದ ತಯಾರಿಸಿದ ಕಾಂಡಂ ಅಥವಾ ಪರ್ಯಾಯ ವಿಧಾನಗಳನ್ನು ಉಪಯೋಗಿಸಬಹುದು.

ಸೂಕ್ಷ್ಮಗೆರೆಗಳು

ಸೂಕ್ಷ್ಮಗೆರೆಗಳು

ಹಲವು ಸಂದರ್ಭಗಳಲ್ಲಿ ಕೃತಕ ಜಾರುಕದ್ರವವಳು ಸಹಾ ಅಲರ್ಜಿಯುಂಟುಮಾಡಬಹುದು. ಏಕೆಂದರೆ ಈ ಜಾರುಕಗಳು ತ್ವಚೆಗೆ ತಂಪು ನೀಡುವ ಅಥವಾ ಬೆಚ್ಚಗಾಗಿಸುವ ಗುಣ ಹೊಂದಿರುತ್ತವೆ. ಈ ಉತ್ಪನ್ನಗಳಲ್ಲಿ ಈ ಗುಣವನ್ನು ನೀಡಲು ಬಳಸಲಾಗಿರುವ ಯಾವುದೇ ರಾಸಾಯನಿಕಕ್ಕೆ ನೀವು ಅಲರ್ಜಿ ಹೊಂದಿರಬಹುದು.

ಜನನಾಂಗ ಒಣದಾಗಿರುವುದು

ಜನನಾಂಗ ಒಣದಾಗಿರುವುದು

ಒಂದು ವೇಳೆ ಮಿಲನ ಕ್ರಿಯೆಯ ಬಳಿಕ ಜನನಾಂಗದಲ್ಲಿ ಸಾಕಷ್ಟು ಆದ್ರತೆ ಇರದೇ ಒಣದಾಗಿದ್ದರೆ ಇದಕ್ಕೆ ಮಿಲನಕ್ರಿಯೆಯ ಸಮಯದಲ್ಲಿ ಬಳಸಲಾಗಿದ್ದ ಪ್ರಸಾದನ ಅಥವಾ ಕ್ರೀಮ್ ಕಾರಣವಾಗಿರಬಹುದು.

Most Read: ಒಂದೇ ವಾರದಲ್ಲಿ ದಂತಕುಳಿ ಸಮಸ್ಯೆ ಕಡಿಮೆ ಮಾಡುವ ಪವರ್‌ಫುಲ್ ಮನೆಮದ್ದುಗಳು

ಊದಿಕೊಳ್ಳುವುದು

ಊದಿಕೊಳ್ಳುವುದು

ಒಂದು ವೇಳೆ ಲ್ಯಾಟೆಕ್ಸ್ ಅಥವಾ ಇತರ ಯಾವುದೇ ಪ್ರಸಾದನದ ರಾಸಾಯನಿಕ ನಿಮಗೆ ಅಲರ್ಜಿಕಾರಕವಾಗಿದ್ದರೆ ಇದರ ಪರಿಣಾಮವಾಗಿ ಜನನಾಂಗದ ಹೊರಭಾಗ ಊದಿಕೊಳ್ಳುತ್ತದೆ ಹಾಗೂ ತುರಿಕೆ ಮತ್ತು ಉರಿಯನ್ನೂ ಹೊಂದಿರುತ್ತದೆ. ವಿಶೇಷವಾಗಿ ಸ್ವಾದಭರಿತ ಜಾರುಕದ್ರವವನ್ನು ಸಿಂಪಡಿಸಿದ ಕಾಂಡಂಗಳ ಬಳಕೆಯ ಬಳಿಕ ಇದು ಕಾಣಬರುತ್ತದೆ. ಒಂದು ವೇಳೆ ಈ ಸಂಗತಿ ನಿಮ್ಮ ಗಮನಕ್ಕೆ ಬಂದರೆ ಇದುವರೆಗೆ ನೀವು ಪ್ರಯತ್ನಿಸದೇ ಇದ್ದ ಬೇರೆ ಸಂಸ್ಥೆಯ ಬೇರೆಯೇ ವಿಧದ ಉತ್ಪನ್ನಗಳನ್ನು ಬಳಸಿ ನೋಡಿ, ಒಂದು ವೇಳೆ ಇದರಿಂದ ನಿಮ್ಮ ತೊಂದರೆ ನಿವಾರಣೆಯಾಗಿದ್ದರೆ ನಿಮಗೆ ಲ್ಯಾಟೆಕ್ಸ್ ಅಥವಾ ಜಾರುಕದ್ರವದ ಅಲರ್ಜಿ ಇರುವುದು ಖಚಿತವಾಗುತ್ತದೆ.

English summary

signs that you are allergic to SEX!

If the whole process of trying to put on a condom properly and getting it in a proper position isn’t enough to kill the mood, there is something else that will definitely put a damper on your prospect of catching some action. You might be allergic to sex as well. Yes, as weird as it sounds, we are not making this up.
X
Desktop Bottom Promotion