For Quick Alerts
ALLOW NOTIFICATIONS  
For Daily Alerts

ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿದರೂ ಸಾಕು-ರಕ್ತದೊತ್ತಡ ನಿಯಂತ್ರಿಸಬಹುದು!

|

ಬೇಸಿಗೆ ಕಾಲದಲ್ಲಿ ಹಣ್ಣುಗಳ ಜ್ಯೂಸ್ ಕುಡಿದರೆ ಆಗ ದೇಹವು ತಂಪಾಗಿ ಇರುವುದು. ಇಷ್ಟು ಮಾತ್ರವಲ್ಲದೆ ಈ ಜ್ಯೂಸ್ ಗಳಿಂದ ನಮ್ಮ ಆರೋಗ್ಯಕ್ಕೂ ತುಂಬಾ ನೆರವಾಗುವುದು. ಹಣ್ಣುಗಳಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಇದಕ್ಕೆ ಕಾರಣವಾಗಿದೆ. ಅದರಲ್ಲೂ ಕಿತ್ತಳೆ ಹಣ್ಣು ನಮ್ಮ ದೇಹಕ್ಕೆ ಚೈತನ್ಯ ನೀಡುವುದು. ಅದೇ ರೀತಿಯಾಗಿ ಇದರಲ್ಲಿ ಇನ್ನು ಹಲವಾರು ರೀತಿಯ ಆರೋಗ್ಯ ಲಾಭಗಳು ಕೂಡ ಇದೆ. ಇದರಲ್ಲಿ ಇರುವಂತಹ ವಿಟಮಿನ್ ಸಿ ಮಾತ್ರವಲ್ಲದೆ ಪೊಟಾಶಿಯಂ, ಫಾಲಟೆ, ನೈಸರ್ಗಿಕ ಸಿಟ್ರಸ್ ಬಯೊಫ್ಲಾವನಾಯ್ಡ್ ಚಯಾಪಚಯ ಕ್ರಿಯೆಗೆ ಮತ್ತು ಹೃದಯದ ಆರೋಗ್ಯಕ್ಕೆ ತುಂಬಾ ನೆರವಾಗುವುದು.

ಇದರಿಂದ ದೇಹವು ಆರೋಗ್ಯ ಮತ್ತು ಫಿಟ್ ಆಗಿರುವುದು. ಕಿತ್ತಳೆ ಜ್ಯೂಸ್ ರಕ್ತದೊತ್ತಡವನ್ನು ತಗ್ಗಿಸುವುದು ಮತ್ತು ಹೃದಯದ ಆರೋಗ್ಯ ಕಾಪಾಡುವುದು. ಕ್ಲೆವೆಲೆಂಡ್ ಕ್ಲಿನಿಕ್ ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ, ಅಧ್ಯಯನಕ್ಕೆ ಒಳಪಟ್ಟವರು ಪ್ರತೀ ದಿನ ಎರಡು ಲೋಟ ಕಿತ್ತಳೆ ಜ್ಯೂಸ್ ಕುಡಿದ ವೇಳೆ ಅವರ ರಕ್ತದೊತ್ತಡ ಮಟ್ಟವು ಗಣನೀಯವಾಗಿ ಕಡಿಮೆ ಆಗಿರುವುದು ಸಾಬೀತು ಆಗಿದೆ. ಅಧ್ಯಯನ ಮುಕ್ತಾಯಗೊಳ್ಳುವ ಎರಡು ವಾರಕ್ಕೆ ಮೊದಲು ಹೆಚ್ಚಿನ ರೋಗಿಗಳಲ್ಲಿ ರಕ್ತದೊತ್ತಡವು ಸಾಮಾನ್ಯ ಹಂತಕ್ಕೆ ಬಂದು ನಿಂತಿದೆ. ಕಿತ್ತಳೆ ಹಣ್ಣು ರಕ್ತದೊತ್ತಡ ಕಡಿಮೆ ಮಾಡಲು ಒಂದು ಅದ್ಭುತವಾಗಿರುವ ಪಾನೀಯವೆಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ರಕ್ತದೊತ್ತಡ ಶಕ್ತಿ ಕಿತ್ತಳೆ ಜ್ಯೂಸ್ ನಲ್ಲಿದೆ!

ರಕ್ತದೊತ್ತಡ ಶಕ್ತಿ ಕಿತ್ತಳೆ ಜ್ಯೂಸ್ ನಲ್ಲಿದೆ!

ರಕ್ತದೊತ್ತಡ ನಿಭಾಯಿಸುವಂತಹ ಕಿತ್ತಳೆ ಜ್ಯೂಸ್ ನಲ್ಲಿ ಇರುವ ಕೆಲವೊಂದು ಆರೋಗ್ಯ ಲಾಭಗಳು. ಕಿತ್ತಳೆ ಜ್ಯೂಸ್ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ತಾಜಾವಾಗಿ ಮಾಡಿರುವಂತಹ ಜ್ಯೂಸ್ ನಿಮ್ಮ ದೈನಂದಿನ ಅಗತ್ಯತೆಗೆ ಬೇಕಾಗಿರುವ ಶೇ. 100ರಷ್ಟು ವಿಟಮಿನ್ ಒದಗಿಸುವುದು. ವಿಟಮಿನ್ ಸಿ ಯಿಂದ ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ದೇಹದಲ್ಲಿ ಇರುವಂತಹ ಸೋಡಿಯಂ ಮತ್ತು ಪೊಟಾಶಿಯಂ ಮಟ್ಟವು ನಿಮ್ಮ ರಕ್ತದೊತ್ತಡದ ಮೇಲೆ ಪರಿಣಾಮ ಬೀರುವುದು. ಸೋಡಿಯಂ ರಕ್ತದೊತ್ತಡ ಹೆಚ್ಚು ಮಾಡಿದರೆ, ಪೊಟಾಶಿಯಂ ಇದಕ್ಕೆ ಪ್ರತಿಯಾಗಿ ಸೋಡಿಯಂನ ಸಮತೋಲನ ಕಾಪಾಡುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು. ಆರೋಗ್ಯ ತಜ್ಞರು ಕೂಡ ರಕ್ತದೊತ್ತಡ ನಿಯಂತ್ರಣ ಮಾಡಲು ಪೊಟಾಶಿಯಂನ್ನು ಆಹಾರದಲ್ಲಿ ಸೇರಿಸಿಕೊಳ್ಳಲು ಹೇಳುವರು. ಕಿತ್ತಳೆ ಜ್ಯೂಸ್ ನಲ್ಲಿ ಉತ್ತಮ ಪ್ರಮಾಣದ ಪೊಟಾಶಿಯಂ ಇದ್ದು, ದೈನಂದಿನ ಅಗತ್ಯಕ್ಕೆ ಬೇಕಾಗಿರುವ ಶೇ.8ರಷ್ಟು ಇದರಲ್ಲಿದೆ. ಸಿಟ್ರಸ್ ಹಣ್ಣುಗಳು ಸಾಮಾನ್ಯವಾಗಿ ಪೈಥೋಕೆಮಿಕಲ್ ಗಳ ಒಂದು ಪಂಗಡವನ್ನು ಉತ್ಪತ್ತಿ ಮಾಡುತ್ತದೆ. ಇದನ್ನು ಸಿಟ್ರಸ್ ಬಯೊಫ್ಲಾವನಾಯ್ಡ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಒಂದು ಬಯೊಫ್ಲಾವನಾಯ್ಡ್ ಆಗಿರುವಂತಹ ಹೆಸ್ಪೆರಿಡಿನ್ ಆ್ಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಇದು ಪ್ರಯತ್ನಿಸುವುದು.

Most Read: ಹೈ ಬಿಪಿ ಸಮಸ್ಯೆ ಇದೆಯೇ? ಇದಕ್ಕೆ ಮಾತ್ರೆಯ ಬದಲು ಇಂತಹ ನೈಸರ್ಗಿಕ ಟಿಪ್ಸ್ ಅನುಸರಿಸಿ

ರಕ್ತದೊತ್ತಡ ಶಕ್ತಿ ಕಿತ್ತಳೆ ಜ್ಯೂಸ್ ನಲ್ಲಿದೆ!

ರಕ್ತದೊತ್ತಡ ಶಕ್ತಿ ಕಿತ್ತಳೆ ಜ್ಯೂಸ್ ನಲ್ಲಿದೆ!

ಕಿತ್ತಳೆ ಜ್ಯೂಸ್ ನಲ್ಲಿ ವಿಟಮಿನ್ ಬಿ, ಫಾಲಟೆ ಇದ್ದು, ದೇಹದಲ್ಲಿ ಡಿಎನ್ ಎ ಅನ್ನು ಸಂಶ್ಲೇಷಿಸುತ್ತದೆ ಮತ್ತು ಅಮಿನೋ ಆಮ್ಲವನ್ನು ಚಯಾಪಚಯಗೊಳಿಸುವುದು. ಇದರಿಂದಾಗಿ ರಕ್ತದೊತ್ತಡ ಕಡಿಮೆ ಆಗುವುದು. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಪುರುಷರು ಹಾಗೂ ಮಹಿಳೆಯರು ತಮ್ಮ ಹದಿಹರೆಯದಲ್ಲಿ ಹೆಚ್ಚಿನ ಮಟ್ಟದ ಫಾಲಟೆ ಸೇವನೆ ಮಾಡಿದರೆ ಅವರಿಗೆ 20 ವರ್ಷ ಬಳಿಕ ರಕ್ತದೊತ್ತಡ ಬರುವಂತಹ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ತಾಜಾ ಕಿತ್ತಳೆ ಹಣ್ಣಿನಲ್ಲಿ ಶೇ. 20ರಷ್ಟು ಫಾಲಟೆಯಿದೆ.

ಕಿತ್ತಳೆ ಜ್ಯೂಸ್ ತಯಾರಿಸುವ ವಿಧಾನ

ಕಿತ್ತಳೆ ಜ್ಯೂಸ್ ತಯಾರಿಸುವ ವಿಧಾನ

ನೀವು ಹೊರಗಿನಿಂದ, ಮಾರುಕಟ್ಟೆಯಲ್ಲಿ ಕೃತಕವಾಗಿ ಸಿಗುವಂತಹ ಕಿತ್ತಳೆ ಜ್ಯೂಸ್ ನ್ನು ಯಾವತ್ತಿಗೂ ಬಳಸಬೇಡಿ. ಇದಕ್ಕೆ ಬದಲಾಗಿ ನೀವೇ ಮನೆಯಲ್ಲಿ ಒಂದು ಲೋಟ ಕಿತ್ತಳೆ ಜ್ಯೂಸ್ ತಯಾರಿಸಿಕೊಳ್ಳಿ. ಇದರಿಂದ ನಿಮಗೆ ಅತ್ಯಧಿಕ ಲಾಭಗಳು ಸಿಗುವುದು.

ಇದನ್ನು ತಯಾರಿಸುವುದು ಹೇಗೆ?

ಕಿತ್ತಳೆ ಸಿಪ್ಪೆ ತೆಗೆಯಿರಿ, ಅದರ ತಿರುಳು ತೆಗೆದು, ಒಳಗಿನ ಬೀಜಗಳನ್ನು ಹೊರಗೆ ತೆಗೆಯಿರಿ.

ಈಗ ಇದನ್ನು ಮಿಕ್ಸಿಗೆ ಹಾಕಿಕೊಳ್ಳಿ.

ಸ್ವಲ್ಪ ಲಿಂಬೆರಸ ಹಾಕಿಕೊಳ್ಳಿ(ಅಗತ್ಯವಿದ್ದರೆ)

ಕೆಲವು ನಿಮಿಷಗಳ ಕಾಲ ಮಧ್ಯಮ ವೇಗದಲ್ಲಿ ಇದನ್ನು ನೀವು ರುಬ್ಬಿ ಜ್ಯೂಸ್ ಮಾಡಿಕೊಳ್ಳಿ. ಅತಿಯಾದಿ ರುಬ್ಬಿಕೊಳ್ಳಬೇಡಿ.

ಈಗ ಜ್ಯೂಸ್ ನ್ನು ಸೋಸಿಕೊಂಡು ಗ್ಲಾಸಿಗೆ ಹಾಕಿ. ಇದರ ತಿರುಳನ್ನು ನೀವು ಬಿಸಾಕಬೇಡಿ. ಯಾಕೆಂದರೆ ಇದರಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆ ವ್ಯವಸ್ಥೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದಕ್ಕೆ ಸಕ್ಕರೆ ಹಾಕಬೇಡಿ, ಇದನ್ನು ಗ್ಲಾಸಿಗೆ ಹಾಕಿದ ತಕ್ಷಣವೇ ಕುಡಿಯಿರಿ.

ಕೇವಲ ಕಿತ್ತಳೆ ಜ್ಯೂಸ್ ನ್ನು ಕುಡಿಯುವುದರಿಂದ ರಕ್ತದೊತ್ತಡವು ಕಡಿಮೆಯಾಗುವುದಿಲ್ಲ. ಇದರೊಂದಿಗೆ ನೀವು ಆಹಾರ ಪಥ್ಯವನ್ನು ಕೂಡ ಮಾಡಬೇಕು. ಸೋಡಿಯಂ ಕಡಿಮೆ ಇರುವ ಆಹಾರ ಸೇವಿಸಿ ಮತ್ತು ವ್ಯಾಯಾಮ ಮಾಡಿದರೆ ಅದರಿಂದ ಹೃದಯದ ಆರೋಗ್ಯ ಕಾಪಾಡಬಬಹುದು. ನೀವು ಮನೆಮದ್ದನ್ನು ಪ್ರಯೋಗಿಸುವ ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ.

ಪ್ರತೀ ವರ್ಷ ಅಧಿಕ ರಕ್ತದೊತ್ತಡಕ್ಕಿಂತ ಸಾವು ಸಂಭವಿಸುತ್ತಿದೆಯಂತೆ!

ಪ್ರತೀ ವರ್ಷ ಅಧಿಕ ರಕ್ತದೊತ್ತಡಕ್ಕಿಂತ ಸಾವು ಸಂಭವಿಸುತ್ತಿದೆಯಂತೆ!

ಅಧಿಕ ರಕ್ತದೊತ್ತಡವು ನಿಮಗೆ ಆರಂಭದಲ್ಲಿ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ನೀವು ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಬೇರೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇದರಲ್ಲಿ ಮುಖ್ಯವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಬರಬಹುದು. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್ ಒ) ಪ್ರಕಾರ, ಅಧಿಕ ರಕ್ತದೊತ್ತಡದಿಂದ ಪ್ರತೀ ವರ್ಷ 7.5 ಮಿಲಿಯನ್ ಸಾವು ಸಂಭವಿಸುತ್ತದೆ. ರಕ್ತದೊತ್ತಡ ಎನ್ನುವುದು ರಕ್ತವನ್ನು ಪರಿಧಮನಿಗಳ ಮೂಲವಾಗಿ ದೇಹದ ಎಲ್ಲಾ ಭಾಗಗಳಿಗೆ ಸರಬರಾಜು ಮಾಡಲು ಒತ್ತಡ ಹಾಕುವುದು. ಕೆಲವೊಂದು ಸಲ ಅಧಿಕ ರಕ್ತದೊತ್ತಡದಿಂದ ತಲೆನೋವು, ಮೂಗಿನಲ್ಲಿ ರಕ್ತಸ್ರಾವ, ಬಳಲಿಕೆ, ಎದೆನೋವು, ಮೂತ್ರದಲ್ಲಿ ರಕ್ತ, ಉಸಿರಾಟದ ತೊಂದರೆ ಮತ್ತು ದೃಷ್ಟಿ ದೋಷ ಸಮಸ್ಯೆ ಬರಬಹುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ಜೀವನಶೈಲಿ ಬದಲಾವಣೆ ಜತೆಗೆ ಸರಿಯಾದ ರೀತಿಯಲ್ಲಿ ಔಷಧಿ ತೆಗೆದುಕೊಳ್ಳಬೇಕು.

English summary

Orange Juice Help Manage High Blood Pressure Levels

Health benefits of orange juice to manage hypertension or high blood pressureOrange juice is one of the best sources of vitamin C. A freshly made juice provides 100 percent of your daily vitamin requirement. Many studies have gathered that vitamin C may help reduce blood pressure significantly.
X
Desktop Bottom Promotion