For Quick Alerts
ALLOW NOTIFICATIONS  
For Daily Alerts

ಚರ್ಮದ ಎಲ್ಲಾ ಸಮಸ್ಯೆಗಳಿಗೆ ಕೆಲವು ನೈಸರ್ಗಿಕ ಮನೆಮದ್ದುಗಳು

|

ದೇಹದಲ್ಲಿ ಚರ್ಮವು ಅತೀ ಪ್ರಮುಖ ಹಾಗೂ ದೊಡ್ಡ ಭಾಗವಾಗಿರುವುದು. ಚರ್ಮವು ನಮ್ಮ ದೇಹವನ್ನು ಎಲ್ಲಾ ರೀತಿಯ ಬಾಹ್ಯ ದಾಳಿಯಿಂದ ರಕ್ಷಣೆ ಮಾಡುವುದು. ಚರ್ಮದ ಸಮಸ್ಯೆಯನ್ನು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಎದುರಿಸುವರು. ಮೊಡವೆಗಳು, ಬೊಕ್ಕೆಗಳು, ಬಣ್ಣ ಕುಂದುವುದು ಇತ್ಯಾದಿಗಳು ಪ್ರಮುಖ ಸಮಸ್ಯೆಯಾಗುವುದು. ಇದರೊಂದಿಗೆ ಹಲವಾರು ರೀತಿಯ ಸೋಂಕಿನಿಂದ ಚರ್ಮದ ಸಮಸ್ಯೆಗಳು ಬರುವುದು. ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಲು ಹಲವಾರು ಮಾರುಕಟ್ಟೆಯಲ್ಲಿ ಉತ್ಪನ್ನಗಳು ಸಿಗುವುದು. ಅದಾಗ್ಯೂ, ನೈಸರ್ಗಿಕ ವಿಧಾನದಿಂದ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಪ್ರಕೃತಿಯು ನಮಗೆ ಹಲವಾರು ರೀತಿಯ ಸಾಮಗ್ರಿಗಳನ್ನು ನೀಡಿದೆ. ಇದನ್ನು ಬಳಸಿಕೊಂಡು ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಇದು ಶೇ.100ರಷ್ಟು ಸುರಕ್ಷಿತ ಮತ್ತು ಯಾವುದೇ ರೀತಿಯ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ.

Natural Remedies For Various Skin Issues

ಹಲವಾರು ರೀತಿಯ ಲಾಭಗಳನ್ನು ನೀಡುವ ಕಾರಣದಿಂದಾಗಿ ನೈಸರ್ಗಿಕ ಮದ್ದುಗಳನ್ನು ಬಳಸುವವರ ಸಂಖ್ಯೆಯು ಹೆಚ್ಚಾಗಿದೆ. ಇದು ಚರ್ಮದ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವುದು. ಮನೆಮದ್ದುಗಳು ತುಂಬಾ ಅಗ್ಗದ್ದಾಗಿರುವುದು ಮತ್ತು ಸುಲಭವಾಗಿ ಸಿಗುವುದು. ಇದರಿಂದ ಈ ಮನೆಮದ್ದುಗಳನ್ನು ಬಳಸಿಕೊಂಡು ಚರ್ಮದ ಸಮಸ್ಯೆ ನಿವಾರಣೆ ಮಾಡುವುದು ಹೇಗೆ ಎಂದು ನೀವು ತಿಳಿಯಿರಿ.

ಅಲೋವೆರಾ ಮತ್ತು ಲಿಂಬೆರಸ ಮೊಡವೆ ನಿವಾರಿಸಲು

ಅಲೋವೆರಾ ಮತ್ತು ಲಿಂಬೆರಸ ಮೊಡವೆ ನಿವಾರಿಸಲು

ಶಮನಕಾರಿ ಮತ್ತು ಮೊಶ್ಚಿರೈಸ್ ಗುಣವನ್ನು ಹೊಂದಿರುವಂತಹ ಅಲೋವೆರಾದಲ್ಲಿ ಸಾಲಿಸೈಲಿಕ್ ಆಮ್ಲವಿದ್ದು, ಇದು ಮೊಡವೆ ನಿವಾರಣೆಗೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಲಿಂಬೆರಸದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಮೊಡೆ ಉಂಟು ಮಾಡುವ ಬ್ಯಾಕ್ಟೀರಿಯಾದ ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ಅಲೋವೆರಾ ಲೋಳೆ

¼ ಚಮಚ ಲಿಂಬೆರಸ

ಬಳಸುವ ವಿಧಾನ

•ಎರಡನ್ನು ಸರಿಯಾಗಿ ಪಿಂಗಾಣಿಯಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಮುಖದ ಮೇಲೆ ಸರಿಯಾಗಿ ಹಚ್ಚಿಕೊಳ್ಳಿ.

•5-10 ನಿಮಿಷ ಕಾಲ ಹಾಗೆ ಬಿಡಿ.

•ಇದರ ಬಳಿಕ ತೊಳೆಯಿರಿ.

ಬಿಸಿಲಿನಿಂದ ಆಗುವ ಕಲೆಗಳಿಗೆ ಪಪ್ಪಾಯ ಮತ್ತು ಜೇನುತುಪ್ಪ

ಬಿಸಿಲಿನಿಂದ ಆಗುವ ಕಲೆಗಳಿಗೆ ಪಪ್ಪಾಯ ಮತ್ತು ಜೇನುತುಪ್ಪ

ಪಪ್ಪಾಯಿಯಲ್ಲಿ ಇರುವಂತಹ ಪಪೈನ್ ಎನ್ನುವಂತಹ ನೈಸರ್ಗಿಕ ಕಿಣ್ವವು ಚರ್ಮವನ್ನು ಕಿತ್ತೊಗೊಯುವುದು ಮತ್ತು ಶಮನಕಾರಿ ಗುಣದಿಂದಾಗಿ ಬಿಸಿಲಿನಿಂದ ಆಗುವ ಕಲೆಗಳನ್ನು ನಿವಾರಿಸುವುದು. ಜೇನುತುಪ್ಪವು ಚರ್ಮದಲ್ಲಿ ಮೊಶ್ಚಿರೈಸ್ ಕಾಡುವುದು. ಇದರೊಂದಿಗೆ ಚರ್ಮಕ್ಕೆ ಶಮನ ಮತ್ತು ಶಾಂತ ನೀಡುವುದು.

ಬೇಕಾಗುವ ಸಾಮಗ್ರಿಗಳು

*4-5 ಪಪ್ಪಾಯಿ ತುಂಡುಗಳು

*1 ಚಮಚ ಜೇನುತುಪ್ಪ

ಬಳಸುವ ವಿಧಾನಗಳು

•ಒಂದು ಪಿಂಗಾಣಿಗೆ ಪಪ್ಪಾಯ ಹಾಕಿ ಸರಿಯಾಗಿ ಹಿಚುಕಿಕೊಳ್ಳಿ.

•ಇದಕ್ಕೆ ಜೇನುತುಪ್ಪ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.

•ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

•25-30 ನಿಮಿಷ ಒಣಗಲು ಬಿಡಿ.

•ಬಳಿಕ ನೀರು ಹಾಕಿ ತೊಳೆಯಿರಿ.

ಬೊಕ್ಕೆಗಳಿಗೆ ಜೇನುತುಪ್ಪ

ಜೇನುತುಪ್ಪವು ನೈಸರ್ಗಿಕವಾಗಿ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಚರ್ಮವನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು ಮತ್ತು ಚರ್ಮದ ಅಂಗಾಂಶಗಳನ್ನು ಪುನರ್ಶ್ಚೇತನಗೊಳಿಸುವುದು ಮತ್ತು ಬೊಕ್ಕೆ ಕಡಿಮೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಜೇನುತುಪ್ಪ

ಬಳಸುವ ವಿಧಾನ

•ಭಾದಿತ ಜಾಗಕ್ಕೆ ಜೇನುತುಪ್ಪ ಹಚ್ಚಿಕೊಳ್ಳಿ.

•15 ನಿಮಿಷ ಕಾಲ ಹಾಗೆ ಬಿಡಿ

•ಬಳಿಕ ತೊಳೆಯಿರಿ.

ಬಿಸಿಲಿನ ಕಲೆಗಳಿಗೆ ಸೌತೆಕಾಯಿ

ಬಿಸಿಲಿನ ಕಲೆಗಳಿಗೆ ಸೌತೆಕಾಯಿ

ಶಮನಕಾರಿ ಹಾಗು ತಂಪು ನೀಡುವಂತಹ ಗುಣವು ಸೌತೆಕಾಯಿಯಲ್ಲಿದೆ. ಇದು ಬಿಸಿಲಿನಿಂದ ಸುಟ್ಟು ಗಾಯಕ್ಕೆ ಮತ್ತು ಇದರಿಂದ ಆಗುವ ನೋವು ಕಡಿಮೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

½ ಸೌತೆಕಾಯಿ

ಬಳಸುವ ವಿಧಾನ

•ಕೆಲವು ಗಂಟೆಗಳ ಕಾಲ ಸೌತೆಕಾಯಿಯನ್ನು ಫ್ರಿಡ್ಜ್ ನಲ್ಲಿ ಇಟ್ಟುಬಿಡಿ.

•ಸೌತೆಕಾಯಿ ಸಿಪ್ಪೆ ತೆಗೆಯಿರಿ ಮತ್ತು ಇದನ್ನು ರುಬ್ಬಿಕೊಂಡು ಜ್ಯೂಸ್ ತೆಗೆಯಿರಿ.

•ಭಾದಿತ ಜಾಗಕ್ಕೆ ಜ್ಯೂಸ್ ಹಚ್ಚಿಕೊಳ್ಳಿ.

•15-20 ನಿಮಿಷ ಕಾಲ ಹಾಗೆ ಬಿಡಿ.

•ಬಳಿಕ ನೀರಿನಿಂದ ತೊಳೆಯಿರಿ.

ಎಣ್ಣೆಯುಕ್ತ ಚರ್ಮಕ್ಕಾಗಿ ಮುಲ್ತಾನಿ ಮಿಟ್ಟಿ ಮತ್ತು ಮೊಸರು

ಎಣ್ಣೆಯುಕ್ತ ಚರ್ಮಕ್ಕಾಗಿ ಮುಲ್ತಾನಿ ಮಿಟ್ಟಿ ಮತ್ತು ಮೊಸರು

ಮುಲ್ತಾನಿ ಮಿಟ್ಟಿ ಧೂಳು, ಕಲ್ಮಷ ಮತ್ತು ಅತಿಯಾದ ಎಣ್ಣೆಯಂಶವನ್ನು ಚರ್ಮದಿಂದ ತೆಗೆಯುವುದು. ಇದರಿಂದ ಎಣ್ಣೆಯುಕ್ತ ಚರ್ಮವು ನಿವಾರಣೆ ಮಾಡಬಹುದು. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಚರ್ಮದಲ್ಲಿನ ಸತ್ತ ಚರ್ಮವನ್ನು ತೆಗೆಯುವುದು ಮತ್ತು ಚರ್ಮದ ಕಾಂತಿ ಸುಧಾರಿಸುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಮುಲ್ತಾಣಿ ಮಿಟ್ಟಿ

1 ಚಮಚ ಮೊಸರು

ಬಳಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಮುಲ್ತಾನಿ ಮಿಟ್ಟಿ ಹಾಕಿ.

•ಇದಕ್ಕೆ ಮೊಸರು ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.

•ಮುಖಕ್ಕೆ ಈ ಪೇಸ್ಟ್ ನ್ನು ಹಚ್ಚಿಕೊಳ್ಳಿ.

•15 ನಿಮಿಷ ಕಾಲ ಹಾಗೆ ಒಣಗಲು ಬಿಡಿ.

•ಬಳಿಕ ನೀರಿನಿಂದ ತೊಳೆಯಿರಿ.

ಒಣ ಚರ್ಮಕ್ಕೆ ಬಾಳೆಹಣ್ಣು ಮತ್ತು ತೆಂಗಿನ ಎಣ್ಣೆ

ಒಣ ಚರ್ಮಕ್ಕೆ ಬಾಳೆಹಣ್ಣು ಮತ್ತು ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಬಾಳೆಹಣ್ಣಿನ ಉತ್ತಮ ಅಂಶಗಳೊಂದಿಗೆ ಸರಿಯಾಗಿ ಮಿಶ್ರಣವಾಗುವುದು ಮತ್ತು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು. ಇದರಿಂದ ಒಣಚರ್ಮದ ಸಮಸ್ಯೆ ನಿವಾರಣೆ ಆಗುವುದು.

ಬೇಕಾಗುವ ಸಾಮಗ್ರಿಗಳು

•½ ಹಣ್ಣಾದ ಬಾಳೆಹಣ್ಣು

•1 ಚಮಚ ತೆಂಗಿನ ಎಣ್ಣೆ

ಬಳಸುವ ವಿಧಾನ

•ಪಿಂಗಾಣಿಗೆ ಬಾಳೆಹಣ್ಣು ಹಾಕಿಕೊಂಡು ಹಿಚುಕಿಕೊಳ್ಳಿ.

•ಇದಕ್ಕೆ ತೆಂಗಿನ ಎಣ್ಣೆ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.

•15-20 ನಿಮಿಷ ಕಾಲ ಹಾಗೆ ಬಿಡಿ.

•ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ.

•ಈ ಮನೆಮದ್ದನ್ನು ವಾರದಲ್ಲಿ 1-2 ಸಲ ಬಳಸಿದರೆ ಆಗ ಉತ್ತಮ ಫಲಿತಾಂಶ ಸಿಗುವುದು.

ವಯಸ್ಸಾಗುವ ಚರ್ಮಕ್ಕೆ ಮೊಟ್ಟೆ ಬಿಳಿ, ಹಾಲಿನ ಕ್ರೀಮ್ ಮತ್ತು ಲಿಂಬೆ

ವಯಸ್ಸಾಗುವ ಚರ್ಮಕ್ಕೆ ಮೊಟ್ಟೆ ಬಿಳಿ, ಹಾಲಿನ ಕ್ರೀಮ್ ಮತ್ತು ಲಿಂಬೆ

ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಮತ್ತು ಕಿಣ್ವಗಳು ಇದ್ದು, ಹಾನಿಗೀಡಾದ ಚರ್ಮವನ್ನು ಇದು ರಕ್ಷಿಸುವುದು. ವಯಸ್ಸಾಗುವ ವೇಳೆ ಕಾಣಿಸಿಕೊಳ್ಳೂವ ನೆರಿಗೆಗಳು ಮತ್ತು ಗೆರೆಗಳನ್ನು ನಿವಾರಣೆ ಮಾಡಿ ಸುಂದರ ಚರ್ಮವನ್ನು ಇದು ನೀಡುವುದು. ಹಾಲಿನ ಕೆನೆಯಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮವನ್ನು ಕಿತ್ತು ಹಾಕುವುದು ಮತ್ತು ಪುನರ್ಶ್ಚೇತನಗೊಳಿಸುವುದು. ಲಿಂಬೆರಸದಲ್ಲಿ ಸಂಕೋಚನ ಗುಣವಿದ್ದು, ಚರ್ಮದ ರಂಧ್ರಗಳಣ್ನು ಬಿಗಿಯಾಗಿಸುವುದು ಮತ್ತು ಚರ್ಮವು ಜೋತು ಬೀಳುವುದು ತಪ್ಪುವುದು.

ಬೇಕಾಗುವ ಸಾಮಗ್ರಿಗಳು

*1 ಮೊಟ್ಟೆಯ ಬಿಳಿ ಲೋಳೆ

*½ ಚಮಚ ಹಾಲಿನ ಕೆನೆ

*1 ಚಮಚ ಲಿಂಬೆರಸ

ಬಳಸುವ ವಿಧಾನ

•ಪಿಂಗಾಣಿಯಲ್ಲಿ ಮೊಟ್ಟೆಯ ಬಿಳಿ ಲೋಳೆ ಹಾಕಿ.

•ಇದಕ್ಕೆ ಹಾಲಿನ ಕೆನೆ ಮತ್ತು ಲಿಂಬೆ ರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.

•15 ನಿಮಿಷ ಕಾಲ ಹಾಗೆ ಬಿಡಿ.

•ಇದರ ಬಳಿಕ ನೀರಿನಿಂದ ತೊಳೆಯಿರಿ.

•ವಾರದಲ್ಲಿ ಒಂದು ಸಲ ಬಳಸಿದರೆ ಆಗ ಉತ್ತಮ ಫಲಿತಾಂಶ ಸಿಗುವುದು.

ಟೊಮೆಟೊ ಮತ್ತು ಲಿಂಬೆರಸ ಕಪ್ಪು ವೃತ್ತಗಳಿಗಾಗಿ

ಟೊಮೆಟೊ ಮತ್ತು ಲಿಂಬೆರಸ ಕಪ್ಪು ವೃತ್ತಗಳಿಗಾಗಿ

ಚರ್ಮವನ್ನು ಬ್ಲೀಚ್ ಮಾಡುವ ಗುಣ ಹೊಂದಿರುವಂತಹ ಟೊಮೆಟೊದಲ್ಲಿ ಲೈಕೊಪೆನೆ ಎನ್ನುವ ಆ್ಯಂಟಿಆಕ್ಸಿಡೆಂಟ್ ಇದ್ದು, ಚರ್ಮವನ್ನು ಪುನರ್ಶ್ಚೇತನಗೊಳಿಸುವುದು ಮತ್ತು ಯುವಿ ಕಿರಣಗಳಿಂದ ಆಗುವ ಹಾನಿಯನ್ನು ಅದು ತಪ್ಪಿಸುವುದು. ಲಿಂಬೆರಸದಲ್ಲಿ ಇರುವ ವಿಟಮಿನ್ ಸಿ ಕಲೆಗಳನ್ನು ತೆಗೆದು ಚರ್ಮಕ್ಕೆ ಕಾಂತಿ ನೀಡುವುದು.

ಬೇಕಾಗುವ ಸಾಮಗ್ರಿಗಳು

1 ಟೊಮೆಟೊ ರಸ

1 ಚಮಚ ಲಿಂಬೆ ರಸ

ಬಳಸುವ ವಿಧಾನ

•ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಳ್ಳಿ.

•ಹತ್ತು ನಿಮಿಷಗಳ ಕಾಲ ಹಾಗೆ ಬಿಡಿ.

•ಇದನ್ನು ತಣ್ಣೀರಿನಿಂದ ತೊಳೆಯಿರಿ.

•ಎರಡು ದಿನಕ್ಕೊಮ್ಮೆ ಇದನ್ನು ನೀವು ಬಳಸಿಕೊಂಡರೆ ಆಗ ಉತ್ತಮ ಫಲಿತಾಂಶ ಸಿಗುವುದು.

ಸಕ್ಕರೆ, ತೆಂಗಿನ ಎಣ್ಣೆ ಮತ್ತು ಲಿಂಬೆ ಚರ್ಮಕ್ಕೆ ಕಾಂತಿ ನೀಡಲು

ಸಕ್ಕರೆ, ತೆಂಗಿನ ಎಣ್ಣೆ ಮತ್ತು ಲಿಂಬೆ ಚರ್ಮಕ್ಕೆ ಕಾಂತಿ ನೀಡಲು

ಸಕ್ಕರೆಯು ಸತ್ತ ಚರ್ಮವನ್ನು ಕಿತ್ತು ಹಾಕುವುದು ಮತ್ತು ಚರ್ಮದಲ್ಲಿರುವಂತಹ ಕಲ್ಮಷವನ್ನು ಕೂಡ. ಇದರಿಂದ ಚರ್ಮಕ್ಕೆ ಕಾಂತಿ ನೀಡುವುದು. ತೆಂಗಿನ ಎಣ್ಣೆಯು ಚರ್ಮಕ್ಕೆ ಪೋಷಣೆ ನೀಡುವುದು. ಲಿಂಬೆರಸವು ನೈಸರ್ಗಿಕವಾಗಿ ಕಲೆಗಳನ್ನು ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ತೆಂಗಿನ ಎಣ್ಣೆ

½ ಚಮಚ ಲಿಂಬೆ ರಸ

ಬಳಸುವ ವಿಧಾನ

•ಪಿಂಗಾಣಿಯಲ್ಲಿ ಸಕ್ಕರೆ ಹಾಕಿ.

•ಅದಕ್ಕೆ ತೆಂಗಿನ ಎಣ್ಣೆ ಮತ್ತು ಲಿಂಬೆ ರಸ ಹಾಕಿ ಮಿಶ್ರಣ ಮಾಡಿ.

•ಬೆರಳುಗಳಲ್ಲಿ ನಿಮಗೆ ಬೇಕಾದಷ್ಟು ಮಿಶ್ರಣ ತೆಗೆದುಕೊಳ್ಳಿ.

•ಇದನ್ನು ಮುಖಕ್ಕೆ ಹಚ್ಚಿಕೊಂಡು ಸರಿಯಾಗಿ 5 ನಿಮಿಷ ಕಾಲ ಸ್ಕ್ರಬ್ ಮಾಡಿ.

•ಉಗುರುಬೆಚ್ಚಗಿನ ನೀರಿನಿಂಧ ಮುಖ ತೊಳೆಯಿರಿ.

•ಇದರ ಬಳಿಕ ಒರೆಸಿಕೊಳ್ಳಿ.

•ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಬಣ್ಣ ಕುಂದುವುದಕ್ಕೆ ಕಿತ್ತಳೆ ಹಣ್ಣಿನ ಸಿಪ್ಪೆ ಹುಡಿ, ಜೇನುತುಪ್ಪ ಮತ್ತು ಲಿಂಬೆ

ಬಣ್ಣ ಕುಂದುವುದಕ್ಕೆ ಕಿತ್ತಳೆ ಹಣ್ಣಿನ ಸಿಪ್ಪೆ ಹುಡಿ, ಜೇನುತುಪ್ಪ ಮತ್ತು ಲಿಂಬೆ

ಕಿತ್ತಳೆ ಸಿಪ್ಪೆಯ ಹುಡಿಯು ಚರ್ಮದಲ್ಲಿ ಮೆಲನಿನ್ ಸಂಗ್ರಹವಾಗುವುದನ್ನು ಕಡಿಮೆ ಮಾಡುವುದು ಮತ್ತು ಇದರಿಂದ ಚರ್ಮದ ಬಣ್ಣ ಕುಂದುವುದನ್ನು ತಡೆಯಬಹುದು. ಜೇನುತುಪ್ಪವು ಚರ್ಮವನ್ನು ತುಂಬಾ ನಯ ಹಾಗೂ ಸುಂದರವಾಗಿಸುವುದು. ಲಿಂಬೆರಸದಲ್ಲಿರುವ ವಿಟಮಿನ್ ಸಿ ಚರ್ಮವು ಬಣ್ಣ ಕುಂದುವುದನ್ನು ತಡೆಯುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಕಿತ್ತಳೆ ಸಿಪ್ಪೆಯ ಹುಡಿ

1 ಚಮಚ ಜೇನುತುಪ್ಪ

1 ಚಮಚ ಲಿಂಬೆರಸ

ಬಳಸುವ ವಿಧಾನ

•ಪಿಂಗಾಣಿಯಲ್ಲಿ ಕಿತ್ತಳೆ ಸಿಪ್ಪೆಯ ಹುಡಿ ಹಾಖಿ.

•ಇದಕ್ಕೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿಕೊಂಡು ಸರಿಯಾಗಿ ಎರಡನ್ನು ಮಿಶ್ರಣ ಮಾಡಿಕೊಳ್ಳಿ.

•ಇದನ್ನು ಭಾದಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

•25-30 ನಿಮಿಷ ಕಾಲ ಹಾಗೆ ಬಿಡಿ.

•ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

•ವಾರದಲ್ಲಿ ಒಂದು ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

English summary

Natural Remedies For Various Skin Issues

Skin issues are common among all of us. From acne to pigmentation, we face various skin issues and the hunt to look for remedies for them seems never-ending. However, the best way to deal with these issues is the natural way. Natural ingredients like aloe vera, lemon, honey etc. can be blended together to make amazing skin care remedies to treat various skin issues.
X
Desktop Bottom Promotion