For Quick Alerts
ALLOW NOTIFICATIONS  
For Daily Alerts

ಅನಾರೋಗ್ಯಕ್ಕೆ ಒಳಗಾದಾಗ ಆದಷ್ಟು ಇಂತಹ ಆಹಾರಗಳಿಂದ ದೂರವಿರಿ!

|

ಮನುಷ್ಯನೆಂದ ಮೇಲೆ ಆತನಿಗೆ ಕಾಯಿಲೆಗಳು ಬರದೇ ಇರದು. ಜೀವಮಾನದಲ್ಲಿ ಒಂದು ಸಲವಾದರೂ ವೈದ್ಯರನ್ನು ಭೇಟಿ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗವುದು. ಕೆಲವೊಂದು ಸಂದರ್ಭದಲ್ಲಿ ಶೀತ, ಜ್ವರದಂತಹ ಸಾಮಾನ್ಯ ಕಾಯಿಲೆಗಳು ಅಲ್ಪಾವಧಿಗೆ ಬಂದು ಹೋಗುವುದು. ಇನ್ನು ಕೆಲವು ಕಾಯಿಲೆಗಳು ದೀರ್ಘಕಾಲಿಕವಾಗಿ ಉಳಿಯುವುದು. ದೀರ್ಘಕಾಲಿಕ ಕಾಯಿಲೆಗಳು ಮನುಷ್ಯನ ಜೀವನದ ಮೇಲೆ ತೀವ್ರ ಪರಿಣಾಮ ಬೀರುವುದು. ಕಾಯಿಲೆ ಬಿದ್ದಾಗ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.

Foods you Should Avoid When Youre Sick

ಯಾಕೆಂದರೆ ಇದು ಕಾಯಿಲೆ ಉಲ್ಬಣ ಮಾಡಬಹುದು. ಹೀಗಾಗಿ ಅನಾರೋಗ್ಯಕ್ಕೆ ಒಳಗಾದ ವೇಳೆ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಕೂಡ ಅತ್ಯಗತ್ಯವಾಗಿರುವುದು. ನಿಮಗೆ ಇಷ್ಟದ ಆಹಾರವಾಗಿದ್ದರೂ ಅದನ್ನು ನೀವು ಸೇವಿಸಬಾರದು. ಇದರಿಂದ ಕಾಯಿಲೆಯು ಬೇಗನೆ ವಾಸಿಯಾಗುವುದು. ಈ ಲೇಖನದಲ್ಲಿ ಅನಾರೋಗ್ಯಕ್ಕೆ ಒಳಗಾದ ವೇಳೆ ಯಾವ ಆಹಾರ, ಪಾನೀಯ ಸೇವಿಸಬಾರದು ಎಂದು ನಿಮಗೆ ತಿಳಿಸಿಕೊಡಲಾಗಿದೆ. ಇದನ್ನು ನೀವು ಓದಿಕೊಳ್ಳಿ...

ಕಾಫಿ ಕಡೆಗಣಿಸಿ

ಕಾಫಿ ಕಡೆಗಣಿಸಿ

ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ ಅಥವಾ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಆಗ ನೀವು ಕಾಫಿ ಸೇವನೆ ಮಾಡಬಾರದು. ವಿರೇಚಕ ಗುಣ ಹೊಂದಿರುವಂತಹ ಕಾಫಿ ಕುಡಿಯುವ ಕಾರಣದಿಂದಾಗಿ ನೀವು ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಬಹುದು. ಈ ರೀತಿಯಿಂದ ನೀವು ನಿರ್ಜಲೀಕರಣಕ್ಕೆ ಒಳಗಾಗಬಹುದು. ನಿರ್ಜಲೀಕರಣದಿಂದಾಗಿ ನಿಮ್ಮ ದೇಹದಲ್ಲಿನ ಕಾರ್ಯಚಟುವಟಿಕೆ ಮೇಲೆ ಪರಿಣಾಮ ಬೀರಬಹುದು. ದೇಹದಲ್ಲಿ ನೀರಿನಾಂಶವು ಸರಿಯಾಗಿ ಇದ್ದರೆ ಆಗ ಎಲ್ಲಾ ಕಾರ್ಯಗಳು ಸರಿಯಾಗಿ ಆಗುವುದು. ನಿರ್ಜಲೀಕರಣ ಉಂಟಾದರೆ ಆಗ ದೇಹವು ಇತರ ವೈರಸ್ ಹಾಗು ಸೋಂಕಿನ ವಿರುದ್ಧ ಪರಿಣಾಮಕಾರಿ ಆಗಿ ಹೋರಾಡಲು ಸಾಧ್ಯವಾಗದು. ಅತಿಸಾರ ಅಥವಾ ವಾಂತಿ ಮಾಡುತ್ತಿರುವ ಸಮಯದಲ್ಲಿ ಕೆಫಿನ್ ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಕೆಡಿಸಿ ಬಿಡಬಹುದು. ಇದೆರಡು ದೇಹದಲ್ಲಿ ನಿರ್ಜಲೀಕರಣ ಉಂಟು ಮಾಡುವುದು.

Most Read: ಇಂತಹ ಆಹಾರಗಳಿಂದ ದೂರವಿರಿ! ಇಲ್ಲಾಂದ್ರೆ ವೀರ್ಯಾಣುಗಳ ಮೇಲೆ ಅಪಾಯ ಕಾಡಬಹುದು

ಕಿತ್ತಳೆ ಹಣ್ಣಿನ ಜ್ಯೂಸ್ ಗೆ ಕೆಲವು ದಿನ ವಿರಾಮ ನೀಡಿ

ಕಿತ್ತಳೆ ಹಣ್ಣಿನ ಜ್ಯೂಸ್ ಗೆ ಕೆಲವು ದಿನ ವಿರಾಮ ನೀಡಿ

ವಿಟಮಿನ್ ಸಿ ಅಧಿಕವಾಗಿರುವಂತಹ ಮತ್ತು ಅತ್ಯಂತ ರುಚಿಕರವಾಗಿರುವಂತಹ ಕಿತ್ತಳೆ ಜ್ಯೂಸ್ ಕುಡಿಯಲು ನೀವು ಇಷ್ಟಪಡುವಿರಾ? ಪ್ರತಿಯೊಬ್ಬರು ಇದನ್ನು ಇಷ್ಟಪಡುವವರೆ. ಆದರೆ ನೀವು ಈಗ ಇದರ ಬಗ್ಗೆ ಮರು ಆಲೋಚನೆ ಮಾಡಬೇಕು. ಯಾಕೆಂದರೆ ಅನಾರೋಗ್ಯಕ್ಕೆ ಒಳಗಾದ ವೇಳೆ ನೀವು ಕಿತ್ತಳೆ ಜ್ಯೂಸ್ ನ್ನು ಕಡೆಗಣಿಸಿದರೆ ಒಳ್ಳೆಯದು. ಯಾಕೆಂದರೆ ಕಿತ್ತಳೆ ಜ್ಯೂಸ್ ನಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಇರುವುದು. ಇದು ಯಾವುದೇ ಅನಾರೋಗ್ಯದ ವಿರುದ್ಧ ಹೋರಾಡುವ ಬಿಳಿ ರಕ್ತದ ಕಣಗಳ ಸಾಮರ್ಥ್ಯವನ್ನು ಕುಗ್ಗಿಸುವುದು. ಕೆಮ್ಮು, ಗಂಟಲು ನೋವು ಅಥವಾ ಶೀತವಿದ್ದರೆ ಆಗ ನೀವು ಕಿತ್ತಳೆ ಜ್ಯೂಸ್ ಗೆ ವಿರಾಮ ನೀಡಿ. ಕಿತ್ತಳೆ ಜ್ಯೂಸ್ ಗಂಟಲಿನ ಮೇಲೆ ಪರಿಣಾಮ ಉಂಟು ಮಾಡಿ, ಚೇತರಿಕೆಗೆ ಹೆಚ್ಚಿನ ಸಮಯ ಬೇಕಾಗುವಂತೆ ಮಾಡಬಹುದು.

ಸಿಹಿ ತಿಂಡಿ

ಸಿಹಿ ತಿಂಡಿ

ಸಂಸ್ಕರಿತ ಸಕ್ಕರೆ ಸೇವನೆ ಮಾಡುವ ಪರಿಣಾಮವಾಗಿ ಬಿಳಿ ರಕ್ತದ ಕಣಗಳ ಹೋರಾಡುವ ಸಾಮರ್ಥ್ಯ ಕಡಿಮೆ ಆಗುವುದು. ಇದರಿಂದ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಅದಕ್ಕೆ ಸಾಧ್ಯವಾಗುವುದಿಲ್ಲ. ಬಿಸ್ಕಿಟ್, ಕ್ಯಾಂಡಿ ಅಥವಾ ಸಕ್ಕರೆ ಇರುವಂತಹ ಸೀರಲ್ ಸೇವಿಸಿದರೆ, ಆಗ ನಿಮ್ಮ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗುವುದು. ಅನಾರೋಗ್ಯಕ್ಕೆ ಕಾರಣವಾಗುವಂತಹ ವೈರಸ್ ಅಥವಾ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಾಧ್ಯವಾಗದೆ ಇರಬಹುದು. ಇದರಿಂದ ನೀವು ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳಬೇಕಾಗಿದ್ದರೆ ಆಗ ನೀವು ಸಕ್ಕರೆಯನ್ನು ಸಂಪೂರ್ಣವಾಗಿ ಕಡೆಗಣಿಸಿ.

ಹಾಲನ್ನು ಕಡೆಗಣಿಸಿ

ಹಾಲನ್ನು ಕಡೆಗಣಿಸಿ

ಹಾಲಿನಲ್ಲಿ ಅತ್ಯಧಿಕವಾಗಿರುವ ಪೋಷಕಾಂಶಗಳು ಇದೆ ಮೆಂದು ನಮಗೆ ತಿಳಿದಿದೆ. ಆದರೆ ಶೀತ, ಮೂಗು ಕಟ್ಟಿದಂತಹ ಸಮಸ್ಯೆಯಿದ್ದರೆ ಆಗ ನೀವು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಚೇತರಿಸಿಕೊಳ್ಳುವ ತನಕ ಕಡೆಗಣಿಸಬೇಕು. ಯಾಕೆಂದರೆ ಹಾಲಿನ ಉತ್ಪನ್ನಗಳು ಅದರಲ್ಲೂ ಮುಖ್ಯವಾಗಿ ಹಾಲು ಹೆಚ್ಚು ಕಫವನ್ನು ಉಂಟು ಮಾಡುವುದು. ಕಫವಿದ್ದಾಗ ಹಾಲು ಕಡಿಮೆ ಮಾಡಿದರೆ ಅದು ಚೇತರಿಕೆ ನೀಡುವುದು ಎಂದು ಯಾವುದೇ ಸಂಶೋಧನೆಗಳಿಂದ ಇದುವರೆಗೆ ಸಾಬೀತು ಆಗಿಲ್ಲ. ಹಾಲಿನ ಉತ್ಪನ್ನಗಳು ಕಫವನ್ನು ದಪ್ಪ ಹಾಗೂ ಅಸಾಮಾನ್ಯ ಮಾಡುವುದು.

Most Read: ಸತತ ಒಂದು ವಾರ ಕಾಲ ಎಳನೀರು ಕುಡಿದರೆ ಏನಾಗುವುದು?

ಕುರುಕುರು ತಿಂಡಿಯಿಂದ ದೂರವಿರಿ

ಕುರುಕುರು ತಿಂಡಿಯಿಂದ ದೂರವಿರಿ

ಅನಾರೋಗ್ಯ ಪೀಡಿತರಾದ ವೇಳೆ ನಮ್ಮ ದೇಹಕ್ಕೆ ಬೇಡವಾದ ತಿಂಡಿ ತಿನಿಸುಗಳನ್ನು ತಿನ್ನಬೇಕು ಎನ್ನುವ ಆಸೆ ಆಗುವುದು ಹೆಚ್ಚು. ಅದರಲ್ಲೂ ಕರಿದ ತಿಂಡಿಗಳು ನಾಲಗೆಗೆ ರುಚಿ ನೀಡುವುದು. ನಿಮಗೆ ಬಟಾಟೆ ಚಿಪ್ಸ್ ಅಥವಾ ಕುರುಕಲು ತಿಂಡಿಗಳು ತುಂಬಾ ಇಷ್ಟವಾಗಿದ್ದರೆ, ನೀವು ಅದನ್ನು ಈಗಲೇ ತ್ಯಜಿಸಬೇಕು. ಯಾಕೆಂದರೆ ಇದರಿಂದ ನಿಮ್ಮ ಗಂಟಲಿನ ಮೇಲೆ ಮತ್ತಷ್ಟು ಪರಿಣಾಮವಾಗಬಹುದು. ಇಂತಹ ಕರಿದ ತಿಂಡಿಗಳು ಗಂಟಲಿನಲ್ಲಿ ಕಿರಿಕಿರಿ ಉಂಟು ಮಾಡಬಹುದು. ಇದರಿಂದ ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುವ ತನಕ ಕುರುಕಲು ತಿಂಡಿಯಿಂದ ದೂರಿವಿದ್ದರೆ ತುಂಬಾ ಒಳ್ಳೆಯದು.

English summary

Foods you Should Avoid When You're Sick

It's best to avoid coffee when you are not feeling well or have a stomach bug because being a diuretic in nature, its consumption will make you rush to the washroom more often, which will leave you dehydrated. Not getting enough hydration will only make things worse for you, as dehydration makes your system less effective in fighting off virus or other infections. Caffeine is even worse when you are struggling with diarrhoea or vomiting, as both cause you to lose fluid.
X
Desktop Bottom Promotion