For Quick Alerts
ALLOW NOTIFICATIONS  
For Daily Alerts

ದೀರ್ಘಕಾಲ ಕುಳಿತುಕೊಂಡೇ ಕೆಲಸ ಮಾಡಿದರೆ ಆಗುವ 8 ಅಡ್ಡಪರಿಣಾಮಗಳು

By Hemanth
|

ಇಂದಿನ ದಿನಗಳಲ್ಲಿ ದಿನವಿಡಿ ಕುಳಿತುಕೊಂಡೇ ಕೆಲಸ ಮಾಡುವವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಯಾಕೆಂದರೆ ತಂತ್ರಜ್ಞಾನವು ಮುಂದುವರಿಯುತ್ತಾ ಹೋದಂತೆ ದೈಹಿಕ ಪರಿಶ್ರಮವು ಕಡಿಮೆಯಾಗುತ್ತಲಿದೆ. ಕಂಪ್ಯೂಟರ್ ಎನ್ನುವುದು ಬಂದ ಬಳಿಕವಂತೂ ಜನರಿಗೆ ಇಡೀ ದಿನ ಕುಳಿತುಕೊಂಡು ಕೆಲಸ ಮಾಡಬೇಕಾಗುತ್ತದೆ. ಅದೇ ರೀತಿಯಾಗಿ ದೈಹಿಕ ಪರಿಶ್ರಮ ಕೂಡ ಅರ್ಧದಷ್ಟು ಕಡಿಮೆಯಾಗಿದೆ. ಕಂಪ್ಯೂಟರ್ ಮುಂದೆ ಅಥವಾ ಲ್ಯಾಪ್ ಟಾಪ್ ಜತೆಗೆ ಕೆಲಸ ಮಾಡುವುದು ಅನಿವಾರ್ಯವು ಆಗಿದೆ.

ಇದರಿಂದ ದೇಹಕ್ಕೆ ಬೇಕಾಗಿರುವಂತಹ ವ್ಯಾಯಾಮವು ಖಂಡಿತವಾಗಿಯೂ ಸಿಗುವುದಿಲ್ಲ. ನೀವು ಮಾಡುವಂತಹ ಉದ್ಯೋಗವು ದೀರ್ಘ ಕಾಲದ ತನಕ ಕುಳಿತುಕೊಂಡೇ ಇರಬೇಕು ಎಂದು ಹೇಳುತ್ತಲಿದ್ದರೆ ಆಗ ಅದರಿಂದ ಉಂಟಾಗುವಂತಹ ಎಂಟು ಅಡ್ಡಪರಿಣಾಮಗಳು ಯಾವುದು ಎಂದು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ತಿಳಿಯಿರಿ....

ಹೃದಯದ ಸಮಸ್ಯೆ

ಹೃದಯದ ಸಮಸ್ಯೆ

ದೀರ್ಘಕಾಲ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಹೃದಯದ ಸಮಸ್ಯೆಯು ಕಾಣಿಸಿಕೊಳ್ಳುವುದು. ನಾವು ಕುಳಿತುಕೊಂಡೇ ಇರುವಾಗ ದೇಹವು ಕಡಿಮೆ ಕೊಬ್ಬನ್ನು ಕರಗಿಸುವುದು ಮತ್ತು ಇದರ ಪರಿಣಾಮವಾಗಿ ನಮ್ಮ ಅಪಧಮನಿಗಳಲ್ಲಿ ಕೊಬ್ಬಿನಾಮ್ಲವು ಅತಿಯಾಗಿ ಶೇಖರಣೆ ಆಗಲು ಆರಂಭವಾಗುವುದು.

ದೇಹಕ್ಕೆ ನೋವು

ದೇಹಕ್ಕೆ ನೋವು

ಕುತ್ತಿಗೆ, ಭುಜ, ಬೆನ್ನು ಮತ್ತು ಸೊಂಟದ ಭಾಗದಲ್ಲಿ ನೀವು ದೀರ್ಘಕಾಲದಿಂದ ನೋವಿನ ಸಮಸ್ಯೆಯನ್ನು ಎದುರಿಸುತ್ತಾ ಇದ್ದರೆ ಆಗ ಇದು ನೀವು ದೀರ್ಘಕಾಲದ ತನಕ ಕುಳಿತುಕೊಂಡು ಕೆಲಸ ಮಾಡುವುದರ ಪರಿಣಾಮವಾಗಿದೆ.

ಕೆಟ್ಟ ಅಂಗವಿನ್ಯಾಸ

ಕೆಟ್ಟ ಅಂಗವಿನ್ಯಾಸ

ದೀರ್ಘಕಾಲದ ತನಕ ಕುಳಿತುಕೊಂಡೇ ಕೆಲಸ ಮಾಡುವ ಪರಿಣಾಮದಿಂದಾಗಿ ಬೆನ್ನಿನ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವುದು ಮತ್ತು ಇದರಿಂದ ನಿಮ್ಮ ದೇಹದಭಂಗಿಯ ಮೇಲೂ ಪರಿಣಾಮವಾಗುವುದು. ನೀವು ದೀರ್ಘಕಾಲದ ತನಕ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡುತ್ತಲಿದ್ದರೆ ಆಗ ಇದು ನಿಮ್ಮ ದೇಹವಿನ್ಯಾಸದ ಮೇಲೆ ಪರಿಣಾಮ ಬೀರುವುದು.

Most Read: ಗುರುತು ಮರೆಮಾಚಿ ತಲೆ ಕೂದಲು ಕತ್ತರಿಸುವ ಅಂಗಡಿ ನಡೆಸುತ್ತಿರುವ ಸಹೋದರಿಯರು!

ಮೆದುಳಿಗೆ ಹಾನಿ

ಮೆದುಳಿಗೆ ಹಾನಿ

ದೀರ್ಘಕಾಲದ ತನಕ ಕುಳಿತುಕೊಂಡು ಕೆಲಸ ಮಾಡುವುದರಿಂದ ನಿಮ್ಮ ದೇಹದ ಮೇಲೆ ಪರಿಣಾಮವಾಗುವುದು ಮಾತ್ರವಲ್ಲದೆ ಇದರಿಂದ ನಿಮ್ಮ ಮೆದುಳಿಗೂ ಹಾನಿಯಾಗುವುದು. ಲಾಸ್ ಏಂಜಲೀಸ್ ನಲ್ಲಿರುವ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯು ನಡೆಸಿರುವಂತಹ ಅಧ್ಯಯನ ವರದಿಯ ಪ್ರಕಾರ, ದೀರ್ಘಕಾಲದ ತನಕ ಕುಳಿತುಕೊಂಡೇ ಇರುವುದು ಮೆದುಳಿನ ಒಂದು ಭಾಗವನ್ನು ತೆಳುವಾಗಿಸುವುದು. ಈ ಅಂಗಾಂಶಗಳು ಹೊಸ ನೆನಪುಗಳು ಉಳಿದುಕೊಳ್ಳಲು ಪ್ರಮುಖ ಕಾರಣವಾಗಿರುವುದು.

ತೂಕ ಹೆಚ್ಚಳ

ತೂಕ ಹೆಚ್ಚಳ

ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವುದರಿಂದ ನಿಮ್ಮ ದೇಹದ ಮೇಲೆ ಆಗುವಂತಹ ಅತೀ ದೊಡ್ಡ ಸಮಸ್ಯೆ ಎಂದರೆ ಅದು ತೂಕ ಹೆಚ್ಚಳ. ತೂಕ ಹೆಚ್ಚಳದಿಂದಾಗಿ ಬೊಜ್ಜು ಆವರಿಸಿಕೊಳ್ಳುವುದು. ಇದು ನಿಮ್ಮ ದೇಹದ ಎಲ್ಲಾ ರೀತಿಯ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು.

ಮಧುಮೇಹದ ಅಪಾಯ

ಮಧುಮೇಹದ ಅಪಾಯ

ಚಟುವಟಿಕೆ ಇಲ್ಲದೆ ಇರುವಂತಹ ಜೀವನಶೈಲಿ ಮತ್ತು ದೀರ್ಘಕಾಲದ ತನಕ ಕುಳಿತುಕೊಂಡೇ ಇರುವ ಪರಿಣಾಮವಾಗಿ ಮಧುಮೇಹವು ಕಾಣಿಸಿಕೊಳ್ಳಬಹುದು. ಚಟುವಟಿಕೆಯಲ್ಲಿರುವ ವ್ಯಕ್ತಿಗಿಂತ ಚಟುವಟಿಕೆ ಇಲ್ಲದೆ ಇರುವ ವ್ಯಕ್ತಿಗಳಲ್ಲಿ ಮಧುಮೇಹವು ಬೇಗನೆ ಕಾಡುವುದು. ನಾರ್ವೆನಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಅವರು ನಡೆಸಿರುವಂತಹ ಅಧ್ಯಯನದ ಪ್ರಕಾರ, ದೀರ್ಘಕಾಲದ ತನಕ ಕುಳಿತುಕೊಂಡೇ ಇರುವುದು ಮತ್ತು ದೈಹಿಕ ಚಟುವಟಿಕೆ ನಡೆಸದೆ ಇರುವುದು ಮಧುಮೇಹದ ಅಪಾಯಕ್ಕೆ ಕಾರಣವಾಗುವುದು.

ಉಬ್ಬಿದ ರಕ್ತನಾಳಗಳ ಸಮಸ್ಯೆ ಬರಬಹುದು

ಉಬ್ಬಿದ ರಕ್ತನಾಳಗಳ ಸಮಸ್ಯೆ ಬರಬಹುದು

ದೀರ್ಘಕಾಲದ ತನಕ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಕಾಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಇದರಿಂದಾಗಿ ರಕ್ತನಾಳಗಳು ಉಬ್ಬಿದ ಸಮಸ್ಯೆಯು ಕಾಡಬಹುದು. ಇದರಿಂದಾಗಿ ರಕ್ತನಾಳಗಳಲ್ಲಿ ಊತ ಕಾಣಿಸಿಕೊಳ್ಳಬಹುದು.

 ಆತಂಕ

ಆತಂಕ

ನೀವು ದೀರ್ಘಕಾಲ ತನಕ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಮುಂದೆ ಕುಳಿತುಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಇದ್ದರೆ ಆಗ ನಿಮಗೆ ಖಂಡಿತವಾಗಿಯೂ ಆತಂಕವು ಕಾಣಿಸುವುದು. ಇದರಿಂದ ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುವುದು.

Most Read: ಚಿಕನ್ ತಿಂದರೆ ದೇಹದ ತೂಕ ಕಡಿಮೆ ಆಗುತ್ತದೆಯೇ? ಖಂಡಿತವಾಗಿಯೂ ಹೌದು!

 ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಈ ಭಯಾನಕ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬೇಕಾದರೆ ನೀವು ಪ್ರತೀ ಅರ್ಧಗಂಟೆಗೆ ಒಮ್ಮೆ ನಿಮ್ಮ ಕುರ್ಚಿಯಿಂದ ಎದ್ದು ಸ್ವಲ್ಪ ದೂರ ಹೋಗಿ ಬನ್ನಿ. ನೀವು ಕಚೇರಿಯಲ್ಲೇ ಸ್ವಲ್ಪ ನಡೆಯಿರಿ ಅಥವಾ ನಿಂತುಕೊಂಡು ಏನಾದರೂ ಕೆಲಸ ಮಾಡಿ. ಕುತ್ತಿಗೆ ಮತ್ತು ಬೆನ್ನಿಗೆ ನೀವು ಪ್ರತೀ 30 ನಿಮಿಷಕ್ಕೆ ಒಂದು ಸಲ ಐದು ನಿಮಿಷ ಕಾಲ ಸ್ಟ್ರೆಚಿಂಗ್ ಮಾಡಿಕೊಳ್ಳಿ. ಇದರಿಂದ ಬೆನ್ನು ಅಥವಾ ಕುತ್ತಿಗೆ ಊದುವುದು ತಪ್ಪುವುದು.

English summary

8 Dangerous side-effects of sitting all day

If you take pride in being glued to your office chair all day long and tapping on your laptop to finish your work on time, you may want to change your opinion. If your job requires you to sit for a longer period of time, you need to know these 8 reasons why sitting all day is really harmful to your health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more