For Quick Alerts
ALLOW NOTIFICATIONS  
For Daily Alerts

40ರ ಹರೆಯದ ಬಳಿಕ ಸೇವಿಸಬೇಕಾದ ಆಹಾರಗಳು

|

ಬಾಲ್ಯ, ಯೌವನ ಹಾಗೂ ವೃದ್ಧಾಪ್ಯ ಎನ್ನುವುದು ಮನುಷ್ಯನ ಜೀವನದ ಮೂರು ಹಂತಗಳು. ಈ ಮೂರು ಹಂತಗಳಲ್ಲಿ ಮನುಷ್ಯನು ತನಗೆ ಇಷ್ಟಬಂದಂತೆ ಇರಬಹುದು. ಆದರೆ ಅದಕ್ಕೆ ಆತನ ದೇಹ ಕೂಡ ಸಹಕರಿಸಬೇಕು. ಕಾಲಚಕ್ರವು ಉರುಳಿದಂತೆ ವಯಸ್ಸಾಗುತ್ತಾ ಹೋಗುವುದು. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ 40 ದಾಟಿದ ಕೂಡಲೇ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುವುದು. ಇಷ್ಟು ಮಾತ್ರವಲ್ಲದೆ ಮುಖದಲ್ಲಿ ನೆರಿಗೆ, ವಯಸ್ಸಾದ ಲಕ್ಷಣಗಳು ಕಾಣಿಸಿಕೊಳ್ಳುವುದು. ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಸೇವಿಸುವಂತಹ ಆಹಾರ.

ಒತ್ತಡದ ಜೀವನಶೈಲಿ ಹಾಗೂ ಹಲವಾರು ಜವಾಬ್ದಾರಿಗಳಿಂದಾಗಿ ನಮಗೆ ಆಹಾರದ ಕಡೆ ಗಮನಹರಿಸಲು ಸಾಧ್ಯವೇ ಆಗುವುದಿಲ್ಲ. ಅದರಲ್ಲೂ 40 ದಾಟಿದ ಬಳಿಕ ಆರೋಗ್ಯದ ಕಡೆ ಗಮನ ಹರಿಸುವುದು ಅತೀ ಮುಖ್ಯ. ಜೀವನದಲ್ಲಿ ಫಿಟ್ ಇರಬೇಕಾದರೆ ಆಗ ನೀವು ಆಹಾರ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. ಕೆಲವೊಂದು ಆಹಾರವು ನಿಮಗೆ 40ರ ಹರೆಯದ ಬಳಿಕವು ಬಲಿಷ್ಠ ಹಾಗೂ ಪ್ರಬಲವಾಗಿರುವಂತಹ ಪ್ರತಿರೋಧಕ ವ್ಯವಸ್ಥೆಯನ್ನು ನೀಡಬಲ್ಲದು.

ಇಡೀ ಧಾನ್ಯಗಳು

ಇಡೀ ಧಾನ್ಯಗಳು

40 ಹರೆಯದ ಬಳಿಕ ನೀವು ಹೆಚ್ಚಿನ ನಾರಿನಾಂಶ ಸೇವನೆ ಮಾಡಬೇಕಾಗುತ್ತದೆ. ನಾರಿನಾಂಶವು ಹೊಟ್ಟೆಯನ್ನು ತುಂಬಾ ಆರೋಗ್ಯವಾಗಿಡುವುದು. ಇದು ಜೀರ್ಣ ಕ್ರಿಯೆಗೆ ಸಹಕಾರಿಯಾಗುವುದು ಮತ್ತು ಮಲಬದ್ಧತೆ ದೂರ ಮಾಡುವುದು. ನಾರಿನಾಂಶವು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಇಡೀ ಧಾನ್ಯದಲ್ಲಿ ಹೆಚ್ಚಿನ ನಾರಿನಾಂಶವು ಇದೆ ಮತ್ತು ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದು. ಇದನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಇಡೀ ಧಾನ್ಯದಲ್ಲಿ ಕೇವಲ ನಾರಿನಾಂಶವು ಮಾತ್ರವಲ್ಲದೆ ಇತರ ಕೆಲವೊಂದು ವಿಟಮಿನ್ ಗಳು ಹಾಗೂ ಖನಿಜಾಂಶವು ಸಮೃದ್ಧವಾಗಿದೆ. ಇದು ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುವುದು. ನಾರಿನಾಂಶವು ನೀವು ಹೆಚ್ಚಿನ ಸಮಯ ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ಅಧಿಕ ಕ್ಯಾಲರಿ ಸೇವನೆ ಮಾಡುವುದು ತಪ್ಪುವುದು. ಇಡೀ ಧಾನ್ಯವು ಪ್ರತಿರೋಧಕ ವ್ಯವಸ್ಥೆ ಸುಧಾರಣೆ ಮಾಡುವುದು ಮತ್ತು ಉರಿಯೂತ ತಗ್ಗಿಸುವುದು.

Most Read: ದಿನಕ್ಕೊಂದು ಪೀಸ್ ಅನಾನಸ್ ತಿಂದ್ರೂ ಸಾಕು! ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು

ಬೀಜಗಳು

ಬೀಜಗಳು

ಬೀಜಗಳು ಎಲ್ಲಾ ವಯೋಮಾನದವರಿಗೆ ತುಂಬಾ ಒಳ್ಳೆಯದು. ಅದರಲ್ಲೂ 40 ದಾಟಿದ ಪುರುಷರಿಗೆ ಇದು ಅತೀ ಉಪಯುಕ್ತ. ಬೀಜಗಳು ತುಂಬಾ ಆರೋಗ್ಯಕಾರಿ ತಿಂಡಿಯ ಆಯ್ಕೆಯಾಗಿದೆ ಮತ್ತು ಇದು ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಬೀಜಗಳಲ್ಲಿ ಉನ್ನತ ಮಟ್ಟದ ನಾರಿನಾಂಶ, ಪ್ರೋಟೀನ್, ಅಪರ್ಯಾಪ್ತ ಕೊಬ್ಬು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಬೀಜಗಳು ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ನಿಮ್ಮನ್ನು ಬಲಿಷ್ಠವಾಗಿ ಇಡುವುದು. ದಿನದ ಯಾವುದೇ ಸಮಯದಲ್ಲೂ ನೀವು ಬೀಜವನ್ನು ಸೇವನೆ ಮಾಡಬಹುದು. ಅನಾರೋಗ್ಯಕರ ಕೊಬ್ಬಿನಾಂಶ ಇರುವಂತಹ ತಿಂಡಿ ಬದಲಿಗೆ ನೀವು ಬೀಜಗಳನ್ನು ಸೇವನೆ ಮಾಡಬಹುದು. ಉಪಾಹಾರಕ್ಕೆ ನೀವು ಬೀಜಗಳನ್ನು ಸೇವನೆ ಮಾಡಬಹುದು ಅಥವಾ ಕಚೇರಿಗೆ ಹೋಗುವಾಗ ಇದನ್ನು ತೆಗೆದುಕೊಂಡು ಹೋಗಬಹುದು. ಬೀಜಗಳು ತುಂಬಾ ರುಚಿಕರ ಮತ್ತು ತಿನ್ನಲು ಖುಷಿ ನೀಡುವ ಕಾರಣದಿಂದಾಗಿ ಇದು ಮತ್ತಷ್ಟು ತಿನ್ನುವಂತೆ ಪ್ರೇರೇಪಿಸುವುದು.

ಹಾಲು

ಹಾಲು

40ರ ಹರೆಯದ ಬಳಿಕ ಪುರುಷರಿಗೆ ತಮ್ಮ ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಅತೀ ಅಗತ್ಯವಾಗಿ ಬೇಕಾಗಿರುವುದು. ಹಾಲು ಆರೋಗ್ಯಕ್ಕೆ ಕೂಡ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕ್ಯಾಲ್ಸಿಯಂನೊಂದಿಗೆ ಹಾಲಿನಲ್ಲಿ ಇತರ ಕೆಲವೊಂದು ಖನಿಜಾಂಶಗಳು ಮತ್ತು ವಿಟಮಿನ್ ಗಳು ಸಮೃದ್ಧವಾಗಿದೆ. ನೀವು ದಿನದಲ್ಲಿ ಒಂದು ಲೋಟ ಹಾಲು ಕುಡಿಯಬೇಕು. ಇದರಿಂದ ನಿಮ್ಮ ಮೂಳೆಗಳು ಮತ್ತು ಗಂಟಿನ ಆರೋಗ್ಯವು ಜೀವನ ಪೂರ್ತಿ ಆರೋಗ್ಯಕಾರಿಯಾಗಿರುವುದು.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ತುಂಬಾ ಆರೋಗ್ಯಕಾರಿ ಪಾನೀಯವಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮಟ್ಟವು ಸಮೃದ್ಧವಾಗಿದೆ. ಇದು ನಿಮ್ಮನ್ನು ಹಲವಾರು ಕಾಯಿಲೆಗಳಿಂದ ರಕ್ಷಿಸುವುದು. ಗ್ರೀನ್ ಟೀ ಸೇವನೆ ಮಾಡುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕುವುದು. ನಿಯಮಿತವಾಗಿ ಗ್ರೀನ್ ಟೀ ಸೇವನೆ ಮಾಡಿದರೆ ಇದರಿಂದ ಹೃದಯದ ಕಾಯಿಲೆಗಳು ನಿವಾರಣೆ ಆಗುವುದು. ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ಹೊಟ್ಟೆಯು ಆರೋಗ್ಯವಾಗಿರುವುದು. ಇದು ಉರಿಯೂತಕ್ಕೆ ತುಂಬಾ ಪರಿಣಾಮಕಾರಿಯಾಗಿದೆ.

Most Read: ತುಪ್ಪ ಬೆರೆಸಿದ ಹಾಲಿನ ಸೇವನೆ- ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತೇ?

ಗಿಡಮೂಲಿಕೆಗಳು

ಗಿಡಮೂಲಿಕೆಗಳು

ಗಿಡಮೂಲಿಕೆಗಳು ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಒಳ್ಳೆಯ ನೈಸರ್ಗಿಕ ಪರಿಹಾರವಾಗಿದೆ. ವಯಸ್ಸಾಗುತ್ತಾ ಹೋದಂತೆ ಮಾತ್ರೆಗಳ ಸೇವನೆ ಕಡಿಮೆ ಮಾಡಿಕೊಳ್ಳಬೇಕು. ಮಾತ್ರೆ ಸೇವನೆ ಮಾಡುವುದು ಪ್ರತಿಯೊಂದಕ್ಕೂ ಪರಿಹಾರವಲ್ಲ. ಪದೇ ಪದೇ ನೋವು ನಿವಾರಕ ಮಾತ್ರೆಗಳ ಸೇವನೆ ಮಾಡಿದರೆ ಅದರಿಂದಾಗಿ ಇನ್ನಿತರ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳಬಹುದು. ದೇಹದ ವಿವಿಧ ಸಮಸ್ಯೆ ನಿವಾರಣೆ ಮಾಡಲು ಕೆಲವೊಂದು ನೈಸರ್ಗಿಕ ಗಿಡಮೂಲಿಕೆ ಬಳಸಿಕೊಳ್ಳಬಹುದು. ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿರುವ ಚಾ ಕೂಡ ಆರೋಗ್ಯಕ್ಕೆ ಒಳ್ಳೆಯದು. ಗಿಡಮೂಲಿಕೆಗಳಿಂದ ಒತ್ತಡವು ನಿವಾರಣೆ ಆಗುವುದು. ಆಹಾರ ಕ್ರಮದಲ್ಲಿ ಅರಶಿನ ಸೇರಿಸಿಕೊಳ್ಳಬೇಕು. ಇದು ತುಂಬಾ ಪರಿಣಾಮಕಾರಿ ಗಿಡಮೂಲಿಕೆ. ಇದು ಉರಿಯೂತ, ತಲೆನೋವು, ಶೀತ ಮತ್ತು ದೇಹದ ನೋವು ನಿವಾರಣೆ ಮಾಡುವುದು. ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಜತೆಗೆ ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಅದೇ ರೀತಿಯಾಗಿ ನೀವು ಆರೋಗ್ಯ ತಪಾಸಣೆ ಕೂಡ ಮಾಡಿಕೊಳ್ಳಬೇಕು.

English summary

Best Foods for Men over 40 to Maintain Overall Health

If you have reached 40 you might be worried about your youthful face and skin. Growing up is not easy. It brings a lot of responsibilities and tension. Have you ever realized how important is it to take care of your health after 40? Your health needs a little extra attention which can keep you fit after 40 as well. Simple dietary changes can help you maintain a fit lifestyle. Certain food items will help you develop strength and a strong immune system.
Story first published: Thursday, February 28, 2019, 10:32 [IST]
X
Desktop Bottom Promotion