For Quick Alerts
ALLOW NOTIFICATIONS  
For Daily Alerts

ಸಂಧಿವಾತ ಸಮಸ್ಯೆ ನಿವಾರಣೆಗೆ ಏಳು ಸರಳ ಮನೆಮದ್ದುಗಳು-ಪ್ರಯತ್ನಿಸಿ ನೋಡಿ

|

ಗಂಟುಗಳಲ್ಲಿ ಉರಿಯೂತದಿಂದಾಗಿ ಕಾಣಿಸಿಕೊಳ್ಳುವ ನೋವು ಹಾಗೂ ಸೆಳೆತದಿಂದ ಉಂಟಾಗುವ ಪರಿಸ್ಥಿತಿಯನ್ನು ಸಂಧಿವಾತ ಎಂದು ಕರೆಯಲಾಗುತ್ತದೆ. ಹಿಂದಿನ ದಿನಗಳಲ್ಲಿ ಸಂಧಿವಾತವನ್ನು ಕೆಲವೊಂದು ಉರಿಯೂತ ಶಮನಕಾರಿ ಮಾತ್ರೆ ಹಾಗೂ ನೋವು ನಿವಾರಕ ನೀಡಿ ಉಪಶಮನ ಮಾಡಲು ಪ್ರಯತ್ನಿಸಲಾಗುತ್ತಿತ್ತು.

ಆದರೆ ಈ ರೀತಿಯ ಔಷಧಿಗಳನ್ನು ಹೆಚ್ಚು ಕಾಲ ತೆಗೆದುಕೊಂಡರೆ ಅದು ಅಡ್ಡ ಪರಿಣಾಮ ಬೀರುವುದು. ಇದರಿಂದ ಸಂಧಿವಾತವನ್ನು ನೈಸರ್ಗಿಕವಾಗಿ ನಿವಾರಣೆ ಮಾಡಲು ಪ್ರಯತ್ನಿಸಬೇಕು. ಈ ಮನೆಮದ್ದುಗಳನ್ನು ಪ್ರಯತ್ನಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯವಾಗಿರುವುದು.

ಅಕ್ಯುಪಂಕ್ಚರ್

ಅಕ್ಯುಪಂಕ್ಚರ್

ಅಕ್ಯುಪಂಕ್ಚರ್ ಎನ್ನುವುದು ಪ್ರಾಚೀನ ಚೀನಾದ ವೈದ್ಯಕೀಯ ಚಿಕಿತ್ಸಾ ವಿಧಾನವಾಗಿದೆ. ಈ ವಿಧಾನದಲ್ಲಿ ಕೆಲವೊಂದು ಬಿಂದುಗಳ ಮೇಲೆ ಸೂಜಿ ಹಾಕಲಾಗುತ್ತದೆ. ಇದು ಶಕ್ತಿಯನ್ನು ಮರಳಿ ಪಡೆಯುವಂತೆ ಮಾಡುವುದು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವುದು. ಸಂಧಿವಾತದ ನೋವನ್ನು ಅಕ್ಯಪಂಕ್ಚರ್ ನಿವಾರಣೆ ಮಾಡುವುದು ಎಂದು ಸಂಶೋಧನೆಗಳು ಹೇಳಿವೆ. ನೀವು ಸಂಧಿವಾತಕ್ಕೆ ಚಿಕಿತ್ಸೆ ಪಡೆಯಲು ಬಯಸಿದರೆ ಆಗ ನೀವು ತುಂಬಾ ಅನುಭವ ಇರುವಂತಹ ಅಕ್ಯುಪಂಕ್ಚರ್ ತಜ್ಞರಿಂದ ಚಿಕಿತ್ಸೆ ಪಡೆಯಿರಿ.

ಗಿಡಮೂಲಿಕೆ ಚಿಕಿತ್ಸೆ ಪಡೆಯಿರಿ

ಗಿಡಮೂಲಿಕೆ ಚಿಕಿತ್ಸೆ ಪಡೆಯಿರಿ

ಗಂಟು ನೋವನ್ನು ನಿವಾರಣೆ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಗಿಡಮೂಲಿಕೆ ಉತ್ಪನ್ನಗಳು ಲಭ್ಯವಿದೆ. ಕೆಲವೊಂದು ಗಿಡಮೂಲಿಕೆಗಳನ್ನು ಸಂಧಿವಾತದ ಚಿಕಿತ್ಸೆಗಾಗಿ ಬಳಸಿಕೊಳ್ಳಬೇಕು. ಬೊಸ್ವೆಲಿಯಾ, ಬ್ರೊಮೆಲಿನ್, ಗಿಂಕ್ಗೊ ಇತ್ಯಾದಿಗಳನ್ನು ಬಳಸಿಕೊಳ್ಳ ಬಹುದು. ಈ ಸಪ್ಲಿಮೆಂಟ್ ಗಳು ತುಂಬಾ ಆರೋಗ್ಯಕಾರಿ. ಆದರೆ ನೀವು ವೈದ್ಯರ ಸಲಹೆ ಪಡೆದ ಬಳಿಕ ಇದನ್ನು ಬಳಸಿಕೊಳ್ಳಿ.

Most Read: ಸಂಧಿವಾತ ಸಮಸ್ಯೆಗೆ ಸರಳ ಜ್ಯೂಸ್ ರೆಸಿಪಿ-ಶೀಘ್ರ ಪರಿಹಾರ...

ತೂಕ ಇಳಿಸಿ

ತೂಕ ಇಳಿಸಿ

ಶೇ.50ಕ್ಕಿಂತಲೂ ಹೆಚ್ಚಿನ ದೇಹದ ತೂಕವು ಗಂಟುಗಳ ಮೇಲೆ ಬೀಳುವುದು ಮತ್ತು ಇದರಿಂದಾಗಿ ತೂಕ ಹೆಚ್ಚಿದಂತೆ ಗಂಟುಗಳ ಮೇಲೆ ತೂಕ ಬೀಳುವುದು ಹೆಚ್ಚಾಗುವುದು. ಅತಿಯಾದ ತೂಕವು ಮೊಣಕಾಲುಗಳು, ಗಂಟು ಮತ್ತು ತೊಡೆಗಳ ಮೇಲೆ ಭಾರ ಬೀಳುವಂತೆ ಮಾಡುವುದು. ಇದರಿಂದ ಗಂಟುಗಳ ಮೇಲಿನ ಒತ್ತಡ ನಿವಾರಣೆ ಮಾಡಬೇಕಾದರೆ ಆಗ ನೀವು ಚಲನಶೀಲತೆ ಹೆಚ್ಚಿಸಬೇಕು, ಗಂಟುಗಳ ಮೇಲಿನ ಹಾನಿ ತಡೆಯಬೇಕು ಮತ್ತು ನೋವು ಕಡಿಮೆ ಆಗುವುದು. ಇದರಿಂದ ತೂಕ ಇಳಿಸುವುದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ.

ನಿಯಮಿತವಾಗಿ ಮಸಾಜ್ ಮಾಡಿ

ನಿಯಮಿತವಾಗಿ ಮಸಾಜ್ ಮಾಡಿ

ಗಂಟುಗಳಲ್ಲಿ ಕಾಣಿಸಿಕೊಳ್ಳುವಂತ ಬಿಗಿತದಿಂದಾಗಿ ಸಂಧಿವಾತದ ನೋವು ಕಾಣಿಸಿಕೊಳ್ಳೂವುದು. ಇದನ್ನು ಮಸಾಜ್ ನಿಂದ ನಿವಾರಣೆ ಮಾಡಬಹುದು. ನಿಯಮಿತವಾಗಿ ಮಸಾಝ್ ಮಾಡಿದರೆ ಆಗ ಬಿಗಿತವು ಕಡಿಮೆ ಆಗುವುದು, ಅದೇ ರೀತಿಯಾಗಿ ನೋವು ಕೂಡ. ಇದರಿಂದ ಗಂಟುಗಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ನೀವು ಮನೆಯಲ್ಲೇ ಮಸಾಜ್ ಮಾಡಿಕೊಳ್ಳಬಹುದು. ಆದರೆ ನೀವು ಇದನ್ನು ಪ್ರಯತ್ನಿಸುವ ಮೊದಲು ತಜ್ಞರ ಮುಂದೆ ಕೆಲವು ಸಲ ಇದನ್ನು ಪ್ರಯತ್ನಿಸಿ. ಮಸಾಜ್ ಥೆರಾಪಿಸ್ಟ್ ನಿಂದ ನೀವು ಮಸಾಜ್ ಮಾಡಿಸಿಕೊಳ್ಳಬಹುದು. ಆದರೆ ಅವರು ತುಂಬಾ ಅನುಭವ ಹೊಂದಿರುವಂತವರಾಗಿರಲಿ. ವೈದ್ಯರಿಂದ ಸಲಹೆ ಪಡೆದುಕೊಂಡು ಅವರಿಗೆ ಯಾವುದಾದರೂ ಥೆರಾಪಿಸ್ಟ್ ಸೂಚಿಸಲು ಹೇಳಿ.

ಧ್ಯಾನ

ಧ್ಯಾನ

ಧ್ಯಾನ ಎನ್ನುವುದು ಒಂದು ರೀತಿಯಲ್ಲಿ ಆರಾಮ ನೀಡುವಂತಹ ಪ್ರಕ್ರಿಯೆಯಾಗಿದ್ದು, ಇದು ಸಂಧಿವಾತದಿಂದ ಆಗುವ ನೋವನ್ನು ಕಡಿಮೆ ಮಾಡುವುದು ಮತ್ತು ಒತ್ತಡ ನಿವಾರಿಸುವುದು. ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿರುವಂತಹ ಹಲವಾರು ಸಂಶೋಧನೆಗಳು ಧ್ಯಾನ ಅಭ್ಯಾಸ ಮಾಡುವುದರಿಂದ ಗಂಟು ನೋವು ನಿವಾರಣೆ ಆಗುವುದು ಎಂದು ಹೇಳಲಾಗಿದೆ. ಧ್ಯಾನದಿಂದಾಗಿ ಖಿನ್ನತೆ ಹಾಗೂ ಅದೇ ರೀತಿಯಲ್ಲಿ ಸಂಧಿವಾತವು ನಿವಾರಣೆ ಆಗುವುದು ಎಂದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ.

Most Read: ಸಂಧಿವಾತ ಬರಬಾರದೆಂದಿದ್ದರೆ ಇಂತಹ ಆಹಾರಗಳನ್ನು ಸೇವಿಸಬೇಡಿ

ಆಹಾರಕ್ಕೆ ಅರಿಶಿನ ಸೇರಿಸಿಕೊಳ್ಳಿ

ಆಹಾರಕ್ಕೆ ಅರಿಶಿನ ಸೇರಿಸಿಕೊಳ್ಳಿ

ಅರಿಶಿನವನ್ನು ಹೆಚ್ಚಾಗಿ ಭಾರತದ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವಂತಹ ಅಂಶವು ಸಂಧಿವಾತದ ನೋವು ಕಡಿಮೆ ಮಾಡುವುದು. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವ ಕಾರಣದಿಂದಾಗಿ ಇದು ಅದ್ಭುತವಾಗಿ ಕೆಲಸ ಮಾಡುವುದು. ಇಲಿಗಳ ಮೇಲೆ ಅರಶಿನ ಪ್ರಯೋಗ ಮಾಡಿದ ವೇಳೆ ಇದು ಗಂಟಿನ ಉರಿಯೂತ ಕಡಿಮೆ ಮಾಡಿರುವುದು ಕಂಡುಬಂದಿದೆ.

ಬಿಸಿ ಮತ್ತು ತಂಪು ಥೆರಪಿ

ಬಿಸಿ ಮತ್ತು ತಂಪು ಥೆರಪಿ

ಬೆಳಗ್ಗೆ ಬಿಸಿ ನೀರಿನ ಸ್ನಾನ ಮಾಡಿದರೆ ಗಂಟು ನೋವು ನಿವಾರಣೆ ಮಾಡಬಹುದು. ಗಂಟಿನ ಬಿಗಿತ ಕಡಿಮೆ ಮಾಡಲು ಹೀಟಿಂಗ್ ಪ್ಯಾಡ್ ನ್ನು ಇಟ್ಟುಕೊಳ್ಳಬಹುದು. ತಂಪು ಚಿಕಿತ್ಸೆಯು ಗಂಟು ನೋವು ನಿವಾರಣೆ ಮಾಡಲು ಉತ್ತಮವಾಗಿ ಕೆಲಸ ಮಾಡುವುದು. ಈ ರೀತಿಯ ಚಿಕಿತ್ಸೆಗೆ ಜೆಲ್ ಪ್ಯಾಕ್ ಅಥವಾ ಶೀತಲೀಕರಿಸಿದ ತರಕಾರಿಯನ್ನು ಟವೆಲ್ ನಲ್ಲಿ ಸುತ್ತಿ ಇಡಬೇಕು. ನೋವು ಇರುವಂತಹ ಗಂಟುಗಳ ಮೇಲೆ ಇದನ್ನು ಇಡಬೇಕು. ಇದು ತಕ್ಷಣವೇ ಪರಿಹಾರ ನೀಡುವುದು.

English summary

7 Home Remedies to Give you Relief from Arthritis

Arthritis is a degenerative and painful medical condition that is marked by inflammation in the joints that lead to pain and stiffness. Traditionally, doctors treated arthritis with the use of anti-inflammatory medications as well as painkillers. Some medications, however, can lead to side-effects and therefore, naturally approaching pain relief is the way to go now. But, before you try these remedies, make sure you speak with your doctor.
X
Desktop Bottom Promotion