For Quick Alerts
ALLOW NOTIFICATIONS  
For Daily Alerts

ಜ್ವರ ನಿವಾರಣೆ ಮಾಡುವ ಪವರ್ ಇಂತಹ ಆರು ಪವರ್‌ಫುಲ್ ಮನೆಮದ್ದುಗಳು

|

ಹವಾಮಾನ ಬದಲಾದ ಕೂಡಲೇ ಜ್ವರ ಹಾಗೂ ಶೀತ ಬರುವುದು ಸಾಮಾನ್ಯ ಸಂಗತಿಯಾಗಿರುವುದು. ಅದರಲ್ಲೂ ಬೇಸಗೆ ಕಳೆದ ಮಳೆಗಾಲ ಬಂತೆಂದರೆ ಆಗ ಜ್ವರ ಸಾಮಾನ್ಯ ಸಂಗತಿಯಾಗಿರುವುದು. ಹವಾಮಾನ ಬದಲಾವಣೆಯಿಂದಾಗಿ ದೇಹದ ಉಷ್ಣಾಂಶವು ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ. ಉಷ್ಣಾಂಶ ಹಾಗೂ ಹವಾಮಾನದಲ್ಲಿ ಬದಲಾವಣೆಯಿಂದಾಗಿ ಹೆಚ್ಚಿನ ಜನರಿಗೆ ಅನಾರೋಗ್ಯ ಕಾಡುವುದು. ಅದರಲ್ಲೂ ಮುಖ್ಯವಾಗಿ ದೇಹದ ನೋವು, ತಲೆನೋವು, ತಲೆತಿರುಗುವಿಕೆ ಇದೆಲ್ಲವೂ ಜ್ವರ ಲಕ್ಷಣಗಳು.

ಜ್ವರ ಎನ್ನುವುದು ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಯು ಸೋಂಕಿನ ವಿರುದ್ಧ ಹೋರಾಡುವುದು ಮತ್ತು ನಮ್ಮನ್ನು ಗಂಭೀರ ರೋಗದಿಂದ ಕಾಪಾಡುವುದು. ಕೆಲವೊಂದು ಸಂದರ್ಭದಲ್ಲಿ ದೇಹದ ಉಷ್ಣತೆಯು ಅಧಿಕವಾಗಿ ಇರಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿಯಾಗಬೇಕು. ಯಾರೂ ಕೂಡ ಜ್ವರದೊಂದಿಗೆ ದಿನ ಕಳೆಯಲು ಬಯಸಲ್ಲ ಮತ್ತು ಇದರಿಂದ ಆದಷ್ಟು ಬೇಗನೆ ಹೊರಗೆ ಬರಲು ಬಯಸುವರು. ಹೆಚ್ಚಿನ ಸಂದರ್ಭದಲ್ಲಿ ಜ್ವರ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳಬಹುದು.

ವಿಶ್ರಾಂತಿ

ದೇಹವು ಸೋಂಕಿನ ವಿರುದ್ಧ ಹೋರಾಡುತ್ತಿರುತ್ತದೆ ಮತ್ತು ಇದರಿಂದ ಹೊರಬರಲು ತುಂಬಾ ಕಠಿಣವಾಗಿ ಕೆಲಸ ಮಾಡುತ್ತಲಿರುತ್ತದೆ. ಇದರಿಂದಾಗಿ ದೇಹಕ್ಕೆ ವಿಶ್ರಾಂತಿ ಬೇಕಾಗಿರುವುದು. ಇದರಿಂದಾಗಿ ನೀವು ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಿರಿ. ಜ್ವರವಿದ್ದಾಗ 8-9 ಗಂಟೆ ಕಾಲ ಮಲಗಿರಿ.

ದ್ರವ

ಜ್ವರವು ದೇಹದ ಉಷ್ಣತೆ ಹೆಚ್ಚಿಸುವ ಕಾರಣದಿಂದಾಗಿ ಬೆವರು ಬರುವುದು. ಇದರಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದನ್ನು ತಡೆಯಲು ನೀವು ಸುಮಾರು 9-12 ಲೋಟ ನೀರು ಕುಡಿಯಬೇಕು. ಕೇವಲ ನೀರು ಮಾತ್ರವಲ್ಲದೆ ಜ್ಯೂಸ್, ಕೆಫಿನ್ ಇಲ್ಲದ ಚಾರ, ಸೂಪ್ ಇತ್ಯಾದಿ ಸೇವಿಸಬಹುದು. ದೇಹಕ್ಕೆ ನೀರಿನಾಂಶವನ್ನು ನೀಡಿ ಮತ್ತು ದೇಹದಲ್ಲಿನ ದ್ರವಾಂಶವನ್ನು ಕಾಪಾಡಿಕೊಳ್ಳಿ.

ಸ್ನಾನ

ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಮತ್ತು ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ಜ್ವರದ ವೇಳೆ ಸ್ನಾನ ಮಾಡದೆ ಇರುವ ಕಾರಣದಿಂದಾಗಿ ಸಮಸ್ಯೆಯು ಹೆಚ್ಚಾಗಬಹುದು ಮತ್ತು ಸೋಂಕು ದೇಹವನ್ನು ಆವರಿಸಬಹುದು. ಇದರಿಂದಾಗಿ ನೀವು ತಣ್ಣೀರ ಸ್ನಾನ ಮಾಡಬೇಡಿ. ಇದರಿಂದ ದೇಹದ ಒಳಭಾಗವು ಬಿಸಿಯಾಗುವುದು.

ಒದ್ದೆ ಬಟ್ಟೆ

ನೀವು ಒದ್ದೆ ಬಟ್ಟೆ ಬಳಸಿಕೊಂಡು ಅದರಿಂದ ಹಣೆ, ಕುತ್ತಿಗೆ ಮತ್ತು ದೇಹದ ಇತರ ಭಾಗಗಳನ್ನು ಸರಿಯಾಗಿ ಒರೆಸಿಕೊಳ್ಳಬಹುದು. ಕಂಕುಳ ಮತ್ತು ಇತರ ಒಳಭಾಗಗಳು ತುಂಬಾ ಬಿಸಿಯನ್ನು ಉಂಟು ಮಾಡುವಂತದ್ದಾಗಿದೆ. ಇದನ್ನು ನೀವು ತಣ್ಣೀರಿನಿಂದ ಒದ್ದೆ ಬಟ್ಟೆಯಿಂದ ಸರಿಯಾಗಿ ಒರೆಸಿಕೊಳ್ಳಿ.

ಗಿಡಮೂಲಿಕೆ ಮತ್ತು ಆಯುರ್ವೇದ ಬಳಸಿಕೊಳ್ಳಿ

ಶುಂಠಿ ಚಾ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಜ್ವರದ ವಿರುದ್ಧ ಹೋರಾಡಲು ನೆರವಾಗುವುದು. ಇದರೊಂದಿಗೆ ಶ್ವಾಸನಾಳದಲ್ಲಿ ಇರುವಂತಹ ಕಫ ಮತ್ತು ಶೀತವನ್ನು ಕಡಿಮೆ ಮಾಡುವುದು.

ತುಳಸಿ

ತುಳಸಿ ರಸ ಸೇವಿಸಿ ಅಥವಾ ಇದನ್ನು ಚಾಗೆ ಹಾಕಿ ಕುಡಿಯಿರಿ. ಇದರಿಂದ ದೇಹದ ಉಷ್ಣತೆಯು ಸಮತೋಲನದಲ್ಲಿ ಇರುತ್ತದೆ ಮತ್ತು ಇದು ಯಾವುದೇ ಸೋಂಕಿನ ವಿರುದ್ಧ ಹೋರಾಡುವುದು.

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಬಿಸಿ ಪ್ರವೃತ್ತಿ ಹೊಂದಿರುವಂತಹ ಗಿಡಮೂಲಿಕೆಯಾಗಿದ್ದು, ಇದು ದೇಹದ ತಾಪಮಾನವನ್ನು ಕಡಿಮೆ ಮಾಡುತ್ತಿದೆ. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಪ್ರತಿರೋಧಕ ಸಮಸ್ಯೆಯನ್ನು ಶಮನ ಮಾಡಲು ನೆರವಾಗುವುದು.

ಮಸಾಲೆಯ ಆಹಾರ

ರಕ್ತ ಸಂಚಾರವು ಉತ್ತಮವಾಗಲು ಮತ್ತು ಬೆವರಲು ಮಸಾಲೆಯುಕ್ತ ಆಹಾರವು ಅಗತ್ಯವಾಗಿರುವುದು. ಜ್ವರ ನಿವಾರಣೆ ಮಾಡಲು ಮಸಾಲೆಯುಕ್ತ ಆಹಾರವು ತುಂಬಾ ಪರಿಣಾಮಕಾರಿ. ಜ್ವರ ವಿರುದ್ಧ ಹೋರಾಡಲು ಸ್ವಲ್ಪ ಕರಿಮೆಣಸಿನ ಹುಡಿ ಮತ್ತು ಕೆಂಪು ಮೆಣಸನ್ನು ನಿಮ್ಮ ಆಹಾರ ಕ್ರಮಕ್ಕೆ ಹಾಕಿಕೊಳ್ಳಿ. ಔಷಧಿ ತೆಗೆದುಕೊಂಡು ಈ ಮೇಲಿನ ಕ್ರಮಗಳನ್ನು ಪಾಲಿಸಿಕೊಂಡು ಹೋಗಿ. ಒಂದು ಅಥವಾ ಅದಕ್ಕಿಂತ ಹೆಚ್ಚು ದಿನ ನೀವು ಮಲಗಿರಬೇಕಾಗುತ್ತದೆ. ನೀರನ್ನು ಕುಡಿಯಿರಿ ಮತ್ತು ಸ್ನಾನ ಮಾಡಿಕೊಂಡು ತಂಪಾಗಿರಿ. ಕಡಿಮೆ ಕಂಬಳಿ ಬಳಸಿ ಮತ್ತು ಸ್ವಚ್ಛತೆ ಕಾಪಾಡಿಕೊಂಡು ಬೇಗನೆ ಜ್ವರ ಹೋಗಲಾಡಿಸಿ. ಜ್ವರವನ್ನು ನಿವಾರಣೆ ಮಾಡುವುದು ದೊಡ್ಡ ವಿಚಾರವೇನಲ್ಲ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಸ್ವಚ್ಛತೆ ಇಲ್ಲದೆ ಇರುವ ಆಹಾರ ಮತ್ತು ವಾತಾವರಣದಿಂದ ದೂರವಿರಿ. ಈ ಎಲ್ಲಾ ಸಲಹೆಗಳು ಜ್ವರದಿಂದ ಬೇಗನೆ ಪಾರು ಮಾಡುವುದು. ಜ್ವರವು ಹೆಚ್ಚಾಗಿ ಇದ್ದ ವೇಳೆ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯ ಮತ್ತು ಫಿಟ್ ಆಗಿರಿ.

English summary

6 Home Remedies to control Your Fever Naturally

Fever is a way through which our immune system fights infection and protect us from any serious diseases. There may be a time when the body temperature rises at an extreme level. You need to consult the doctor then. No one likes to spend time with a fever and wants to get rid of it as soon as possible. In most of the cases, you can tackle fever with simple home remedies.
X