For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಉರಿ ಉರಿ ಬಿಸಿಲಿನ ತಾಪ ತಣಿಸುವ, 10 ನೈಸರ್ಗಿಕ ಪಾನೀಯಗಳು

|

ಬೇಸಿಗೆಯಲ್ಲಿ ಸುಡುವ ಬಿಸಿಲು, ಏರುತ್ತಿರುವ ಉಷ್ಣತೆ, ಮೈಯೆಲ್ಲಾ ಹರಿಯುತ್ತಿರುವ ಬೆವರು...ಇಂತಹ ಸಮಯದಲ್ಲಿ ಮೈಯನ್ನು ತಂಪಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಇಲ್ಲವಾದಲ್ಲಿ ನಿರ್ಜಲೀಕರಣ ಉಂಟಾಗಿ ದೇಹದ ನಿಶ್ಯಕ್ತಿಗೆ ಒಳಗಾಗಬಹುದು. ಸುಡು ಬಿಸಿಲಿನಲ್ಲಿ ಮನೆಯಿಂದ ಹೊರಗಡೆ ಹೋಗಲೇಬಾರದು, ಹಾಗೊಂದು ವೇಳೆ ಅಗತ್ಯ ಕೆಲಸಕಾರ್ಯದ ನಿಮಿತ್ತ ಹೋಗಲಿದ್ದರೂ ಮೈತುಂಬಾ ಬಟ್ಟೆ ಧರಿಸಿಕೊಂಡು ಹೋಗಬೇಕು. ಬೇಸಿಗೆಯಲ್ಲಿ ಆರೋಗ್ಯವು ಏರುಪೇರಾಗುವುದು. ಇದರಿಂದ ಬೇಸಿಗೆ ಕಾಲದಲ್ಲಿ ದೇಹದ ತೇವಾಂಶವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಅತಿಯಾಗಿ ಬೆವರುವ ಕಾರಣದಿಂದ ದೇಹದಲ್ಲಿರುವ ನೀರಿನಾಂಶವು ಬೇಗನೆ ಮಾಯವಾಗುವುದು. ಬಾಯಾರಿಕೆ ನಿವಾರಣೆ ಮಾಡಲು ನೀರು ಅತೀ ಮುಖ್ಯ ಪಾನೀಯವಾಗಿದೆ. ಅದೇ ರೀತಿಯಾಗಿ ನೀವು ಬೇರೆ ಕೆಲವು ಪಾನೀಯಗಳನ್ನು ಕೂಡ ಪ್ರಯತ್ನಿಸಿ ನೋಡಬಹುದು.

Summer Beverages

ಇದರಿಂದ ಬಾಯಾರಿಕೆ ನಿವಾರಣೆ ಆಗುವುದು ಮಾತ್ರವಲ್ಲದೆ, ದೇಹವು ತಂಪಾಗಿರುವುದು. ಬೇಸಿಗೆ ಬರುತ್ತಿರುವಂತೆ ಇಂತಹ ಪಾನೀಯಗಳು ನಮ್ಮ ದೇಹ ತುಂಬಾ ಆಹ್ಲಾದಕರ ಮತ್ತು ಉಲ್ಲಾಸದಿಂದ ಇರುವಂತೆ ಮಾಡುವುದು. ಬೇಸಿಗೆಯ ಉಷ್ಣತೆಯಿಂದ ಪಾರಾಗಲು ಈ ಪಾನೀಯಗಳು ಖಂಡಿತವಾಗಿಯೂ ನಮಗೆ ನೆರವಾಗಲಿದೆ. ಈ ಲೇಖನದಲ್ಲಿ ನೀಡಲಾಗಿರುವಂತಹ ಕೆಲವೊಂದು ಪಾನೀಯಗಳು ಬಿರು ಬೇಸಗೆಯಲ್ಲಿ ನಿಮ್ಮ ದಾಹ ತಣಿಸುವ ಜತೆಗೆ ದೇಹಕ್ಕೂ ತಂಪು ನೀಡಲಿದೆ, ಹಾಗೂ ಬಾಡಿ ಹೀಟ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಆರೋಗ್ಯವು ಉತ್ತಮವಾಗಿರುವುದು. ಇದರ ಬಗ್ಗೆ ನೀವು ಓದುತ್ತಾ ಸಾಗಿ. .. ಬಿರು ಬೇಸಗೆಯಿಂದ ಪಾರು ಮಾಡುವ ಪಾನೀಯಗಳು ಇಲ್ಲಿವೆ....

ಆಮ್ ಪನ್ನಾ

ಆಮ್ ಪನ್ನಾ

ಹಣ್ಣುಗಳ ರಾಜನೆಂದು ಕರೆಯಲ್ಪಡುವಂತಹ ಮಾವಿನ ಹಣ್ಣಿನಿಂದ ಮಾಡಲ್ಪಡುಂತಹ ಈ ಪಾನೀಯವು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಜನಪ್ರಿಯವಾಗಿದೆ. ಈ ಆಹ್ಲಾದಕರ ಬೇಸಿಗೆಯ ಪಾನೀಯವನ್ನು ಮಾವಿನ ಹಣ್ಣಿನ ತಿರುಳು, ಜೀರಿಗೆ, ಪುದೀನಾ ಎಲೆಗಳನ್ನು ಹಾಕಿ ತಯಾರಿಸಲಾಗುತ್ತದೆ. ಇದು ದೇಹಕ್ಕೆ ಆಹ್ಲಾದ ನೀಡುವುದು ಮಾತ್ರವಲ್ಲದೆ, ಬೇಸಗೆಯಲ್ಲಿ ದೇಹದಕ್ಕೆ ಬೇಕಾಗಿರುವಂತಹ ಶಕ್ತಿ ನೀಡುವುದು.

ಜಲಜೀರಾ

ಜಲಜೀರಾ

ಜೀರಿಗೆ ಮತ್ತು ನೀರನ್ನು ಹಾಕಿಕೊಂಡು ಜಲಜೀರಾವನ್ನು ತಯಾರಿ ಮಾಡಲಾಗುತ್ತದೆ. ಜೀರಿಗೆಯನ್ನು ಹುರಿದುಕೊಂಡು ಇದರ ಹುಡಿ ಮಾಡಿದ ಬಳಿಕ ಅದನ್ನು ನೀರಿಗೆ ಹಾಕಲಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆಗೆ ಇದು ಅತ್ಯುತ್ತಮವಾದ ಪಾನೀಯವಾಗಿದೆ. ಅದರಲ್ಲೂ ಬೇಸಗೆಯಲ್ಲಿ ಇದು ತುಂಬಾ ಒಳ್ಳೆಯದು. ತಂಪಾಗಿರುವಂತಹ ಜಲಜೀರಾವನ್ನು ನೀವು ಕುಡಿದೆ ಬಿಸಿಲಿನಿಂದ ಪಾರಾಗಲು ಇದು ತುಂಬಾ ನೆರವಾಗುವುದು.

Most Read: ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು

ಸತ್ತು ಶರ್ಬತ್

ಸತ್ತು ಶರ್ಬತ್

ಬೇಸಗೆಯಲ್ಲಿ ನಿಮ್ಮ ರಕ್ಷಣೆಗೆ ದೇಶೀಯವಾಗಿರುವಂತಹ ಪಾನೀಯಕ್ಕಿಂತ ಒಳ್ಳೆಯದಾಗಿರುವುದು ಬೇರೆ ಏನಾದರೂ ಇದೆಯಾ? ಬಿಹಾರದಲ್ಲಿ ಹೆಚ್ಚು ಜನಪ್ರಿಯವಾಗಿರುವಂತಹ ಸತ್ತು ಶರ್ಬತ್ ಬಿರು ಬೇಸಗೆ ಸಮಯದಲ್ಲೂ ದೇಹವನ್ನು ತುಂಬಾ ತಂಪಾಗಿ ಇಡುವುದು. ಈ ಪಾನೀಯವನ್ನು ಸತ್ತು ಹಿಟ್ಟು, ಸಕ್ಕರೆ ಮತ್ತು ನೀರು ಹಾಕಿ ತಯಾರು ಮಾಡಲಾಗುತ್ತದೆ. ಇದು ದೇಹಕ್ಕೆ ಆಹ್ಲಾದ ನೀಡುವುದರ ಜತೆಗೆ ಹೊಟ್ಟೆ ಕೂಡ ತುಂಬಿಸುವುದು.

 ಮಜ್ಜಿಗೆ

ಮಜ್ಜಿಗೆ

ಮೊಸರಿನಿಂದ ತಯಾರಿಸಲ್ಪಡುವಂತಹ ಮಜ್ಜಿಗೆಯು ಭಾರತದಲ್ಲಿ ಹೆಚ್ಚು ಬಳಸಲ್ಪಡುವಂತಹ ಪಾನೀಯವಾಗಿದೆ. ಮಜ್ಜಿಗೆಯು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಮತ್ತು ಇದಕ್ಕೆ ಸ್ವಲ್ಪ ಮಟ್ಟಿಗೆ ಜೀರಿಗೆ ಹಾಕಿದರೆ ಅದರಿಂದ ಮಜ್ಜಿಗೆ ರುಚಿ ಮತ್ತಷ್ಟು ಹೆಚ್ಚಾಗುವುದು.

Most Read: ಆರೋಗ್ಯ ಟಿಪ್ಸ್: ಬಿರು ಬಿಸಿಲಿನ ದಾಹಕ್ಕೆ, ತಂಪುಣಿಸುವ 'ಮಜ್ಜಿಗೆ'

ಎಳನೀರು

ಎಳನೀರು

ಒಂದು ಲೋಟ ತಂಪಾಗಿರುವಂತಹ ಎಳ ನೀರು ದೇಹಕ್ಕೆ ಶಕ್ತಿ ಬರುವುದು. ಇದರ ಲಘು ಸಿಹಿತ ಮತ್ತು ತಾಜಾ ರುಚಿಯಿಂದಾಗಿ ಬಿರು ಬೇಸಗೆಯಿಂದ ಹೊರಗೆ ಬರಲು ಇದು ತುಂಬಾ ನೆರವಾಗುವುದು. ಇದರಲ್ಲಿ ಅತ್ಯುತ್ತಮವಾಗಿರುವಂತಹ ವಿದ್ಯುದ್ವಿಚ್ಛೇದಗಳು ಇವೆ. ಇದರಿಂದ ನೀವು ಪ್ರತೀ ಸಲ ಇದನ್ನು ಕುಡಿದರೆ, ಆಗ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯು ನಿವಾರಣೆ ಆಗುವುದು. ನೀವು ಬೇಸಗೆಯಲ್ಲಿ ಸ್ವಲ್ಪ ಮಟ್ಟಿನ ಎಳನೀರನ್ನು ಕುಡಿಯಿರಿ. ಇದರಿಂದ ನಿಮ್ಮ ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಕಬ್ಬಿನ ಹಾಲು

ಕಬ್ಬಿನ ಹಾಲು

ಕಬ್ಬಿನ ಹಾಲು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿದೆ. ಇದು ಒಂದು ರೀತಿಯ ಶಕ್ತಿ ಪೇಯವಾಗಿದೆ ಮತ್ತು ಇದು ಪ್ಲಾಸ್ಮಾ ಮತ್ತು ದೇಹದಲ್ಲಿ ದ್ರವನ್ನು ನಿರ್ಮಾಣ ಮಾಡಲು ನೆರವಾಗುವುದು. ಇದರಿಂದ ನಿರ್ಜಲೀಕರಣ ಮತ್ತು ನಿಶ್ಯಕ್ತಿಯು ಕಡಿಮೆ ಆಗುವುದು. ಇದಕ್ಕೆ ಪುದೀನಾ ಎಲೆಗಳನ್ನು ಹಾಕಿಕೊಂಡು ಕುಡಿದರೆ ಅದರಿಂದ ಇದಕ್ಕೆ ಮತ್ತಷ್ಟು ರುಚಿ ಸಿಗುವುದು.

Most Read: ಬಿಸಿಲಿನ ಝಳಕ್ಕೆ, ತಂಪುಣಿಸುವ ಕೂಲ್ ಕೂಲ್ 'ಕಬ್ಬಿನ ಹಾಲು'

ಲಸ್ಸಿ

ಲಸ್ಸಿ

ಪಂಜಾಬ್ ನವರ ಅಚ್ಚುಮೆಚ್ಚಿನ ಪಾನೀಯವಾಗಿರುವ ಲಸ್ಸಿ ರುಚಿಯು ಖಂಡಿತವಾಗಿಯೂ ನಮ್ಮನ್ನು ಇದು ಮತ್ತೆ ಮತ್ತೆ ಕುಡಿಯುವಂತೆ ಮಾಡುವುದು. ಈ ನಯ ಮತ್ತು ಕೆನೆಯುಕ್ತ ಮೊಸರಿನ ಪಾನೀಯವು ಬೇಸಗೆಯಲ್ಲಿ ದೇಹಕ್ಕೆ ಆಹ್ಲಾದವನ್ನು ಉಂಟು ಮಾಡುವಂತಹ ಪಾನೀಯ ಎಂದು ಪರಿಗಣಿಸಲಾಗಿದೆ. ಇದನ್ನು ತುಂಬಾ ಸರಳವಾಗಿ ಮತ್ತು ಹಲವಾರು ವಿಧಗಳಿಂದ ತಯಾರಿಸಿಕೊಳ್ಳಬಹುದು. ಇದಕ್ಕೆ ನೀವು ಪುದೀನಾ, ಅವಕಾಡೋ, ಮಾವಿನ ಹಣ್ಣು, ಬಾಳೆಹಣ್ಣು, ಅಕ್ರೋಡಾ ಮೊದಲಾದವುಗಳನ್ನು ಸೇರಿಸಿಕೊಂಡು ತಯಾರಿಸಿಕೊಳ್ಳಬಹುದು. ಇಂತಹ ಯಾವುದೇ ಲಸ್ಸಿಯನ್ನು ನೀವು ಪ್ರಯತ್ನಿಸಿದರೆ ಇನ್ನು ತಡಮಾಡುವುದು ಸರಿಯಲ್ಲ.

Most Read: ಪ್ರತಿ ದಿನ ಒಂದು ಗ್ಲಾಸ್ ಲಸ್ಸಿ ಕುಡಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ

ಬಾರ್ಲಿ ನೀರು

ಬಾರ್ಲಿ ನೀರು

ಉತ್ತಮ ಆರೋಗ್ಯಕ್ಕೆ ಅನಾದಿ ಕಾಲದಿಂದಲೂ ಬಾರ್ಲಿ ನೀರನ್ನು ಬಳಸಿಕೊಂಡು ಬರಲಾಗುತ್ತಾ ಇದೆ. ಇದರ ತಯಾರಿಗೆ ನಿಮಗೆ ಮುತ್ತಿನಂತಹ ಬಾರ್ಲಿ, ನೀರು, ಉಪ್ಪು, ಸ್ವಲ್ಪ ಜೇನುತುಪ್ಪ ಮತ್ತು ಲಿಂಬೆ ಬೇಕಾಗಿದೆ. ಇದನ್ನು ನೀವು ತುಂಬಾ ಇಷ್ಟಪಡುವಿರಿ.

ಬಾರ್ಲಿ ನೀರನ್ನು ತಯಾರಿಸುವುದು ಹೇಗೆ?

ಬಾರ್ಲಿ ನೀರನ್ನು ಒಂದು ಸಲಕ್ಕೆ ಮಾಡಿಯೂ ಕುಡಿಯಬಹುದು ಅಥವಾ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ತಯಾರಿಸಿ ಫ್ರಿಜ್ಜಿನಲ್ಲಿ ಶೇಖರಿಸಿಟ್ಟುಕೊಂಡು ಪ್ರತಿದಿನ ಬಳಸಲೂಬಹುದು. ಒಂದು ಸಲದ ಉಪಯೋಗಕ್ಕೆ ಒಂದು ಲೋಟ ನೀರಿಗೆ ಎರಡು ದೊಡ್ಡ ಚಮಚದಷ್ಟು ಬಾರ್ಲಿಯನ್ನು ಸೇರಿಸಿ ಕುದಿಸಿ. ಒಂದೆರಡು ನಿಮಿಷ ಕುದಿಸಿದ ಬಳಿಕ ಒಂದೆರಡು ಕಾಳುಗಳನ್ನು ಹಿಚುಕಿ ನೋಡಿ ಪೂರ್ಣವಾಗಿ ಬೆಂದಿದ್ದರೆ ಒಲೆಯಿಂದ ಇಳಿಸಿ. ಕೆಲವೊಮ್ಮೆ ಹೆಚ್ಚು ಒಣಗಿರುವ ಬಾರ್ಲಿ ಪೂರ್ಣವಾಗಿ ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

Most Read: ಪ್ರತಿದಿನ ಬಾರ್ಲಿ ನೀರು ಕುಡಿದ್ರೆ ಈ 11 ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

ಲಿಂಬೆ ಶರಬತ್ತು

ಲಿಂಬೆ ಶರಬತ್ತು

ಬೇಸಗೆಯಲ್ಲಿ ನಿಮ್ಮ ಮಿತ್ರನಂತಿರುವಂತಹ ಲಿಂಬೆ ಶರಬತ್ತನ್ನು ಖಂಡಿತವಾಗಿಯೂ ಮರೆಯಬಾರದು. ಇದನ್ನು ತುಂಬಾ ಶೀಘ್ರವಾಗಿ ತಯಾರಿಸಿಕೊಳ್ಳಬಹುದು ಮತ್ತು ಇದು ಅತೀ ರುಚಿಕರವಾಗಿಯೂ ಇರುವುದು. ಇದನ್ನು ತಯಾರಿಸಿಕೊಳ್ಳುವ ವೇಳೆ ಪುದೀನಾ ಎಲೆಗಳು, ಲಿಂಬೆ, ಸಕ್ಕರೆ, ಉಪ್ಪು ಮತ್ತು ನೀರನ್ನು ಬಳಸಿಕೊಳ್ಳಬಹುದು. ಇದಕ್ಕೆ ಜೀರಿಗೆ, ಕೊತ್ತಂಬರಿ ಹುಡಿ, ಕರಿಮೆಣಸಿನ ಹುಡಿ ಹಾಕಿಕೊಂಡರೆ ರುಚಿಯು ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Most Read:ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಕಲ್ಲಂಗಡಿ ಜ್ಯೂಸ್

ಕಲ್ಲಂಗಡಿ ಜ್ಯೂಸ್

ಬೇಸಗೆಯಲ್ಲಿ ಅತೀ ಹೆಚ್ಚು ಸಿಗುವಂತಹ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡ ಒಂದಾಗಿದೆ ಮತ್ತು ಇದು ಜ್ಯೂಸ್ ಗೆ ಹೇಳಿ ಮಾಡಿಸಿದಂತಹ ಹಣ್ಣು. ಇದು ದೇಹಕ್ಕೆ ಆಹ್ಲಾದ ಮತ್ತು ತೇವಾಂಶ ನೀಡುವಂತಹ ಗುಣ ಹೊಂದಿರುವ ಕಾರಣದಿಂದಾಗಿ ಬೇಸಗೆಯಲ್ಲಿ ಇದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ನೀವು ಬೇಸಗೆಯಲ್ಲಿ ಈ ಪಾನೀಯವನ್ನು ಕುಡಿಯಲು ಮರೆಯಬೇಡಿ. ಬೇಸಿಗೆಯು ನಿಮಗೆ ಸಂತೋಷ ಹಾಗೂ ಆರೋಗ್ಯವನ್ನು ಉಂಟು ಮಾಡಲಿ.

Most Read: ಕಲ್ಲಂಗಡಿ ಜ್ಯೂಸ್: ಬೇಸಿಗೆಗೆ ದೇವರು ಕೊಟ್ಟಿರುವ ವರ!!

English summary

10 Natural Summer Beverages to Beat Hot Summer Days

Come summers, temperatures begin to soar high leaving everyone feeling fatigued, sweaty and messed up. Staying hydrated is the most important factor to keep going in this sweltering heat and maintain good health. Your body tends to lose water at a faster pace due to excessive sweating. While water is the utmost important drink to quench thirst, you can try other summery beverages that not only satisfy your thirst but also keep your body cool.
X
Desktop Bottom Promotion