For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜು ಕರಗಬೇಕೇ? ದಿನಕ್ಕೊಂದು ಗ್ಲಾಸ್ ಸೌತೆಕಾಯಿ ಜ್ಯೂಸ್ ಕುಡಿಯಿರಿ

|

ಸಪಾಟಾದ ಹೊಟ್ಟೆ ಯಾರಿಗೆ ಇಷ್ಟವಿಲ್ಲ? ಆದರೆ ಇದನ್ನು ಪಡೆಯಲು ಸಮರ್ಥರಾದವರು ಕೆಲವರು ಮಾತ್ರ. ನಮ್ಮ ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ನಮ್ಮ ಗುರುತ್ವಕೇಂದ್ರದಿಂದ ಪ್ರಾರಂಭಗೊಂಡು ತುದಿಯ ಭಾಗಗಳಲ್ಲಿ ಮುಂದುವರೆಯುತ್ತಾ ಹೋಗುತ್ತದೆ. ದೇಹದ ಸಮತೋಲನ ಕಾಪಾಡಿಕೊಳ್ಳಲು ಇದು ಅನಿವಾರ್ಯವೂ ಆಗಿದೆ. ಆ ಮೂಲಕ ಸೊಂಟದಲ್ಲಿ ಅತಿ ಹೆಚ್ಚಾಗಿ ಕೊಬ್ಬು ಸಂಗ್ರಹವಾಗುತ್ತದೆ ಹಾಗೂ ಕರಗಿಸುವ ಪ್ರಯತ್ನದಲ್ಲಿ ಅತ್ಯಂತ ಕಡೆಯದಾಗಿ ದಹಿಸಲ್ಪಡುವುದೇ ಇದನ್ನು ಕರಗಿಸಲಿಕ್ಕೆ ಇರುವ ಪ್ರಮುಖ ಅಡಚಣೆಯಾಗಿದೆ. ಸೊಂಟದ ಕೊಬ್ಬು ಅನಾರೋಗ್ಯಕರ ಮಾತ್ರವಲ್ಲ, ಸೌಂದರ್ಯವನ್ನೂ ಕುಂದಿಸುತ್ತದೆ.

ಸೊಂಟದ ಕೊಬ್ಬಿಗೆ ಏನು ಕಾರಣ?

ಸೊಂಟದ ಕೊಬ್ಬು ಹೆಚ್ಚಲು ಕೆಲವಾರು ಕಾರಣಗಳಿವೆ. ದೇಹದಲ್ಲಿ ನೀರಿನ ಅಂಶ ಉಳಿದುಕೊಳ್ಳುವುದು, ಮಲಬದ್ದತೆ, ಅತಿಯಾದ ಆಹಾರಸೇವನೆ, ಹೊಟ್ಟೆಯಲ್ಲಿ ವಿಪರೀತ ಕೆರಳಿಕೆ (irritable bowel syndrome), ವಯೋಸಹಜ ಕೊಬ್ಬಿನ ಸಂಗ್ರಹ, ಜೀವ ರಾಸಾಯನಿಕ ಶಕ್ತಿ ಉಡುಗುವುದು, ರಸದೂತಗಳ ಏರುಪೇರು, ಹೆರಿಗೆಯ ಬಳಿಕ ಸಂಗ್ರಹಗೊಳ್ಳುವ ಕೊಬ್ಬು, ಅತಿಯಾದ ಕೊಲೆಸ್ಟ್ರಾಲ್ ಅಥವಾ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹಾಗೂ ರಜೋನಿವೃತ್ತಿ ಮೊದಲಾದವು ಪ್ರಮುಖ ಕಾರಣವಾಗಿವೆ...

ಕಲ್ಮಶಗಳನ್ನು ಹೊರಹಾಕುವ ಮೂಲಕ

ಕಲ್ಮಶಗಳನ್ನು ಹೊರಹಾಕುವ ಮೂಲಕ

ಹೊಟ್ಟೆಯ ಕೊಬ್ಬನ್ನು ಕರಗಿಸಬೇಕೆಂದರೆ ಮೊದಲು ದೇಹದಲ್ಲಿದ್ದ ಕಲ್ಮಶಗಳನ್ನು ಆದಷ್ಟೂ ಮಟ್ಟಿಗೆ ಹೊರಹಾಕಬೇಕಾತ್ತದೆ ಹಾಗೂ ಇದು ಸತತವೂ ಆಗಿರಬೇಕು. ಆಯುರ್ವೇದದಲ್ಲಿ ಮೂತ್ರವರ್ಧಕವಾಗಿ ಸೌತೆಕಾಯಿಯನ್ನು ನೂರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ವಿಶೇಷವಾಗಿ ಸೌತೆಕಾಯಿಯ ಬೀಜಗಳಲ್ಲಿ ಮೂತ್ರವರ್ಧಕ ಗುಣ ಅತಿ ಹೆಚ್ಚಾಗಿದ್ದು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಹಾಕುತ್ತದೆ. ಇದರಿಂದ ಹೊಟ್ಟೆಯುಬ್ಬರಿಕೆಯನ್ನು ಕಡಿಮೆ ಮಾಡಬಹುದು ಹಾಗೂ ಹೊಟ್ಟೆಯ ಸ್ನಾಯುಗಳನ್ನು ಬಲಗೊಳಿಸಬಹುದು.

ಮಲಬದ್ಧತೆಯಾಗದೇ ಇರುವ ಮೂಲಕ

ಮಲಬದ್ಧತೆಯಾಗದೇ ಇರುವ ಮೂಲಕ

ಹೊಟ್ಟೆಯ ಕೊಬ್ಬಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಮಲಬದ್ಧತೆ. ಸೌತೆಯಲ್ಲಿರುವ ಕರಗುವ ನಾರು ಮಲಗದ್ಧತೆಯಾಗದಂತೆ ನೋಡಿಕೊಳ್ಳುವ ಮೂಲಕ ಜೀರ್ಣಾಂಗಗಳನ್ನು ಸ್ವಚ್ಛವಾಗಿರಿಸುತ್ತದೆ ಹಾಗೂ ಮಲಬದ್ಧತೆ ಹಾಗೂ ಈ ಮೂಲಕ ಎದುರಾಗುವ ಕಾಯಿಲೆಗಳಿಂದಲೂ ರಕ್ಷಣೆ ಒದಗಿಸುತ್ತದೆ.

ಹೊಟ್ಟೆಯಲ್ಲಿ ಉರಿಯೂತವಾಗದಂತೆ ನೋಡಿಕೊಳ್ಳುವ ಮೂಲಕ

ಹೊಟ್ಟೆಯಲ್ಲಿ ಉರಿಯೂತವಾಗದಂತೆ ನೋಡಿಕೊಳ್ಳುವ ಮೂಲಕ

ಸಾಮಾನ್ಯವಾಗಿ ಹೊಟ್ಟೆ ಮತ್ತು ಕರುಳಿನ ಹುಣ್ಣುಗಳಿಗೆ ಹೊಟ್ಟೆಯುಬ್ಬರಿಕೆ ಹಾಗೂ ಆಮ್ಲೀಯತೆಯೇ ಕಾರಣ. ಸೌತೆಯಲ್ಲಿರುವ ಕೆಲವು ಪೋಷಕಾಂಶಗಳು ಹೊಟ್ಟೆ ಮತ್ತು ಕರುಳುಗಳ ಒಳಭಾಗದಲ್ಲಿ ತೆಳ್ಳಗಿನ ಪದರವೊಂದನ್ನು ನಿರ್ಮಿಸುತ್ತದೆ ಹಾಗೂ ಉರಿಯೂತವಾಗದಂತೆ ಕಾಪಾಡುತ್ತದೆ.

ಸೌತೆ ಜ್ಯೂಸ್ ತಯಾರಿಸುವ ವಿಧಾನ

ಸೌತೆ ಜ್ಯೂಸ್ ತಯಾರಿಸುವ ವಿಧಾನ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಸೌತೆಯ ಜ್ಯೂಸ್ ಮಾಡಿಕೊಂಡು ಕುಡಿದರೆ ಉತ್ತಮ. ಈ ರಸವನ್ನು ನಿತ್ಯವೂ ಸೇವಿಸುವ ಮೂಲಕ ದೇಹದ ಕಲ್ಮಶಗಳನ್ನು ದೂರಾಗಿಸಿ ಆರೋಗ್ಯವನ್ನು ವೃದ್ದಿಸಿಕೊಳ್ಳುವುದರ ಜೊತೆಗೇ ಹೊಟ್ಟೆಯ ಕೊಬ್ಬನ್ನು ಕರಗಿಸಿ ಸ್ಥೂಲಕಾಯಕ್ಕೂ ವಿದಾಯ ಹೇಳಬಹುದು.

* ಒಂದು ಕಪ್ ನೀರಿನಲ್ಲಿ ಸುಮಾರು ಎಂಟರಿಂದ ಹತ್ತು ಪುದಿನಾ ಎಲೆಗಳನ್ನು ಹಾಕಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿ ಆರಿಸಿ ಐದು ನಿಮಿಷ ಹಾಗೇ ಬಿಡಿ.

ಸೌತೆ ಜ್ಯೂಸ್ ತಯಾರಿಸುವ ವಿಧಾನ

ಸೌತೆ ಜ್ಯೂಸ್ ತಯಾರಿಸುವ ವಿಧಾನ

* ಒಂದು ಮಧ್ಯಮ ಗಾತ್ರದ ಸೌತೆಕಾಯಿಯ ಸಿಪ್ಪೆ ಸುಲಿದು ದೊಡ್ಡ ತುಂಡುಗಳನ್ನಾಗಿಸಿ ಮಿಕ್ಸಿಯಲ್ಲಿ ನುಣ್ಣಗೆ ಕಡೆಯಿರಿ.

* ಇದಕ್ಕೊಂದು ಲಿಂಬೆಯ ರಸವನ್ನು ಹಿಂಡಿ.

* ಈಗ ಪುದಿನಾ ಕುದಿಸಿದ್ದ ನೀರನ್ನು ಹಾಕಿ.

* ಇದಕ್ಕೆ ಒಂದೂವರೆ ಲೀಟರಿನಷ್ಟು ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

* ಒಂದು ವೇಳೆ ನಿಮಗೆ ಇಷ್ಟವಾದರೆ ಒಂದು ಚಿಕ್ಕ ಚಮಚದಷ್ಟು ತುರಿದ ಹಸಿಶುಂಠಿಯನ್ನೂ ಬೆರೆಸಬಹುದು.

* ಈ ನೀರನ್ನು ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಿರಿ, ಅಥವಾ ಮೂರು ಹೊತ್ತಾದರೂ ತಪ್ಪದೇ ಕುಡಿದು ದಿನದ ಕೊನೆಯಲ್ಲಿ ಮುಗಿಸಬೇಕು.

ಪರ್ಯಾಯ ವಿಧಾನ...

ಪರ್ಯಾಯ ವಿಧಾನ...

ಒಂದು ಸೌತೆ, ಒಂದು ಲಿಂಬೆಯ ರಸ, ಒಂದು ದೊಡ್ಡಚಮಚ ತುರಿದ ಹಸಿಶುಂಠಿ, ಒಂದು ಹಿಡಿಯಷ್ಟು ಸಿಲಾಂಥ್ರೋ, ಎರಡು ದೊಡ್ಡ ಚಮಚ ಲೋಳೆಸರದ ರಸ ಹಾಗೂ ಒಂದು ಕಪ್ ನೀರನ್ನು ಚೆನ್ನಾಗಿ ಗೊಟಾಯಿಸಿ ದಿನಕ್ಕೆರಡು ಬಾರಿ ಕುಡಿಯಿರಿ.

ಸೂಚನೆ: ಸೌತೆಯೊಡನೆ ಲಿಂಬೆರಸ ಬೆರೆಸಿದಾಗ ತೂಕ ಇಳಿಸುವ ಯತ್ನಗಳಿಗೆ ಹೆಚ್ಚಿನ ಬೆಮ್ಬಲ ದೊರಕುತ್ತದೆ. ಲಿಂಬೆ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವುದರ ಜೊತೆಗೇ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ಸೌತೆಗೆ ನೆರವು ನೀಡುತ್ತದೆ.

English summary

Want To Burn Belly Fat Naturally? try Cucumber Juice

Apart from all the weight-loss measures that you undertake, to specifically fight belly fat, you need a diet low in calories and fat. Cucumber is rich in fibre and minerals, with very few calories. Being high in fibre content, it can leave you feeling full for longer, while also boosting metabolism and burning calories.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more