For Quick Alerts
ALLOW NOTIFICATIONS  
For Daily Alerts

ಬೀಜಗಳಿಂದ ಸಿಗುವ ಆರೋಗ್ಯ ಲಾಭಗಳು

|

ಬೀಜಗಳಿಂದ ನಮ್ಮ ದೇಹಕ್ಕೆ ಸಿಗುವಂತಹ ಪೋಷಕಾಂಶಗಳು ಅತ್ಯಧಿಕ. ಅದರಲ್ಲೂ ಇದನ್ನು ಮಿತವಾಗಿ ಹಾಗೂ ಸೂಕ್ತ ಕ್ರಮದಲ್ಲಿ ಸೇವನೆ ಮಾಡುವುದರಿಂದ ಅದರಲ್ಲಿರುವಂತ ಎಲ್ಲಾ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬೀಜಗಳು ಸ್ವಲ್ಪ ಮಟ್ಟಿಗೆ ದುಬಾರಿಯೆಂದು ಅನಿಸಿದರೂ ಇದು ಹೆಚ್ಚು ಆರೋಗ್ಯಕಾರಿ. ಹೀಗಾಗಿ ಬೀಜಗಳನ್ನು ನಾವು ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ನಮಗೆ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಸಿಗುವುದು.

ಬಾದಾಮಿ, ಗೋಡಂಬಿ, ತೆಂಗಿನಕಾಯಿ, ಕಡಲೆಕಾಯಿಗಳು, ಗಸಗಸೆ ಬೀಜಗಳು, ಬ್ರೆಜಿಲ್ ಬೀಜಗಳು, ಅಗಸೆ ಬೀಜಗಳು (ಲಿನ್ ಸೀಡ್ಸ್), ಮಕಾಡಾಮಿಯಾ, ಪೆಕನ್ ಗಳು, ಪಿಸ್ತಾ, ಕುಂಬಳಕಾಯಿ ಬೀಜಗಳು, ಕ್ವಿನೊವಾ, ಸೂರ್ಯಕಾಂತಿಗಳ ಬೀಜಗಳು, ವಾಲ್ ನಟ್, ಎಳ್ಳಿನ ಬೀಜಗಳು ಇತ್ಯಾದಿಗಳೆಲ್ಲವೂ ಒಂದೇ ವಿಭಾಗಕ್ಕೆ ಸೇರಿರುವ ಬೀಜಗಳು. ಇದರಲ್ಲಿ ನಾರಿನಾಶಂ, ವಿಟಮಿನ್ ಬಿ, ವಿಟಮಿನ್ ಇ, ಖನಿಜಾಂಶಗಳಾಗಿರುವ ಕಬ್ಬಿಣ, ಸತು, ಪೊಟಾಶಿಯಂ, ಮೆಗ್ನಿಶಿಯಂ, ಆ್ಯಂಟಿಆಕ್ಸಿಡೆಂಟ್ ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಒಂದು ಹಿಡಿ ಬೀಜಗಳನ್ನು ತೆಗೆದುಕೊಂಡು ಪ್ರತಿನಿತ್ಯ ಸೇವನೆ ಮಾಡಿ. ಇದರಿಂದ ನಿಮ್ಮ ದೇಹಕ್ಕೆ ಯಾವ ಲಾಭಗಳು ಸಿಗಲಿದೆ ಎಂದು ಈ ಲೇಖನವನ್ನು ಓದುತ್ತಾ ಸಾಗಿದರೆ ನಿಮಗೆ ತಿಳಿಯಲಿದೆ.

ಬೀಜಗಳಿಂದ ದೇಹಕ್ಕೆ ಸಿಗುವ ಆರೋಗ್ಯ ಲಾಭಗಳು

Top health benefits of nuts

*ಬೀಜಗಳು ಶಕ್ತಿ ಹಾಗೂ ಪೋಷಕಾಂಶಗಳ ಆಗರ. ಬೀಜಗಳಲ್ಲಿರುವ ಏಕಪರ್ಯಾಪ್ತ ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವುದು.

*ಇದು ಪರಿಧಮನಿ ಹಾಗೂ ಪಾರ್ಶ್ವವಾಯುವಿನಂತಹ ಕಾಯಿಲೆ ತಡೆಯುವುದು.

*ಒಮೆಗಾ-3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿರುವ ಬೀಜಗಳು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ. ಇದರಿಂದ ರಕ್ತದೊತ್ತಡ, ಸ್ತನ, ಕರುಳು ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡುವುದು.

*ಸಂಧಿವಾತ, ಅಲ್ಝೈಮರ್ ಹಾಗೂ ಖಿನ್ನತೆ ವಿರುದ್ಧ ಹೋರಾಡಲು ನೆರವಾಗುವುದು.

*ಬೀಜಗಳಲ್ಲಿ ಇರುವಂತಹ ಪಾಲಿಫೆನೊಲಿಕ್ ಫ್ಲಾವನಾಯ್ಡ್ ಗಳು ಕ್ಯಾನ್ಸರ್, ಹೃದಯದ ಕಾಯಿಲೆ, ನರವ್ಯವಸ್ಥೆ ದೌರ್ಬಲ್ಯ, ಅಲ್ಝೈಮರ್ ಕಾಯಿಲೆಯಿಂದ ರಕ್ಷಿಸುವುದು.

Most Read:'ತೊಂಡೆಕಾಯಿ ಎಲೆಗಳು': ಮಧುಮೇಹ, ಕಾಮಾಲೆ ರೋಗ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸುತ್ತದೆ

Top health benefits of nuts

*ಬೀಜಗಳಲ್ಲಿ ಉನ್ನತ ಮಟ್ಟದ ಪೊಟಾಶಿಯಂ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಶಿಯಂ,ಫ್ಲೋರೈಡ್, ಸತು, ಸೆಲೆನಿಯಂ ಇದೆ. ಮೆಗ್ನಿಶಿಯಂ ಫ್ರೀರ್ಯಾಡಿಕಲ್ ವಿರುದ್ಧ ಹೋರಾಡುವುದು. ಪೊಟಾಶಿಯಂ ಹೃದಯಬಡಿತ, ರಕ್ತದೊತ್ತಡ ನಿಯಂತ್ರಿಸುವುದು. ತಾಮ್ರವು ಕೆಂಪು ರಕ್ತದ ಕಣಗಳನ್ನು ಉತ್ಪಾದಿಸುವುದು. ಫ್ಲೋರೈಡ್ ದಂತ ಸಮಸ್ಯೆ ನಿವಾರಿಸುವುದು.

*ಬೀಜಗಳಲ್ಲಿ ಇರುವಂತಹ ವಿಟಮಿನ್ ಇ ಚರ್ಮದ ಅಂಗಾಂಶ ಮತ್ತು ಮ್ಯೂಕಸ್ ಪೊರೆಯನ್ನು ನಿರ್ವಹಿಸುವುದು ಮತ್ತು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು.

*ವಿಟಮಿನ್ ಬಿ ಸಂಕೀರ್ಣವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೀಜಗಳಲ್ಲಿ ಇರುವಂತಹ ಉನ್ನತ ಮಟ್ಟದ ಕೊಬ್ಬಿನಾಂಶದಿಂದಾಗಿ ಇದು ಹೃದಯಕ್ಕೆ ಹೇಗೆ ಒಳ್ಳೆಯದು ಎಂದು ನೀವು ಪ್ರಶ್ನಿಸಬಹುದು. ಆದರೆ ಸ್ವಲ್ಪ ವಿಚಿತ್ರವೆನಿಸಿದರೂ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

Top health benefits of nuts

ಪ್ರತಿನಿತ್ಯ ಆಹಾರ ಕ್ರಮದಲ್ಲಿ ಬೀಜಗಳನ್ನು ಸೇವನೆ ಮಾಡುವವರ ಹೃದಯದ ಆರೋಗ್ಯವು ಬೇರೆಯವರಿಗಿಂತ ಉತ್ತಮವಾಗಿರುವುದು. ಪ್ರತಿನಿತ್ಯ 30 ಗ್ರಾಂ ಬೀಜಗಳನ್ನು ಸೇವನೆ ಮಾಡಿದರೆ ನಿಮ್ಮ ಹೃದಯವು ಆರೋಗ್ಯವಾಗಿರುವುದು.

Top health benefits of nuts

* ರಕ್ತದಲ್ಲಿನ ಕೊಲೆಸ್ಟ್ರಾಲ್ ನ್ನು ಇದು ಸರಿಯಾಗಿ ನಿಯಂತ್ರಿಸಲು ನೆರವಾಗುವುದು.

* ಕೆಟ್ಟ ಕೊಲೆಸ್ಟ್ರಾಲ್ ತೆಗೆದು, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವುದು.

* ಅರ್ಜಿನೈನ್ ಎನ್ನುವ ಅಂಶವು ಬೀಜಗಳಲ್ಲಿ ಇದ್ದು, ಇದು ಅಪಧಮನಿಗಳ ಸ್ಥಿತಿಸ್ಥಾಪಕತ್ವ ಹೆಚ್ಚಿಸಿ ಗಡುಸಾಗದಂತೆ ತಡೆಯುವುದು.

*ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಗಳು ಮತ್ತು ಖನಿಜಾಂಶಗಳು ಉರಿಯೂತ ನಿವಾರಣೆಗೆ ನೆರವಾಗುವುದು.

* ಕಡಿಮೆ ಸೋಡಿಯಂ ಮತ್ತು ಅಧಿಕ ಮಟ್ಟದ ಪೊಟಾಶಿಯಂ ಇರುವ ಕಾರಣದಿಂದಾಗಿ ಇದು ಆರೋಗ್ಯಕರವಾಗಿ ರಕ್ತದೊತ್ತಡ ಕಾಪಾಡುವುದು.

Most Read: ಜೀವನದಲ್ಲಿ ಶಾಂತಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸಲು, ದೇವರ ಕೋಣೆಯ ಎದುರು ತೆಂಗಿನಕಾಯಿ ಇಟ್ಟು ಪೂಜೆ ಮಾಡಿ!

Top health benefits of nuts

ಅಧಿಕ ತೂಕ ಹೊಂದಿರುವವರಿಗೆ

ಬೀಜಗಳಲ್ಲಿ ಹೆಚ್ಚಿನ ಮಟ್ಟದ ಕೊಬ್ಬು ಇದೆ. ಬೊಜ್ಜು ದೇಹದವರಾಗಿದ್ದರೆ ಬೀಜಗಳನ್ನು ಕಡೆಗಣಿಸಿಬೇಕೇ? ಇಲ್ಲ. ಯಾಕೆಂದರೆ ಬೀಜಗಳು ಬೊಜ್ಜಿನಿಂದ ದೂರವಿಡುವುದು. ತೃಪ್ತಿಯ ಹಾರ್ಮೋನನ್ನು ಹೊಟ್ಟೆಯಲ್ಲಿ ಬಿಡುಗಡೆ ಮಾಡುವ ಕಾರಣದಿಂದಾಗಿ ಬಯಕೆಯನ್ನು ನಿಯಂತ್ರಿಸುವುದು. ಕಡಿಮೆ ಪೋಷಕಾಂಶಗಳು ಇರುವ ಆಹಾರದ ಬದಲು ಇವುಗಳನ್ನು ಸೇವಿಸಿ. ಸಂಸ್ಕರಿತ ಮಾಂಸ, ಧಾನ್ಯಗಳ ಆಹಾರವಾಗಿರುವ ಬ್ರೆಡ್, ಸಕ್ಕರೆ ತಿಂಡಿಗಳು ಇತ್ಯಾದಿಗಳಿಂದ ದೂರವಿರಿ. ಬೀಜಗಳನ್ನು ಸೇವಿಸಿ.

English summary

Top health benefits of nuts

Nuts contain proteins moderately with exception of chestnuts and fats in high quantity. Nuts benefits a lot to the over all body and are considered to be good sources of fibers and nutrients, vitamins B, vitamin E, minerals such as iron, zinc, potassium, magnesium, anti-oxidant minerals, and anti-oxidant compounds.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more